ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಪ್ರಯಾಣದ ಗತ ವೈಭವ ಮರಳುವುದೇ, ಮರುಚಾಲನೆ ವಿಳಂಬಕ್ಕೇನು ಕಾರಣ, ಬಿಎಂಟಿಸಿಗೆ ಇರುವ ಸವಾಲುಗಳೇನು-bengaluru news bmtc plan to reintroduce iconic double decker faces setbacks what report says uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಪ್ರಯಾಣದ ಗತ ವೈಭವ ಮರಳುವುದೇ, ಮರುಚಾಲನೆ ವಿಳಂಬಕ್ಕೇನು ಕಾರಣ, ಬಿಎಂಟಿಸಿಗೆ ಇರುವ ಸವಾಲುಗಳೇನು

ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಪ್ರಯಾಣದ ಗತ ವೈಭವ ಮರಳುವುದೇ, ಮರುಚಾಲನೆ ವಿಳಂಬಕ್ಕೇನು ಕಾರಣ, ಬಿಎಂಟಿಸಿಗೆ ಇರುವ ಸವಾಲುಗಳೇನು

BMTC Double-Decker Bus; ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಪ್ರಯಾಣದ ಗತ ವೈಭವ ಮರಳುವುದೇ ಎಂಬ ಬೆಂಗಳೂರಿಗರ ನಿರೀಕ್ಷೆ ಸದ್ಯಕ್ಕೆ ಈಡೇರುವ ಲಕ್ಷಣ ಇಲ್ಲ. ಮರುಚಾಲನೆ ವಿಳಂಬಕ್ಕೇನು ಕಾರಣ, ಬಿಎಂಟಿಸಿಗೆ ಇರುವ ಸವಾಲುಗಳೇನು ಎಂಬುದರ ವಿವರ ಇಲ್ಲಿದೆ.

ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಪ್ರಯಾಣದ ಗತ ವೈಭವ ಮರಳುವ ನಿರೀಕ್ಷೆ ಹುಸಿಯಾಗಿದೆ. ಮರುಚಾಲನೆ ವಿಳಂಬಕ್ಕೇನು ಕಾರಣ, ಬಿಎಂಟಿಸಿಗೆ ಇರುವ ಸವಾಲುಗಳೇನು. (ಸಾಂಕೇತಿಕ ಎಐ ಚಿತ್ರ)
ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಪ್ರಯಾಣದ ಗತ ವೈಭವ ಮರಳುವ ನಿರೀಕ್ಷೆ ಹುಸಿಯಾಗಿದೆ. ಮರುಚಾಲನೆ ವಿಳಂಬಕ್ಕೇನು ಕಾರಣ, ಬಿಎಂಟಿಸಿಗೆ ಇರುವ ಸವಾಲುಗಳೇನು. (ಸಾಂಕೇತಿಕ ಎಐ ಚಿತ್ರ) (perchance)

ಬೆಂಗಳೂರು: ಅದೊಂದು ಕಾಲ ಇತ್ತು ಬೆಂಗಳೂರು ಅಂದ್ರೆ ಡಬಲ್ ಡೆಕ್ಕರ್ ಬಸ್ ಪ್ರಯಾಣ ನೆನಪಿಸುವ ಕಾಲವದು. ಆ ಗತ ವೈಭವಕ್ಕೆ ಮರುಚಾಲನೆ ನೀಡಲಾಗುವುದು ಎಂದು ಕಳೆದ ವರ್ಷ ಸರ್ಕಾರ ಘೋಷಿಸಿತ್ತು. ಇದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಅದನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿತ್ತು.

ಇಷ್ಟಾಗುತ್ತಲೇ ಪ್ರಯಾಣಿಕ ವಲಯ ಡಬಲ್ ಡೆಕ್ಕರ್ ಬಸ್‌ ಸವಾರಿ ಖುಷಿಯನ್ನು ಮತ್ತೆ ನೆನಪಿಸಿಕೊಳ್ಳತೊಡಗಿತ್ತು. ಆದರೆ, ಈ ರೀತಿ ಆಸೆ ಚಿಗುರಿಸಿದ ಬಿಎಂಟಿಸಿ ಡಬಲ್‌ ಡೆಕ್ಕರ್ ಬಸ್ ಮರುಚಾಲನೆ ವಿಳಂಬವಾಗುತ್ತಿರುವುದೇಕೆ, ಹಿನ್ನಡೆಗೇನು ಕಾರಣ ಎಂಬುದು ಸಾರ್ವಜನಿಕ ವಲಯದಲ್ಲಿ ಪದೇಪದೆ ಮಾತಿಗೆ ಬರುತ್ತಿದೆ.

ಡಬಲ್‌ ಡೆಕ್ಕರ್‌ ಮರುಚಾಲನೆ ವಿಳಂಬಕ್ಕೇನು ಕಾರಣ, ಬಿಎಂಟಿಸಿಗೆ ಇರುವ ಸವಾಲುಗಳೇನು

ಬೆಂಗಳೂರಿಗರಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದ ಡಬಲ್ ಡೆಕ್ಕರ್ ಬಸ್‌ಗೆ ಮರುಚಾಲನೆ ವಿಳಂಬವಾಗಿದೆ. ಇದನ್ನು ಅನುಷ್ಠಾನಗೊಳಿಸುವಲ್ಲಿ ಬಿಎಂಟಿಸಿಗೆ ಇರುವ ಸವಾಲುಗಳೇನು ಎಂಬ ಪ್ರಶ್ನೆಗೆ ಅಧಿಕಾರಿಗಳು ಪ್ರಮುಖವಾಗಿ ನೀಡುವ ಕಾರಣ ಅದರ ನಿರ್ವಹಣಾ ವೆಚ್ಚ.

ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ) ಮಾದರಿಯಡಿ ಕಾರ್ಯನಿರ್ವಹಿಸುತ್ತಿರುವ ಬಿಎಂಟಿಸಿ, ನ್ಯಾಷನಲ್ ಕ್ಲೀನ್ ಏರ್ ಪ್ರೋಗ್ರಾಂ (ಎನ್‌ಸಿಎಪಿ) ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಸಹಭಾಗಿತ್ವದಲ್ಲಿ ಐದು ಹವಾನಿಯಂತ್ರಿತವಲ್ಲದ ಡಬಲ್ ಡೆಕ್ಕರ್ ಬಸ್‌ಗಳನ್ನು ಓಡಿಸಲು ಟೆಂಡರ್‌ಗಳನ್ನು ಆಹ್ವಾನಿಸಿತ್ತು. ಆದರೆ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಸಿಗಲಿಲ್ಲ. ಮೊದಲ ಬಾರಿಗೆ ಟೆಂಡರ್ ಕರೆದಾಗ ಒಬ್ಬ ಬಿಡ್ಡರ್ ಮಾತ್ರ ಅರ್ಜಿ ಸಲ್ಲಿಸಿದ್ದರು. ನಂತರ ಮರು ಟೆಂಡರ್‌ಗಳನ್ನು ಆಹ್ವಾನಿಸಿದರೂ ಪ್ರಯೋಜನವಾಗಿಲ್ಲ. ಪ್ರತಿ ಕಿಲೋಮೀಟರ್‌ಗೆ 99 ರೂಪಾಯಿಯಿಂದ 102.5 ರೂಪಾಯಿ ಬಿಡ್‌ ಬಂದಿದೆ. ಇದು ಬಿಎಂಟಿಸಿಯ ನಿರೀಕ್ಷೆ ಮೀರಿದ ವೆಚ್ಚವಾಗಿದ್ದು, ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ದ ಬೆಂಗಳೂರು ಮಿರರ್ ವರದಿ ಮಾಡಿದೆ.

ಬಿಎಂಟಿಸಿ ಪ್ರಸ್ತುತ ಪ್ರತಿ ಕಿಲೋಮೀಟರ್‌ಗೆ 40 ರೂಪಾಯಿಗೆ ಎಲೆಕ್ಟ್ರಿಕ್ ಬಸ್‌ಗಳು ಮತ್ತು ಪ್ರತಿ ಕಿಲೋಮೀಟರ್‌ಗೆ 60 ದರದಲ್ಲಿ ಸಾಮಾನ್ಯ ಬಸ್‌ಗಳನ್ನು ನಿರ್ವಹಿಸುತ್ತದೆ. ಆದಾಗ್ಯೂ, ಡಬಲ್ ಡೆಕ್ಕರ್ ಬಸ್‌ಗಳ ಬಿಡ್ ಪ್ರತಿ ಕಿಲೋಮೀಟರ್‌ಗೆ 97 ರೂಪಾಯಿ ನಿಗದಿ ಮಾಡಿದೆ. ಬಿಡ್‌ದಾರರು ಈ ದರಕ್ಕೆ ಸೇವೆ ಒದಗಿಸಲು ಹಿಂಜರಿದಿದ್ದಾರೆ. ಇದು ವಿಳಂಬಕ್ಕೆ ಮುಖ್ಯ ಕಾರಣ ಎಂದು ವರದಿ ವಿವರಿಸಿದೆ.

ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್‌ ಇತಿಹಾಸ

ಕರ್ನಾಟಕದ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ 1970 ಮತ್ತು 80 ರ ದಶಕದಲ್ಲಿ ಡಬಲ್ ಡೆಕ್ಕರ್ ಬಸ್‌ ಸಂಚಾರ ಸಾಮಾನ್ಯ ದೃಶ್ಯವಾಗಿತ್ತು. ಆದರೆ 1997ರ ವೇಳೆಗೆ ಹಂತಹಂತವಾಗಿ ಈ ಬಸ್‌ ಸಂಚಾರ ಸ್ಥಗಿತಗೊಂಡಿತು.

ಬಿಎಂಟಿಸಿ ಫ್ಲೀಟ್‌ನಲ್ಲಿ ಉಳಿದಿದ್ದ ಅಂತಹ ಏಕೈಕ ಬಸ್ ಅನ್ನು 2014 ರವರೆಗೆ ನಗರ ಪ್ರವಾಸಗಳಿಗೆ ಬಳಸಲಾಗುತ್ತಿತ್ತು. ಬಿಎಂಟಿಸಿ ಸೇರಿದಂತೆ ರಾಜ್ಯ ಸಾರಿಗೆ ನಿಗಮಗಳು ಗತವೈಭವವನ್ನು ಮರಳಿ ತರಲು ಡಬಲ್ ಡೆಕ್ಕರ್‌ಗಳನ್ನು ಮರುಪರಿಚಯಿಸಲು ಪ್ರಯತ್ನಿಸಿದೆ. ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ

ಬೆಂಗಳೂರು ನಗರ ದಲ್ಲಿ ಲಾಭದ ಉದ್ದೇಶಕ್ಕಾಗಿ ಈ ಸೇವೆಗಳನ್ನು ಒದಗಿಸಲು ಬಿಎಂಟಿಸಿ ಬಯಸಿಲ್ಲ. ಅದೊಂದು ಹಳೆಯ ನೆನಪು ಎಂಬ ಕಾರಣಕ್ಕೆ ಅದನ್ನು ಹಾಗೆಯೇ ಉಳಿಸಿಕೊಳ್ಳುವುದಕ್ಕಾಗಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಮರುಪರಿಚಯಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾಗಿ ವರದಿ ಹೇಳಿದೆ. ಮುಂಬಯಿ ಮತ್ತು ಇತರೆ ನಗರಗಳಲ್ಲಿ ಇಂತಹ ಪ್ರಯತ್ನ ನಡೆದಿದ್ದು, ಡಬಲ್‌ ಡೆಕ್ಕರ್ ಎಲೆಕ್ಟ್ರಿಕ್‌ ಬಸ್‌ಗಳು ಮತ್ತೆ ರಸ್ತೆಗೆ ಇಳಿದಿವೆ.

mysore-dasara_Entry_Point