BESCOM Updates; ಭಾನುವಾರ ವಿದ್ಯುತ್ ಬಿಲ್ ಪಾವತಿ ಹೇಗೆ ಅಂತ ಚಿಂತೆ ಬೇಡ, ಸೆ 8, 15ರಂದು ತೆರೆದಿರಲಿದೆ ಬೆಸ್ಕಾಂ ಉಪವಿಭಾಗದ ಕ್ಯಾಶ್‌ ಕೌಂಟರ್
ಕನ್ನಡ ಸುದ್ದಿ  /  ಕರ್ನಾಟಕ  /  Bescom Updates; ಭಾನುವಾರ ವಿದ್ಯುತ್ ಬಿಲ್ ಪಾವತಿ ಹೇಗೆ ಅಂತ ಚಿಂತೆ ಬೇಡ, ಸೆ 8, 15ರಂದು ತೆರೆದಿರಲಿದೆ ಬೆಸ್ಕಾಂ ಉಪವಿಭಾಗದ ಕ್ಯಾಶ್‌ ಕೌಂಟರ್

BESCOM Updates; ಭಾನುವಾರ ವಿದ್ಯುತ್ ಬಿಲ್ ಪಾವತಿ ಹೇಗೆ ಅಂತ ಚಿಂತೆ ಬೇಡ, ಸೆ 8, 15ರಂದು ತೆರೆದಿರಲಿದೆ ಬೆಸ್ಕಾಂ ಉಪವಿಭಾಗದ ಕ್ಯಾಶ್‌ ಕೌಂಟರ್

Bengaluru News; ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ, ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್‌ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ಇನ್ನೆರಡು ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್‌ ಕೌಂಟರ್‌ಗಳು ತೆರೆದಿರುತ್ತವೆ ಎಂದು ಹೇಳಿದೆ.

ಸೆ 1ರ ಭಾನುವಾರವೂ ತೆರದಿರಲಿದೆ ಬೆಸ್ಕಾಂ ಉಪವಿಭಾಗದ ಕ್ಯಾಶ್‌ ಕೌಂಟರ್
ಸೆ 1ರ ಭಾನುವಾರವೂ ತೆರದಿರಲಿದೆ ಬೆಸ್ಕಾಂ ಉಪವಿಭಾಗದ ಕ್ಯಾಶ್‌ ಕೌಂಟರ್

ಬೆಂಗಳೂರು: ವಿದ್ಯುತ್ ಬಿಲ್ ಬಾಕಿ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ, ವಿದ್ಯುತ್ ಬಿಲ್ ಪಾವತಿಗೆ ಭಾನುವಾರವೂ ಅನುಕೂಲ ಮಾಡಿಕೊಟ್ಟಿದೆ. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್‌ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ಸೆ. 8 ಮತ್ತು 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್‌ ಕೌಂಟರ್‌ಗಳು ತೆರೆದಿರಲಿವೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್‌ ಸಂಪರ್ಕ ಕಡಿತದಿಂದ ತೊಂದರೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಬೆಸ್ಕಾಂ ವಲಯದ ಎಲ್ಲ ಉಪ ವಿಭಾಗಗಳ ಕ್ಯಾಶ್‌ ಕೌಂಟರ್‌ಗಳನ್ನು ಈ ತಿಂಗಳ 8 ಮತ್ತು 15ರ ಭಾನುವಾರವೂ ತೆರೆಯಲು ನಿರ್ಧರಿಸಲಾಗಿದೆ. ಆನ್‌ಲೈನ್‌ ಪೇಮೆಂಟ್‌ ಬಳಸದವರ ಅನಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಬೆಸ್ಕಾಂ ವಿವರಿಸಿದೆ.

ಬಿಲ್ ಬಂದ 30 ದಿನಗಳ ಒಳಗೆ ವಿದ್ಯುತ್ ಶುಲ್ಕ ಪಾವತಿಸಿ; ತಪ್ಪಿದಲ್ಲಿ ವಿದ್ಯುತ್ ಕಡಿತ

ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರು ಬಿಲ್‌ ಬಂದ 30 ದಿನದೊಳಗೆ ವಿದ್ಯುತ್‌ ಶುಲ್ಕ ಪಾವತಿಸಬೇಕು. ಒಂದೊಮ್ಮೆ ಪಾವತಿಸದೇ ಇದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿತ್ತು. ಸೆಪ್ಟೆಂಬರ್‌ 1ರಿಂದಲೇ ಈ ನಿಯಮ ಜಾರಿಗೆ ಬಂದಿದೆ.

ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಲಿಕ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್‌ ಪಾವತಿಸದಿದ್ದಲ್ಲಿ ಮೀಟರ್‌ ರೀಡಿಂಗ್‌ಗೆ ಬರುವ ದಿನವೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂಪಾಯಿಗಿಂತ ಅಧಿಕ ಬಾಕಿ ಇದ್ದರೆ, ಅಂತಹ ಮನೆ, ವಾಣಿಜ್ಯ ಕಟ್ಟಡ ಸೇರಿ ಯಾವುದೇ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

ಗೃಹ ಜ್ಯೋತಿಯೋಜನೆ ಅಡಿಯಲ್ಲಿ ಶೂನ್ಯ ಬಿಲ್‌ ಪಡೆಯುತ್ತಿರುವ ಗ್ರಾಹಕರ ಹಿಂಬಾಕಿ ಶೂನ್ಯವಿದ್ದಲ್ಲಿ ಈ ಬಗ್ಗೆ ಚಿಂತಿಸಬೇಕಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಬೆಸ್ಕಾಂ ಬಿಲ್‌ ಆನ್‌ಲೈನ್‌ ಪಾವತಿಗೂ ಅವಕಾಶವಿದೆ

ಬೆಸ್ಕಾಂ ವಿದ್ಯುತ್ ಬಿಲ್ ಆನ್‌ಲೈನ್ ಮೂಲಕ ಪಾವತಿಸಬಹುದು. bescom.karnataka.gov.in ಗೆ ಹೋಗಿ ಅಲ್ಲಿ ಆನ್‌ಲೈನ್ ಮೂಲಕ ಬಿಲ್ ಪಾವತಿಸುವುದಕ್ಕೆ ಬೆಸ್ಕಾಂ ಅವಕಾಶ ನೀಡಿದೆ. ಆನ್‌ಲೈನ್ ಮೂಲಕ ಬಿಲ್ ಪಾವತಿಸುವುದು ಗೊತ್ತಿಲದೇ ಇರುವವರು, ಅನುಕೂಲವಿಲ್ಲದೇ ಇರುವವರು ಕ್ಯಾಶ್‌ ಕೌಂಟರ್ ಸೇವೆ ಬಳಸಬಹುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

Whats_app_banner