ಹೊಸ ಕಾರು ಖರೀದಿಸುವ ಮೊದಲು ಈ ವೈಶಿಷ್ಟ್ಯಗಳನ್ನು ಪರಿಶೀಲಿಸಲೇಬೇಕು; ಚಂದಕ್ಕಿಂತ ಸುರಕ್ಷತೆ ಮುಖ್ಯ
Dec 12, 2024 11:54 AM IST
ಹೊಸ ಕಾರು ಖರೀದಿಸುವ ಮೊದಲು ಈ ವೈಶಿಷ್ಟ್ಯಗಳನ್ನು ಪರಿಶೀಲಿಸಲೇಬೇಕು; ಚಂದಕ್ಕಿಂತ ಸುರಕ್ಷತೆ ಮುಖ್ಯ
- ಹೆಚ್ಚು ಸುರಕ್ಷತಾ ವೈಶಿಷ್ಟ್ಯ ಇರುವ ಕಾರುಗಳಿಗೆ ಜನರು ಹೆಚ್ಚಿನ ಹಣವನ್ನು ಪಾವತಿಸಲು ಸಿದ್ಧರಾಗಿದ್ದಾರೆ. ಆದರ, ಕಾರಿನ ಸುರಕ್ಷತೆಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಕಾರಿನಲ್ಲಿರುವ ಮತ್ತು ಇರಲೇಬೇಕಾದ 5 ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ. (ವರದಿ: ವಿನಯ್ ಭಟ್)
Safety Feature in Cars: ನಮ್ಮಲ್ಲಿ ಹೆಚ್ಚಿನವರು ಹೊಸ ಕಾರನ್ನು ಖರೀದಿಸಲು ಹೋದಾಗ, ಮೊದಲು ಅದರ ಕಾರ್ಯಕ್ಷಮತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಗಮನ ಹರಿಸುತ್ತಾರೆ. ಭಾರತದಲ್ಲಿ ಈ ಹಿಂದೆ ಕಾರಿನ ವಿನ್ಯಾಸ, ನೋಟ ಮತ್ತು ಪವರ್‌ಟ್ರೇನ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೀಗ ಗ್ರಾಹಕರು ತಮ್ಮ ಕಾರುಗಳು ಎಲ್ಲ ರೀತಿಯಲ್ಲೂ ಸುರಕ್ಷಿತವಾಗಿರಬೇಕು, ಚಾಲಕ ಮತ್ತು ಪ್ರಯಾಣಿಕರಿಗೆ ಸುರಕ್ಷತೆಯನ್ನು ಒದಗಿಸಬೇಕು ಎಂಬ ಅಂಶದತ್ತ ಗಮನ ಹರಿಸುತ್ತಿದ್ದಾರೆ.
ಸುರಕ್ಷತಾ ವೈಶಿಷ್ಟ್ಯಗಳಿಗಾಗಿ ಜನರು ಹೆಚ್ಚಿನ ಹಣವನ್ನು ಪಾವತಿಸಲು ಸಿದ್ಧರಾಗಿದ್ದಾರೆ. ಆದಾಗ್ಯೂ, ಕೆಲವೇ ಜನರಿಗೆ ತಮ್ಮ ವಾಹನವು ಯಾವ ವೈಶಿಷ್ಟ್ಯಗಳನ್ನು ಹೊಂದಿರಬೇಕು ಎಂಬುದು ತಿಳಿದಿದೆ. ಆದ್ದರಿಂದ, ಇಂದು ನಾವು ನಿಮಗೆ ಕಾರಿನ 5 ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುತ್ತೇವೆ.
ಕಾರನ್ನು ಖರೀದಿಸುವ ಮೊದಲು ಈ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಶೀಲಿಸಬೇಕು
1. ಏರ್ ಬ್ಯಾಗ್
ಕಾರು ಅಗ್ಗವಾಗಿರಲಿ ಅಥವಾ ದುಬಾರಿಯಾಗಿರಲಿ ಅದರಲ್ಲಿ ಏರ್ ಬ್ಯಾಗ್ ಇರುವುದು ಬಹಳ ಮುಖ್ಯ. ಇದು ಅಪಘಾತದಿಂದ ಉಂಟಾಗುವ ಪ್ರಾಣ ಹಾನಿಯ ಅಪಾಯವನ್ನು ಕಡಿಮೆ ಮಾಡುತ್ತದೆ. ಚಾಲಕ ಮತ್ತು ಪ್ರಯಾಣಿಕರ ಜೀವವನ್ನು ಉಳಿಸುತ್ತದೆ. ಪ್ರಸ್ತುತ ಭಾರತದಲ್ಲಿ ಮಾರಾಟವಾಗುವ ಬಹುತೇಕ ವಾಹನಗಳು ಡ್ಯುಯಲ್ ಏರ್ ಬ್ಯಾಗ್ ಹೊಂದಿದ್ದು, ಈಗ ಕಾರಿನಲ್ಲಿ 6 ಏರ್ ಬ್ಯಾಗ್ ಇರುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.
2. ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ABS)
ಇಂದು, EBD ಜೊತೆಗೆ ABS ನಂತಹ ವೈಶಿಷ್ಟ್ಯಗಳನ್ನು ವಾಹನಗಳಲ್ಲಿ ಸುರಕ್ಷತಾ ವೈಶಿಷ್ಟ್ಯಗಳಾಗಿ ನೋಡಲಾಗುತ್ತದೆ. ಎಬಿಎಸ್ ಅಥವಾ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಹಠಾತ್ ಬ್ರೇಕ್ ಹಾಕಿದಾಗ ಕಾರನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ, ವಾಹನದ ಟೈಯರ್ಗಳು ಲಾಕ್ ಆಗುತ್ತವೆ, ಇದು ಅಪಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನು ತಡೆಗಟ್ಟುವಲ್ಲಿ ಎಬಿಎಸ್ ತುಂಬಾ ಸಹಾಯಕವಾಗಿದೆ.
3. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)
ಕೆಲವೊಮ್ಮೆ ಓವರ್ ಸ್ಟೀರಿಂಗ್‌ನಿಂದಾಗಿ ಕಾರು ನಿಯಂತ್ರಣ ತಪ್ಪುತ್ತದೆ. ಇದನ್ನು ತಪ್ಪಿಸಲು, ತುರ್ತು ಸಂದರ್ಭಗಳಲ್ಲಿ ESC ಬ್ರೇಕ್‌ಗಳನ್ನು ಅನ್ವಯಿಸುತ್ತದೆ ಮತ್ತು ಎಂಜಿನ್ ಶಕ್ತಿಯನ್ನು ಸಮತೋಲನಗೊಳಿಸುತ್ತದೆ.
4. ಅಡ್ಜಸ್ಟ್ಮೆಂಟ್ ಸ್ಟೀರಿಂಗ್
ಸ್ಟೀರಿಂಗ್ ಚಕ್ರ ಮತ್ತು ಚಾಲಕನ ನಡುವಿನ ಅಂತರ ಮತ್ತು ಎತ್ತರವು ಹಲವು ಬಾರಿ ಸರಿಯಾಗಿರುವುದಿಲ್ಲ. ಇದು ಡ್ರೈವಿಂಗ್ ಮಾಡುವಾಗ ತೊಂದರೆ ಉಂಟುಮಾಡುತ್ತದೆ. ನಂತರ ಅಪಘಾತಕ್ಕೆ ಕಾರಣವಾಗಬಹುದು. ಈ ಕಾರಣಕ್ಕಾಗಿ, ಕಾರಿನಲ್ಲಿ ಅಡ್ಜಸ್ಟ್ಮೆಂಟ್ ಸ್ಟೀರಿಂಗ್ ಹೊಂದಿರುವುದು ಬಹಳ ಮುಖ್ಯ. ಹಾಗೆಯೆ ಚಾಲಕನು ಕುಳಿತುಕೊಳ್ಳುವ ಆಸನವನ್ನು ಅಪ್-ಡೌನ್ ಮಾಡುವ ಫೀಚರ್ ಕೂಡ ಒಳ್ಳೆಯದು.
5. ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)
ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಇಂದಿನ ವಾಹನಗಳಲ್ಲಿ ಉತ್ತಮ ನಿಯಂತ್ರಣ ಮತ್ತು ಇಂಧನ ಮಿತವ್ಯಯಕ್ಕಾಗಿ ಅಳವಡಿಸಲಾಗಿದೆ. ಇದನ್ನು ಕಾರಿನ ಪ್ರತಿಯೊಂದು ಚಕ್ರದಲ್ಲಿ ನೀಡಲಾಗಿದೆ. ಇದು ಸೆನ್ಸರ್‌ಗಳ ಮೂಲಕ ಡ್ಯಾಶ್‌ಬೋರ್ಡ್‌ಗೆ ಮಾಹಿತಿಯನ್ನು ಕಳುಹಿಸುತ್ತದೆ.
- ವರದಿ: ವಿನಯ್ ಭಟ್.
ಇನ್ನಷ್ಟು ಟೆಕ್ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಬಿಎಂಡಬ್ಲ್ಯು ಕಾರು ಬೆಲೆ ಈಗ ಮತ್ತಷ್ಟು ದುಬಾರಿ: ಹೊಸ ಕಾರು ಖರೀದಿಸಲು ಎಷ್ಟು ಖರ್ಚು ಮಾಡಬೇಕಾಗುತ್ತದೆ?