logo
ಕನ್ನಡ ಸುದ್ದಿ  /  ಜೀವನಶೈಲಿ  /  Family Safety Cars: ಕುಟುಂಬ ಸವಾರಿಗೆ ಅತ್ಯುತ್ತಮ ವಾಹನ ಹುಡುಕುತ್ತಿದ್ದೀರಾ? 5 ಸ್ಟಾರ್‌ ರೇಟಿಂಗ್‌ ಪಡೆದ ಈ ಕಾರುಗಳು ಖರೀದಿಗೆ ಬೆಸ್ಟ್‌

Family Safety Cars: ಕುಟುಂಬ ಸವಾರಿಗೆ ಅತ್ಯುತ್ತಮ ವಾಹನ ಹುಡುಕುತ್ತಿದ್ದೀರಾ? 5 ಸ್ಟಾರ್‌ ರೇಟಿಂಗ್‌ ಪಡೆದ ಈ ಕಾರುಗಳು ಖರೀದಿಗೆ ಬೆಸ್ಟ್‌

Praveen Chandra B HT Kannada

Sep 24, 2024 10:49 AM IST

google News

ಮಹೀಂದ್ರ ಎಕ್ಸ್‌ಯುವಿ 7ಒಒ

    • Family Safety Cars: ಫ್ಯಾಮಿಲಿ ಸಮೇತ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗೋದು ಖುಷಿ ನೀಡುತ್ತದೆ. ಆದರೆ, ಕಾರು ಖರೀದಿಸುವ ಸಮಯದಲ್ಲಿ ಕಾರಿನ ಸುರಕ್ಷತಾ ಫೀಚರ್‌ಗಳನ್ನು ಪರಿಶೀಲಿಸಬೇಕು. ಕ್ರ್ಯಾಶ್‌ ಟೆಸ್ಟಿಂಗ್‌ ರೇಟಿಂಗ್‌ ಬಗ್ಗೆಯೂ ತಿಳಿದಿರಬೇಕು.
ಮಹೀಂದ್ರ ಎಕ್ಸ್‌ಯುವಿ 7ಒಒ
ಮಹೀಂದ್ರ ಎಕ್ಸ್‌ಯುವಿ 7ಒಒ

Family Safety Cars: ಪ್ರತಿಯೊಬ್ಬರೂ ಹೊಸ ಕಾರು ಹೊಂದಲು ಬಯಸುತ್ತಾರೆ. ವಿಶೇಷವಾಗಿ ಪುಟ್ಟ ಕುಟುಂಬದ ಸವಾರಿಗೆ ಸೂಕ್ತವಾದ ಕಾರು ಖರೀದಿಸಲು ಆದ್ಯತೆ ನೀಡುತ್ತಾರೆ. ಹೊಸ ಕಾರು ಖರೀದಿಸುವಾಗ ಕಾರಿನ ಮೈಲೇಜ್, ಬೆಲೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಅಗತ್ಯ. ಈಗ ವಾಹನ ಖರೀದಿಸುವ ಸಮಯದಲ್ಲಿ ಅದಕ್ಕೆ ದೊರಕಿರುವ ಕ್ರ್ಯಾಷ್‌ ಟೆಸ್ಟ್‌ ಸ್ಟಾರ್‌ ರೇಟಿಂಗ್‌ ಕೂಡ ತಿಳಿದಿರಬೇಕು. ಭಾರತದಲ್ಲಿ ಅತ್ಯುತ್ತಮ ಸ್ಟಾರ್‌ ರೇಟಿಂಗ್‌ ಇರುವ ಕುಟುಂಬ ಸವಾರಿಗೆ ಸೂಕ್ತವಾದ ದೊಡ್ಡ ಎಸ್‌ಯುವಿಗಳ ವಿವರ ಪಡೆಯೋಣ.

ಮಹೀಂದ್ರ ಸ್ಕಾರ್ಪಿಯೋ-ಎನ್

ಮಹೀಂದ್ರಾ ಸ್ಕಾರ್ಪಿಯೋ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಹೀಂದ್ರಾ ಕಾರುಗಳಲ್ಲಿ ಒಂದಾಗಿದೆ. ಇದನ್ನು ಸ್ಕಾರ್ಪಿಯೋ-ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ 2 ಎಂಬ ವಿಭಿನ್ನ ಆವೃತ್ತಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇತ್ತೀಚಿನ ಸ್ಕಾರ್ಪಿಯೋ ಕಾರು, ಸ್ಕಾರ್ಪಿಯೋ-ಎನ್ ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲಿ 5 ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಸ್ಕಾರ್ಪಿಯೋ ಎನ್‌ 2.2 ಲೀಟರ್‌ನ ಮೆವಾಕ್‌ ಡೀಸೆಲ್‌, 2.0 ಲೀಟರ್‌ನ ಮಸ್ಟೆಲಿಯನ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಆಯ್ಕೆಗಳಲ್ಲಿ ದೊರಕುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗಿಯರ್‌ ಬಾಕ್ಸ್‌ ಆಯ್ಕೆಗಳಲ್ಲಿ ದೊರಕುತ್ತದೆ. ಇದು 6-7 ಸೀಟರ್ ಆಯ್ಕೆಗಳಲ್ಲಿ ಲಭ್ಯವಿದೆ. ಸ್ಕಾರ್ಪಿಯೋ-ಎನ್ ದೊಡ್ಡ ಪನೋರಮಿಕ್ ಸನ್‌ರೂಫ್‌ ಹೊಂದಿದೆ.

ಮಹೀಂದ್ರ ಎಕ್ಸ್‌ಯುವಿ 7ಒಒ

ಮಹೀಂದ್ರ XUV700 ಮಹೀಂದ್ರಾದ ಇತ್ತೀಚಿನ ಕಾರುಗಳಲ್ಲಿ ಒಂದಾಗಿದೆ. XUV700 ಎನ್ನುವುದು ಕಂಪನಿಯ ಈ ಹಿಂದಿನ XUV500ಗೆ ಉತ್ತರಾಧಿಕಾರಿಯಾಗಿದೆ. ಎಕ್ಸ್‌ಯುವಿ 7ಒಒ ಗ್ಲೋಬಲ್ ಎನ್‌ಕ್ಯಾಪ್‌ನಲ್ಲಿನಲ್ಲಿ ವಯಸ್ಕರ ಸುರಕ್ಷತೆಗಾಗಿ 5 ಸ್ಟಾರ್‌ ರೇಟಿಂಗ್‌ ಮತ್ತು ಮಕ್ಕಳ ಸುರಕ್ಷತೆಗಾಗಿ 4 ಸ್ಟಾರ್‌ ರೇಟಿಂಗ್‌ ಪಡೆದಿದೆ. ಇದು 5 ಆಸನಗಳು ಮತ್ತು 7 ಆಸನಗಳ ಆಯ್ಕೆಗಳಲ್ಲಿ ಲಭ್ಯವಿದೆ. ಎಂಎಕ್ಸ್‌, ಎಕ್ಸ್‌ 2 ರೂಪಾಂತರಗಳಲ್ಲಿ ಲಭ್ಯವಿದೆ. ಡೀಸೆಲ್ ಮತ್ತು ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಟಾಟಾ ಸಫಾರಿ

ಸಫಾರಿ ಭಾರತದ ಮತ್ತೊಂದು ಪ್ರಮುಖ ಕಾರು ಕಂಪನಿಯಾದ ಟಾಟಾ ಮೋಟಾರ್ಸ್‌ನ ದುಬಾರಿ ಕಾರು ಇದಾಗಿದೆ. ಗ್ಲೋಬಲ್ ಎನ್‌ಸಿಎಪಿ, ಇಂಡಿಯಾ ಎನ್‌ಸಿಎಪಿ (ಹೊಸ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಸಫಾರಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು 6-7 ಆಸನಗಳನ್ನು ಹೊಂದಿರುವ ಮಧ್ಯಮ ಗಾತ್ರದ ಎಸ್‌ಯುವಿ ಆಗಿದೆ. ಸಫಾರಿಯು 2.0-ಲೀಟರ್ ಕ್ರಯೋಟೆಕ್ ಡೀಸೆಲ್ ಎಂಜಿನ್‌ ಹೊಂದಿದೆ. ಈ ಡೀಸೆಲ್ ಎಂಜಿನ್ 3,750 ಆವರ್ತನದಲ್ಲಿ 167.6 ಬಿಎಚ್‌ಪಿ ಗರಿಷ್ಠ ಶಕ್ತಿ ದೊರಕುತ್ತದೆ. 1,750 - 2,500 ಆವರ್ತನದಲ್ಲಿ 350 ಎನ್‌ಎಂ ಟಾರ್ಕ್ ನೀಡುತ್ತದೆ. 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗಿಯರ್‌ ಬಾಕ್ಸ್‌ನಲ್ಲಿ ದೊರಕುತ್ತದೆ.

ಕಾರು ಖರೀದಿಸುವಾಗ ಕ್ರ್ಯಾಶ್ ಟೆಸ್ಟ್‌ನಲ್ಲಿ ಕಾರು ಎಷ್ಟು ಸ್ಕೋರ್ ಮಾಡಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದಕ್ಕಾಗಿಯೇ ಭಾರತ ಸರ್ಕಾರ ಕಳೆದ ವರ್ಷ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಅನ್ನು ಪರಿಚಯಿಸಿತು. ಕುಟುಂಬದೊಂದಿಗೆ ಪ್ರಯಾಣಿಸುವಾಗ ಕಾರಿನ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು. ಈಗ ಬಹುತೇಕ ವಾಹನಗಳು ಹೊರಗೆ ನೋಡಲು ಅದ್ಭುತವಾಗಿರುತ್ತವೆ. ಆದರೆ, ಅವುಗಳು ಪುಟ್ಟ ಅಪಘಾತದಲ್ಲಿಯೇ ಆಕಾರ ಕಳೆದುಕೊಳ್ಳುತ್ತವೆ. ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ವಾಹನ ಖರೀದಿಸಲು ಆದ್ಯತೆ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ