ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಕಾರು: ಯಾವ ಕಾರು ಖರೀದಿ ಸೂಕ್ತ? ವಿದ್ಯುತ್‌ ವಾಹನ ಖರೀದಿಸಲು ಬಯಸುವವರು ಈ ವ್ಯತ್ಯಾಸ ತಿಳಿದುಕೊಳ್ಳಿ-automobile news electric car vs petrol car which one is better for you here is differnce between two cars pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಕಾರು: ಯಾವ ಕಾರು ಖರೀದಿ ಸೂಕ್ತ? ವಿದ್ಯುತ್‌ ವಾಹನ ಖರೀದಿಸಲು ಬಯಸುವವರು ಈ ವ್ಯತ್ಯಾಸ ತಿಳಿದುಕೊಳ್ಳಿ

ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಕಾರು: ಯಾವ ಕಾರು ಖರೀದಿ ಸೂಕ್ತ? ವಿದ್ಯುತ್‌ ವಾಹನ ಖರೀದಿಸಲು ಬಯಸುವವರು ಈ ವ್ಯತ್ಯಾಸ ತಿಳಿದುಕೊಳ್ಳಿ

Electric Car vs Petrol Car: ಎಲೆಕ್ಟ್ರಿಕ್‌ ವಾಹನ ಮತ್ತು ಪೆಟ್ರೋಲ್‌ ಕಾರಿನಲ್ಲಿ ಯಾವುದು ಉತ್ತಮ? ಇವೆರಡರ ನಡುವೆ ವ್ಯತ್ಯಾಸವೇನು? ಹೊಸ ಕಾರು ಖರೀದಿದಾರರ ಮನಸ್ಸಲ್ಲಿ ಮೂಡುವ ಅನೇಕ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.

ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಕಾರು: ಯಾವ ಕಾರು ಖರೀದಿ ಸೂಕ್ತ?
ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಕಾರು: ಯಾವ ಕಾರು ಖರೀದಿ ಸೂಕ್ತ? (ಸಾಂದರ್ಭಿಕ ಚಿತ್ರ)

Electric Car vs Petrol Car: ಈ ಕಾಲದಲ್ಲಿ ಅಥವಾ ಇ-ಕಾಲದಲ್ಲಿ ವಾಹನ ಖರೀದಿದಾರರಿಗೆ "ಪೆಟ್ರೋಲಾ? ಎಲೆಕ್ಟ್ರಿಕಾ?" ಎಂಬ ಪ್ರಶ್ನೆಗಳು ಕಾಡುತ್ತವೆ. ಪೆಟ್ರೋಲ್‌ ವಾಹನ ಖರೀದಿಸಿದರೆ ಅದರ ದೊಡ್ಡ ಇಂಧನ ಟ್ಯಾಂಕ್‌ಗೆ ಇಂಧನ ತುಂಬಿಸಿ ಕಿಸೆ ಬರಿದಾಗುವ ಭಯವಿರುತ್ತದೆ. ಇದೇ ಸಮಯದಲ್ಲಿ ಎಲೆಕ್ಟ್ರಿಕ್‌ ಕಾರು ಖರೀದಿಸಿದರೆ ಖರ್ಚಿಲ್ಲದೆ ಪ್ರಯಾಣ ಮಾಡಬಹುದು ಎಂಬ ಆಸೆ ಮೂಡುತ್ತದೆ. ಆದರೆ, ಲಾಂಗ್‌ ಟರ್ಮ್‌ಗೆ ಹೋಲಿಸಿದರೆ ಯಾವ ಕಾರು ಸೂಕ್ತ ಎಂಬ ಗೊಂದಲ ಕಾಡುತ್ತದೆ. ಇದೇ ಸಮಯದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಹಿಡನ್‌ ಖರ್ಚುಗಳು, ತಾಂತ್ರಿಕ ಅಂಶಗಳು ಖರೀದಿಗೆ ಹಿಂದೇಟು ಹಾಕುವಂತೆ ಮಾಡುತ್ತದೆ. ಎಲೆಕ್ಟ್ರಿಕ್‌ ವಾಹನ ಖರೀದಿಸಲು ಮುಂದಾಗುವವರು ಅಥವಾ ಪೆಟ್ರೋಲ್‌ ಕಾರೇ ಖರೀದಿಸುವೆ ಎಂದುಕೊಳ್ಳುವವರು ಇವೆರಡು ಕಾರುಗಳ ನಡುವೆ ಇರುವ ಪ್ರಮುಖ ವ್ಯತ್ಯಾಸ ತಿಳಿದುಕೊಂಡರೆ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳಬಹುದು. ಎಲೆಕ್ಟ್ರಿಕ್‌ ಮತ್ತು ಪೆಟ್ರೊಲ್‌ ಕಾರುಗಳ ನಡುವೆ ಇರುವ ವ್ಯತ್ಯಾಸ, ಇವೆರಡು ವಾಹನಗಳ ಗುಣ ಅವಗುಣಗಳ ವಿವರ ಇಲ್ಲಿದೆ.

ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಕಾರು: ಯಾವ ಕಾರು ಖರೀದಿ ಸೂಕ್ತ?

ಎಲೆಕ್ಟ್ರಿಕ್‌ ಕಾರು: ಇದು ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಶಃ ವಿದ್ಯುತ್‌ನಿಂದ ಓಡುವ ಕಾರಾಗಿದೆ. ಇವು ರಿಚಾರ್ಜ್‌ ಮಾಡಬಲ್ಲ ಬ್ಯಾಟರಿ ಹೊಂದಿರುತ್ತವೆ. ಇದರಲ್ಲಿ ಬ್ಯಾಟರಿ, ಗಿಯರ್‌, ಎಲೆಕ್ಟ್ರಿಕ್‌ ಮೋಟಾರ್‌ ಇರುತ್ತದೆ. ಬ್ಯಾಟರಿಯು ವಿದ್ಯುತ್‌ ಶೇಖರಿಸಿಕೊಳ್ಳುತ್ತದೆ. ಎಲೆಕ್ಟ್ರಿಕಲ್‌ ಎನರ್ಜಿಯನ್ನು ಮೆಕ್ಯಾನಿಕಲ್‌ ಎನರ್ಜಿಯಾಗಿ ಪರಿವರ್ತಿಸಿ ಎಲೆಕ್ಟ್ರಿಕ್‌ ಕಾರು ಸಾಗುತ್ತದೆ.

ಪೆಟ್ರೋಲ್‌ ಕಾರು: ಪೆಟ್ರೋಲ್‌ ಕಾರಿನಲ್ಲಿ ಸ್ಪಾರ್ಕ್‌ ಇಗ್ನೈಟೆಡ್‌ ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ ಹೊಂದಿರುತ್ತದೆ. ಇದರಲ್ಲಿ ಗಿಯರ್‌ಬಾಕ್ಸ್‌, ಎಮಜಿನ್‌, ವೈವಿಧ್ಯಮಯ ಆಕ್ಸೆಲ್‌ಗಳು ಇರುತ್ತವೆ. ಎಂಜಿನ್‌ ಇಂಧನ ಉರಿಸಿ ಮೆಕ್ಯಾನಿಕಲ್‌ ಎನರ್ಜಿಯಾಗಿ ಮಾಡುತ್ತದೆ. ಈ ಎನರ್ಜಿಯು ಪಿಸ್ಟನ್‌ ಚಲಿಸುವಂತೆ ಮಾಡುತ್ತದೆ. ಟ್ರಾನ್ಸ್‌ಮಿಷನ್‌ ವ್ಯವಸ್ಥೆಯು ಚಕ್ರಗಳನ್ನು ತಿರುಗುವಂತೆ ಮಾಡುತ್ತದೆ.

  1. ದರ ವ್ಯತ್ಯಾಸ: ಈಗ ಪೆಟ್ರೋಲ್‌ ಕಾರುಗಳ ದರ ಕಡಿಮೆ ಇದೆ. ಆದರೆ, ಇಂಧನ ಮತ್ತು ನಿರ್ವಹಣೆ ವೆಚ್ಚ ಅಧಿಕವಾಗಿರುತ್ತದೆ. ಎಲೆಕ್ಟ್ರಿಕ್‌ ಕಾರುಗಳು ದುಬಾರಿಯಾಗಿರುತ್ತವೆ. ಪೆಟ್ರೊಲ್‌ ಖರ್ಚು ಇಲ್ಲದೆ ಇರುವುದರಿಂದ ಕಿಸೆಗೆ ದೀರ್ಘಕಾಲದಲ್ಲಿ ಹೆಚ್ಚು ಒತ್ತಡ ಉಂಟುಮಾಡದು.
  2. ಪೆಟ್ರೋಲ್‌ ಕಾರಿಗೆ ಇಂಧನವನ್ನು ಪೆಟ್ರೋಲ್‌ ಬಂಕ್‌ಗಳಲ್ಲಿ ತುಂಬಿಸಬಹುದು. ಎಲೆಕ್ಟ್ರಿಕ್‌ ವಾಹನಗಳಿಗೆ ಮನೆಯಲ್ಲಿ ಅಥಬಾ ಇವಿ ರಿಚಾರ್ಜ್‌ ಸ್ಟೇಷನ್‌ಗಳಲ್ಲಿ ಚಾರ್ಜ್‌ ಮಾಡಬಹುದು.
  3. ಪೆಟ್ರೋಲ್‌ ಕಾರುಗಳು ಪರಿಸರಕ್ಕೆ ಹೆಚ್ಚು ಮಾಲಿನ್ಯ ಹೊರಸೂಸುತ್ತದೆ. ಆದರೆ, ಎಲೆಕ್ಟ್ರಿಕ್‌ ವಾಹನಗಳು ಇಂಗಾಲ ಹೊರಸೂಸುವುದಿಲ್ಲ. ಆದರೆ, ಬ್ಯಾಟರಿ ವಿಲೇವಾರಿ ಸಮಯದಲ್ಲಿ ಪರಿಸರಕ್ಕೆ ಹಾನಿಯಾಗಬಹುದು.
  4. ಪೆಟ್ರೋಲ್‌ ಕಾರಿನ ವಿಮೆ ಅಗ್ಗ ಇರುತ್ತದೆ. ಎಲೆಕ್ಟ್ರಿಕ್‌ ವಾಹನಗಳ ವಿಮೆ ದುಬಾರಿಯಾಗಿರುತ್ತವೆ.
  5. ಪೆಟ್ರೋಲ್‌ ಕಾರು ಖರೀದಿಗೆ ಸರಕಾರದಿಂದ ಸಬ್ಸಿಡಿ ದೊರಕದು. ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡುವ ಸಲುವಾಗಿ ಸರಕಾರವು ಇವಿ ಖರೀದಿಗೆ ಸಬ್ಸಿಡಿ ನೀಡುತ್ತವೆ.
  6. ಎಲೆಕ್ಟ್ರಿಕ್‌ ಕಾರುಗಳ ಬ್ಯಾಟರಿಗಳನ್ನು ಹಲವು ಗಂಟೆಗಳ ಕಾಲ ಚಾರ್ಜ್‌ ಮಾಡಬೇಕಾಗುತ್ತದೆ. ಎಲೆಕ್ಟ್ರಿಕ್‌ ವಾಹನಗಳು ದುಬಾರಿಯೂ ಹೌದು. ಎಲೆಕ್ಟ್ರಿಕ್‌ ವಾಹನದ ಬ್ಯಾಟರಿ ಬದಲಾಯಿಸುವುದು ಕೂಡ ದುಬಾರಿ ಬಾಬತ್ತು.
  7. ಪೆಟ್ರೋಲ್‌ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್‌ ವಾಹನದಲ್ಲಿ ಹೆಚ್ಚು ದೂರ ಸಾಗಲು ಸಾಧ್ಯವಿಲ್ಲ. ಆಯಾ ಎಲೆಕ್ಟ್ರಿಕ್‌ ವಾಹನಗಳ ರೇಂಜ್‌ಗೆ ತಕ್ಕಂತೆ ಪ್ರಯಾಣಿಸಬಹುದು. ಪೆಟ್ರೋಲ್‌ ವಾಹನಗಳಾದರೆ ಟ್ಯಾಂಕ್‌ಗೆ ಆಗಾಗ ಪೆಟ್ರೋಲ್‌ ತುಂಬಿಸುತ್ತ ಎಷ್ಟು ದೂರ ಬೇಕಾದರೂ ಹೋಗಬಹುದು.

mysore-dasara_Entry_Point