Festival of Cars: ಕಾರು ಉತ್ಸವ ಆರಂಭಿಸಿದ ಟಾಟಾ ಮೋಟಾರ್ಸ್‌, ಟಿಯಾಗೋದಿಂದ ಸಫಾರಿವರೆಗೆ 2 ಲಕ್ಷ ರೂವರೆಗೆ ದರ ಕಡಿತ, ಇಲ್ಲಿದೆ ಆಫರ್‌ ವಿವರ-automobile news tata motors festival offers 2024 festival of cars with incredible prices for its cars suvs pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Festival Of Cars: ಕಾರು ಉತ್ಸವ ಆರಂಭಿಸಿದ ಟಾಟಾ ಮೋಟಾರ್ಸ್‌, ಟಿಯಾಗೋದಿಂದ ಸಫಾರಿವರೆಗೆ 2 ಲಕ್ಷ ರೂವರೆಗೆ ದರ ಕಡಿತ, ಇಲ್ಲಿದೆ ಆಫರ್‌ ವಿವರ

Festival of Cars: ಕಾರು ಉತ್ಸವ ಆರಂಭಿಸಿದ ಟಾಟಾ ಮೋಟಾರ್ಸ್‌, ಟಿಯಾಗೋದಿಂದ ಸಫಾರಿವರೆಗೆ 2 ಲಕ್ಷ ರೂವರೆಗೆ ದರ ಕಡಿತ, ಇಲ್ಲಿದೆ ಆಫರ್‌ ವಿವರ

Festival of Cars: ಟಾಟಾ ಮೋಟಾರ್ಸ್‌ನ ಹಬ್ಬದ ಕೊಡುಗೆಗಳು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಚಾಲಿತ ಎಲ್ಲಾ ಕಾರುಗಳು ಮತ್ತು ಎಸ್‌ಯುವಿಗಳ ಮೇಲೆ 31 ಅಕ್ಟೋಬರ್ 2024ರವರೆಗೆ ಮಾತ್ರ ಲಭ್ಯವಿವೆ. ಆಕರ್ಷಕ ಎಕ್ಸ್ ಚೇಂಜ್ ಆಫರ್ ಮತ್ತು ನಗದು ಪ್ರಯೋಜನಗಳು ಕೂಡ ಲಭ್ಯವಿದೆ.

Festival of Cars: ಕಾರು ಉತ್ಸವ ಆರಂಭಿಸಿದ ಟಾಟಾ ಮೋಟಾರ್ಸ್‌
Festival of Cars: ಕಾರು ಉತ್ಸವ ಆರಂಭಿಸಿದ ಟಾಟಾ ಮೋಟಾರ್ಸ್‌

ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಈ ವರ್ಷದ ಹಬ್ಬದ ಸೀಸನ್ ನಲ್ಲಿ ತನ್ನ ಕಾರ್ ಗಳ ಮೇಲೆ ಗ್ರಾಹಕರಿಗೆ ಅದ್ಭುತ ಕೊಡುಗೆಗಳನ್ನು ಒದಗಿಸುವ ಅತಿದೊಡ್ಡ 'ಕಾರ್ ಗಳ ಉತ್ಸವ'ವನ್ನು ಪ್ರಾರಂಭಿಸಿದೆ. ಈ ಉತ್ಸವದಲ್ಲಿ ಟಾಟಾದ ಹಲವಾರು ಜನಪ್ರಿಯ ಕಾರುಗಳು ಮತ್ತು ಎಸ್‌ಯುವಿಗಳು ಅಚ್ಚರಿಗೊಳಿಸುವ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ. ಅದಲ್ಲದೇ ಟಾಟಾ ಶೋರೂಮ್‌ಗಳಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಅನೇಕ ಕೊಡುಗೆಗಳನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರು 2.05 ಲಕ್ಷ ರೂಪಾಯಿವರೆಗಿನ ಒಟ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಗ್ರಾಹಕರಿಗೆ ತಮ್ಮ ಕನಸಿನ ಕಾರು ಖರೀದಿಸಲು ಇದು ಸುವರ್ಣಾವಕಾಶವಾಗಿದೆ. ಈ ಹಬ್ಬದ ಕೊಡುಗೆಗಳು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಚಾಲಿತ ಎಲ್ಲಾ ಕಾರುಗಳು ಮತ್ತು ಎಸ್‌ಯುವಿಗಳ ಮೇಲೆ 31 ಅಕ್ಟೋಬರ್ 2024ರವರೆಗೆ ಮಾತ್ರ ಲಭ್ಯವಿವೆ.

“ಹಬ್ಬದ ಸೀಸನ್ ಆರಂಭವಾಗಿರುವ ಈ ಸಂದರ್ಭದಲ್ಲಿ ನಮ್ಮ ಅಮೂಲ್ಯ ಗ್ರಾಹಕರಿಗೆ ಆಕರ್ಷಕವಾದ ಆಫರ್‌ಗಳನ್ನು ಒದಗಿಸಲು ನಾವು ಸಂತೋಷಗೊಂಡಿದ್ದೇವೆ. ಈ ವರ್ಷದ ಹಬ್ಬದ ಸಂದರ್ಭದಲ್ಲಿ ಸೀಮಿತ ಅವಧಿಯ ಬೆಲೆ ರಿಯಾಯಿತಿ ಸೌಲಭ್ಯ ಪಡೆಯಬಹುದಾಗಿದ್ದು, ಐಸಿಇ ವಾಹನಗಳ ಮೇಲೆ 2.05 ಲಕ್ಷ ರೂವರೆಗಿನ ಒಟ್ಟು ಪ್ರಯೋಜನಗಳನ್ನು ಪಡೆಯಬಹುದು. ಅದರ ಜೊತೆಗೆ ಆಕರ್ಷಕ ಎಕ್ಸ್ ಚೇಂಜ್ ಆಫರ್ ಮತ್ತು ನಗದು ಪ್ರಯೋಜನಗಳು ಕೂಡ ಲಭ್ಯವಿರುವುದು ವಿಶೇಷ. ಹಾಗಾಗಿ ಹೊಸ ಆರಂಭಕ್ಕೆ ಇದು ಪರಿಪೂರ್ಣ ಸಂದರ್ಭವಾಗಿದೆ. ಗ್ರಾಹಕರು ಟಾಟಾ ಕಾರನ್ನು ಹೊಂದಲು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳುತ್ತಾರೆ, ಉತ್ತಮ ಸುರಕ್ಷತೆ ಮತ್ತು ವಿನ್ಯಾಸವನ್ನು ಹೊಂದಿರುವ ಕಾರನ್ನು ಮನೆಗೆ ತರುತ್ತಾರೆ ಮತ್ತು ಈ ಹಬ್ಬದ ಋತುವನ್ನು ನಿಜವಾಗಿಯೂ ವಿಶೇಷವಾಗಿಸುತ್ತಾರೆ ಎಂದು ನಾವು ನಂಬಿದ್ದೇವೆ” ಎಂದು ಕಾರು ಉತ್ಸವದ ಕುರಿತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಹೇಳಿದ್ದಾರೆ.

ಎಷ್ಟು ದರ ಕಡಿತ?

ಟಾಟಾ ಮೋಟಾರ್ಸ್‌ನ ಯಾವ ಕಾರಿಗೆ ಎಷ್ಟು ದರ ಕಡಿತ?

ಕಾರು/ಎಸ್‌ಯುವಿಹೊಸ ಆರಂಭಿಕ ಬೆಲೆ (ಸೀಮಿತ ಅವಧಿಯ ಕೊಡುಗೆ)
ಬೆಲೆ ಕಡಿತ (ವರೆಗೆ)
ಟಿಯಾಗೋ4,99,900 ರೂ65,000 ರೂ
ಟಿಗೋರ್5,99,900 ರೂ30,000 ರೂ
ಆಲ್ಟ್ರೋಜ್6,49,900 ರೂ45,000 ರೂ
ನೆಕ್ಸಾನ್7,99,990 ರೂ80,000 ರೂ
ಹ್ಯಾರಿಯರ್14,99,000 ರೂ1,60,000 ರೂ
ಸಫಾರಿ15,49,000 ರೂ1,80,000 ರೂ
 45,000 ವರೆಗಿನ ಎಕ್ಸ್ ಚೇಂಜ್ ಆಫರ್ ಸೇರಿದಂತೆ
ಇತರ ಕೊಡುಗೆಗಳು ಕೂಡ ಲಭ್ಯವಿದೆ 
 

 

ಈ ಅಂಶಗಳನ್ನು ಗಮನಿಸಿ

  1. ಐಸಿಇ ವಾಹನಗಳ ಮೇಲೆ 2.05 ಲಕ್ಷ ರೂಪಾಯಿವರೆಗೆ ಬೆಲೆ ಕಡಿತ ಘೋಷಣೆ- ಅತ್ಯಾಕರ್ಷಕ ಬೆಲೆ ರಿಯಾಯಿತಿ ಆಫರ್ ಗಳು ಹಬ್ಬದ ಸೀಸನ್ ನಲ್ಲಿ ಮಾತ್ರ ಲಭ್ಯ.
  2. ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿಯಿಂದ ಕಾರ್ಯ ನಿರ್ವಹಿಸುವ ಟಾಟಾದ ಎಲ್ಲಾ ಎಸ್‌ಯುವಿಗಳು ಮತ್ತು ಕಾರುಗಳ ಮೇಲೆ ವಿಶೇಷ ಬೆಲೆಗಳ ನಿಗದಿ ಮಾಡಲಾಗಿದೆ.
  3. ಹಬ್ಬದ ಕೊಡುಗೆಗಳು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಚಾಲಿತ ಎಲ್ಲಾ ಕಾರುಗಳು ಮತ್ತು ಎಸ್‌ಯುವಿಗಳ ಮೇಲೆ 31 ಅಕ್ಟೋಬರ್ 2024ರವರೆಗೆ ಮಾತ್ರ ಲಭ್ಯವಿವೆ.

ಟಾಟಾ ಕಾರುಗಳ ಆರಂಭಿಕ ದರ

ಹಲವಾರು ಜನಪ್ರಿಯ ಮಾದರಿಗಳಿಗೆ ಅಚ್ಚರಿಗೊಳಿಸುವ ಆರಂಭಿಕ ಬೆಲೆಯನ್ನು ಇಡಲಾಗಿದೆ, ಕೆಲವು ಮಾಡೆಲ್ ಗಳ ಆರಂಭಿಕ ಬೆಲೆಗಳು ಇಲ್ಲಿವೆ -

  • ಟಿಯಾಗೋ 4.99 ಲಕ್ಷ
  • ಟಿಗೋರ್ 5.99 ಲಕ್ಷ
  • ಆಲ್ಟ್ರೋಜ್ 6.49 ಲಕ್ಷ
  • ನೆಕ್ಸಾನ್ 7.99 ಲಕ್ಷ
  • ಹ್ಯಾರಿಯರ್ 14.99 ಲಕ್ಷ
  • ಸಫಾರಿ 15.49 ಲಕ್ಷ

ಈ ಅವಧಿಯಲ್ಲಿ ನಮ್ಮ ಟಾಟಾ ಶೋರೂಮ್‌ ಗಳಲ್ಲಿ  45,000 ರೂಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ಸೇರಿದಂತೆ ಇತರ ಕೊಡುಗೆಗಳು ಕೂಡ ಲಭ್ಯವಿದೆ ಎಂದು ಟಾಟಾ ಮೋಟಾರ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

mysore-dasara_Entry_Point