logo
ಕನ್ನಡ ಸುದ್ದಿ  /  ಜೀವನಶೈಲಿ  /  310 ಸಿಸಿ ಸೂಪರ್‌ ಬೈಕ್‌ಗಳಲ್ಲಿ ಯಾವುದು ಉತ್ತಮ? ಟಿವಿಎಸ್‌ ಅಪಾಚೆ ಆರ್‌ಆರ್‌ 310 ವರ್ಸಸ್‌ ಬಿಎಂಡಬ್ಲ್ಯು ಜಿ 310 ಆರ್‌ಆರ್‌

310 ಸಿಸಿ ಸೂಪರ್‌ ಬೈಕ್‌ಗಳಲ್ಲಿ ಯಾವುದು ಉತ್ತಮ? ಟಿವಿಎಸ್‌ ಅಪಾಚೆ ಆರ್‌ಆರ್‌ 310 ವರ್ಸಸ್‌ ಬಿಎಂಡಬ್ಲ್ಯು ಜಿ 310 ಆರ್‌ಆರ್‌

Praveen Chandra B HT Kannada

Oct 08, 2024 11:46 AM IST

google News

ಟಿವಿಎಸ್‌ ಅಪಾಚೆ ಆರ್‌ಆರ್‌ 310- ಬಿಎಂಡಬ್ಲ್ಯು ಜಿ 310 ಆರ್‌ಆರ್‌ ಬೈಕ್‌ಗಳ ಹೋಲಿಕೆ

    • ಟಿವಿಎಸ್‌ ಅಪಾಚೆ ಆರ್‌ಆರ್‌ 310 ಮತ್ತು ಬಿಎಂಡಬ್ಲ್ಯು ಜಿ 310 ಆರ್‌ಆರ್‌ ಬೈಕ್‌ಗಳು ಒಂದೇ ರೀತಿಯವು. ಆದರೆ, ಅಪಾಚೆ ಆರ್‌ಆರ್‌ 310ನಲ್ಲಿ ಹೆಚ್ಚು ಈಕ್ವಿಪ್‌ಮೆಂಟ್‌ಗಳಿವೆ. ಇವೆರಡು ಮೋಟಾರ್‌ ಸೈಕಲ್‌ಗಳ ಹೋಲಿಕೆ ಮಾಡೋಣ ಬನ್ನಿ.
ಟಿವಿಎಸ್‌ ಅಪಾಚೆ ಆರ್‌ಆರ್‌ 310- ಬಿಎಂಡಬ್ಲ್ಯು ಜಿ 310 ಆರ್‌ಆರ್‌ ಬೈಕ್‌ಗಳ ಹೋಲಿಕೆ
ಟಿವಿಎಸ್‌ ಅಪಾಚೆ ಆರ್‌ಆರ್‌ 310- ಬಿಎಂಡಬ್ಲ್ಯು ಜಿ 310 ಆರ್‌ಆರ್‌ ಬೈಕ್‌ಗಳ ಹೋಲಿಕೆ

ಭಾರತೀಯ ಮಾರುಕಟ್ಟೆಯಲ್ಲಿ ಸೂಪರ್‌ಬೈಕ್‌ ವಿಭಾಗವು ಜನಪ್ರಿಯತೆ ಪಡೆಯುತ್ತಿದೆ. ಈ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್‌ಗಳನ್ನು ಪರಿಚಯಿಸಲು ದ್ವಿಚಕ್ರವಾಹನ ಕಂಪನಿಗಳು ಮುಂದಾಗುತ್ತಿವೆ. ಟಿವಿಎಸ್‌ ಮೋಟಾರ್‌ ಕಂಪನಿಯು ಇತ್ತೀಚೆಗೆ ಅಪಾಚೆ ಆರ್‌ಆರ್‌ 310 ಎಂಬ ಮಧ್ಯಮ ಶ್ರೇಣಿಯ ಸೂಪರ್‌ಬೈಕ್‌ ಪರಿಚಯಿಸಿತ್ತು. ಹಳೆಯ ಆರ್‌ಆರ್‌ 310ಗೆ ಹೋಲಿಸಿದರೆ ಇದು ಸಾಕಷ್ಟು ಅಪ್‌ಗ್ರೇಡ್‌ ಆಗಿದೆ. ಆದರೆ, ಈ ಬೈಕ್‌ ಬಿಎಂಡಬ್ಲ್ಯು ಜಿ 310 ಆರ್‌ಆರ್‌ ಬೈಕ್‌ಗೆ ಸ್ಪರ್ಧೆ ಒಡ್ಡುವಂತಹದದು. ಈ ಎರಡು ಬೈಕ್‌ಗಳಲ್ಲಿ ಯಾವುದನ್ನು ಖರೀದಿಸಬಹುದು? ಇವೆರಡು ಬೈಕ್‌ಗಳ ನಡುವೆ ಇರುವ ಸಾಮ್ಯತೆ, ಭಿನ್ನತೆ ಏನು? ತಿಳಿದುಕೊಳ್ಳೋಣ ಬನ್ನಿ.

ಅಪಾಚೆ ಆರ್‌ಆರ್‌ 310 ಮತ್ತು ಬಿಎಂಡಬ್ಲ್ಯು ಜಿ 310 ಆರ್‌ಆರ್‌: ವಿನ್ಯಾಸ

ವಿನ್ಯಾಸದ ವಿಷಯದಲ್ಲಿ 2024ರ ಅಪಾಚೆ ಆರ್‌ಆರ್‌ 310 ಗಮನ ಸೆಳೆಯುತ್ತದೆ. ಇದಕ್ಕೆ ನ್ಯೂ ಬೂಂಬೆರ್‌ ಗ್ರೇ ಕಲರ್‌ ಸ್ಕೀಮ್‌ ಮತ್ತು ವಿಂಗ್ಲೆಟ್ಸ್‌ ಅಳವಡಿಸಲಾಗಿದೆ. ಇನ್ನೊಂದೆಡೆ ಬಿಎಂಡಬ್ಲ್ಯುನ ಹಳೆಯ ವಿನ್ಯಾಸವೇ ಮುಂದುವರೆದಿದೆ. ಆದರೆ, ಈ ವರ್ಷದ ಆರಂಭದಲ್ಲಿ ಹೊಸ ಪೇಂಟ್‌ ಸ್ಕೀಮ್‌ ಪರಿಚಯಿಸಿತ್ತು. ರೇಸಿಂಗ್‌ ಬ್ಲೂ ಮೆಟಾಲಿಕ್‌ ಎಂಬ ಪೇಂಟ್‌ ಸ್ಕೀಮ್‌ ಇದೆ.

ಸ್ಪೆಸಿಫಿಕೇಷನ್‌ ಹೋಲಿಕೆ

ಇವೆರಡೂ ಬೈಕ್‌ಗಳು 310 ಸಿಸಿಯ ಲಿಕ್ವಿಡ್‌ ಕೂಲ್ಡ್‌ ರಿವರ್ಸ್‌ ಇನ್‌ಕ್ಲೈನ್ಡ್‌ ಎಂಜಿನ್‌ ಹೊಂದಿವೆ. ಆದರೆ, ಇದೀಗ ಪರಿಷ್ಕೃತ ಆವೃತ್ತಿಯಲ್ಲಿ ಅಪಾಚೆ ತನ್ನ ಸೂಪರ್‌ಬೈಕ್‌ ಎಂಜಿನ್‌ ಅನ್ನು ಇನ್ನಷ್ಟು ಟ್ಯೂನ್‌ ಮಾಡಿದೆ. ಇದರಿಂದ 9800 ಆವರ್ತನಕ್ಕೆ 39 ಬಿಎಚ್‌ಪಿ ಪವರ್‌ ಮತ್ತು 7,900 ಆವರ್ತನಕ್ಕೆ 29 ಎನ್‌ಎಂ ಟಾರ್ಕ್‌ ದೊರಕುತ್ತದೆ. ಇನ್ನೊಂದೆಡೆ ಬಿಎಂಡಬ್ಲ್ಯು ಸೂಪರ್‌ ಬೈಕ್‌ 9,700 ಆವರ್ತನಕ್ಕೆ 33.5 ಬಿಎಚ್‌ಪಿ ಮತ್ತು 7,700 ಆವರ್ತನಕ್ಕೆ 27 ಎನ್‌ಎಂ ಟಾರ್ಕ್‌ನೀಡುತ್ತದೆ. ಇವೆರಡೂ ಬೈಕ್‌ಗಳೂ ಆರು ಹಂತದ ಗಿಯರ್‌ಬಾಕ್ಸ್‌ ಹೊಂದಿವೆ.

ಫೀಚರ್‌ಗಳ ಕಂಪೇರಿಸನ್‌

ಫೀಚರ್‌ಗಳ ವಿಷಯದಲ್ಲಿ ಬಿಎಂಡಬ್ಲ್ಯುಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಟಿವಿಎಸ್‌ ಅಪಾಚೆ ಹೊಂದಿದೆ. ಅಪಾಚೆ ಆರ್‌ಆರ್‌ 310ನಲ್ಲಿ ಬ್ಲೂಟೂಥ್‌ ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್‌ಇದೆ. ಇಷ್ಟು ಮಾತ್ರವಲ್ಲದೆ ಬಿಲ್ಟ್‌ ಟು ಆರ್ಡ್‌ ಕಿಟ್ಸ್‌ ಇದೆ. ಅಂದರೆ, ಹೊಂದಾಣಿಕೆ ಮಾಡಬಹುದಾದ ಮುಂಭಾಗ ಮತ್ತು ಹಿಂಭಾಗದ ಸಸ್ಪೆನ್ಷನ್‌, ಬ್ರಾಸ್‌ ಕೋಟೆಡ್‌ ಚೈನ್‌ ಇದೆ. ಡೈನಾಮಿಕ್‌ ಪ್ರೊ ಕಿಟ್‌ನಲ್ಲಿ ಕಾರ್ನರಿಂಗ್‌ ಕ್ರೂಸ್‌ ಕಂಟ್ರೋಲ್‌, ರಿಯರ್‌ ಲಿಫ್ಟ್‌ ಆಫ್‌ ಕಂಟ್ರಲ್‌, ವೀಲೀ ಕಂಟ್ರೋಲ್‌, ಕಾರ್ನರಿಂಗ್‌ ಎಬಿಎಸ್‌, ಕಾರ್ನರಿಂಗ್‌ ಟ್ರಾಕ್ಷನ್‌ ಕಂಟ್ರೋಲ್‌ ಮುಂತಾದ ಫೀಚರ್‌ಗಳನ್ನು ನೀಡಲಾಗಿದೆ. ಇವೆಲ್ಲವೂ ರೇ್‌ಟ್ಯೂನ್‌ ಡೈನಾಮಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ನ ಭಾಗಗಳಾಗಿವೆ. ಟಿವಿಎಸ್‌ ಕ್ವಿಕ್‌ ಶಿಫ್ಟರ್‌ ಫೀಚರ್‌ ಅನ್ನೂ ನೀಡುತ್ತಿದೆ.

ಬಿಎಂಡಬ್ಲ್ಯು ಜಿ 310 ಆರ್‌ಆರ್‌ನಲ್ಲಿ ಎಲ್‌ಇಡಿ ಲೈಟಿಂಗ್‌, ನಾಲ್ಕು ರೈಡಿಂಗ್‌ ಮೋಡ್‌, ಟಿಎಫ್‌ಟಿ ಸ್ಕ್ರೀನ್‌, ಡ್ಯೂಯೆಲ್‌ ಚಾನೆಲ್‌ಎಬಿಎಸ್‌, ರೈಡ್-ಬೈ-ವೈರ್ ಸಿಸ್ಟಮ್ ಮುಂತಾದ ಫೀಚರ್‌ಗಳಿವೆ. ಫೀಚರ್‌ಗಳಲ್ಲಿ ಅಪಾಚೆ ಗಮನ ಸೆಳೆಯುತ್ತದೆ.

ದರ ವ್ಯತ್ಯಾಸ

2024ರ ಟಿವಿಎಸ್‌ ಅಪಾಚೆ ಆರ್‌ಆರ್‌ 310ನ ಎಕ್ಸ್‌ ಶೋರೂಂ ದರ 2.75 ಲಕ್ಷ ರೂಪಾಯಿ ಇದೆ. ಕ್ವಿಕ್‌ ಶಿಫ್ಟರ್‌ ಇರುವ ಬಕ್‌ ದರ 2.92 ಲಕ್ಷ ರೂಪಾಯಿ ಇದೆ. ಬೂಂಪರ್‌ ಗ್ರೇ ಕಲರ್‌ ಸ್ಕೀಮ್‌ ಬೈಕ್‌ ದರ 2.97 ಲಕ್ಷ ರೂಪಾಯಿ ಇದೆ. ಇದೇ ಸಮಯದಲ್ಲಿ ಡೈನಾಮಿಕ್‌ ಕಿಟ್ ದರ 18 ಸಾವಿರ ರೂಪಾಯಿ ಇದೆ. ಡೈನಾಮಿಕ್‌ ಪ್ರೊ ಕಿಟ್‌ ದರ 16 ಸಾವಿರ ರೂಪಾಯಿ ಇದೆ. ರೇಸ್‌ ರಿಪ್ಲಿಕಾ ಆವೃತ್ತಿಗೆ ಹೆಚ್ಚುವರಿ 7 ಸಾವಿರ ರೂಪಾಯಿ ನೀಡಬೇಕು. ಆದರೆ, ಬಿಎಂಡಬ್ಲ್ಯು ಜಿ 310 ಆರ್‌ಆರ್‌ ಎಕ್ಸ್‌ ಶೋರೂಂ ದರ 3.05 ಲಕ್ಷ ರೂಪಾಯಿ ಇದೆ.

ನಿಮಗೆ ಇವೆರಡು ಬೈಕ್‌ಗಳಲ್ಲಿ ಯಾವುದು ಇಷ್ಟವಾಯಿತು? ಖರೀದಿಸಬೇಕೆಂದುಕೊಂಡವರು ಟೆಸ್ಟ್‌ ರೈಡ್‌ ಮಾಡಿ ನೋಡಿ ಮುಂದುವರೆಯಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ