ಟಿವಿಎಸ್‌ ಅಪಾಚೆ ಆರ್‌ಆರ್‌ 310 vs ಕೆಟಿಎಂ ಆರ್‌ಸಿ 390: ಇವೆರಡು ಬೈಕ್‌ಗಳಲ್ಲಿ ಯಾವುದು ಬೆಸ್ಟ್?‌
ಕನ್ನಡ ಸುದ್ದಿ  /  ಜೀವನಶೈಲಿ  /  ಟಿವಿಎಸ್‌ ಅಪಾಚೆ ಆರ್‌ಆರ್‌ 310 Vs ಕೆಟಿಎಂ ಆರ್‌ಸಿ 390: ಇವೆರಡು ಬೈಕ್‌ಗಳಲ್ಲಿ ಯಾವುದು ಬೆಸ್ಟ್?‌

ಟಿವಿಎಸ್‌ ಅಪಾಚೆ ಆರ್‌ಆರ್‌ 310 vs ಕೆಟಿಎಂ ಆರ್‌ಸಿ 390: ಇವೆರಡು ಬೈಕ್‌ಗಳಲ್ಲಿ ಯಾವುದು ಬೆಸ್ಟ್?‌

2024 TVS Apache RR 310 vs KTM RC 390: 2024ರ ಟಿವಿಎಸ್‌ ಅಪಾಚೆ ಆರ್‌ಆರ್‌ 310 ಬೈಕ್‌ ಕೆಟಿಎಂ ಆರ್‌ಸಿ 390ಗೆ ದರ ವಿಷಯದಲ್ಲಿ ಪ್ರತಿಸ್ಪರ್ಧಿಯಾಗಿದೆ. ಆದರೆ, ಪರ್ಫಾಮೆನ್ಸ್‌ ಮತ್ತು ಫೀಚರ್‌ ವಿಷಯದಲ್ಲಿ ಇವೆರಡು ಬೈಕ್‌ಗಳು ಸ್ಪರ್ಧೆ ನಡೆಸಬಲ್ಲದೇ?

ಟಿವಿಎಸ್‌ ಅಪಾಚೆ ಆರ್‌ಆರ್‌ 310 vs ಕೆಟಿಎಂ ಆರ್‌ಸಿ 390 ಬೈಕ್‌ಗಳ ನಡುವೆ ಏನು ಸಾಮ್ಯತೆ, ವ್ಯತ್ಯಾಸ ಇದೆ ತಿಳಿಯೋಣ.
ಟಿವಿಎಸ್‌ ಅಪಾಚೆ ಆರ್‌ಆರ್‌ 310 vs ಕೆಟಿಎಂ ಆರ್‌ಸಿ 390 ಬೈಕ್‌ಗಳ ನಡುವೆ ಏನು ಸಾಮ್ಯತೆ, ವ್ಯತ್ಯಾಸ ಇದೆ ತಿಳಿಯೋಣ.

2024 TVS Apache RR 310 vs KTM RC 390: ಟಿವಿಎಸ್‌ ಮೋಟಾರ್‌ ಕಂಪನಿಯು ಪರಿಷ್ಕೃತ ಅಪಾಚೆ ಆರ್‌ಆರ್‌ 310 ಬೈಕನ್ನು ಪರಿಚಯಿಸಿತ್ತು. ಹಳೆಯ ಆವೃತ್ತಿಗೆ ಹೋಲಿಸಿದರೆ ಇದು ಸಾಕಷ್ಟು ಅಪ್‌ಗ್ರೇಡ್‌ ಆಗಿದೆ. ಇದರ ಎಕ್ಸ್‌ ಶೋರೂಂ ಆರಂಭಿಕ ದರ 2.75 ಲಕ್ಷ ರೂಪಾಯಿ ಇದೆ. ನೂತನ 2024 ಟಿವಿಎಸ್‌ ಅಪಾಚೆ ಆರ್‌ಆರ್‌ 310 ಬೈಕ್‌ಗೆ ಬಿಎಂಡಬ್ಲ್ಯು ಜಿ310 ಆರ್‌ಆರ್‌, ಕವಾಸಕಿ ನಿಂಜಾ 300, ಕೆಟಿಎಂ ಆರ್‌ಸಿ 390 ಮುಂತಾದ ಬೈಕ್‌ಗಳು ಮಾರುಕಟ್ಟೆಯಲ್ಲಿ ಸ್ಪರ್ಧಿಗಳಾಗಿವೆ. ಆದರೆ, ಈ ಬೈಕ್‌ಗಳು ಪೂರ್ಣ ಪ್ರಮಾಣದಲ್ಲಿ ಸೂಪರ್‌ ಬೈಕ್‌ಗಳಾಗಿವೆ.

ಈ ಹಿಂದಿನ ಬೈಕ್‌ಗೆ ಹೋಲಿಸಿದರೆ ನೂತನ ಟಿವಿಎಸ್‌ ಅಪಾಚೆ ಆರ್‌ಆರ್‌ 310 ಸಾಕಷ್ಟು ಅಪ್‌ಗ್ರೇಡ್‌ ಆಗಿದೆ. ಹೆಚ್ಚು ಪವರ್‌ ಮತ್ತು ಹೆಚ್ಚು ಎಲೆಕ್ಟ್ರಾನಿಕ್ಸ್‌ಗಳು ಸೇರ್ಪಡೆಯಾಗಿವೆ. ಮೊದಲಿಗೆ ಇದನ್ನು ಟಿವಿಎಸ್‌ ಅಕುಲಾ ಕಾನ್ಸೆಪ್ಟ್‌ನಲ್ಲಿ ಪರಿಚಯಿಸಲಾಗಿತ್ತು. ಇದೀಗ ಪ್ರೀಮಿಯಂ ಮೋಟರ್‌ಸೈಕಲ್‌ ವಿಭಾಗದಲ್ಲಿ ಇದನ್ನು ಅಪ್‌ಗ್ರೇಡ್‌ ಮಾಡಲಾಗಿದೆ. ಇದು ಬಿಎಂಡಬ್ಲ್ಯು ಜಿ310 ಆರ್‌ಆರ್‌ ಆಧರಿತ ಬೈಕಾಗಿದೆ.

ಬನ್ನಿ, ಟಿವಿಎಸ್‌ ಅಪಾಚೆ ಆರ್‌ಆರ್‌ 310 vs ಕೆಟಿಎಂ ಆರ್‌ಸಿ 390 ಬೈಕ್‌ಗಳ ನಡುವೆ ಏನು ಸಾಮ್ಯತೆ, ವ್ಯತ್ಯಾಸ ಇದೆ ತಿಳಿಯೋಣ.

ದರ ವ್ಯತ್ಯಾಸ

ಟಿವಿಎಸ್‌ ಆರ್‌ಆರ್‌ 310 ದರ 2.75 ಲಕ್ಷ ರೂಪಾಯಿಯಿಂದ 3.20 ಲಕ್ಷ ರೂಪಾಯಿ ನಡುವೆ ಇದೆ. ಇವು ಎಕ್ಸ್‌ ಶೋರೂಂ ದರ. ಕೆಟಿಎಂ ಆರ್‌ಸಿ 390 ದರ 3.21 ಲಕ್ಷ ರೂಪಾಯಿ ಇದೆ. ಇವೆರಡು ಬೈಕ್‌ಗಳ ದರಗಳಲ್ಲಿ ಟಿವಿಎಸ್‌ ಬೈಕ್‌ ಅಗ್ಗವಾಗಿದೆ.

ಎಂಜಿನ್‌ ಮತ್ತು ಪರ್ಫಾಮೆನ್ಸ್‌

ನೂತನ ಪರಿಷ್ಕೃತ ಟಿವಿಎಸ್‌ ಅಪಾಚೆ ಆರ್‌ಆರ್‌ 310ನಲ್ಲಿ 312 ಸಿಸಿಯ ಸಿಂಗಲ್‌ ಸಿಲಿಂಡರ್‌, ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಇದೆ. ಇದು ಆರು ಸ್ಪೀಡ್‌ನ ಗಿಯರ್‌ ಬಾಕ್ಸ್‌ ಹೊಂದಿದೆ. ಇದು 9800 ಆವರ್ತನಕ್ಕೆ 37 ಬಿಎಚ್‌ಪಿ ಪವರ್‌ ನೀಡುತ್ತದೆ. 7,900 ಆವರ್ತನಕ್ಕೆ 29 ಎನ್‌ಎಂ ಗರಿಷ್ಠ ಟಾರ್ಕ್‌ ಬಿಡುಗಡೆ ಮಾಡುತ್ತದೆ.

ಕೆಟಿಎಂ ಆರ್‌ಸಿ 390ನಲ್ಲಿ 373 ಸಿಸಿಯ ಸಿಂಗಲ್‌ ಸಿಲಿಂಡರ್‌ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಇದೆ. ಇದು ಆರು ಸ್ಪೀಡ್‌ ಗಿಯರ್‌ ಬಾಕ್ಸ್‌ ಹೊಂದಿದೆ. ಇದು 9 ಸಾವಿರ ಆವರ್ತನಕ್ಕೆ 43 ಬಿಎಚ್‌ಪಿ ಪವರ್‌ ಮತ್ತು 7000 ಆವರ್ತನಕ್ಕೆ 37 ಎನ್‌ಎಂ ಟಾರ್ಕ್‌ ನೀಡುತ್ತದೆ.

ಇವೆರಡು ಎಂಜಿನ್‌ಗಳಲ್ಲಿ ಕೆಟಿಎಂ ಆರ್‌ಸಿ 390 ಎಂಜಿನ್‌ ದೊಡ್ಡದಾಗಿದೆ. ಟಿವಿಎಸ್‌ ಅಪಾಚೆ ಆರ್‌ಆರ್‌ 310ಗಿಂತ ಹೆಚ್ಚು ಪವರ್‌ ಮತ್ತು ಟಾರ್ಕ್‌ ಬಿಡುಗಡೆ ಮಾಡುತ್ತದೆ.

Whats_app_banner