ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಸ್ಕೂಟರ್‌: ಎಲೆಕ್ಟ್ರಿಕ್‌ ಸ್ಕೂಟರ್‌ನಿಂದ ಹಣ ಉಳಿತಾಯವಾಗುವುದು ನಿಜವೇ? ಗುಣ-ಅವಗುಣ ತಿಳಿದುಕೊಳ್ಳಿ-automobile news electric scooter vs petrol scooter cost comparison which scooter best to buy pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಸ್ಕೂಟರ್‌: ಎಲೆಕ್ಟ್ರಿಕ್‌ ಸ್ಕೂಟರ್‌ನಿಂದ ಹಣ ಉಳಿತಾಯವಾಗುವುದು ನಿಜವೇ? ಗುಣ-ಅವಗುಣ ತಿಳಿದುಕೊಳ್ಳಿ

ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಸ್ಕೂಟರ್‌: ಎಲೆಕ್ಟ್ರಿಕ್‌ ಸ್ಕೂಟರ್‌ನಿಂದ ಹಣ ಉಳಿತಾಯವಾಗುವುದು ನಿಜವೇ? ಗುಣ-ಅವಗುಣ ತಿಳಿದುಕೊಳ್ಳಿ

ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಸ್ಕೂಟರ್‌: ಇವೆರಡೂ ಸ್ಕೂಟರ್‌ಗಳಲ್ಲಿಯೂ ಗುಣ-ಅವಗುಣಗಳಿವೆ. ಇದೇ ಸಮಯದಲ್ಲಿ ಎಲ್ಲರೂ ಹೊಗಳುತ್ತಿರುವ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಹಿಡನ್‌ ಕಾಸ್ಟ್‌ ಅಥವಾ ಕಣ್ಣಿಗೆ ಕಾಣದ ವೆಚ್ಚಗಳೂ ಇವೆ. ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬ್ಯಾಟರಿಗಳು (ವಿಲೇವಾರಿ) ಪರಿಸರಕ್ಕೆ ಹೆಚ್ಚು ಹಾನಿಕಾರಕ ಎಂಬ ಕುರಿತೂ ಚರ್ಚೆಗಳು ನಡೆಯುತ್ತಿವೆ.

ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಸ್ಕೂಟರ್‌: ಗುಣ-ಅವಗುಣ
ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಸ್ಕೂಟರ್‌: ಗುಣ-ಅವಗುಣ

ರಸ್ತೆಯಲ್ಲಿ ಈಗ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಸಂಖ್ಯೆ ಹೆಚ್ಚಾಗಿದೆ. ಪರಿಸರ ಸ್ನೇಹಿ ಕಾಳಜಿಯಿಂದ ಸಾಕಷ್ಟು ಜನರು ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸುತ್ತಿದ್ದಾರೆ. ಇದೇ ಸಮಯದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಿಂತ ಪೆಟ್ರೋಲ್‌ ಸ್ಕೂಟರ್‌ಗಳೇ ಉತ್ತಮ ಎನ್ನುವವರೂ ಹೆಚ್ಚುತ್ತಿದ್ದಾರೆ. ಪೆಟ್ರೋಲ್‌ ವರ್ಸಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಯಾವುದು ಉತ್ತಮ ಎಂಬ ಸಂದಿಗ್ಧತೆ ಜನರಲ್ಲಿ ಮುಂದುವರೆದಿದೆ. ಇವೆರಡೂ ಸ್ಕೂಟರ್‌ಗಳಲ್ಲಿಯೂ ಗುಣ-ಅವಗುಣಗಳಿವೆ. ಇದೇ ಸಮಯದಲ್ಲಿ ಎಲ್ಲರೂ ಹೊಗಳುತ್ತಿರುವ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಹಿಡನ್‌ ಕಾಸ್ಟ್‌ ಅಥವಾ ಕಣ್ಣಿಗೆ ಕಾಣದ ವೆಚ್ಚಗಳೂ ಇವೆ. ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬ್ಯಾಟರಿಗಳು (ವಿಲೇವಾರಿ) ಪರಿಸರಕ್ಕೆ ಹೆಚ್ಚು ಹಾನಿಕಾರಕ ಎಂಬ ಕುರಿತೂ ಚರ್ಚೆಗಳು ನಡೆಯುತ್ತಿವೆ. ಬನ್ನಿ ಪೆಟ್ರೋಲ್‌ ಮತ್ತು ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಯಾವುದು ಉತ್ತಮ ಎಂದು ತಿಳಿಯೋಣ ಬನ್ನಿ.

ಎಲೆಕ್ಟ್ರಿಕ್‌ ಸ್ಕೂಟರ್‌ ಸಾಫ್ಟ್‌ವೇರ್‌ ಅಪ್‌ಡೇಟ್‌

ಈಗ ಬಹುತೇಕರು ಮೊಬೈಲ್‌ ಫೋನ್‌ ಖರೀದಿಸುತ್ತಾರೆ. ಮೂರು ನಾಲ್ಕು ವರ್ಷ ಹಳೆಯ ಫೋನ್‌ ಅನ್ನು ಬಳಸಲು ಸಾಕಷ್ಟು ಜನರು ಇಷ್ಟಪಡುವುದಿಲ್ಲ. ಯಾಕೆಂದರೆ, ಅದರ ಸಾಫ್ಟ್‌ವೇರ್‌ ಅಪ್‌ಡೇಟ್‌ ಆಗಿರುವುದಿಲ್ಲ. ಇದೇ ರೀತಿಯ ತೊಂದರೆಯನ್ನು ಎಲೆಕ್ಟ್ರಿಕ್‌ ಸ್ಕೂಟರ್‌ ಮಾಲೀಕರು ಅನುಭವಿಸುತ್ತಾರೆ. ಹೆಚ್ಚುವರಿ ಹಣ ನೀಡಿ ಪ್ರತಿವರ್ಷ ಸ್ಕೂಟರ್‌ಗಳ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಬೇಕಾಗುತ್ತದೆ. ಕೆಲವು ವರ್ಷಗಳ ಬಳಿಕ ಸಾಫ್ಟ್‌ವೇರ್‌ ಅಪ್‌ಡೇಟ್‌ ನೀಡುವುದನ್ನು ಕಂಪನಿಗಳು ನಿಲ್ಲಿಸಬಹುದು. ಮಾರುಕಟ್ಟೆಯಲ್ಲಿರುವ ಹೊಸ ಸ್ಕೂಟರ್‌ ಖರೀದಿಸುವ ಅನಿವಾರ್ಯತೆ ಎಲೆಕ್ಟ್ರಿಕ್‌ ಸ್ಕೂಟರ್‌ ಮಾಲೀಕರಿಗೆ ಬರಬಹುದು. ಆದರೆ, ಪೆಟ್ರೋಲ್‌ ಸ್ಕೂಟರ್‌ ಮಾಲೀಕರು ಸುಮಾರು 15 ವರ್ಷ ಯಾವುದೇ ಸಾಫ್ಟ್‌ವೇರ್‌ ಚಿಂತೆ ಇಲ್ಲದೆ ತಮ್ಮ ಆಕ್ಟಿವಾ, ಜುಪಿಟರ್‌, ಪ್ಲೆಸರ್‌ ಮುಂತಾದ ಸ್ಕೂಟರ್‌ಗಳನ್ನು ಓಡಿಸುತ್ತಿರಬಹುದು.

ಆರಂಭದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಅಗ್ಗ

ಟ್ಯಾಂಕ್‌ಗೆ ಪ್ರತಿನಿತ್ಯ ಇಂಧನ ತುಂಬಿಸುವವರಿಗೆ ಪೆಟ್ರೋಲ್‌ ಸ್ಕೂಟರ್‌ ದುಬಾರಿಯಂತೆ ಕಾಣಬಹುದು. ಇದೇ ಸಮಯದಲ್ಲಿ ಉಚಿತ ಕರೆಂಟ್‌ ತುಂಬಿಸಿಕೊಂಡು ಅಥವಾ ಕಡಿಮೆ ದರದಲ್ಲಿ ಕರೆಂಟ್‌ ಚಾರ್ಜ್‌ ಮಾಡಿಕೊಂಡು ಎಲೆಕ್ಟ್ರಿಕ್‌ ಸ್ಕೂಟರ್‌ ಓಡಿಸುವವರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಕಿಸೆಗೆ ಹಗುರ ಎಣಿಸಬಹುದು. ಕೆಲವು ಉತ್ತಮ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ದೀರ್ಘಕಾಲವೂ ನಿಮ್ಮ ಕಿಸೆಗೆ ಹಗುರವೆನಿಸಬಹುದು. ಆದರೆ, ಕೆಲವು ಸ್ಕೂಟರ್‌ಗಳು ಎರಡು ವರ್ಷದ ಬಳಿಕ ಕಷ್ಟಕೊಡಬಹುದು.. ಬ್ಯಾಟರಿ ತೊಂದರೆ ಕಾಣಿಸಿಕೊಂಡರೆ ಖರ್ಚು ಹೆಚ್ಚಾಗಬಹುದು. ಹೊಸ ಬ್ಯಾಟರಿ ದರ ತುಂಬಾ ದುಬಾರಿ ಇರಬಹುದು. ಪೆಟ್ರೊಲ್‌ನಲ್ಲಿ ಉಳಿಸಿದ ಹಣ ಬ್ಯಾಟರಿ ಮೂಲಕ ಹೋಗಬಹುದು. ಇದೇ ಸಮಯದಲ್ಲಿ ಒಂದು ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಹತ್ತು ಹದಿನೈದು ವರ್ಷ ಯಾರಾದರೂ ಬಳಸುತ್ತಾರೆ ಎಂದುಕೊಳ್ಳುವಂತೆ ಇಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಿತ ತಂತ್ರಜ್ಞಾನದ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬರಬಹುದು. ಆಗ, ನಿಮ್ಮಲ್ಲಿರುವ ಈಗಿನ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಔಟ್‌ಡೇಟೆಡ್‌ ಅನಿಸಬಹುದು. ಕೆಲವೇ ವರ್ಷಗಳಲ್ಲಿ ಬೇರೆ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಬೇಕಾಗಬಹುದು. ಇದರಿಂದ ನಿಮಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಪೆಟ್ರೋಲ್‌ಗಿಂತ ದುಬಾರಿಯಾಗಿ ಪರಿಣಮಿಸಬಹುದು.

  • ಕೆಲವು ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಒಬ್ಬರು ಆರಾಮವಾಗಿ ಪ್ರಯಾಣಿಸಬಹುದು. ಇಬ್ಬರು ಕುಳಿತಾಗ ಯಾಕೋ ಹೆವಿ ಅನಿಸಬಹುದು.
  • ಆಫೀಸ್‌-ಮನೆಗೆ ಪ್ರಯಾಣಕ್ಕೆ ಎಲೆಕ್ಟ್ರಿಕ್‌ ಸ್ಕೂಟರ್‌ ಸೂಕ್ತ. ಆದರೆ, ರೇಂಜ್‌ ಕಡಿಮೆ ಇರುವ ಸ್ಕೂಟರ್‌ಗಳನ್ನು ನಂಬಿ ಹೆಚ್ಚು ದೂರ ಹೋಗುವಂತೆ ಇಲ್ಲ.
  • ಕೆಲವು ಸ್ಕೂಟರ್‌ಗಳು ಈಗ ತಾಂತ್ರಿಕವಾಗಿ ತೊಂದರೆ ನೀಡಿ ಗ್ರಾಹಕರಿಗೆ ಕಿರಿಕಿರಿ ನೀಡುತ್ತವೆ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಯಾವುದೇ ಸಮಸ್ಯೆ ಬಾರದು. ಅದೃಷ್ಟ ಕೆಟ್ಟಿದ್ದರೆ ಸದಾ ಎಲೆಕ್ಟ್ರಿಕ್‌ ಸರ್ವೀಸ್‌ ಸೆಂಟರ್‌ನತ್ತ ಮುಖ ಮಾಡಬೇಕಾಗಬಹುದು.
  • ಎಲೆಕ್ಟ್ರಿಕ್‌ ಸ್ಕೂಟರ್‌ ಬ್ಯಾಟರಿ ಹಳೆಯದಾಗುತ್ತ ಹೋದಂತೆ ರೇಂಜ್‌ ಕಡಿಮೆಯಾಗುತ್ತ ಹೋಗಬಹುದು.
  • ಉಚಿತ ಕರೆಂಟ್‌ ಮಿತಿಯೊಳಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಚಾರ್ಜ್‌ ಮಾಡಲು ಆದ್ರೆ ಉತ್ತಮ. ಇಲ್ಲವಾದರೆ ಈಗ ಬೆಂಗಳೂರಿನಂತಹ ನಗರಗಳಲ್ಲಿ ಕರೆಂಟ್‌ ಬಿಲ್‌ ಹೆಚ್ಚು ಬರುತ್ತದೆ. ತಿಂಗಳಿಗೆ ಎರಡು ಸಾವಿರ, ನಾಲ್ಕು ಸಾವಿರ ರೂ ಎಂದೆಲ್ಲ ಕಟ್ಟಬೇಕಾಗುತ್ತದೆ. ಎಲೆಕ್ಟ್ರಿಕ್‌ ಸ್ಕೂಟರ್‌ ಈ ದರವನ್ನು ಇನ್ನಷ್ಟು ಹೆಚ್ಚಿಸಬಹುದು.

ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಭವಿಷ್ಯದ ವಾಹನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸಿಕ್ಕಸಿಕ್ಕ ಕಂಪನಿಯ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸುವ ಮೊದಲು ದೀರ್ಘಕಾಲದ ಯೋಚನೆ ಮಾಡಿ ಮುಂದುವರೆಯವುದು ಉತ್ತಮ. ಜತೆಗೆ, ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಹಿಡನ್‌ ಕಾಸ್ಟ್‌ ಬಗ್ಗೆಯೂ ತಿಳಿದುಕೊಂಡು ಮುಂದುವರೆಯಿರಿ.

mysore-dasara_Entry_Point