logo
ಕನ್ನಡ ಸುದ್ದಿ  /  ಜೀವನಶೈಲಿ  /  ಏಥರ್‌ ಸ್ಕೂಟರ್‌ ಖರೀದಿದಾರರಿಗೆ ಹಬ್ಬದ ಆಫರ್‌; 25 ಸಾವಿರ ರೂವರೆಗೆ ಹಣ ಉಳಿತಾಯ ಮಾಡುವ ಅವಕಾಶ

ಏಥರ್‌ ಸ್ಕೂಟರ್‌ ಖರೀದಿದಾರರಿಗೆ ಹಬ್ಬದ ಆಫರ್‌; 25 ಸಾವಿರ ರೂವರೆಗೆ ಹಣ ಉಳಿತಾಯ ಮಾಡುವ ಅವಕಾಶ

Praveen Chandra B HT Kannada

Oct 07, 2024 12:55 PM IST

google News

ಏಥರ್‌ ಸ್ಕೂಟರ್‌ ಖರೀದಿದಾರರಿಗೆ ಹಬ್ಬದ ಆಫರ್‌; 25 ಸಾವಿರ ರೂಪಾಯಿಯವರೆಗೆ ಹಣ ಉಳಿತಾಯ ಮಾಡಬಹುದು.

    • ಬೆಂಗಳೂರು ಮೂಲದ ಏಥರ್‌ ಎನರ್ಜಿ ಎಲೆಕ್ಟ್ರಿಕ್‌ ಸ್ಕೂಟರ್‌ ಕಂಪನಿಯು ಗ್ರಾಹಕರಿಗೆ Ather 450X, 450 Apex ಸ್ಕೂಟರ್‌ಗಳಿಗೆ ಹಬ್ಬದ ಡಿಸ್ಕೌಂಟ್‌ ಆಫರ್‌ಪ್ರಕಟಿಸಿದೆ. ಕಂಪನಿಯ ಈ ಫ್ಲಾಗ್‌ಶಿಪ್‌ ಸ್ಕೂಟರ್‌ಗಳು ಹಬ್ಬದ ಅವಧಿಯಲ್ಲಿ ಕಡಿಮೆ ದರಕ್ಕೆ ದೊರಕಲಿದೆ.
ಏಥರ್‌ ಸ್ಕೂಟರ್‌ ಖರೀದಿದಾರರಿಗೆ ಹಬ್ಬದ ಆಫರ್‌; 25 ಸಾವಿರ ರೂಪಾಯಿಯವರೆಗೆ ಹಣ ಉಳಿತಾಯ ಮಾಡಬಹುದು.
ಏಥರ್‌ ಸ್ಕೂಟರ್‌ ಖರೀದಿದಾರರಿಗೆ ಹಬ್ಬದ ಆಫರ್‌; 25 ಸಾವಿರ ರೂಪಾಯಿಯವರೆಗೆ ಹಣ ಉಳಿತಾಯ ಮಾಡಬಹುದು.

ಬೆಂಗಳೂರು: ಭಾರತದ ಎಲೆಕ್ಟ್ರಿಕ್‌ ದ್ವಿಚಕ್ರವಾಹನ ತಯಾರಿಕಾ ಕಂಪನಿ ಏಥರ್‌ ಎನರ್ಜಿಯು ವಿಶೇಷ ಹಬ್ಬದ ದರ ವಿನಾಯಿತಿ ಪರಿಚಯಿಸಿದೆ. ವಿಶೇಷವಾಗಿ ತನ್ನ 450 ರೇಂಜ್‌ನ ಸ್ಕೂಟರ್‌ಗಳಿಗೆ ಈ ಹಬ್ಬದ ಆಫರ್‌ ಪ್ರಕಟಿಸಿದೆ. 450 ಎಕ್ಸ್‌ ಮತ್ತು 450 ಅಪೆಕ್ಸ್‌ ಸ್ಕೂಟರ್‌ಗಳನ್ನು ಖರೀದಿಸುವವರಿಗೆ ಸುಮಾರು 25 ಸಾವಿರ ರೂಪಾಯಿವರೆಗೆ ಉಳಿತಾಯ ಮಾಡಲು ಸಾಧ್ಯವಾಗಲಿದೆ.

ಹಬ್ಬದ ಅವಧಿಯ ಆಪರ್‌ ಆಗಿ ಏಥರ್‌ ಬ್ಯಾಟರಿ ವಾರಂಟಿಯನ್ನು ಎಂಟು ವರ್ಷಗಳವರೆಗೆ ಕಂಪನಿಯು ವಿಸ್ತರಿಸುತ್ತಿದೆ. ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೆ ದೀರ್ಘಾವಧಿಯ ಬ್ಯಾಟರಿ ಕಾರ್ಯಕ್ಷಮತೆಯನ್ನು ಆನಂದಿಸಬಹುದೆಂದು ಕಂಪನಿ ತಿಳಿಸಿದೆ.

ಇಷ್ಟು ಮಾತ್ರವಲ್ಲದೆ ಕಂಪನಿಯು ತನ್ನ  ಏಥರ್‌ ಗ್ರಿಡ್‌ ನೆಟ್‌ವರ್ಕ್‌ ಮೂಲಕ ಒಂದು ವರ್ಷದವರೆಗೆ ಗ್ರಾಹಕರು ತಮ್ಮ ಸ್ಕೂಟರ್‌ಗಳನ್ನು ಉಚಿತವಾಗಿ ಚಾರ್ಜಿಂಗ್‌ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ದೇಶಾದ್ಯಂತ ಕಂಪನಿಯು 2,152 ವೇಗದ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದೆ. 5,000 ಮೌಲ್ಯದ ಈ ಪೂರಕ ಚಾರ್ಜಿಂಗ್ ಸೇವೆಯು ಗ್ರಾಹಕರಿಗೆ ಹಬ್ಬದ ಆಫರ್‌ ಆಗಿ ದೊರಕಲಿದೆ.

ಇಷ್ಟು ಮಾತ್ರವಲ್ಲ, ಗ್ರಾಹಕರು ಈ ಹಬ್ಬದ ಅವಧಿಯಲ್ಲಿ ಸ್ಕೂಟರ್‌ ಖರೀದಿಸಿದರೆ 5 ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್‌ ಕೂಡ ಪಡೆಯುತ್ತಾರೆ. ಇದಕ್ಕಾಗಿ ಕಂಪನಿಯು ವಿವಿಧ ಕ್ರೆಡಿಟ್‌ ಕಾರ್ಡ್ ಕಂಪನಿಗಳ ಜತೆ ಮೈತ್ರಿ ಮಾಡಿಕೊಂಡಿದೆ. ಇಎಂಐ ಆಗಿ ಪರಿವರ್ತಿಸಿಕೊಳ್ಳವವರಿಗೆ ಈ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ 10 ಸಾವಿರ ರೂಪಾಯಿವರೆಗೆ ಕ್ಯಾಶ್‌ಬ್ಯಾಕ್‌ ದೊರಕಲಿದೆ.

ಏಥರ್ 450ಎಕ್ಸ್‌ ಸ್ಕೂಟರ್‌ ಬಗ್ಗೆ

ಏಥರ್‌ 450X ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ (2.9 kWh ಮತ್ತು 3.7 kWh). ಇದು ಗೂಗಲ್‌ ಮ್ಯಾಪ್‌ ಹೊಂದಿರುವ ಏಳು ಇಂಚಿನ ಟಚ್‌ಸ್ಕ್ರೀನ್ ಟಿಎಫ್‌ಟ ಡಿಸ್‌ಪ್ಲೇ ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿದೆ. ಪಾರ್ಕ್‌ ಅಸಿಸ್ಟ್‌, ಆಟೋ ಹೋಲ್ಡ್‌, ಫಾಲ್‌ ಸೇಫ್‌ ಮುಂತಾದ ಹಲವು ಫೀಚರ್‌ಗಳನ್ನು ಹೊಂದಿದೆ. ಇದು ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಾಗಬಲ್ಲದು. ಒಂದು ಫುಲ್‌ ಚಾರ್ಜ್‌ ಮಾಡಿದ್ರೆ 146 ಕಿಮೀ ರೇಂಜ್‌ ನೀಡುತ್ತದೆ.

ಏಥರ್ 450 ಅಪೆಕ್ಸ್ ವಿಮರ್ಶೆ ವಿಡಿಯೋ ನೋಡಿ

ಏಥರ್ 450 ಅಪೆಕ್ಸ್

ಇದು ಕಂಪನಿಯ ಇನ್ನೊಂದು ಪ್ರಮುಖ ಸ್ಕೂಟರ್‌. ಇದರ ಎಕ್ಸ್‌ ಶೋರೂಂ ದರ 1.95 ಲಕ್ಷ ರೂಪಾಯಿ. ಇದರ ಡಿಸೈನ್‌ ತುಸು ಹೆಚ್ಚು ಆಕರ್ಷಕವಾಗಿದೆ. ಇದರಲ್ಲಿ 450 ಎಕ್ಸ್‌ಗಿತ ಹೆಚ್ಚು ಶಕ್ತಿಶಾಲಿ ಮೋಟಾರ್‌ ಇದೆ. "ವಾರ್ಪ್+" ರೈಡಿಂಗ್ ಮೋಡ್ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಬಹುದು.

ಇವೆರಡೂ ಸ್ಕೂಟರ್‌ ಖರೀದಿಸುವ ಗ್ರಾಹಕರಿಗೆ ತಕ್ಷಣ 5000 ರೂಪಾಯಿ ಡಿಸ್ಕೌಂಟ್‌ ದೊರಕಲಿದೆ. ಇದರೊಂದಿಗೆ ಕ್ರೆಡಿಟ್‌ ಕಾರ್ಡ್‌ ಇಎಂಐ ವಹಿವಾಟಿಗೆ 10 ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್‌ ದೊರಕಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ