ಹೋಂಡಾ ಬೈಕ್‌ಗಳ ಸ್ಪೀಡ್ ಸೆನ್ಸಾರ್, ಕ್ಯಾಮ್‌ಶಾಫ್ಟ್‌ನಲ್ಲಿ ಗಂಭೀರ ದೋಷ; ಸಿಬಿ300ನಿಂದ 350ವರೆಗೆ ಹಲವು ಬೈಕ್‌ಗಳ ಹಿಂಪಡೆತ
Sep 17, 2024 11:53 AM IST
ಹೋಂಡಾ ಕಂಪನಿಯು ಕಂಪನಿಯು ಭಾರತದ ಮಾರುಕಟ್ಟೆಯಿಂದ ಸಿಬಿ300ಎಫ್, ಸಿಬಿ300ಆರ್, ಸಿಬಿ350, ಎಚ್‌ನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್‌ಗಳನ್ನು ಹಿಂಪಡೆಯುತ್ತಿದೆ.
- ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ಭಾರತದ ಮಾರುಕಟ್ಟೆಯಿಂದ ಸಿಬಿ300ಎಫ್, ಸಿಬಿ300ಆರ್, ಸಿಬಿ350, ಎಚ್‌ನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್‌ಗಳನ್ನು ಹಿಂಪಡೆಯುತ್ತಿದೆ. ಅಕ್ಟೋಬರ್ 2020 ಮತ್ತು ಏಪ್ರಿಲ್ 2024ರ ನಡುವೆ ತಯಾರಿಸಲಾದ ಬೈಕ್‌ಗಳನ್ನು ಸ್ಪೀಡ್ ಸೆನ್ಸಾರ್ ದೋಷದ ಕಾರಣಕ್ಕೆ ರಿಕಾಲ್ ಮಾಡುತ್ತಿದೆ.
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ವಿವಿಧ ಬೈಕ್‌ಗಳ ಸ್ಪೀಡ್ ಸೆನ್ಸಾರ್ ಮತ್ತು ಕ್ಯಾಮ್‌ಶಾಫ್ಟ್‌ನಲ್ಲಿ ಇರುವ ದೋಷಗಳ ಕಾರಣದಿಂದ ಅಕ್ಟೋಬರ್ 2020 ಮತ್ತು ಏಪ್ರಿಲ್ 2024 ರ ನಡುವೆ ನಿರ್ಮಿಸಲಾದ ಬೈಕ್‌ಗಳನ್ನು ಭಾರತದಿಂದ ಹಿಂಪಡೆಯುತ್ತಿದೆ. ಈ ಅವಧಿಯಲ್ಲಿ ನಿರ್ಮಿಸಲಾದ ಸಿಬಿ300ಎಫ್, ಸಿಬಿ300ಆರ್, ಸಿಬಿ350, ಎಚ್‌ನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್‌ಗಳನ್ನು ರಿಕಾಲ್ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ವೀಲ್ ಸ್ಪೀಡ್ ಸೆನ್ಸಾರ್‌ನ ಸಮಸ್ಯೆಯ ಕಾರಣದಿಂದ ಕಂಪನಿ ಈ ನಿರ್ಧಾರಕ್ಕೆ ಬಂದಿದೆ.
ಈ ಬೈಕ್‌ಗಳನ್ನು ಉತ್ಪಾದನೆ ಮಾಡುವ ಸಮಯದಲ್ಲಿ ಮೋಲ್ಡಿಂಗ್ ಅಸಮರ್ಪಕವಾಗಿ ಮಾಡಿರುವುದು ಪತ್ತೆಯಾಗಿದೆ ಎಂದು ಜಪಾನ್ ಮೂಲದ ದ್ವಿಚಕ್ರವಾಹನ ತಯಾರಿಕಾ ಕಂಪನಿಯ ವಕ್ತಾರರು ಹೇಳಿದ್ದಾರೆ. ಈ ದೋಷಗಳಿಂದಾಗಿ ಚಕ್ರದ ಸ್ಪೀಡ್ ಸೆನ್ಸಾರ್‌ಗೆ ನೀರು ನುಗ್ಗಬಹುದು. ಇದರಿಂದ ಸ್ಪೀಡ್ ಸೆನ್ಸಾರ್‌ಗೆ ಹಾನಿ ಉಂಟುಮಾಡಬಹುದು. ಇದರಿಂದ ಸ್ಪೀಡೋಮೀಟರ್‌ನಲ್ಲಿ ಎರರ್ ಬರಬಹುದು. ಕೆಟ್ಟ ಸನ್ನಿವೇಶದಲ್ಲಿ ಬ್ರೇಕಿಂಗ್ ವೈಫಲ್ಯಕ್ಕೆ ಕಾರಣವಾಗಬಹುದು. ಬೈಕ್ ಅನ್ನು ವೇಗವಾಗಿ ಓಡಿಸುವಾಗ ಇದರಿಂದ ಗಂಭೀರ ಅಪಘಾತವೂ ಉಂಟಾಗಬಹುದು ಎಂದು ಕಂಪನಿ ತಿಳಿಸಿದೆ.
ಎಚ್‌ಎಂಎಸ್‌ಐ ಸಿಬಿ 350 ಮತ್ತು ಎಚ್‌ನೆಸ್ ಸಿಬಿ350 ಮತ್ತು ಸಿಬಿ350 ಆರ್‌ಎಸ್ ಬೈಕ್‌ಗಳ ಕ್ಯಾಮ್‌ಶಾಫ್ಟ್ ಬಿಡಿಭಾಗಗಳ ಸಮಸ್ಯೆಯೂ ಪತ್ತೆಯಾಗಿದೆ. ಇದಕ್ಕಾಗಿ ಕೆಲವು ಎಚ್‌ಎಂಎಸ್‌ಐ ಸಿಬಿ 350 ಮತ್ತು ಎಚ್‌ನೆಸ್ ಸಿಬಿ350 ಮತ್ತು ಸಿಬಿ350 ಆರ್‌ಎಸ್ ಬೈಕ್‌ಗಳನ್ನು ಹಿಂಪಡೆಯುವುದಾಗಿ ಕಂಪನಿ ತಿಳಿಸಿದೆ. ಆದರೆ, ಎಷ್ಟು ಬೈಕ್‌ಗಳನ್ನು ರಿಕಾಲ್ ಮಾಡುತ್ತಿರುವುದಾಗಿ ಕಂಪನಿ ತಿಳಿಸಿಲ್ಲ. ಜೂನ್ 2024 ಮತ್ತು ಜುಲೈ 2024 ರ ನಡುವೆ ನಿರ್ಮಿಸಲಾದ ಬೈಕ್‌ಗಳಲ್ಲಿಯೂ ಈ ಸಮಸ್ಯೆ ಇರುವುದನ್ನು ಗುರುತಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಕ್ಯಾಮ್‌ಶಾಫ್ಟ್ ಉತ್ಪಾದನೆಗೆ ಅನುಚಿತ ವಿಧಾನ ಅನುಸರಿಸುವುದನ್ನು ಪತ್ತೆಹಚ್ಚಿರುವುದಾಗಿ ಕಂಪನಿ ತಿಳಿಸಿದೆ. ಸಮಸ್ಯೆ ಗೊತ್ತಾದ ತಕ್ಷಣ ಬೈಕ್‌ಗಳನ್ನು ಹಿಂಪಡೆಯಲು ಕಂಪನಿ ನಿರ್ಧರಿಸಿದೆ.
ಹೋಂಡಾ ಎಚ್‌ನೆಸ್ ಸಿಬಿ350: ರೋಡ್ ಟೆಸ್ಟ್ ವಿಮರ್ಶೆ
ಮುಂಜಾಗ್ರತಾ ಕ್ರಮವಾಗಿ ತೊಂದರೆ ಇರುವ ಬೈಕ್‌ಗಳ ಬಿಡಿಭಾಗಗಳನ್ನು ಬದಲಾಯಿಸಲಾಗುವುದು. ಇದಕ್ಕಾಗಿ ದೇಶಾದ್ಯಂತ ಇರುವ ಬಿಗ್‌ವಿಂಗ್ ಡೀಲರ್‌ಶಿಪ್‌ಗಳಲ್ಲಿ ಬಿಡಿಭಾಗ ಬದಲಾಯಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಬೈಕ್‌ಗಳ ಈಗಿನ ಸ್ಥಿತಿ ಲೆಕ್ಕಿಸದೆ, ಗ್ರಾಹಕರಿಂದ ಯಾವುದೇ ಹಣ ಪಡೆಯದೆ ತಪಾಸಣೆ ಮಾಡಿ ಬದಲಿ ಬಿಡಿಭಾಗ ಜೋಡಿಸುವುದಾಗಿ ಕಂಪನಿ ತಿಳಿಸಿದೆ. ಇದರಿಂದ ಬೈಕ್‌ನ ವ್ಯಾರೆಂಟಿ ಮೇಲೆ ಏನೂ ಪರಿಣಾಮ ಬೀರುವುದಿಲ್ಲ ಎಂದೂ ತಿಳಿಸಿದೆ.
ಹೀಗಾಗಿ ಸಿಬಿ300ಎಫ್, ಸಿಬಿ300ಆರ್, ಸಿಬಿ350, ಎಚ್‌ನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್‌ಗಳನ್ನು ಹೊಂದಿರುವ ಗ್ರಾಹಕರು ತಮ್ಮ ಬೈಕ್ ತಯಾರಿಕಾ ವರ್ಷ ಮತ್ತು ತಿಂಗಳು ನೋಡಿಕೊಂಡು ತಮ್ಮ ಹತ್ತಿರದ ಡೀಲರ್‌ಶಿಪ್‌ಗೆ ತೆರಳಿ ರಿಪೇರಿ ಮಾಡಿಸಿಕೊಳ್ಳಬಹುದು.