2024 TVS Apache RR 310: ಅಪಾಚೆ ಪ್ರಿಯರಿಗೆ ಸಂತಸದ ಸುದ್ದಿ, ರೇಸ್‌ ಬೈಕ್‌ ನೆನಪಿಸುವಂತಹ ಹೊಸ ಟಿವಿಎಸ್‌ ಅಪಾಚೆ ಆರ್‌ಆರ್‌ 310 ಆಗಮನ
ಕನ್ನಡ ಸುದ್ದಿ  /  ಜೀವನಶೈಲಿ  /  2024 Tvs Apache Rr 310: ಅಪಾಚೆ ಪ್ರಿಯರಿಗೆ ಸಂತಸದ ಸುದ್ದಿ, ರೇಸ್‌ ಬೈಕ್‌ ನೆನಪಿಸುವಂತಹ ಹೊಸ ಟಿವಿಎಸ್‌ ಅಪಾಚೆ ಆರ್‌ಆರ್‌ 310 ಆಗಮನ

2024 TVS Apache RR 310: ಅಪಾಚೆ ಪ್ರಿಯರಿಗೆ ಸಂತಸದ ಸುದ್ದಿ, ರೇಸ್‌ ಬೈಕ್‌ ನೆನಪಿಸುವಂತಹ ಹೊಸ ಟಿವಿಎಸ್‌ ಅಪಾಚೆ ಆರ್‌ಆರ್‌ 310 ಆಗಮನ

2024 TVS Apache RR 310: ಟಿವಿಎಸ್‌ ಕಂಪನಿಯು ತನ್ನ ಆರ್‌ಆರ್‌ 310 ಬೈಕ್‌ನ 2024ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ವಿಂಗ್‌ಲೆಟ್‌ಗಳನ್ನು ಅಳವಡಿಸಿರುವುದರಿಂದ ಈ ಬೈಕ್‌ ರೇಸ್‌ಬೈಕ್‌ನಂತೆ ಕಾಣಿಸುತ್ತದೆ. ಎಂಜಿನ್‌ ಈ ಹಿಂದಿನದ್ದೇ ಆಗಿದ್ದರೂ ಹೆಚ್ಚು ಪವರ್‌ ಮತ್ತು ಟಾರ್ಕ್‌ ದೊರಕುತ್ತದೆ.

2024 TVS Apache RR 310: ಹೊಸ ಟಿವಿಎಸ್‌ ಅಪಾಚೆ ಆಗಮಿಸಿದೆ. ಇದರ ದರ 2.75 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.
2024 TVS Apache RR 310: ಹೊಸ ಟಿವಿಎಸ್‌ ಅಪಾಚೆ ಆಗಮಿಸಿದೆ. ಇದರ ದರ 2.75 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.

2024 TVS Apache RR 310: ಟಿವಿಎಸ್‌ ಕಂಪನಿಯ ಅಪಾಚೆ ಬೈಕ್‌ ಪ್ರಿಯರಿಗೆ ಖುಷಿಯ ಸುದ್ದಿ. ಕಂಪನಿಯು ಇದೀಗ ಹೊಸ ಟಿವಿಎಸ್‌ ಅಪಾಚೆ ಆರ್‌ಆರ್‌ 310 ಬೈಕ್‌ ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯಲ್ಲಿ ಹೊಸ ಬಗೆಯ ವಿಂಗ್‌ಲೆಟ್‌ಗಳು ಇದ್ದು, ರೇಸ್‌ಬೈಕ್‌ನಂತೆ ಕಾಣಿಸುತ್ತದೆ. ಅಂದಹಾಗೆ ಕ್ವಿಕ್‌ ಶಿಫ್ಟರ್‌ ಇಲ್ಲದ ರೇಸಿಂಗ್‌ ಕೆಂಪು ಪೇಂಟ್‌ ಆವೃತ್ತಿಯ ಆರಂಭಿಕ ದರ 2.75 ಲಕ್ಷ ರೂಪಾಯಿ ಇದೆ. ಕ್ವಿಕ್‌ ಶಿಫ್ಟರ್‌ ಇರುವ ಆವೃತ್ತಿ ದರ 2.92 ಲಕ್ಷ ರೂಪಾಯಿ ಇದೆ. ಹೊಸ ಬಾಂಬರ್‌ ಗ್ರೇ ಪೇಂಟ್‌ ಸ್ಕೀಮ್‌ನ ಬೈಕ್‌ ದರ 2.97 ಲಕ್ಷ ರೂಪಾಯಿ ಇದೆ. ಇವೆಲ್ಲ ಎಕ್ಸ್‌ ಶೋರೂಂ ದರಗಳು.

ಸ್ಪೆಸಿಫಿಕೇಷನ್‌ಗಳು

2024ರ ಟಿವಿಎಸ್‌ ಅಪಾಚೆ ಆರ್‌ಆರ್‌ 310 ಬೈಕ್‌ ಹೆಚ್ಚು ಪವರ್‌ ಮತ್ತು ಟಾರ್ಕ್‌ ಹೊಂದಿದೆ. ಇದೇ ಸಮಯದಲ್ಲಿ ರೇಸ್‌ಗೆ ಸೂಕ್ತವಾಗುವಂತೆ ಹೆಚ್ಚು ಎಲೆಕ್ಟ್ರಾನಿಕ್ಸ್‌ಗಳನ್ನೂ ಅಳವಡಿಸಲಾಗಿದೆ. ಇದರ ಹೊಸ ವಿಂಗ್‌ಲೆಟ್‌ಗಳು ಮೂರು ಕೇಜಿ ಡೌನ್‌ಫೋರ್ಸ್‌ ಮಾಡುತ್ತದೆ. ಇದರಿಂದ ಪರ್ಫಾಮೆನ್ಸ್‌ ಉತ್ತಮಗೊಳ್ಳಲಿದೆ. ಉಳಿದಂತೆ ಬೈಕ್‌ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

2024ರ ಟಿವಿಎಸ್‌ ಅಪಾಚೆ ಆರ್‌ಆರ್‌ 310 ಬೈಕ್‌ ಹೆಚ್ಚು ಪವರ್‌ ಮತ್ತು ಟಾರ್ಕ್‌ ನೀಡುತ್ತದೆ.
2024ರ ಟಿವಿಎಸ್‌ ಅಪಾಚೆ ಆರ್‌ಆರ್‌ 310 ಬೈಕ್‌ ಹೆಚ್ಚು ಪವರ್‌ ಮತ್ತು ಟಾರ್ಕ್‌ ನೀಡುತ್ತದೆ.

ಹೊಸ ಅಪಾಚೆ ಬೈಕ್‌ನಲ್ಲಿ 312 ಸಿಸಿಯ ಲಿಕ್ವಿಡ್‌ ಕೂಲ್ಡ್‌, ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಹೊಂದಿದೆ. ಇದು 9,800 ಆವರ್ತನಕ್ಕೆ 38 ಬಿಎಚ್‌ಪಿ ಪವರ್‌ ನೀಡುತ್ತದೆ. ಇದು 7,900 ಆವರ್ತನಕ್ಕೆ 29 ಎನ್‌ಎಂ ಟಾರ್ಕ್‌ ಒದಗಿಸುತ್ತದೆ. ಈ ಹಿಂದಿನ ಬೈಕ್‌ಗೆ ಹೋಲಿಸಿದರೆ ಹೆಚ್ಚು ಪವರ್‌ ದೊರಕುತ್ತದೆ. ದೊಡ್ಡ ಗಾತ್ರದ ಏರ್‌ಬಾಕ್ಸ್‌, ಥ್ರೋಡಲ್‌ ಬಾಡಿ ಡಯಾಮೀಟರ್‌, ವಾಲ್ಯುಮಿಟ್ರಿ ದಕ್ಷತೆ ಹೆಚ್ಚಿಸಿರುವುದರಿಂದ ಈ ಬೈಕ್‌ನಲ್ಲಿ ಹೆಚ್ಚು ಪವರ್‌ ದೊರಕುತ್ತದೆ. ಪಿಸ್ಟನ್‌ ಶೇಕಡ 10ರಷ್ಟು ಹಗುರವಾಗಿದೆ.

ಇದರಲ್ಲಿ ಆರು ಹಂತದ ಗಿಯರ್‌ಬಾಕ್ಸ್‌ ಇದೆ. ಇದು ಬೈಡೈರೆಕ್ಷನಲ್‌ ಕ್ವಿಕ್‌ ಶಿಫ್ಟರ್‌. ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್‌ಗಳು, ಹಿಂಭಾಗದಲ್ಲಿ ಮೊನೊಶಾಕ್‌ಗಳು ಇವೆ. ಹೆಚ್ಚುವರಿ ಹಣ ನೀಡಿದರೆ ಬಿಟಿಒ (ಬಿಲ್ಡ್‌ ಟು ಆರ್ಡರ್‌) ಕಿಟ್‌ ದೊರಕುತ್ತದೆ.

ಟಿಎಫ್‌ಟಿ ಡಿಸ್‌ಪ್ಲೇ, ಎಲ್‌ಇಡಿ ಲೈಟಿಂಗ್‌, ಬಹು ರೈಡ್‌ ಆಯ್ಕೆಗಳು ಸೇರಿದಂತೆ ಹಲವು ಫೀಚರ್‌ಗಳಿವೆ. ಬ್ಲೂಟೂಥ್‌ ಇರುವ ನ್ಯಾವಿಗೇಷನ್‌ ವ್ಯವಸ್ಥೆಯೂ ಇದೆ.

18 ಸಾವಿರ ರೂಪಾಯಿ ನೀಡಿ ಡೈನಾಮಿಕ್‌ ಕಿಟ್‌ ಖರೀದಿಸಬಹುದು. ಇದರಿಂದ ಮುಂಭಾಗ ಮತ್ತು ಹಿಂಭಾಗದ ಸ್ಪೆಸ್ಪೆನ್ಷನ್‌ ಪೂರ್ಣ ಪ್ರಮಾಣದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಇದರೊಂದಿಗೆ ಬ್ರೇಸ್‌ ಕೋಟೆಡ್‌ ಡ್ರೈವ್‌ ಚೈನ್‌, ಟೈರ್‌ ಪ್ರೆಸರ್‌ ಮಾನಿಟರಿಂಗ್‌ ಸಿಸ್ಟಮ್‌ ಕೂಡ ಕಿಟ್‌ನಲ್ಲಿದೆ. 16 ಸಾವಿರ ರೂಪಾಯಿ ಮೌಲ್ಯದ ಡೈನಾಮಿಕ್‌ ಪ್ರೊ ಕಿಟ್‌ನಲ್ಲಿ ರೇಸ್‌ ಟ್ಯೂನ್‌ ಡೈನಾಮಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ ಸಿಸ್ಟಮ್‌ ಇದೆ. ಇದರಿಂದ ಹಲವು ಎಲೆಕ್ಟ್ರಾನಿಕ್ಸ್‌ ಅಂಶಗಳು ದೊರಕುತ್ತವೆ. ಅಂದ್ರೆ, ತಿರುವುಗಳಲ್ಲಿ ಟ್ರಾಕ್ಷನ್‌ ಕಂಟ್ರೋಲ್‌, ಕಾರ್ನರಿಂಗ್‌ ಎಬಿಎಸ್‌, ಕಾರ್ನರಿಂಗ್‌ ಕ್ರೂಸ್‌ ಕಂಟ್ರೋಲ್‌, ವೀಲಿ ಕಂಟ್ರೋಲ್‌, ರಿಯರ್‌ ಲೆಫ್ಟ್‌ ಆಫ್‌ ಕಂಟ್ರೋಲ್‌ ಫೀಚರ್‌ಗಳು ದೊರಕುತ್ತವೆ.

ಕ್ವಿಕ್‌ ಶಿಫ್ಟರ್‌ ಇಲ್ಲದ ರೇಸಿಂಗ್‌ ಕೆಂಪು ಪೇಂಟ್‌ ಬಣ್ಣದ ಬೈಕ್‌ ಆವೃತ್ತಿಯ ಆರಂಭಿಕ ದರ 2.75 ಲಕ್ಷ ರೂಪಾಯಿ ಇದೆ.
ಕ್ವಿಕ್‌ ಶಿಫ್ಟರ್‌ ಇಲ್ಲದ ರೇಸಿಂಗ್‌ ಕೆಂಪು ಪೇಂಟ್‌ ಬಣ್ಣದ ಬೈಕ್‌ ಆವೃತ್ತಿಯ ಆರಂಭಿಕ ದರ 2.75 ಲಕ್ಷ ರೂಪಾಯಿ ಇದೆ.

2024ರ ಟಿವಿಎಸ್‌ ಅಪಾಚೆ ಆರ್‌ಆರ್‌ 310 ಬುಕ್ಕಿಂಗ್ಸ್‌

ಟಿವಿಎಸ್‌ ಕಂಪನಿಯು ನೂತನ ಬೈಕ್‌ನ ಬುಕ್ಕಿಂಗ್‌ ಆರಂಭಿಸಿದೆ. ದೇಶಾದ್ಯಂತ ಇರುವ ಕಂಪನಿಯ ಪ್ರೀಮಿಯಂ ಡೀಲರ್‌ಶಿಪ್‌ಗಳಲ್ಲಿ ಖರೀದಿಸಬಹುದು. ನೂತನ ಬೈಕ್‌ ಕೆಟಿಎಂ ಆರ್‌ಸಿ 390, ಅಪ್ರಿಲ್ಲಾ ಆರ್‌ಎಸ್‌ 457 ಮುಂತಾದ ಬೈಕ್‌ಗಳ ಜತೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.

Whats_app_banner