Honda Offers: ಹೋಂಡಾ ಆಕ್ಟಿವಾ ಸ್ಕೂಟರ್‌, ಹೋಂಡಾ ಶೈನ್‌ 100 ಬೈಕ್‌ ಖರೀದಿದಾರರಿಗೆ ಕ್ಯಾಶ್‌ಬ್ಯಾಕ್‌, ರಿಯಾಯಿತಿ ಕೊಡುಗೆ- ಇಲ್ಲಿದೆ ವಿವರ-automobile news honda activa scooter and shine 100 two wheeler get cashback and other offers check details pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Honda Offers: ಹೋಂಡಾ ಆಕ್ಟಿವಾ ಸ್ಕೂಟರ್‌, ಹೋಂಡಾ ಶೈನ್‌ 100 ಬೈಕ್‌ ಖರೀದಿದಾರರಿಗೆ ಕ್ಯಾಶ್‌ಬ್ಯಾಕ್‌, ರಿಯಾಯಿತಿ ಕೊಡುಗೆ- ಇಲ್ಲಿದೆ ವಿವರ

Honda Offers: ಹೋಂಡಾ ಆಕ್ಟಿವಾ ಸ್ಕೂಟರ್‌, ಹೋಂಡಾ ಶೈನ್‌ 100 ಬೈಕ್‌ ಖರೀದಿದಾರರಿಗೆ ಕ್ಯಾಶ್‌ಬ್ಯಾಕ್‌, ರಿಯಾಯಿತಿ ಕೊಡುಗೆ- ಇಲ್ಲಿದೆ ವಿವರ

Honda Two Wheeler Offers: ಹೋಂಡಾ ಆಕ್ಟಿವಾ ಸ್ಕೂಟರ್‌, ಹೋಂಡಾ ಶೈನ್‌ 100 ಬೈಕ್‌ಗಳು ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿವೆ. ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುವ ಆಕ್ಟಿವಾ, ಶೈನ್‌ಗಳಿಗೆ ಇದೀಗ ಕ್ಯಾಶ್‌ಬ್ಯಾಕ್‌, ಆಫರ್‌ಗಳು ದೊರಕುತ್ತಿವೆ. ಇದರಿಂದ ಖರೀದಿದಾರರಿಗೆ ಲಾಭವಾಗಲಿದೆ.

ಭಾರತದಲ್ಲಿ ಅತ್ಯಧಿಕ ಮಾರಾಟವಾಗುವ ದ್ವಿಚಕ್ರವಾಹನ- ಹೋಂಡಾ ಆಕ್ಟಿವಾ
ಭಾರತದಲ್ಲಿ ಅತ್ಯಧಿಕ ಮಾರಾಟವಾಗುವ ದ್ವಿಚಕ್ರವಾಹನ- ಹೋಂಡಾ ಆಕ್ಟಿವಾ

Honda Two Wheeler Offers: ಹೋಂಡಾ ಟು ವೀಲ್ಹರ್ಸ್‌ ಇಂಡಿಯಾವು ಶೈನ್‌ 100 ಮತ್ತು ಆಕ್ಟಿವಾ ಖರೀದಿದಾರರಿಗೆ ಹಲವು ಆಫರ್‌ಗಳನ್ನು ಘೋಷಿಸಿದೆ. ಈ ಬೈಕ್‌ ಅಥವಾ ಸ್ಕೂಟರ್‌ ಖರೀದಿದಾರರಿಗೆ ಶೇಕಡ 5ರಷ್ಟು ಅಥವಾ 5000 ರೂಪಾಯಿಯಷ್ಟು ಕ್ಯಾಶ್‌ಬ್ಯಾಕ್‌ ದೊರಕುತ್ತದೆ. ಇದೇ ಸಮಯದಲ್ಲಿ ಒಂದು ವರ್ಷದಷ್ಟು ಫ್ರೀ ಸರ್ವೀಸ್‌ ಕೂಡ ದೊರಕಲಿದೆ. ಇದರೊಂದಿಗೆ ಹೋಂಡಾ ಆಕ್ಟಿವಾಕ್ಕೆ 3 ವರ್ಷಗಳ ಎಕ್ಸ್‌ಟೆಂಡೆಡ್‌ ವಾರೆಂಟಿ ಮತ್ತು ಹೋಂಡಾ ಶೈನ್‌ಗೆ 7 ವರ್ಷದವರೆಗೆ ಎಕ್ಸ್‌ಟೆಂಡೆಂಡ್‌ ವಾರೆಂಟಿ (ವಿಸ್ತರಿತ ವಾಯಿದೆ) ನೀಡುತ್ತದೆ. ಗಮನಿಸಿ, ಈ ಆಫರ್‌ ಕೇವಲ ಈ ಸೆಪ್ಟೆಂಬರ್‌ ತಿಂಗಳಲ್ಲಿ ಮಾತ್ರ ಇರಲಿದೆ. ಆಸಕ್ತ ದ್ವಿಚಕ್ರವಾಹನ ಖರೀದಿದಾರರು ತಮ್ಮ ಸಮೀಪದ ಹೋಂಡಾ ಡೀಲರ್‌ಶಿಪ್‌ ಬಳಿ ಹೋಗಿ ಈ ಆಫರ್‌ಗಳ ಕುರಿತು ವಿಚಾರಿಸಬಹುದು. ಹಬ್ಬದ ಋತುವಿನಲ್ಲಿ ಹಲವು ವಾಹನ ಕಂಪನಿಗಳು ವೈವಿಧ್ಯಮಯ ಆಫರ್‌ಗಳನ್ನು ಪ್ರಕಟಿಸುತ್ತಿವೆ. ಇದರಿಂದ ಹೊಸ ವಾಹನ ಖರೀದಿದಾರರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಗ್ರಾಹಕರು ತಾವು ಖರೀದಿಸಬೇಕಾದ ವಾಹನಕ್ಕೆ ಎಲ್ಲಿ ಎಷ್ಟು ಆಫರ್‌ ದೊರಕುತ್ತದೆ ಎಂದು ರಿಸರ್ಚ್‌ ಮಾಡಬಹುದು. ಯಾವ ಕಂಪನಿಯು ಎಷ್ಟು ಆಫರ್‌ ನೀಡುತ್ತದೆ? ಯಾವ ಬೈಕ್‌ ಅಥವಾ ಸ್ಕೂಟರ್‌ ಉತ್ತಮವಾಗಿದೆ? ಯಾವುದನ್ನು ಖರೀದಿಸಿದರೆ ಎಷ್ಟು ಉಳಿತಾಯವಾಗಲಿದೆ ಎಂದು ಯೋಚಿಸಿ ಮುಂದಡಿ ಇಡಬಹುದು.

ಆಗಸ್ಟ್‌ನಲ್ಲಿ ಹೋಂಡಾ ಮಾರಾಟ ಉತ್ತಮ

ಹೋಂಡಾ ಮೋಟರ್‌ಸೈಕಲ್‌ ಆಂಡ್‌ ಸ್ಕೂಟರ್‌ ಇಂಡಿಯಾವು ಒಟ್ಟು 5,38,852 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇಕಡ 13ರಷ್ಟು ಪ್ರಗತಿಯಾಗಿದೆ. ಭಾರತದಲ್ಲಿ 4,91,678 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ. 47,174 ಬೈಕ್‌ ಮತ್ತು ಸ್ಕೂಟರ್‌ಗಳನ್ನು ರಫ್ತು ಮಾಡಿದೆ. ದೇಶೀಯ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡ 9ರಷ್ಟು ಪ್ರಗತಿ ದಾಖಲಾಗಿದೆ. ಏಪ್ರಿಲ್‌ ತಿಂಗಳಿನಿಂದ ಆಗಸ್ಟ್‌ 2024ರವರೆಗೆ ಕಂಪನಿಯು 23,45,028 ದ್ವಿಚಕ್ರವಾಹನಗಳನ್ನು ದೇಶದಲ್ಲಿ ಮಾರಾಟ ಮಾಡಿದೆ. ಇದೇ ಸಮಯದಲ್ಲಿ 2,29,716 ವಾಹನಗಳನ್ನು ರಫ್ತು ಮಾಡಿದೆ.

ನಂಬರ್‌ವನ್‌ ಸ್ಥಾನಕ್ಕೆ ನೆಗೆದ ಹೋಂಡಾ

ಇತ್ತೀಚಿನ ಸಿಯಾಮ್‌ (ಭಾರತದ ವಾಹನ ತಯಾರಕರ ಸೊಸೈಟಿ) ವರದಿ ಪ್ರಕಾರ ಹೋಂಡಾ ಕಂಪನಿಯು ಏಪ್ರಿಲ್‌-ಜುಲೈ 2024ರ ಅವಧಿಯಲ್ಲಿ 1,853,350 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ. ಇದೇ ಸಮಯದಲ್ಲಿ ಹೀರೋ ಮೋಟೋಕಾರ್ಪ್‌ 1,831,697 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ. ಈ ಅವಧಿಯಲ್ಲಿ ಹೀರೋ ಮೋಟೋಕಾರ್ಪ್‌ ಕಂಪನಿಯನ್ನು ಹೋಂಡಾ ಕಂಪನಿಯು ಹಿಂದಿಕ್ಕಿದೆ. ಇದೇ ಸಮಯದಲ್ಲಿ ರಫ್ತು ಲೆಕ್ಕ ಸೇರಿಸಿದರೆ ಹೋಂಡಾ ಕಂಪನಿಯು ಹೀರೋ ಮೋಟೋಕಾರ್ಪ್‌ಗಿಂತ 130,000 ಹೆಚ್ಚು ಯೂನಿಟ್‌ ಮಾರಾಟ ಮಾಡಿದೆ.

ಹೀರೋ ಮಾವ್ರಿಕ್ 440 ವಿಮರ್ಶೆ ಇಲ್ಲಿದೆ ನೋಡಿ

ಸಗಟು ಮಾರಾಟದ ಲೆಕ್ಕದಲ್ಲಿ ನೋಡುವುದಾದರೆ ಹೋಂಡಾ ಕಂಪನಿಯು ದೇಶದ ಬೃಹತ್‌ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾಗಿ ಹೊರಹೊಮ್ಮಿದೆ. ಹೀರೋ ಮೋಟೋಕಾರ್ಪ್‌ ಕಂಪನಿಯು ರಿಟೇಲ್‌ ಮಾರಾಟದಲ್ಲಿ ಮುಂದಿನ ಸ್ಥಾನದಲ್ಲಿದೆ. ಫೆಡರೇಷನ್‌ ಆಫ್‌ ಆಟೋಮೊಬೈಲ್‌ ಡೀಲರ್ಸ್‌ ಅಸೋಸಿಯೇಷನ್‌ (ಎಫ್‌ಎಡಿಎ) ಲೆಕ್ಕದ ಪ್ರಕಾರ ಏಪ್ರಿಲ್‌ ಜುಲೈ ಅವಧಿಯಲ್ಲಿ ಹೀರೋ ಮೋಟೋಕಾರ್ಪ್‌ ಕಂಪನಿಯು 1.75 ದಶಲಕ್ಷ ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ. ಇದೇ ಸಮಯದಲ್ಲಿ ಹೋಂಡಾ ಮೋಟಾರ್‌ಸೈಕಲ್‌ ಆಂಡ್‌ ಸ್ಕೂಟರ್‌ ಇಂಡಿಯಾವು ರಿಟೇಲ್‌ ಮಾರುಕಟ್ಟೆಯಲ್ಲಿ 250,000 ವಾಹನಗಳನ್ನು ಮಾರಾಟ ಮಾಡಿದೆ.

ಹೋಂಡಾದ ಮಾರುಕಟ್ಟೆ ಪಾಲು ಹೆಚ್ಚಾಗುತ್ತಿರುವುದು ಭಾರತದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಗಮನಿಸಬೇಕಾದ ಇನ್ನೊಂದು ಗಮನಾರ್ಹ ಸಂಗತಿ. ಎಚ್‌ಎಂಎಸ್‌ಐ ಮಾರುಕಟ್ಟೆ ಪಾಲು ಏಪ್ರಿಲ್‌ನಲ್ಲಿ ಶೇಕಡ 20ರಷ್ಟಿದೆ. ಜುಲೈ 2024ರಲ್ಲಿ ಶೇಕಡ 24.3 ರಷ್ಟಿದೆ. ಇದೇ ಹೀರೋ ಮೋಟೋಕಾರ್ಪ್‌ನ ಪಾಲು ಇಳೀಕೆ ಕಂಡಿದೆ. ಏಪ್ರುಲ್‌ನಲ್ಲಿ ಶೇಕಡ 33 ಮಾರುಕಟ್ಟೆ ಪಾಲನ್ನು ಹೀರೋ ಮೋಟೋಕಾರ್ಪ್‌ ಹೊಂದಿತ್ತು. ಇದು ಈ ವರ್ಷದ ಜುಲೈ ತಿಂಗಳಲ್ಲಿ ಶೇಕಡ 29.4ಕ್ಕೆ ಇಳಿಕೆ ಕಂಡಿದೆ.

mysore-dasara_Entry_Point