logo
ಕನ್ನಡ ಸುದ್ದಿ  /  ಜೀವನಶೈಲಿ  /  ದಸರಾ ಆಫರ್‌: ಮಾರುತಿ ಸುಜುಕಿ ಕಂಪನಿಯ ಈ 7 ಸೀಟ್‌ ಕಾರಿನ ಮೇಲೆ ಕ್ಯಾಶ್‌ ಡಿಸ್ಕೌಂಟ್‌, ಅಕ್ಟೋಬರ್‌ 12ಕ್ಕೆ ಈ ಆಫರ್‌ ಕೊನೆ

ದಸರಾ ಆಫರ್‌: ಮಾರುತಿ ಸುಜುಕಿ ಕಂಪನಿಯ ಈ 7 ಸೀಟ್‌ ಕಾರಿನ ಮೇಲೆ ಕ್ಯಾಶ್‌ ಡಿಸ್ಕೌಂಟ್‌, ಅಕ್ಟೋಬರ್‌ 12ಕ್ಕೆ ಈ ಆಫರ್‌ ಕೊನೆ

Praveen Chandra B HT Kannada

Sep 24, 2024 12:57 PM IST

google News

ಮಾರುತಿ ಕಾರುಗಳಿಗೆ ಡಿಸ್ಕೌಂಟ್‌

    • Maruti Car Discount Offer: ಮಾರುತಿ ಸುಜುಕಿ ಇಂಡಿಯಾ ತನ್ನ ಅತ್ಯಂತ ದುಬಾರಿ ಐಷಾರಾಮಿ ಎಂಪಿವಿ ಇನ್ವಿಕ್ಟೋ ಮೇಲೆ ಈ ತಿಂಗಳ ಮೊದಲ ರಿಯಾಯಿತಿಯನ್ನು ಘೋಷಿಸಿದೆ. ಕಂಪನಿಯ ಕೆಲವು ಡೀಲರ್‌ಗಳು ಈ ತಿಂಗಳಿನಲ್ಲಿ ಈ ಕಾರಿನ ಮೇಲೆ ನಗದು ರಿಯಾಯಿತಿ ನೀಡುತ್ತಿದ್ದಾರೆ. ದಸರಾ ಸಮಯದಲ್ಲಿ ಹೊಸ ಕಾರು ಖರೀದಿಸಲು ಬಯಸುವವರು ಎನ್ವಿಕ್ಟೋ ಆಫರ್‌ ಪರಿಶೀಲಿಸಬಹುದು.
ಮಾರುತಿ ಕಾರುಗಳಿಗೆ ಡಿಸ್ಕೌಂಟ್‌
ಮಾರುತಿ ಕಾರುಗಳಿಗೆ ಡಿಸ್ಕೌಂಟ್‌

Maruti Car Discount Offer: ದಸರಾ ಹಬ್ಬದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಹೊಸ ವಾಹನ ಖರೀದಿಸಲು ಸಾಕಷ್ಟು ಜನರು ಮುಂದಾಗಬಹುದು. ಇದೇ ದಸರಾ ಸಮಯದಲ್ಲಿ ಹಬ್ಬದ ಆಫರ್‌ ಏನಾದರೂ ಇದೆಯೇ ಎಂದು ಪರಿಶೀಲನೆಯನ್ನೂ ನಡೆಸುತ್ತಿರಬಹುದು. ಮಾರುತಿ ಸುಜುಕಿ ಇಂಡಿಯಾ ತನ್ನ ಅತ್ಯಂತ ದುಬಾರಿ ಐಷಾರಾಮಿ ಎಂಪಿವಿಯಾದ "ಇನ್ವಿಕ್ಟೊ" (Invicto) ಖರೀದಿದಾರರಿಗೆ ಇದೇ ಮೊದಲ ಬಾರಿಗೆ ರಿಯಾಯಿತಿ ಪ್ರಕಟಿಸಿದೆ. ಕಂಪನಿಯ ಕೆಲವು ವಿತರಕರು ಈ ಕಾರಿನ ಖರೀದಿದಾರರಿಗೆ 30,000 ವರೆಗೆ ನಗದು ರಿಯಾಯಿತಿಯನ್ನು ನೀಡುತ್ತಿದ್ದಾರೆ. ಅಲ್ಲದೆ, ಕಂಪನಿಯು 25,000 ರೂಪಾಯಿವರೆಗೆ ವಿನಿಮಯ ಬೋನಸ್ ಅನ್ನು ನೀಡುತ್ತಿದೆ. ಆದರೆ, ಈ ಬೋನಸ್‌ ಎಲ್ಲರಿಗೂ ಲಭ್ಯವಿಲ್ಲ. ಹಳೆಯ ಎರ್ಟಿಗಾ ಎಕ್ಸ್‌ಎಲ್‌ 6 ಅಥವಾ ಟೂರ್‌ ಎಂಪಿವಿ ಹೊಂದಿರುವ ಗ್ರಾಹಕರಿಗೆ ಮಾತ್ರ ಈ ವಿನಿಮಯ ಬೋನಸ್‌ ಪ್ರಯೋಜನಗಳುಂಟು. ಈ ಆಫರ್‌ ಅಕ್ಟೋಬರ್‌ 12ರವರೆಗೆ ಅಂದರೆ ದಸರಾವರೆಗೆ ಇರಲಿದೆ. ಅಂದಹಾಗೆ, ಇನ್ವಿಕ್ಟೊ ಎಂಪಿವಿಯ ಎಕ್ಸ್‌ ಶೋರೂಂ ದರ 25.21 ಲಕ್ಷ ರೂಪಾಯಿಯಿಂದ 28.92 ಲಕ್ಷ ರೂಪಾಯಿವರೆಗೆ ಇದೆ.

ಹೇಗಿದೆ ಮಾರುತಿ ಇನ್ವಿಕ್ಟೋ ಎಂಪಿವಿ?

ಮಾರುತಿ ಸುಜುಕಿ ಇಕ್ವಿಕ್ಟೋ 2.0-ಲೀಟರ್‌ನ ಟಿಎನ್‌ಜಿಎ ಎಂಜಿನ್‌ ಮತ್ತು ಎಲೆಕ್ಟ್ರಿಕ್‌ ಹೈಬ್ರಿಡ್‌ ಸಿಸ್ಟಮ್‌ ಹೊಂದಿದೆ. ಇದು ಇ-ಸಿವಿಟಿ ಗಿಯರ್‌ಬಾಕ್ಸ್‌ ಹೊಂದಿದೆ. ಗರಿಷ್ಠ 183 ಬಿಎಚ್‌ಪಿ ಪವರ್‌ ಮತ್ತು 1250 ಎನ್‌ಎಂ ಟಾರ್ಕ್‌ ಪವರ್‌ ನೀಡುತ್ತದೆ. ಈ ಕಾರು 0-100 ಕಿ.ಮೀ. ವೇಗವನ್ನು 9.5 ಸೆಕೆಂಡ್‌ನಲ್ಲಿ ಪಡೆಯುತ್ತದೆ. ಇದರ ಮೈಲೇಜ್‌ ಕೂಡ ಉತ್ತಮವಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 23.24 ಕಿ.ಮೀ. ಇಂಧನ ದಕ್ಷತೆ ನೀಡುತ್ತದೆ. ಇದು ಟೊಯೊಟಾ ಇನ್ನೋವಾದಂತೆ 7 ಸೀಟುಗಳನ್ನು ಹೊಂದಿದೆ.

ಎಂಪಿವಿಯು ಡಿಆರ್‌ಎಲ್‌, ಎಲ್‌ಇಡಿ ಹೆಡ್‌ಲೈಟ್‌ಗಳು, ಕ್ರೋಮ್‌ ಆವತಿಸಿರುವ ಷಡ್ಬುಜಾಕೃತಿ ಗ್ರಿಗಳು, ವಿಶಾಲವಾದ ಏರ್ ಡ್ಯಾಮ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್‌ಗಳನ್ನು ಒಳಗೊಂಡಿದೆ. ಕ್ಯಾಬಿನ್ ಕೂಡ ಆಕರ್ಷಕವಾಗಿದೆ. ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್, ಲೆದರ್ ಅಪ್‌ಹೋಲೆಸ್ಟ್ರಿ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿಯು ಒನ್-ಟಚ್ ಪವರ್ ಟೈಲ್‌ಗೇಟ್ ಹೊಂದಿದೆ. ಒಂದು ಸ್ಪರ್ಶದಿಂದ ತೆರೆಯುವ ಟೈಲ್‌ಗೇಟ್‌ ಇದೆ. ಮುಂದಿನ ಪೀಳಿಗೆಯ ಸುಜುಕಿ ಕನೆಕ್ಟ್‌ ಹೊಂದಿದೆ. ಆರು ಏರ್‌ಬ್ಯಾಗ್‌ಗಳು ಇವೆ. ಉದ್ದ 4755 ಮಿಮೀ, ಅಗಲ 1850 ಮಿಮೀ, ಎತ್ತರ 1795 ಮಿಮೀ. ಸ್ಥಳಾವಕಾಶ ಇರುವ ವಿಶಾಲ ಎಂಪಿವಿ ಇದಾಗಿದೆ.

ಮಾರುತಿ ಸುಜುಕಿ ಎನ್ವಿಕ್ಟೊ ಸ್ಪೆಸಿಫಿಕೇಷನ್‌

ದರ: 25.05 - 28.72 ಲಕ್ಷ ರೂಪಾಯಿ

ಇಂಧನ: ಹೈಬರಿಡ್‌ (ಎಲೆಕ್ಟ್ರಿಕ್-ಪೆಟ್ರೋಲ್‌)

ಗಿಯರ್‌ಬಾಕ್ಸ್:‌ ಆಟೋಮ್ಯಾಟಿಕ್‌ (ಇಸಿವಿಟಿ)

ಎಂಜಿನ್‌ ಗಾತ್ರ: 1987 ಸಿಸಿ

ಇಂಧನ ದಕ್ಷತೆ: 23.24 ಕಿ.ಮೀ.

ಸೀಟುಗಳು: 7-8 ಜನರು

ಇಂಧನ ಟ್ಯಾಂಕ್‌: 52 ಲೀಟರ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ