Lexus LM 350h: ಫಸ್ಟ್‌ಕ್ಲಾಸ್‌ ವಿಮಾನದಂತೆ ಸುಖಾಸನ ಹೊಂದಿರುವ 2 ಕೋಟಿ ದರದ ಲೆಕ್ಸಸ್‌ ಎಂಪಿವಿ ಸೋಲ್ಡೌಟ್‌; ಬುಕ್ಕಿಂಗ್‌ ಸ್ಥಗಿತ-automobile news lexus lm 350h bookings temporarily halted as the rs 2 crore mpv is sold out pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Lexus Lm 350h: ಫಸ್ಟ್‌ಕ್ಲಾಸ್‌ ವಿಮಾನದಂತೆ ಸುಖಾಸನ ಹೊಂದಿರುವ 2 ಕೋಟಿ ದರದ ಲೆಕ್ಸಸ್‌ ಎಂಪಿವಿ ಸೋಲ್ಡೌಟ್‌; ಬುಕ್ಕಿಂಗ್‌ ಸ್ಥಗಿತ

Lexus LM 350h: ಫಸ್ಟ್‌ಕ್ಲಾಸ್‌ ವಿಮಾನದಂತೆ ಸುಖಾಸನ ಹೊಂದಿರುವ 2 ಕೋಟಿ ದರದ ಲೆಕ್ಸಸ್‌ ಎಂಪಿವಿ ಸೋಲ್ಡೌಟ್‌; ಬುಕ್ಕಿಂಗ್‌ ಸ್ಥಗಿತ

Lexus LM 350h: ನೀವು ಲೆಕ್ಸಸ್‌ ಎಲ್‌ಎಂ 350 ಎಚ್‌ ಎಂಬ ದುಬಾರಿ ಕಾರನ್ನು ಬುಕ್ಕಿಂಗ್‌ ಮಾಡಲು ಉದ್ದೇಶಿಸಿದ್ದರೆ ನಿಮಗೆ ನಿರಾಶೆಯಾಗಬಹುದು. ಸೆಪ್ಟೆಂಬರ್‌ 21ರಿಂದ ಲೆಕ್ಸಸ್‌ ಎಲ್‌ಎಂ 350 ಎಚ್‌ ಎಂಪಿವಿ ಬುಕ್ಕಿಂಗ್‌ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಕಂಪನಿ ತಿಳಿಸಿದೆ. ಈ ಎಂಪಿವಿ ಎಕ್ಸ್‌ ಶೋರೂಂ ದರ 2 ಕೋಟಿ ರೂಪಾಯಿಯಿಂದ ಆರಂಭವಾಗುತ್ತದೆ.

ಈ ವರ್ಷದ ಆರಂಭದಲ್ಲಿ Lexus LM 350h ಭಾರತದಲ್ಲಿ ಬಿಡುಗಡೆಯಾಗಿತ್ತು. ಇದರ ಎಕ್ಸ್‌ ಶೋರೂಂ ಆರಂಭಿಕ ದರ 2-2.5 ಕೋಟಿ ರೂಪಾಯಿ ಇದೆ.
ಈ ವರ್ಷದ ಆರಂಭದಲ್ಲಿ Lexus LM 350h ಭಾರತದಲ್ಲಿ ಬಿಡುಗಡೆಯಾಗಿತ್ತು. ಇದರ ಎಕ್ಸ್‌ ಶೋರೂಂ ಆರಂಭಿಕ ದರ 2-2.5 ಕೋಟಿ ರೂಪಾಯಿ ಇದೆ.

ಲೆಕ್ಸಸ್‌ ಇಂಡಿಯಾವು LM 350h ಎಂಬ ಲಗ್ಷುರಿ ಎಂಪಿವಿಯ ಬುಕ್ಕಿಂಗ್‌ ಅನ್ನು ಭಾರತದಲ್ಲಿ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಹೊಸ ಲೆಕ್ಸಸ್‌ ಲಗ್ಷುರಿ ಕಾರಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಕಷ್ಟವಾಗಿರುವುದರಿಂದ ತಾತ್ಕಾಲಿಕವಾಗಿ ಬುಕ್ಕಿಂಗ್‌ ನಿಲ್ಲಿಸಲಾಗಿದೆ. ಶೀಘ್ರದಲ್ಲಿ ಬುಕ್ಕಿಂಗ್‌ ಪುನರ್‌ ಆರಂಭಿಸಲಾಗುವುದು ಎಂದು ಕಂಪನಿ ಹೇಳಿದೆ. ಈಗಾಗಲೇ ಬುಕ್ಕಿಂಗ್‌ ಮಾಡಿರುವ ಗ್ರಾಹಕರಿಗೆ ಹೊಸ ಕಾರು ಪೂರೈಕೆ ಮಾಡಿದ ಬಳಿಕ ಹೊಸ ಬುಕ್ಕಿಂಗ್‌ ಆರಂಭಿಸಲಾಗುವುದು ಎಂದಿದೆ. ಸೆಪ್ಟೆಂಬರ್‌ 21ರಿಂದ ಅನ್ವಯವಾಗುವಂತೆ ಬುಕ್ಕಿಂಗ್‌ ಸ್ಥಗಿತಗೊಳಿಸಿರುವುದಾಗಿ ಕಂಪನಿ ತಿಳಿಸಿದೆ.

"ಲೆಕ್ಸಸ್‌ ಎಲ್‌ಎಂ 350ಎಚ್‌ಗೆ ಗ್ರಾಹಕರಿಂದ ದೊರಕಿದೆ ಅಭೂತಪೂರ್ವ ಪ್ರತಿಕ್ರಿಯೆಯಿಂದ ಲೆಕ್ಸಸ್‌ ಇಂಡಿಯಾ ವಿನಮ್ರವಾಗಿದೆ. ನಿಮ್ಮ ಬೆಂಬಲ ಮತ್ತು ಸಹಕಾರಕ್ಕೆ ಧನ್ಯವಾದ. ಪ್ರಶಾಂತವಾದ ಮತ್ತು ವಿಲಾಸಿ ಪ್ರಯಾಣದ ಅನುಭವಕ್ಕಾಗಿ ವಿನ್ಯಾಸಗೊಳಿಸಲಾದ ಈ ಐಷಾರಾಮಿ ವಾಹನವು ಅಸಾಧಾರಣ ಸೌಕರ್ಯ, ನವೀನ ವಿನ್ಯಾಸ ಮತ್ತು ಸಾಟಿಯಿಲ್ಲದ ಭವ್ಯತೆಯನ್ನು ಗ್ರಾಹಕರಿಗೆ ತಲುಪಿಸುವ ಲೆಕ್ಸಸ್‌ನ ಬದ್ಧತೆಯನ್ನು ಒಳಗೊಂಡಿದೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದು ಅದ್ಭುತ ಆರಾಮದಾಯಕ ಕ್ಯಾಬಿನ್‌ ಹೊಂದಿದೆ. ಇದರ ಎರಡನೇ ಸಾಲಿನ ಸೀಟನ್ನು ವಿಮಾನದ ಫಸ್ಟ್‌ ಕ್ಲಾಸ್‌ ಸೀಟ್‌ನಂತೆ ವಿನ್ಯಾಸ ಮಾಡಲಾಗಿದೆ.
ಇದು ಅದ್ಭುತ ಆರಾಮದಾಯಕ ಕ್ಯಾಬಿನ್‌ ಹೊಂದಿದೆ. ಇದರ ಎರಡನೇ ಸಾಲಿನ ಸೀಟನ್ನು ವಿಮಾನದ ಫಸ್ಟ್‌ ಕ್ಲಾಸ್‌ ಸೀಟ್‌ನಂತೆ ವಿನ್ಯಾಸ ಮಾಡಲಾಗಿದೆ.

"ಆಟೋ ಎಕ್ಸ್‌ಪೋ 2023ರಲ್ಲಿ ಪ್ರದರ್ಶಿಸಲಾದ ಈ ಎಂಪಿವಿಯು ಆಲ್ಟ್ರಾ ಲಗ್ಷುರಿ ಮೊಬಿಲಿಟಿಯಲ್ಲಿ ಹೊಸ ಶಕೆಯನ್ನು ಆರಂಭಿಸಿದೆ. ಇದು ಲೆಕ್ಸಸ್‌ ಇಂಡಿಯಾದ ಪ್ರಮುಖ ಮೈಲಿಗಲ್ಲು. ನಮ್ಮ ಅತಿಥಿಗಳಿಗೆ ವಿಶ್ವ ದರ್ಜೆಯ ಉತ್ಪನ್ನವನ್ನು ನೀಡುವುದನ್ನು ಮುಂದುವರಸುತ್ತೇವೆ. ಈ ಮೂಲಕ ನಮ್ಮ ಅನ್ವೇಷಣೆ ಮುಂದುವರೆಸುತ್ತೇವೆ. ಸದ್ಯದ ಪೂರೈಕೆಯ ಸವಾಲಿನ ಕಾರಣದಿಂದ, ಈಗಿನ ಆರ್ಡರ್‌ಗಳನ್ನು ಸಕಾಲದಲ್ಲಿ ಪೂರೈಸುವ ಉದ್ದೇಶದಿಂದ ತಾತ್ಕಾಲಿಕವಾಗಿ ಎಲ್‌ಎಂ 350 ಎಚ್‌ ಬುಕ್ಕಿಂಗ್‌ ಸ್ಥಗಿತಗೊಳಿಸುತ್ತೇವೆ. ಆದಷ್ಟು ಬೇಗ ಬುಕ್ಕಿಂಗ್‌ ಪುನಾರಂಭ ಮಾಡುತ್ತೇವೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಲೆಕ್ಸಸ್‌ ಎಲ್‌ಎಂ 350 ಎಚ್‌: ಭಾರತದಲ್ಲಿ ದರವೆಷ್ಟು?

ಈ ವರ್ಷದ ಆರಂಭದಲ್ಲಿ Lexus LM 350h ಭಾರತದಲ್ಲಿ ಬಿಡುಗಡೆಯಾಗಿತ್ತು. ಇದರ ಎಕ್ಸ್‌ ಶೋರೂಂ ಆರಂಭಿಕ ದರ 2-2.5 ಕೋಟಿ ರೂಪಾಯಿ ಇದೆ. ಇದು ಅದ್ಭುತ ಆರಾಮದಾಯಕ ಕ್ಯಾಬಿನ್‌ ಹೊಂದಿದೆ. ಇದರ ಎರಡನೇ ಸಾಲಿನ ಸೀಟನ್ನು ವಿಮಾನದ ಫಸ್ಟ್‌ ಕ್ಲಾಸ್‌ ಸೀಟ್‌ನಂತೆ ವಿನ್ಯಾಸ ಮಾಡಲಾಗಿದೆ. ಇದು ಜಿಎ-ಕೆ ಮಾಡ್ಯುಲರ್‌ ಪ್ಲಾಟ್‌ಫಾರ್ಮ್‌ನಿಂದ ಸ್ಪೂರ್ತಿ ಪಡೆದಿದೆ. ಬೃಹತ್‌ ಸ್ಪೈಂಡಲ್‌ ಗ್ರಿಲ್‌, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ವರ್ಟಿಕಲ್‌ ಆಗಿ ಜೋಡಿಸಿರುವ ಫಾಗ್‌ ಲ್ಯಾಂಪ್‌ಗಳು ಸೇರಿದಂತೆ ಹಲವು ವಿನೂತನ ವಿನ್ಯಾಸವನ್ನು ಈ ಕಾರು ಹೊಂದಿದೆ.

ಇದು ನಾಲ್ಕು ಸೀಟುಗಳನ್ನು ಹೊಂದಿದೆ. ವಿಮಾನದಂತೆ ರಿಕ್ಲೈನರ್‌ ಸೀಟುಗಳನ್ನು ಹೊಂದಿದೆ.
ಇದು ನಾಲ್ಕು ಸೀಟುಗಳನ್ನು ಹೊಂದಿದೆ. ವಿಮಾನದಂತೆ ರಿಕ್ಲೈನರ್‌ ಸೀಟುಗಳನ್ನು ಹೊಂದಿದೆ.

ಕ್ಯಾಬಿನ್‌ ಮತ್ತು ಫೀಚರ್‌ಗಳು

ಇದು ನಾಲ್ಕು ಸೀಟುಗಳನ್ನು ಹೊಂದಿದೆ. ವಿಮಾನದಂತೆ ರಿಕ್ಲೈನರ್‌ ಸೀಟುಗಳನ್ನು ಹೊಂದಿದೆ. 23 ಸ್ಪೀಕರ್‌ಗಳ ಸೌಂಡ್‌ ಸಿಸ್ಟಮ್‌ ಹೊಂದಿದೆ. ಪಿಲ್ಲೊ ಮಾದರಿಯ ಹೆಡ್‌ರೆಸ್ಟ್‌ ಇದೆ. ಒಂದು ರೆಫ್ರಿಜರೇಟರ್‌, 48 ಇಂಚಿನ ಟೆಲಿವಿಷನ್‌ ಇದೆ. ಮಡುಚಬಹುದಾದ ಟೇಬಲ್‌ಗಳು, ಕೈ ಇಡುವ ಸ್ಥಳ, ಯುಎಸ್‌ಬಿ ಪೋರ್ಟ್‌ಗಳು, ವೈರ್‌ಲೆಸ್‌ ಫೋನ್‌ ಚಾರ್ಜರ್‌, ರೀಡಿಂಗ್‌ ಲೈಟ್‌, ವ್ಯಾನಿಟಿ ಮಿರರರ್‌ ಇತ್ಯಾದಿಗಳು ಇವೆ.

mysore-dasara_Entry_Point