ಪರಿಷ್ಕೃತ ಮಾರುತಿ ಸುಜುಕಿ ಡಿಜೈರ್ ಹೀಗಿದೆ ನೋಡಿ; ಹೊರವಿನ್ಯಾಸ ಒಳವಿನ್ಯಾಸದಲ್ಲಿ ಪ್ರಮುಖ ಬದಲಾವಣೆ- ಸ್ಪೈಶಾಟ್‌ ಸೋರಿಕೆ
ಕನ್ನಡ ಸುದ್ದಿ  /  ಜೀವನಶೈಲಿ  /  ಪರಿಷ್ಕೃತ ಮಾರುತಿ ಸುಜುಕಿ ಡಿಜೈರ್ ಹೀಗಿದೆ ನೋಡಿ; ಹೊರವಿನ್ಯಾಸ ಒಳವಿನ್ಯಾಸದಲ್ಲಿ ಪ್ರಮುಖ ಬದಲಾವಣೆ- ಸ್ಪೈಶಾಟ್‌ ಸೋರಿಕೆ

ಪರಿಷ್ಕೃತ ಮಾರುತಿ ಸುಜುಕಿ ಡಿಜೈರ್ ಹೀಗಿದೆ ನೋಡಿ; ಹೊರವಿನ್ಯಾಸ ಒಳವಿನ್ಯಾಸದಲ್ಲಿ ಪ್ರಮುಖ ಬದಲಾವಣೆ- ಸ್ಪೈಶಾಟ್‌ ಸೋರಿಕೆ

ಮಾರುತಿ ಸುಜುಕಿ ಡಿಜೈರ್ ಫೇಸ್‌ಲಿಫ್ಟ್‌ ಸೆಡಾನ್‌ ಕಾರು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಕಾರಿಗೆ ಈ ಸೆಗ್ಮೆಂಟ್‌ನಲ್ಲೇ ಮೊದಲ ಹಲವು ಫೀಚರ್‌ಗಳನ್ನು ಕಂಪನಿ ಅಳವಡಿಸಿದೆ. ಇದೀಗ ಈ ಹೊಸ ಕಾರಿನ ಸ್ಪೈಶಾಟ್‌ ಚಿತ್ರಗಳು ಲಭ್ಯವಾಗಿದ್ದು, ಹೊಸ ಡಿಜೈರ್ ಕುರಿತು ಸಾಕಷ್ಟು ವಿವರ ತಿಳಿದುಬಂದಿದೆ.

ನೂತನ ಡಿಜೈರ್‌ಗೆ ಕಂಪನಿಯು ಹೊಸ ಝಡ್‌ ಸರಣಿಯ ಪೆಟ್ರೋಲ್‌ ಎಂಜಿನ್‌ ಅಳವಡಿಸುವ ನಿರೀಕ್ಷೆಯಿದೆ. ಈ ಎಂಜಿನ್‌ ಹೊಸ ಸ್ವಿಫ್ಟ್‌ ಕಾರಿನಲ್ಲೂ ಇದೆ.  (Image courtesy: YouTube/Anurag Choudhary)
ನೂತನ ಡಿಜೈರ್‌ಗೆ ಕಂಪನಿಯು ಹೊಸ ಝಡ್‌ ಸರಣಿಯ ಪೆಟ್ರೋಲ್‌ ಎಂಜಿನ್‌ ಅಳವಡಿಸುವ ನಿರೀಕ್ಷೆಯಿದೆ. ಈ ಎಂಜಿನ್‌ ಹೊಸ ಸ್ವಿಫ್ಟ್‌ ಕಾರಿನಲ್ಲೂ ಇದೆ. (Image courtesy: YouTube/Anurag Choudhary)

ಮಾರುತಿ ಸುಜುಕಿ ಡಿಜೈರ್ ಫೇಸ್‌ಲಿಫ್ಟ್‌ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಮಾರುತಿ ಸುಜುಕಿ ಡಿಜೈರ್ ಎಂಬ ಸಬ್‌ ಕಾಂಪ್ಯಾಕ್ಟ್‌ ಸೆಡಾನ್‌ ಕಾರಿನ ಪರಿಷ್ಕೃತ ಆವೃತ್ತಿಯನ್ನು ಕಂಪನಿ ಸಿದ್ಧಪಡಿಸಿದೆ. ಈ ಕುರಿತು ಮಾರುತಿ ಸುಜುಕಿ ಅಧಿಕೃತವಾಗಿ ತಿಳಿಸುವ ಮೊದಲೇ ಇದರ ಸ್ಪೈಶಾಟ್‌ ಚಿತ್ರಗಳು ಲಭ್ಯವಾಗಿವೆ. ಹೊಸ ಡಿಜೈರ್ನ ಹೊರನೋಟ ಮತ್ತು ಒಳಾಂಗಣ ಹೇಗಿರಲಿದೆ ಎಂದು ಸ್ಪೈಶಾಟ್‌ ಇಮೇಜ್‌ಗಳಿಂದ ತಿಳಿದುಬಂದಿದೆ. ಮುಂದಿನ ತಿಂಗಳು ಮಾರುತಿ ಸುಜುಕಿ ಡಿಜೈರ್ ಫೇಸ್‌ಲಿಫ್ಟ್‌ ಬಿಡುಗಡೆಯಾಗಲಿದೆ. ಮಾರುತಿ ಡಿಜೈರ್ ಪ್ರಸ್ತುತ ಭಾರತದಲ್ಲಿ ಈ ಸಬ್‌ ಕಾಂಪ್ಯಾಕ್ಟ್‌ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಸೆಡಾನ್‌ ಆಗಿದೆ. ಇದು ಪೆಟ್ರೋಲ್‌, ಸಿಎನ್‌ಜಿ ಆವೃತ್ತಿಗಳಲ್ಲಿ ಲಭ್ಯವಿದೆ. ದರ 6.57 ಲಕ್ಷ ರೂಪಾಯಿಗಳಿಂದ (ಎಕ್ಸ್‌ ಶೋರೂಂ) ಆರಂಭವಾಗುತ್ತದೆ.

ಇತ್ತೀಚಿನ ಹೊರಬಿದ್ದ ಸ್ಪೈಶಾಟ್ ವೀಡಿಯೊದಲ್ಲಿ ಮುಂಬರುವ ಡಿಜೈರ್ ಫೇಸ್‌ಲಿಫ್ಟ್ ಸೆಡಾನ್‌ನ ಹೊರಭಾಗ ಮತ್ತು ಒಳಭಾಗದ ವಿವರ ಲಭ್ಯವಾಗಿದೆ. ಈ ಕಾರಿನ ಮುಂಭಾಗದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಲಾಯ್‌ ವೀಲ್‌ ಕೂಡ ಹೊಸತನದಿಂದ ಕೂಡಿದೆ. ಕ್ಯಾಬಿನ್‌ ಕೂಡ ಅಪ್‌ಡೇಟ್‌ ಆಗಿದೆ. ಹೊಸ ಫೀಚರ್‌ಗಳು ಸೇರ್ಪಡೆಯಾಗಿವೆ. ನೂತನ ಡಿಜೈರ್‌ ಸಬ್‌ ಕಾಂಪ್ಯಾಕ್ಟ್‌ ವಿಭಾಗದಲ್ಲಿ ಹ್ಯುಂಡೈ ಔರಾ, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್‌ ಜತೆ ಸ್ಪರ್ಧೆ ನಡೆಸುತ್ತಿದೆ.

ಮಾರುತಿ ಸುಜುಕಿ ಡಿಜೈರ್‌ 2024: ಎಕ್ಸ್‌ಟೀರಿಯರ್‌ ಬದಲಾವಣೆಗಳು

ಹೊಸ ಡಿಜೈರ್‌ನ ಮುಖ ಬದಲಾಗಿರುವುದು ಸ್ಪೈಶಾಟ್‌ ವಿಡಿಯೋದಿಂದ ತಿಳಿದುಬಂದಿದೆ. ಹೊಸ ಗ್ರಿಲ್‌ಗಳನ್ನು ಜೋಡಿಸಲಾಗಿದೆ. ಡಿಜೈರ್‌ನ ರೌಂಡ್‌ ಮುಖದ ಬದಲು ಫ್ಲ್ಯಾಟ್‌ ಮುಖ ಕಾಣಿಸಿದೆ. ಹೀಗಾಗಿ, ಇದರ ವಿನ್ಯಾಸದಲ್ಲಿ ಸಾಕಷ್ಟು ಮಾರ್ಪಾಡು ಮಾಡಲಾಗಿದೆ ಎಂದುಕೊಳ್ಳಬಹುದು. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಹೊಸ ಸಿಫ್ಟ್‌ಗಿಂತ ಕೊಂಚ ಭಿನ್ನವಾದ ವಿನ್ಯಾಸ ಕಾಣಿಸುತ್ತಿದೆ. ಹೊಸ ಡಿಜೈರ್‌ನ ಬಾಡಿಯಲ್ಲಿ ಸ್ಟ್ರಾಂಗ್‌ ಕ್ಯಾರೆಕ್ಟರ್‌ ಲೈನ್‌, ಶಾರ್ಪ್‌ ಎಲ್‌ಇಡಿ ಹೆಡ್‌ಲೈಟ್‌, ಹೊಸ ಅಲಾಯ್‌ ವೀಲ್‌ ವಿನ್ಯಾಸ, ಮರುವಿನ್ಯಾಸ ಮಾಡಿದ ಟೇಲ್‌ಲೈಟ್‌ ಕಾಣಿಸುತ್ತದೆ. ಇದರೊಂದಿಗೆ ಎಲೆಕ್ಟ್ರಿಕ್‌ ಸನ್‌ರೂಫ್‌ ಕೂಡ ಇದೆ.

ಡಿಜೈರ್‌: ಇಂಟೀರಿಯರ್‌ ಅಪ್‌ಡೇಟ್‌ಗಳು

ಹೊಸ ಡಿಜೈರ್‌ನ ಇಂಟೀರಿಯರ್‌ನಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಸೋರಿಕೆಯಾದ ಸ್ಪೈ ವಿಡಿಯೋದಲ್ಲಿ ಡ್ಯೂಯೆಲ್‌ ಟೋನ್‌ ಥೀಮ್‌, ಪರಿಷ್ಕೃತ ಡ್ಯಾಶ್‌ಬೋರ್ಡ್‌ ಕಾಣಿಸಿದೆ. ಇದೇ ಸಮಯದಲ್ಲಿ ಫ್ಲೋಟಿಂಗ್‌ ಟಚ್‌ಸ್ಕ್ರೀನ್‌ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌ ಅನ್ನು ಕಂಪನಿ ಹೊಸ ಡಿಜೈರ್‌ಗೆ ಅಳವಡಿಸಿರುವುದು ಪತ್ತೆಯಾಗಿದೆ. ಡ್ರೈವರ್‌ ಡಿಸ್‌ಪ್ಲೇ ಸೆಮಿ ಡಿಜಿಟಲ್‌ ಆಗಿದೆ. 360 ಡಿಗ್ರಿ ಕ್ಯಾಮೆರಾ, ಆಂಡ್ರಾಯ್ಡ್‌ ಆಟೋ, ಆಪಲ್‌ ಕಾರ್‌ ಪ್ಲೇ, ಆಟೋಮ್ಯಾಟಿಕ್‌ ಕ್ಲೈಮೆಟ್‌ ಕಂಟ್ರೋಲ್‌, ವೈರ್‌ಲೆಸ್‌ ಚಾರ್ಜಿಂಗ್‌, ಹಿಂಬದಿ ಪ್ರಯಾಣಿಕರಿಗೆ ಎಸಿ ವೆಂಟ್‌ಗಳು ಸೇರಿದಂತೆ ಹಲವು ಫೀಚರ್‌ಗಳು ಇರುವ ನಿರೀಕ್ಷೆಯಿದೆ.

ನೂತನ ಡಿಜೈರ್‌ಗೆ ಕಂಪನಿಯು ಹೊಸ ಝಡ್‌ ಸರಣಿಯ ಪೆಟ್ರೋಲ್‌ ಎಂಜಿನ್‌ ಅಳವಡಿಸುವ ನಿರೀಕ್ಷೆಯಿದೆ. ಈ ಎಂಜಿನ್‌ ಹೊಸ ಸ್ವಿಫ್ಟ್‌ ಕಾರಿನಲ್ಲೂ ಇದೆ. 1.2 ಲೀಟರ್‌ನ್‌ 3 ಸಿಲಿಂಡರ್‌ನ ಪೆಟ್ರೋಲ್‌ ಎಂಜಿನ್‌ನಲ್ಲಿ 5 ಸ್ಪೀಡ್‌ನ ಮ್ಯಾನುಯಲ್‌ ಅಥವಾ 5 ಸ್ಪೀಡ್‌ನ ಆಟೋಮ್ಯಾಟಿಕ್‌ ಗಿಯರ್‌ ಬಾಕ್ಸ್‌ ಇರಲಿದೆ. ಈ ಎಂಜಿನ್‌ 80 ಬಿಎಚ್‌ಪಿ ಮತ್ತು 112 ಎನ್‌ಎಂ ಟಾರ್ಕ್‌ ಪವರ್‌ ಒದಗಿಸುವ ನಿರೀಕ್ಷೆಯಿದೆ.

Whats_app_banner