ಬಿಡುಗಡೆಗೊಂಡ 17 ತಿಂಗಳಲ್ಲಿ 2 ಲಕ್ಷ ಮಾರಾಟಗೊಂಡ ಮಾರುತಿ ಸುಜುಕಿಯ ಈ ಕಾರು, 2.5 ತಿಂಗಳಲ್ಲಿ 50 ಸಾವಿರ ಖರೀದಿ-automobile news maruti suzuki fronx crosses the 2 lakh sales milestone in 17 months since launch pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಡುಗಡೆಗೊಂಡ 17 ತಿಂಗಳಲ್ಲಿ 2 ಲಕ್ಷ ಮಾರಾಟಗೊಂಡ ಮಾರುತಿ ಸುಜುಕಿಯ ಈ ಕಾರು, 2.5 ತಿಂಗಳಲ್ಲಿ 50 ಸಾವಿರ ಖರೀದಿ

ಬಿಡುಗಡೆಗೊಂಡ 17 ತಿಂಗಳಲ್ಲಿ 2 ಲಕ್ಷ ಮಾರಾಟಗೊಂಡ ಮಾರುತಿ ಸುಜುಕಿಯ ಈ ಕಾರು, 2.5 ತಿಂಗಳಲ್ಲಿ 50 ಸಾವಿರ ಖರೀದಿ

ಮಾರುತಿ ಸುಜುಕಿ ಫ್ರಾಂಕ್ಸ್‌ ಕಾರು ಕೇವಲ 17 ತಿಂಗಳಲ್ಲಿ 2 ಲಕ್ಷಕ್ಕೂ ಅಧಿಕ ಮರಾಟವಾಗಿದೆ. ಈ ಕಾರು 2023ರ ಏಪ್ರಿಲ್‌ ತಿಂಗಳಲ್ಲಿ ಬಿಡುಗಡೆಯಾಗಿತುತ. ಅಂದಹಾಗೆ, ಕೇವಲ 2.5 ತಿಂಗಳಲ್ಲಿ 50 ಸಾವಿರ ಜನರು ಈ ಕಾರು ಖರೀದಿಸಿದ್ದಾರೆ. ಕ್ರಾಂಕ್ಸ್‌ ಬ್ಯೂಟಿಗೆ ಕಾರುಪ್ರಿಯರು ಫಿದಾ ಆಗಿದ್ದಾರೆ.

ಏಪ್ರಿಲ್‌ 2023ರಲ್ಲಿ ಬಿಡುಗಡೆಗೊಂಡ ಮಾರುತಿ ಸುಜುಕಿ ಫ್ರಾಂಕ್ಸ್‌ 17 ತಿಂಗಳಲ್ಲಿ ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಬಲೆನೊ ಆಧಾರಿತ ಈ ಕ್ರಾಸೊವರ್‌ಗೆ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬೇಡಿಕೆ ಹೆಚ್ಚಾಗಿದೆ.
ಏಪ್ರಿಲ್‌ 2023ರಲ್ಲಿ ಬಿಡುಗಡೆಗೊಂಡ ಮಾರುತಿ ಸುಜುಕಿ ಫ್ರಾಂಕ್ಸ್‌ 17 ತಿಂಗಳಲ್ಲಿ ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಬಲೆನೊ ಆಧಾರಿತ ಈ ಕ್ರಾಸೊವರ್‌ಗೆ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬೇಡಿಕೆ ಹೆಚ್ಚಾಗಿದೆ.

ಮಾರುತಿ ಸುಜುಕಿ ಕಂಪನಿಯ ಕಾರುಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಿರುವುದು ಸುಳ್ಳಲ್ಲ. ಆದರೆ, ಹೊಸ ಕಾರುಗಳ ಮಾರಾಟದಲ್ಲಿ ಅಂತಹ ದಾಖಲೆ ಇರುವುದು ಕಡಿಮೆ. ಮಾರುತಿ ಆಲ್ಟೋ, ಸ್ವಿಫ್ಟ್‌ ಮುಂತಾದ ಕಾರುಗಳನ್ನು ಜನರು ನಿರಂತರವಾಗಿ ಖರೀದಿಸುತ್ತಾರೆ. ಆದರೆ, ಇದೇ ಸಮಯದಲ್ಲಿ ಸಬ್‌ ಕಾಂಪ್ಯಾಕ್ಟ್‌ ಕೂಪೆ ವಿಭಾಗದಲ್ಲಿ ಬಿಡುಗಡೆಗೊಂಡ ಮಾರುತಿ ಸುಜುಕಿ ಫ್ರಾಂಕ್ಸ್‌ ಕೂಡ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ. ಏಪ್ರಿಲ್‌ 2023ರಲ್ಲಿ ಬಿಡುಗಡೆಗೊಂಡ ಈ ಕಾರು 17 ತಿಂಗಳಲ್ಲಿ ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಬಲೆನೊ ಆಧಾರಿತ ಈ ಕ್ರಾಸೊವರ್‌ಗೆ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬೇಡಿಕೆ ಹೆಚ್ಚಾಗಿದೆ. ಅಂದಹಾಗೆ, ಈ ಕಾರು ಜಪಾನ್‌ನಲ್ಲೂ ಬಿಡುಗಡೆಯಾಗಲು ಸಜ್ಜಾಗಿದೆ.

ಮಾರುತಿ ಸುಜುಕಿ ಫ್ರಾಂಕ್ಸ್‌ ಮಾರಾಟದಲ್ಲಿ ದಾಖಲೆ

ಫ್ರಾಂಕ್ಸ್‌ ಎಸ್‌ಯುವಿ ಬಿಡುಗಡೆಗೊಂಡ 10 ತಿಂಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮಾರಾಟಗೊಂಡಿದೆ. ಬಿಡುಗಡೆಗೊಂಡ 14 ತಿಂಗಳಲ್ಲಿ 1.50 ಲಕ್ಷ ಮಾರಾಟಗೊಂಡಿದೆ. ಇದಾದ ಬಳಿಕ ಕೇವಲ 2.5 ತಿಂಗಳಲ್ಲಿ 50 ಸಾವಿರ ಫ್ರಾಂಕ್ಸ್‌ ಕಾರುಗಳು ಮಾರಾಟವಾಗಿದೆ. ಸ್ಪೋರ್ಟಿ ಮತ್ತು ಬಚ್‌ ಸ್ಟೈಲ್‌ನ ಈ ಕೂಪೆಗೆ ದೇಶ ಮತ್ತು ವಿದೇಶದ ಕಾರು ಅಭಿಮಾನಿಗಳು ಫಿದಾಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಫ್ರಾಂಕ್ಸ್‌ ಲಕ್ಷ ಮಾರಾಟಗೊಳ್ಳುವ ನಿರೀಕ್ಷೆಯಲ್ಲಿ ಮಾರುತಿ ಸುಜುಕಿ ಕಂಪನಿಯಿದೆ. ಜಪಾನ್‌ನಲ್ಲೂ ಮಾರಾಟಗೊಳ್ಳುವುದರಿಂದ ಮಾರಾಟ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ಇದು ಎರಡು ಎಂಜಿನ್‌ ಆಯ್ಕೆಯಲ್ಲಿ ಲಭ್ಯವಿದೆ.  ಮಾರುತಿ ಸುಜುಕಿ ಫ್ರಾಂಕ್ಸ್‌ ಕಾರು 1.2 ಲೀಟರ್‌ನ ಪೆಟ್ರೋಲ್‌ ಮತ್ತು 1.0 ಲೀಟರ್‌ನ ಟರ್ಬೊ ಪೆಟ್ರೋಲ್‌ ಎಂಜಿನ್‌ ಆಯ್ಕೆಯಲ್ಲಿ ಲಭ್ಯವಿದೆ. 1.2 ಲೀಟರ್‌ನ ಪೆಟ್ರೋಲ್‌ ಎಂಜಿನ್‌ನ ಈ ಕಾರಿಗೆ ಬೇಡಿಕೆ ಹೆಚ್ಚಾಗಿದೆ. ಈ ಕೆ ಸರಣಿಯ ಎಂಜಿನ್‌ ಪರ್ಫಾಮೆನ್ಸ್‌ ಮತ್ತು ದಕ್ಷತೆಯ ಸಮತೋಲನ ಹೊಂದಿದೆ. ಇಷ್ಟು ಮಾತ್ರವಲ್ಲದೆ 1.0 ಲೀಟರ್‌ನ ಬೂಸ್ಟರ್‌ಜೆಟ್‌ ಎಂಜಿನ್‌ ಸ್ಪೋರ್ಟಿಯರ್‌ ಪರ್ಫಾಮೆನ್ಸ್‌ಗೆ ಫೇಮಸ್‌ ಆಗಿದೆ. ಇದು ಟಾರ್ಕ್‌ ಕನ್ವರ್ಟರ್‌ ಆಟೋಮ್ಯಾಟಿಕ್‌ ಆಯ್ಕೆಯಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಫ್ರಾಂಕ್ಸ್‌ ಕಾರು 1.2 ಲೀಟರ್‌ನ ಪೆಟ್ರೋಲ್‌ ಮತ್ತು 1.0 ಲೀಟರ್‌ನ ಟರ್ಬೊ ಪೆಟ್ರೋಲ್‌ ಎಂಜಿನ್‌ ಆಯ್ಕೆಯಲ್ಲಿ ಲಭ್ಯವಿದೆ.
ಮಾರುತಿ ಸುಜುಕಿ ಫ್ರಾಂಕ್ಸ್‌ ಕಾರು 1.2 ಲೀಟರ್‌ನ ಪೆಟ್ರೋಲ್‌ ಮತ್ತು 1.0 ಲೀಟರ್‌ನ ಟರ್ಬೊ ಪೆಟ್ರೋಲ್‌ ಎಂಜಿನ್‌ ಆಯ್ಕೆಯಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಫ್ರಾಂಕ್ಸ್‌ ಫೀಚರ್‌ಗಳು

ಮಾರುತಿ ಸುಜುಕಿ ಕಂಪನಿಯ ಫ್ರಾಂಕ್ಸ್‌ ಎಂಬ ಎಸ್‌ಯುವಿಯು ಸಡನ್‌ ಆಗಿ ಫೇಮಸ್‌ ಆದ ಹೊಸ ಕಾರಾಗಿದೆ. ಈ ಮೂಲಕ ಕಂಪನಿಯ ಅಗ್ರ ಮಾರಾಟದ ಕಾರಾಗಿ ಹೊರಹೊಮ್ಮಿದೆ. ಈ ಕಾರಿನಲ್ಲಿ ಡೀಸೆಂಟ್‌ ಆದ ಫೀಚರ್‌ಗಳಿವೆ. ಆಪಲ್‌ ಕಾರ್‌ಪ್ಲೇ, ಆಂಡ್ರಾಯ್ಡ್‌ ಆಟೋ ಬೆಂಬಲವಿರುವ ಟಚ್‌ ಸ್ಕ್ರೀನ್‌ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌, ಪಡಲ್‌ ಲ್ಯಾಂಪ್‌, ಎಚ್‌ಯುಡಿ ಯುನಿಟ್‌, ಎಲ್‌ಇಡಿ ಹೆಡ್‌ಲ್ಯಾಂಪ್‌ (ಡಿಆರ್‌ಎಲ್‌ಗಳು ಇರುವ), ಎಂಐಡಿ ಯುನಿಟ್‌ ಮುಂತಾದ ಫೀಚರ್‌ಗಳು ಫ್ರಾಂಕ್ಸ್‌ನಲ್ಲಿವೆ.

ಮಾರುತಿ ಸುಜುಕಿ ಫ್ರಾಂಕ್ಸ್‌ ಆರಂಭಿಕ ದರ 7.46 ಲಕ್ಷ ರೂಪಾಯಿ ಇದೆ. ಇದು ಎಕ್ಸ್‌ ಶೋರೂಂ ದರವಾಗಿದೆ. ಫ್ರಾಂಕ್ಸ್‌ ಅನ್ನು ಪ್ರೀಮಿಯಂ ನೆಕ್ಸಾ ಮಳಿಗೆಗಳಲ್ಲಿ ಕಂಪನಿಯು ಮಾರಾಟ ಮಾಡುತ್ತಿದೆ. ಈ ಕಾರಿನಿಂದಾಗಿ ನೆಕ್ಸಾ ಔಟ್‌ಲೆಟ್‌ಗೆ ಅತ್ಯಧಿಕ ಮತ್ತು ವೇಗವಾಗಿ ಮಾರಾಟಗೊಳ್ಳುವ ಕಾರೆಂಬ ಹಿರಿಮೆಯನ್ನು ಫ್ರಾಂಕ್ಸ್‌ ತಂದಿದೆ. ಮಾರುತಿ ಸುಜುಕಿ ಫ್ರಾಂಕ್ಸ್‌ ಕಾರು ನಿಸ್ಸಾನ್‌ ಮ್ಯಾಗ್ನೈಟ್‌, ರೆನೊ ಕೈಗರ್‌, ಟೊಯೊಟಾ ಅರ್ಬನ್‌ ಕ್ರೂಸರ್‌ ಟೈಸೂರ್‌ ಮುಂತಾದ ಎಸ್‌ಯುವಿಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿದೆ.

mysore-dasara_Entry_Point