logo
ಕನ್ನಡ ಸುದ್ದಿ  /  ಜೀವನಶೈಲಿ  /  Maruti Ertiga: ಆಟೋ ಮಾರುಕಟ್ಟೆಯಲ್ಲಿ ಸಂಚಲನ- ದಿಢೀರ್ ಆಗಿ ಭರ್ಜರಿ ಮಾರಾಟ ಕಂಡ ಮಾರುತಿ ಸುಜುಕಿಯ ಎರ್ಟಿಗಾ ಕಾರು

Maruti Ertiga: ಆಟೋ ಮಾರುಕಟ್ಟೆಯಲ್ಲಿ ಸಂಚಲನ- ದಿಢೀರ್ ಆಗಿ ಭರ್ಜರಿ ಮಾರಾಟ ಕಂಡ ಮಾರುತಿ ಸುಜುಕಿಯ ಎರ್ಟಿಗಾ ಕಾರು

Priyanka Gowda HT Kannada

Dec 16, 2024 02:20 PM IST

google News

ಕಳೆದ ತಿಂಗಳು ದಿಢೀರ್ ಆಗಿ ಭರ್ಜರಿ ಮಾರಾಟ ಕಂಡು ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಕೀರ್ತಿಗೆ ಮಾರುತಿ ಎರ್ಟಿಗಾ ಪಾತ್ರವಾಗಿದೆ.

  • Maruti Ertiga: ಕಳೆದ ತಿಂಗಳು ಎಷ್ಟು ಜನರು ಮಾರುತಿ ಸುಜುಕಿ ಎರ್ಟಿಗಾವನ್ನು ಖರೀದಿಸಿದ್ದಾರೆ ಮತ್ತು ವಾರ್ಷಿಕ ಮತ್ತು ಮಾಸಿಕ ಈ ಎಂಪಿವಿ ಮಾರಾಟದಲ್ಲಿ ಎಷ್ಟು ಬೆಳವಣಿಗೆ ಕಂಡುಬಂದಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.  (ಬರಹ: ವಿನಯ್ ಭಟ್)

ಕಳೆದ ತಿಂಗಳು ದಿಢೀರ್ ಆಗಿ ಭರ್ಜರಿ ಮಾರಾಟ ಕಂಡು ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಕೀರ್ತಿಗೆ ಮಾರುತಿ ಎರ್ಟಿಗಾ ಪಾತ್ರವಾಗಿದೆ.
ಕಳೆದ ತಿಂಗಳು ದಿಢೀರ್ ಆಗಿ ಭರ್ಜರಿ ಮಾರಾಟ ಕಂಡು ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಕೀರ್ತಿಗೆ ಮಾರುತಿ ಎರ್ಟಿಗಾ ಪಾತ್ರವಾಗಿದೆ.

ಕಳೆದ ಆಗಸ್ಟ್ ತಿಂಗಳ ಟಾಪ್ 10 ಕಾರುಗಳಲ್ಲಿ ಕೆಲವು ಅಚ್ಚರಿ ಹೆಸರುಗಳು ಕಾಣಿಸಿಕೊಂಡಿವೆ. ಈ ಕಾರು ಇಷ್ಟೊಂದು ಮಾರಾಟವಾಗಿದ್ದು ಹೇಗೆ ಎಂದು ಗ್ರಾಹಕರು ಹಾಗೂ ಕಾರು ಕಂಪನಿಗಳಿಗೆ ದೊಡ್ಡ ಪ್ರಶ್ನೆ ಮೂಡಿದೆ. ಆಟೋ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿರುವ ಅಂತಹ ಒಂದು ಕಾರು ಮಾರುತಿ ಸುಜುಕಿ ಎರ್ಟಿಗಾ. ಇದು ಕಳೆದ ತಿಂಗಳು ದಿಢೀರ್ ಆಗಿ ಭರ್ಜರಿ ಮಾರಾಟ ಕಂಡು ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಕೀರ್ತಿಗೆ ಪಾತ್ರವಾಗಿದೆ.

ಮಾರುತಿ ಸುಜುಕಿ ಅರೆನಾ ಶೋರೂಂನಲ್ಲಿ ಎರ್ಟಿಗಾ ಖರೀದಿಸಲು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು, 7 ಸೀಟಿನ ಈ ಎಂಪಿವಿಯ ಸೇಲ್ ಇತರ ಕಂಪನಿಗಳ ಎಸ್‌ಯುವಿ, ಎಂಪಿವಿ ಸೇರಿದಂತೆ ಎಲ್ಲಾ ವಿಭಾಗದ ವಾಹನಗಳಿಗೆ ನಡುಕ ಹುಟ್ಟಿಸಿವೆ. ಕಳೆದ ತಿಂಗಳು ಎಷ್ಟು ಜನರು ಮಾರುತಿ ಸುಜುಕಿ ಎರ್ಟಿಗಾವನ್ನು ಖರೀದಿಸಿದ್ದಾರೆ ಮತ್ತು ವಾರ್ಷಿಕ ಮತ್ತು ಮಾಸಿಕ ಈ MPV ಮಾರಾಟದಲ್ಲಿ ಎಷ್ಟು ಬೆಳವಣಿಗೆ ಕಂಡುಬಂದಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಕಳೆದ ಆಗಸ್ಟ್‌ನಲ್ಲಿ, ಮಾರುತಿ ಸುಜುಕಿ ಎರ್ಟಿಗಾದ 18,590 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು, ಇದು ಆಗಸ್ಟ್ 2023 ರಲ್ಲಿ 12,315 ಯುನಿಟ್‌ಗಳಿಗಿಂತ ಅಂದರೆ 51 ಶೇಕಡಾ ಹೆಚ್ಚಾಗಿದೆ. ಮಾಸಿಕ ಮಾರಾಟದ ಬಗ್ಗೆ ಮಾತನಾಡುತ್ತಾ, ಈ ವರ್ಷದ ಜುಲೈನಲ್ಲಿ ಎರ್ಟಿಗಾವನ್ನು 15,701 ಗ್ರಾಹಕರು ಖರೀದಿಸಿದ್ದಾರೆ, ಅಂದರೆ ಈ ಎಂಪಿವಿಯ ಮಾರಾಟದಲ್ಲಿ 20 ಪ್ರತಿಶತಕ್ಕಿಂತ ಹೆಚ್ಚಿನ ಮಾಸಿಕ ಬೆಳವಣಿಗೆ ಕಂಡುಬಂದಿದೆ.

ಕಳೆದ ಆಗಸ್ಟ್‌ನಲ್ಲಿ ಮಾರುತಿ ಸುಜುಕಿ ಬ್ರೆಝಾ ಎರ್ಟಿಗಾಕ್ಕಿಂತ ಹೆಚ್ಚು ಮಾರಾಟವಾದ ಏಕೈಕ ಕಾರು ಆಗಿದೆ. ಈ ಮೂಲಕ ಸ್ಕಾರ್ಪಿಯೊ, ಕ್ರೆಟಾ, ಪಂಚ್, ನೆಕ್ಸಾನ್ ಸೇರಿದಂತೆ ಎಲ್ಲಾ ಕಾರುಗಳು ಎರ್ಟಿಗಾ ಹಿಂದೆಯೇ ಉಳಿದಿವೆ. ಈ ವರ್ಷ ಜುಲೈನಲ್ಲಿ ಮಾರುತಿ ಎರ್ಟಿಗಾ 5 ನೇ ಸ್ಥಾನದಲ್ಲಿತ್ತು, ಆದರೆ ಆಗಸ್ಟ್‌ನಲ್ಲಿ ಇದು ನೇರವಾಗಿ 2 ನೇ ಸ್ಥಾನಕ್ಕೆ ಏರಿರುವುದು ಅಚ್ಚರಿ ಮೂಡಿಸಿದೆ. ಸದ್ಯ ಎರ್ಟಿಗಾದ ಕ್ರೇಜ್ ಭರ್ಜರಿ ಆಗಿದ್ದು, ಈ 7 ಆಸನಗಳ ಕಾರನ್ನು ಜನರು ಎಷ್ಟು ಇಷ್ಟಪಡುತ್ತಿದ್ದಾರೆ.

ಎರ್ಟಿಗಾದ ಬೆಲೆ ಮತ್ತು ವೈಶಿಷ್ಟ್ಯ

ಮಾರುತಿ ಸುಜುಕಿ ಎರ್ಟಿಗಾದ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಮಾತನಾಡುತ್ತಾ, ಈ 7 ಸೀಟರ್ ಕಾರು ಎಲ್‌ಎಕ್ಸ್‌ಐ, ವಿಎಕ್ಸ್‌ಐ, ಝಡ್‌ಎಕ್ಸ್‌ಐ ಮತ್ತು ಝಡ್‌ಎಕ್ಸ್‌ಐ ಪ್ಲಸ್‌ನಂತಹ 4 ಆಯ್ಕೆಗಳ ಒಟ್ಟು 9 ರೂಪಾಂತರಗಳನ್ನು ಹೊಂದಿದೆ. ಅವುಗಳಲ್ಲಿ ಎರಡು ಸಿಎನ್‌ಜಿ ಆಯ್ಕೆಯಲ್ಲಿಯೂ ಇವೆ. ಎರ್ಟಿಗಾದ ಎಕ್ಸ್ ಶೋ ರೂಂ ಬೆಲೆ 8.69 ಲಕ್ಷ ರೂ. ಗಳಿಂದ ಆರಂಭವಾಗಿ 13.03 ಲಕ್ಷ ರೂ. ವರೆಗೆ ಇದೆ. ಇದು 1462 cc ಪೆಟ್ರೋಲ್ ಎಂಜಿನ್ ಹೊಂದಿದೆ, ಇದು ಸಿಎನ್‌ಜಿ ಕಿಟ್‌ನೊಂದಿಗೆ 86.63 ಬಿಎಚ್‌ಪಿ ಮತ್ತು ಪೆಟ್ರೋಲ್ ಆಯ್ಕೆಯಲ್ಲಿ 101.64 ಬಿಎಚ್ಗ‌ಪಿ ರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.

ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಈ MPV ಪೆಟ್ರೋಲ್ ಆಯ್ಕೆಯಲ್ಲಿ ಲೀಟರ್‌ಗೆ 20.51 ಕಿಮೀವರೆಗೆ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಕೆಜಿಗೆ  26.11 ಕಿಮೀ ಮೈಲೇಜ್ ನೀಡುತ್ತದೆ. ಹೊಸದಾಗಿ ಬಿಡುಗಡೆ ಮಾಡಲಾಗಿರುವ ಎರ್ಟಿಗಾದ ಲುಕ್ ಮತ್ತು ಡಿಸೈನ್ ಕೂಡ ಅದ್ಭುತವಾಗಿದ್ದು, ಇದೇ ಕಾರಣಕ್ಕೆ ಜನರು ಈ ಕಾರು ಖರೀದಿಗೆ ಮುಗಿಬೀಳುತ್ತಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ