SUVs Discounts: ಈ 10 ಕಾರುಗಳಿಗೆ ಸೆಪ್ಟೆಂಬರ್‌ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್‌, 3 ಲಕ್ಷ ರೂವರೆಗೆ ಹಣ ಉಳಿತಾಯ ಮಾಡುವ ಅವಕಾಶ-automobile news suvs discount in september 2024 month maruti tata motors kia jeep volkswagen mahindra cars discount pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Suvs Discounts: ಈ 10 ಕಾರುಗಳಿಗೆ ಸೆಪ್ಟೆಂಬರ್‌ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್‌, 3 ಲಕ್ಷ ರೂವರೆಗೆ ಹಣ ಉಳಿತಾಯ ಮಾಡುವ ಅವಕಾಶ

SUVs Discounts: ಈ 10 ಕಾರುಗಳಿಗೆ ಸೆಪ್ಟೆಂಬರ್‌ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್‌, 3 ಲಕ್ಷ ರೂವರೆಗೆ ಹಣ ಉಳಿತಾಯ ಮಾಡುವ ಅವಕಾಶ

SUVs Discount In September Month: ಈ ತಿಂಗಳು ಸಾಕಷ್ಟು ಜನರು ಹೊಸ ವಾಹನ ಖರೀದಿಸಲು ನಿರ್ಧರಿಸಿರಬಹುದು. ಹಬ್ಬದ ಋತುವಿನ ಕಾರಣ ಏನಾದರೂ ಡಿಸ್ಕೌಂಟ್‌ ಇರುವುದೇ ಎಂದು ಕಾಯುತ್ತಿರಬಹುದು. ಈ ತಿಂಗಳಲ್ಲಿ ಅತಿಹೆಚ್ಚು ರಿಯಾಯಿತಿ ನೀಡುವ ಎಸ್‌ಯುವಿ ಕಾರುಗಳ ಬಗ್ಗೆ ತಿಳಿಯೋಣ. ಕೆಲವು ಕಾರುಗಳಿಗೆ 3 ಲಕ್ಷ ರೂ.ವರೆಗೆ ಡಿಸ್ಕೌಂಟ್‌ ಇರುವುದು ವಿಶೇಷ.

ಈ 10 ಕಾರುಗಳಿಗೆ ಸೆಪ್ಟೆಂಬರ್‌ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್‌
ಈ 10 ಕಾರುಗಳಿಗೆ ಸೆಪ್ಟೆಂಬರ್‌ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್‌ (festive season)

SUVs Discount In September Month: ಹಬ್ಬದ ಋತು ಆರಂಭವಾದರೆ ಸಾಕು, ವಾಹನ ಶೋರೂಂಗಳಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಸರ್‌, ಯಾವ ಕಾರಿಗೆ ಎಷ್ಟು ಡಿಸ್ಕೌಂಟ್‌ ಇದೆ ಎಂದು ಅಲ್ಲಿ ವಿಚಾರಿಸುತ್ತಾರೆ. ತಮ್ಮ ಕನಸಿನ ಗಾಡಿಗೆ ಕೆಲವು ಸಾವಿರದಿಂದ ಲಕ್ಷ ರೂವರೆಗೆ ಡಿಸ್ಕೌಂಟ ದೊರಕಿದರೆ ಖರೀದಿಗೆ ಮನಸು ಮಾಡುತ್ತಾರೆ. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹಬ್ಬದ ಸೀಸನ್ ಶುರುವಾಗಿದೆ. ಈ ಸಂದರ್ಭದಲ್ಲಿ, ಕಾರು ತಯಾರಕರು ತಮ್ಮ ವಿವಿಧ ಮಾದರಿಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ದಾಸ್ತಾನು ಕಡಿಮೆ ಮಾಡಿಕೊಳ್ಳಲು ಮತ್ತು ಮಾರಾಟ ಹೆಚ್ಚಿಸಿಕೊಳ್ಳಲು ಟಾಟಾ ಮೋಟಾರ್ಸ್, ಕಿಯಾ, ಮಾರುತಿ, ಮಹೀಂದ್ರಾ, ಜೀಪ್ ಮತ್ತು ದೇಶಾದ್ಯಂತ ಇತರ ಹಲವು ಕಾರು ತಯಾರಕರ ಡೀಲರ್‌ಶಿಪ್‌ಗಳು ಮಧ್ಯಮ ಗಾತ್ರದ ಎಸ್‌ಯುವಿಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ. ಇವುಗಳು ಈ ತಿಂಗಳ ಅತಿ ಹೆಚ್ಚು ರಿಯಾಯಿತಿಗಳನ್ನು ಹೊಂದಿರುವ ಟಾಪ್ 10 ಮಧ್ಯಮ ಗಾತ್ರದ ಎಸ್‌ಯುವಿಗಳ ವಿವರ ಇಲ್ಲಿದೆ. ಹೊಸ ಎಸ್‌ಯುವಿ ಖರೀದಿಸಬೇಕೆಂದು ಪ್ಲ್ಯಾನ್‌ ಮಾಡಿದ್ದರೆ ಈ ಡಿಸ್ಕೌಂಟ್‌ಗಳನ್ನು ಪರಿಶೀಲಿಸಿ ಮುಂದಡಿ ಇಡಬಹುದು.

ಜೀಪ್ ಕಂಪಾಸ್

ಜೀಪ್ ಇಂಡಿಯಾ ಕಂಪಾಸ್ ಮೇಲೆ 3.15 ಲಕ್ಷ ರೂಪಾಯಿವರೆಗೆ ರಿಯಾಯಿತಿ ನೀಡುತ್ತಿದೆ. 2.5 ಲಕ್ಷ ರೂಪಾಯಿವರೆಗೆ ಕ್ಯಾಶ್‌ ಡಿಸ್ಕೌಂಟ್‌ ಇದೆ. 18.99 ಲಕ್ಷ ರೂ.ನಿಂದ 28.33 ಲಕ್ಷ ರೂಪಾಯಿವರೆಗೆ ಕಂಪಾಸ್‌ ದರ ಇರುತ್ತದೆ. ಕಂಪಾಸ್ 2.0-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 170 ಬಿಎಚ್‌ಪಿ ಪವರ್‌ ಬಿಡುಗಡೆ ಮಾಡುವ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ. ಟಾಪ್-ಸ್ಪೆಕ್ ಮಾಡೆಲ್ ಎಸ್‌ ವೇರಿಯಂಟ್ ಮಾತ್ರ 4×4 ಆಯ್ಕೆಯಲ್ಲಿ ದೊರಕುತ್ತದೆ. ಜೀಪ್ ಎಸ್‌ಯುವಿಯು ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರ XUV700 ನಂತಹ ಎಸ್‌ಯುವಿಗಳ ಜತೆ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತದೆ.

ಫೋಕ್ಸ್‌ವ್ಯಾಗನ್ ಟಿಗುವಾನ್

ಫೋಕ್ಸ್‌ವ್ಯಾಗನ್ ಟಿಗುವಾನ್ ಖರೀದಿದಾರರಿಗೆ 3.07 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್‌ ದೊರಕುತ್ತದೆ. MY 2023 Tygan 1.5 GT ಇನ್ವೆಂಟರಿಯಲ್ಲಿ ಗರಿಷ್ಠ ರಿಯಾಯಿತಿ ಲಭ್ಯವಿದೆ. MY 2024 Tigon ನ 1.0-ಲೀಟರ್ ಎಂಜಿನ್ ಕಾರಿಗೆ 60,000 ರಿಂದ 1.25 ಲಕ್ಷ ರೂಪಾಯಿಗಳವರೆಗೆ ಡಿಸ್ಕೌಂಟ್‌ ದೊರಕುತ್ತದೆ. ಟಿಗುವಾನ್‌ 11.70 ಲಕ್ಷ ಮತ್ತು 20 ಲಕ್ಷ ರೂ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟೊಯೋಟಾ ಹೈಡರ್, ಮಾರುತಿ ಗ್ರಾಂಡ್ ವಿಟಾರಾ, ಇತ್ತೀಚೆಗೆ ಬಿಡುಗಡೆಯಾದ ಟಾಟಾ ಕರ್ವ್ ಮತ್ತು ಸಿಟ್ರೊಯೆನ್ ಬಸಾಲ್ಟ್‌ಗಳಿಗೆ ಪ್ರತಿಸ್ಪರ್ಧಿ ಕಾರಾಗಿದೆ.

ಮಹೀಂದ್ರ ಎಕ್ಸ್‌ಯುವಿ4ಒಒ( XUV400)

ಮಹೀಂದ್ರ ಇವಿ ಇವಿ ಎಕ್ಸ್‌ಯುವಿ4ಒಒ ದರ 16.74 ಲಕ್ಷ ರೂ. ಆಸುಪಾಸಿನಲ್ಲಿದೆ. ಸದ್ಯ ಟಾಪ್-ಸ್ಪೆಕ್ EL Proಗೆ ಡೀಲರ್‌ಗಳು 3 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್‌ ನೀಡುತ್ತಿದ್ದಾರೆ.

ಇದು 39.4 kW (456 km MIDC ಶ್ರೇಣಿ), 7.2 kW ವೇಗದ ಚಾರ್ಜರ್‌ನ ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿದೆ. EL Pro ರೂಪಾಂತರವು 34.5 kW ಬ್ಯಾಟರಿ ಪ್ಯಾಕ್ ಹೊಂದಿದೆ. ಇದಕ್ಕೂ ಕೊಂಚ ರಿಯಾಯಿತಿ ದೊರಕುತ್ತದೆ.

ಜೀಪ್ ಮೆರಿಡಿಯನ್

ಈ ಕಾರಿಗೂ ಸುಮಾರು 2 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್‌ ಲಭ್ಯವಿದೆ. ಜೀಪ್ ಮೆರಿಡಿಯನ್ ದರ 30 ಲಕ್ಷ ರೂಪಾಯಿಯಿಂದ 37.14 ಲಕ್ಷ ರೂಪಾಯಿವರೆಗಿದೆ. ಈ 7 ಸೀಟಿನ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಕೊಡಿಯಾಕ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ.

ಟಾಟಾ ಸಫಾರಿ

2024 ಟಾಟಾ ಸಫಾರಿ ಖರೀದಿದಾರರಿಗೆ 50,000 ರೂಪಾಯಿಯಿಂದ 1.4 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್‌ ದೊರಕುತ್ತದೆ. MY 2023 ರೂಪಾಂತರಕ್ಕೆ 25,000 ರೂಪಾಯಿ ಹೆಚ್ಚುವರಿ ಕ್ಯಾಶ್‌ ಡಿಸ್ಕೌಂಟ್‌ ಲಭ್ಯವಿದೆ. ಮಿಡ್-ಸ್ಪೆಕ್ ಪ್ಯೂರ್+ಎಸ್ ಮತ್ತು ಪ್ಯೂರ್+ಎಸ್ ಡಾರ್ಕ್‌ಗಳಿಗೆ ಹೆಚ್ಚು ಡಿಸ್ಕೌಂಟ್‌ ಇದೆ. ಟಾಪ್‌ ಎಂಡ್‌ ಆವೃತ್ತಿಗೆ ಕಡಿಮೆ ಡಿಸ್ಕೌಂಟ್‌ ಇದೆ. ಟಾಟಾ ಸಫಾರಿ ದರ 15.49 ಲಕ್ಷ ರೂನಿಂದ 27.34 ಲಕ್ಷ ರೂವರೆಗಿದೆ.

ಟಾಟಾ ಹ್ಯಾರಿಯರ್

5 ಸೀಟುಗಳ ಫೇಸ್‌ಲಿಫ್ಟ್‌ ಹ್ಯಾರಿಯರ್‌ ಖರೀದಿದಾರರಿಗೆ 1.20 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್‌ ದೊರಕುತ್ತದೆ. MY 2023 ಹ್ಯಾರಿಯರ್‌ಗೆ 25,000 ಡಿಸ್ಕೌಂಟ್‌ ದೊರಕುತ್ತದೆ. . ಮಿಡ್-ಸ್ಪೆಕ್ ಹ್ಯಾರಿಯರ್ ಕಾರು ಸಫಾರಿಯಂತೆ ಉತ್ತಮವಾಗಿದೆ. ಟಾಪ್‌ ಎಂಡ್‌ಗಳಿಗೆ 50-70 ಸಾವಿರ ರೂಪಾಯಿ ಡಿಸ್ಕೌಂಟ್‌ ದೊರಕುತ್ತದೆ. ಹ್ಯಾರಿಯರ್‌ ದರ 14.99 ಲಕ್ಷ ರೂಪಾಯಿಯಿಂದ 26.44 ಲಕ್ಷ ರೂಪಾಯಿವರೆಗಿದೆ.

ಕಿಯಾ ಸೆಲ್ಟೋಸ್

ಟಾಟಾ ಕರ್ವ್‌, ಹ್ಯುಂಡೈ ಕ್ರೆಟಾ ಮತ್ತು ಸ್ಕೋಡಾ ಕುಶಾಕ್‌ ಜತೆ ಸ್ಪರ್ಧಿಸುವ ಸೆಲ್ಟೋಸ್ ಕಾರಿಗೂ ಭರ್ಜರಿ ಡಿಸ್ಕೌಂಟ್‌ ಇದೆ. ಕ್ಯಾಶ್‌ ಡಿಸ್ಕೌಂಟ್‌, ಎಕ್ಸ್‌ ಚೇಂಜ್‌ ಬೋನಸ್‌ಗಳು ಮತ್ತು ಪರಿಕರಗಳ ಪ್ಯಾಕೇಜ್ ಸೇರಿದರೆ ಸುಮಾರು 1.3 ಲಕ್ಷ ರೂಪಾಯಿ ಡಿಸ್ಕೌಂಟ್‌ ದೊರಕುತ್ತದೆ. ಸೆಲ್ಟೋಸ್‌ ಕಾರು ನಾಲ್ಕು ಎಂಜಿನ್‌ ಆಯ್ಕೆಗಳಲ್ಲಿ ದೊರಕುತ್ತದೆ. 1.5 ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್, 1.5-ಲೀಟರ್ ಟರ್ಬೊ-ಪೆಟ್ರೋಲ್ ಜೊತೆಗೆ ಪೆಟ್ರೋಲ್ ಮ್ಯಾನುಯಲ್, ಸಿವಿಟಿ ಆಯ್ಕೆಗಳು. ಟರ್ಬೊ ಪೆಟ್ರೋಲ್ ಐಎಂಟಿ ಮತ್ತು ಡ್ಯುಯಲ್ ಕ್ಲಚ್ ಆಟೋ ಆಯ್ಕೆಗಳಲ್ಲಿ ಸೆಲ್ಟೋಸ್‌ ಕಾರು ಲಭ್ಯವಿದೆ. ಸೆಲ್ಟೋಸ್‌ ಕಾರಿನ ದರ 10.90 ಲಕ್ಷ ರೂಪಾಯಿಯಿಂದ 20.37 ಲಕ್ಷ ರೂಪಾಯಿವರೆಗಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ

ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾ ಕಾರಿಗೂ ಕಳೆದ ತಿಂಗಳಿನಂತೆ ಈ ತಿಂಗಳೂ ರಿಸ್ಕೌಂಟ್‌ ಮುಂದುವರೆದಿದೆ. ಸ್ಟ್ರಾಂಗ್ ಹೈಬ್ರಿಡ್‌ಗೆ 1.28 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್‌ ಇದೆ. ಮೈಲ್ಡ್-ಹೈಬ್ರಿಡ್ ಲೈನಪ್ ಮತ್ತು ಸಿಎನ್‌ಜಿ ರೂಪಾಂತರಗಳಿಗೆ 73,100 ರೂಪಾಯಿ ಮತ್ತು 33,100 ರೂಪಾಯಿ ಡಿಸ್ಕೌಂಟ್‌ ದೊರಕುತ್ತದೆ.

ಹುಂಡೈ ಅಲ್ಕಾಜರ್

ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಬುಕಿಂಗ್ ಪ್ರಾರಂಭವಾಗಿದೆ. ಇದೇ ಸಂದರ್ಭದಲ್ಲಿ ಇದಕ್ಕೂ ಹಿಂದಿನ ಅಲ್ಕಾಜರ್‌ ಕಾರಿಗೆ 90,000 ರೂ.ವರೆಗೆ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೋಂಡಾ ಎಲಿವೇಟ್

ನೀವು ಯಾವ ವರ್ಷನ್‌ ಖರೀದಿಸುವಿರೋ ಅದಕ್ಕೆ ತಕ್ಕಂತೆ 75 ಸಾವಿರ ರೂಪಾಯಿವರೆಗೆ ಡಿಸ್ಕೌಂಟ್‌ ಲಭ್ಯವಿದೆ. ಏಪ್ರಿಲ್‌ ನಂತರದ ಮೇಕಿಂಗ್‌ನ ಎಸ್‌ಯುವಿಗಳಿಗೆ 65 ಸಾವಿರ ಡಿಸ್ಕೌಂಟ್‌ ಇದೆ. ಹೀಗೆ ಈ ಹತ್ತು ಕಾರುಗಳಲ್ಲಿ ನಿಮಗೆ ಯಾವುದಾದರೂ ಒಂದು ಕಾರು ಇಷ್ಟವಾಗಿದ್ದರೆ, ಇವುಗಳಲ್ಲಿ ಯಾವುದಾದರೂ ಒಂದು ಕಾರನ್ನು ಈ ತಿಂಗಳಲ್ಲಿ ಖರೀದಿಸಬೇಕು ಎಂದುಕೊಂಡಿದ್ದರೆ ಈ ಡಿಸ್ಕೌಂಟ್‌ಗಳ ಪ್ರಯೋಜನ ಪಡೆಯಬಹುದು.

mysore-dasara_Entry_Point