logo
ಕನ್ನಡ ಸುದ್ದಿ  /  ಜೀವನಶೈಲಿ  /  Maruti Suzuki Jimny: ಮಾರುತಿ ಸುಜುಕಿ ಜಿಮ್ನಿ ಬೆಲೆಯಲ್ಲಿ 1.50 ಲಕ್ಷ ರೂ ವರೆಗೆ ರಿಯಾಯಿತಿ; ಪ್ರಸ್ತುತ ಬೆಲೆ ತಿಳಿಯಿರಿ

Maruti Suzuki Jimny: ಮಾರುತಿ ಸುಜುಕಿ ಜಿಮ್ನಿ ಬೆಲೆಯಲ್ಲಿ 1.50 ಲಕ್ಷ ರೂ ವರೆಗೆ ರಿಯಾಯಿತಿ; ಪ್ರಸ್ತುತ ಬೆಲೆ ತಿಳಿಯಿರಿ

Raghavendra M Y HT Kannada

Mar 08, 2024 12:35 PM IST

ಮಾರುತಿ ಸುಜುಕಿ ಜಿಮ್ನಿ ಬೆಲೆಯಲ್ಲಿ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಕಳೆದ ವರ್ಷ ಈ ಎಸ್‌ಯುವಿಯನ್ನು ಬಿಡುಗಡೆ ಮಾಡಲಾಗಿತ್ತು.

    • Maruti Jimny: ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದ್ದ ಮಾರುತಿ ಸುಜುಕಿ ಜಿಮ್ಮಿ ಎಸ್‌ಯುವಿಗೆ ಹೇಳಿಕೊಳ್ಳುವಂತ ಸ್ಪಂದನೆ ಸಿಗಲಿಲ್ಲ. ಇದೀಗ ಈ ಎಸ್‌ಯುವಿ ಮಾರಾಟ ಹೆಚ್ಚಿಸಲು ಭಾರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.
ಮಾರುತಿ ಸುಜುಕಿ ಜಿಮ್ನಿ ಬೆಲೆಯಲ್ಲಿ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಕಳೆದ ವರ್ಷ ಈ ಎಸ್‌ಯುವಿಯನ್ನು ಬಿಡುಗಡೆ ಮಾಡಲಾಗಿತ್ತು.
ಮಾರುತಿ ಸುಜುಕಿ ಜಿಮ್ನಿ ಬೆಲೆಯಲ್ಲಿ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಕಳೆದ ವರ್ಷ ಈ ಎಸ್‌ಯುವಿಯನ್ನು ಬಿಡುಗಡೆ ಮಾಡಲಾಗಿತ್ತು.

ಭಾರತದ ಆಟೊಮೊಬೈಲ್ ಕ್ಷೇತ್ರದ ಪ್ರಮುಖ ಕಾರು ತಯಾರಿಕಾ ಸಂಸ್ಥೆ ‘ಮಾರುತಿ ಸುಜುಕಿ ಇಂಡಿಯಾ’ ಅದ್ಧೂರಿ ಪ್ರಚಾರದೊಂದಿಗೆ 2023 ರಲ್ಲಿ ಮಾರುತಿ ಜಿಮ್ನಿ ಎಸ್‌ಯುವಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಐದು ಡೋರ್‌ಗಳು ಎಂಬ ಪ್ರಚಾರವನ್ನೂ ಮಾಡಿತ್ತು. ಆದರೆ ಭಾರತದಲ್ಲಿ ನಿರಿಕ್ಷಿತ ಮಟ್ಟದಲ್ಲಿ ಈ ಕಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಮಾರುತಿ ಸುಜುಕಿ ನೆಕ್ಸಾ ಪ್ರೀಮಿಯಂ ರಿಟೇಲ್ ನೆಟ್‌ವರ್ಕ್ ಮೂಲಕ ಈ ಜಿಮ್ಮಿ ಎಸ್‌ಯುವಿ ಮಾರಾಟ ಮಾಡಲಾಗುತ್ತಿದೆ. ಮಾರುತಿ ಸುಜುಕಿ ಜಿಮ್ನಿ ಎಸ್‌ಯುವಿ ಮೇಲೆ 1.50 ಲಕ್ಷ ರೂಪಾಯಿವರೆಗೆ ಭಾರಿ ರಿಯಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಸ್ಟಾಕ್ ಕ್ಲಿಯರ್ ಮಾಡಲು 2024ರ ಮಾಡೆಲ್‌ಗಳಿಗಿಂತ 2023ರ ಮಾಡೆಲ್‌ಗಳ ಮೇಲೆ ಹೆಚ್ಚು ಡಿಸ್ಕೌಂಟ್‌ಗಳನ್ನು ಪ್ರಕಟಿಸಿದೆ.

ಟ್ರೆಂಡಿಂಗ್​ ಸುದ್ದಿ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

ಜಿಮ್ನಿ 2024 ಮಾಡೆಲ್ ಎಸ್‌ಯುವಿಗಳ ಮೇಲೆ 50,000 ರೂಪಾಯಿ ತ್ವರಿತ ನಗದು ರಿಯಾಯಿತಿ ಘೋಷಿಸಲಾಗಿದೆ. ಜೊತೆಗೆ 3 ಸಾವಿರ ರೂಪಾಯಿ ಕಾರ್ಪೊರೇಟ್ ಡಿಸ್ಕೌಂಟ್ ಕೂಡ ಲಭ್ಯವಿದೆ. ಈ ಕೊಡುಗೆಗಳು ವೇರಿಯಂಟ್, ಸ್ಥಳ, ಸ್ಟಾಕ್ ಲಭ್ಯತೆ ಇತ್ಯಾದಿಗಳನ್ನು ಅವಲಂಬಿಸಿದ್ದು, ಸ್ಥಳದಿಂದ ಸ್ಥಳಕ್ಕೆ ಬದಲಾಗಬಹುದು. ಮಾರುತಿ ಸುಜುಕಿ ಜಿಮ್ನಿ ಎಸ್‌ಯುಟಿ ಝೀಟಾ ಮತ್ತು ಆಲ್ಟ್ರಾ ಎಂಬ ಎರಡು ವೇರಿಯಂಟ್‌ಗಳು ಲಭ್ಯಇವೆ. ಇದರ ಬೆಲೆ ಎಕ್ಸ್‌ ಶೋರೂಂ ಬೆಲೆ 12.74 ಲಕ್ಷ ರೂಪಾಯಿ ಇದೆ. ಭಾರತದಲ್ಲಿ ಮಾತ್ರವಲ್ಲ, ಈ ಕಾರುಗಳನ್ನು ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾದಂತಹ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿದೆ.

ಮಾರುತಿ ಸುಜುಕಿ ಜಿಮ್ನಿ ಎಸ್‌ಯುವಿ ವೈಶಿಷ್ಟ್ಯಗಳು

ಮಾರುತಿ ಸುಜುಕಿ ಜಿಮ್ನಿ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಇಧು 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಹೊಂದಿದೆ. ಈ ಇಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಯುನಿಟ್ ಟ್ರಾನ್ಸಿಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಇಂಜಿನ್ ಗರಿಷ್ಠ 103 ಬಿಎಚ್‌ಪಿ ಪವರ್ ಮತ್ತು 134 ಎನ್‌ಎಂ ಗರಿಷ್ಠ ಟಾರ್ಕ್ ಅವನ್ನು ಉತ್ಪಾದಿಸುತ್ತದೆ. ಅಲ್ಲದೆ, ಎಸ್‌ಯುವಿ ಸುಜುಕಿಯ ಆಲ್‌ ಗ್ರಿಪ್ ಪ್ರೊ 4×4 ವ್ಯವಸ್ಥೆಯನ್ನು ಹೊಂದಿದ್ದು, ಎಲ್ಲಾ ನಾಲ್ಕು ವ್ಹೀಲ್‌ಗಳಿಗೆ ಶಕ್ತಿಯನ್ನು ಒದಗಿಸುತ್ತದೆ.

ಮಹೀಂದ್ರಾ ಥಾರ್‌ಗೆ ಮಾರುತಿ ಜಿಮ್ನಿ ಸ್ಪರ್ಧೆ

ಮಾರುತಿ ಸುಜುಕಿ ಜಿಮ್ನಿ ಎಸ್‌ಯುವಿ ತುಂಬಾ ಸ್ಟೈಲೀಶ್‌ ಎಸ್‌ಯುವಿ ವಿಭಾಗದಲ್ಲಿ ಮಹೀಂದ್ರ ಥಾರ್‌ಗೆ ಸ್ಪರ್ಧೆಯಾಗಿ ಮಾರುಕಟ್ಟೆಗೆ ಬಂದಿತು. ಮಹೀಂದ್ರ ಥಾರ್ ಪ್ರಸ್ತುತ 3-ಡೋರ್ ವೇರಿಯಂಟ್‌ನಲ್ಲಿ ಲಭ್ಯವಿದೆ. ಮಹೀಂದ್ರಾ ಥಾರ್‌ನ ಐದು ಡೋರ್‌ಗಳ ವೇರಿಯಂಟ್ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.

ಮಾರುತಿ ಜಿಮ್ನಿ ಬಿಡುಗಡೆಯಾದಾಗಿನಿಂದ ಬೆಲೆಯ ವಿಚಾರದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಮಾರುತಿ ಸುಜುಕಿ ಇದರ ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು ಇದುಕೂಡ ಪ್ರಮುಖ ಕಾರಣವಾಗಿತ್ತು. ಚಿಲ್ಲರೆ ಮಾರಾಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಮಾರುತಿ ಜಿಮ್ನಿ ಮಾದರಿಯ ಥಂಡರ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ. ಈ ಕಾರಿನ ಎಕ್ಸ್‌ ಶೋ ರೂಂ ಬೆಲೆ 10.74 ಲಕ್ಷ ರೂಪಾಯಿ ಇದೆ. ಜಿಮ್ನಿ ಮಾರುಕಟ್ಟೆಗೆ ಬರುವ ಮುನ್ನ ಮಹೀಂದ್ರಾ ಥಾರ್ ಅನ್ನು ಮೀರಿಸಲಿದೆ ಎಂಬ ನಿರೀಕ್ಷೆಗಳಿದ್ದವು. ಆದರೆ ಆ ನಿರೀಕ್ಷೆಗಳು ಹುಸಿಯಾದವು.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು