ಮಾರುತಿ ಸುಜುಕಿ ಜಿಮ್ನಿ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ ಮೇಲೆ ಭಾರೀ ಡಿಸ್ಕೌಂಟ್; ಡಿಸೆಂಬರ್ನಲ್ಲಿ ಖರೀದಿಸಿದ್ರೆ 2 ಲಕ್ಷದವರೆಗೆ ಉಳಿತಾಯ
Maruti Suzuki : 2024ರ ಜನವರಿಯಲ್ಲಿ ಮಾರುತಿ ಸುಜುಕಿ ಕಂಪನಿಯ ವಾಹನಗಳ ಮತ್ತೆ ಬೆಲೆ ಏರಿಕೆ ಆಗಲಿದ್ದು, 2023ರ ಡಿಸೆಂಬರ್ ತಿಂಗಳಲ್ಲಿ ಖರೀದಿ ಮಾಡಿದ್ರೆ ನಿಮಗೆ 2.3 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಸಿಗಲಿದೆ.
ಮಾರುತಿ ಸುಜುಕಿ ಕಂಪನಿಯು ತನ್ನ ಕಾರು-ಜೀಪುಗಳ ಮೇಲೆ ಭಾರೀ ಡಿಸ್ಕೌಂಟ್ ಘೋಷಿಸಿದೆ. ಮಾರುತಿ ಸುಜುಕಿ ಜಿಮ್ನಿ, ಮಾರುತಿ ಸುಜುಕಿ ಫ್ರಾಂಕ್ಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮೇಲೆ 2.3 ಲಕ್ಷ ರೂಪಾಯಿ ವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬೃಹತ್ ರಿಯಾಯಿತಿ ಇದೆ.
2024ರ ಜನವರಿಯಲ್ಲಿ ಮತ್ತೆ ಬೆಲೆ ಏರಿಕೆ ಆಗಲಿದ್ದು, 2023ರ ಡಿಸೆಂಬರ್ ತಿಂಗಳಲ್ಲಿ ಖರೀದಿ ಮಾಡಿದ್ರೆ ನಿಮಗೆ 2.3 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಸಿಗಲಿದೆ. ಆಸಕ್ತ ಗ್ರಾಹಕರು ಈ ಕೊಡುಗೆಗಳನ್ನು ನಗದು ರಿಯಾಯಿತಿಗಳು, ಎಕ್ಸ್ಚೇಂಜ್ ಬೋನಸ್‌ಗಳು ಮತ್ತು ಕಾರ್ಪೊರೇಟ್ ಪ್ರಯೋಜನಗಳ ರೂಪದಲ್ಲಿ ಪಡೆಯಬಹುದು.
ಮಾರುತಿ ಸುಜುಕಿ ಜಿಮ್ನಿ:
ಮಾರುತಿ ಸುಜುಕಿ ಕಂಪನಿಯ ಜಿಮ್ನಿ ಥಂಡರ್ ಆವೃತ್ತಿಯ ವಾಹನದ ಆರಂಭಿಕ ಬೆಲೆ 10.74 ಲಕ್ಷ ರೂ. (ex-showroom) ಇದ್ದು, 2.3 ಲಕ್ಷ ರೂಪಾಯಿ ವರೆಗೆ ರಿಯಾಯಿತಿ ಇದೆ.
ಮಾರುತಿ ಸುಜುಕಿ ಫ್ರಾಂಕ್ಸ್:
ಮಾರುತಿ ಸುಜುಕಿ ಫ್ರಾಂಕ್ಸ್ ದೇಶದಾದ್ಯಂತ ಆಯ್ದ ರೂಪಾಂತರಗಳ ಮೇಲೆ 40,000 ವರೆಗೆ ರಿಯಾಯಿತಿ ಇದೆ. ಬಲೆನೊ ಆಧಾರಿತ, ಫ್ರಾಂಕ್ಸ್ ಭಾರತೀಯ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಮತ್ತು ಬಿಡುಗಡೆಯಾದಾಗಿನಿಂದ ಹೆಚ್ಚು ಮಾರಾಟವಾಗುವ ಮಾರುತಿ ಸುಜುಕಿ ನೆಕ್ಸಾ ಕಾರುಗಳಲ್ಲಿ ಒಂದಾಗಿದೆ.
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ:
ಮಾರುತಿ ಸುಜುಕಿ ಗ್ರಾಂಡ್ ವಿಟಾರಾವನ್ನು ಡಿಸೆಂಬರ್ನಲ್ಲಿ 35,000 ರೂ. ವರೆಗಿನ ರಿಯಾಯಿತಿಯೊಂದಿಗೆ ನೀಡಲಾಗುತ್ತದೆ. ಗ್ರಾಹಕರು ಹೈಬ್ರಿಡ್ ರೂಪಾಂತರವನ್ನು 25,000 ರಿಂದ ರೂ 25,000 ರೂ. ರವರೆಗಿನ ರಿಯಾಯಿತಿಯೊಂದಿಗೆ ಖರೀದಿಸಬಹುದು.
ಮಾರುತಿ ಸುಜುಕಿ ಇತ್ತೀಚೆಗೆ 2024ರ ಜನವರಿಯಿಂದ ತನ್ನ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಘೋಷಿಸಿತು. ಆದರೆ ಬೆಲೆ ಏರಿಕೆಯ ಪ್ರಮಾಣವನ್ನು ಇನ್ನೂ ಬಹಿರಂಗಪಡಿಸಿಲ್ಲ.
(ಗಮನಿಸಿ: ಸ್ಟಾಕ್‌ನ ಲಭ್ಯತೆಯನ್ನು ಅವಲಂಬಿಸಿ ರಿಯಾಯಿತಿಗಳು ನಗರದಿಂದ ನಗರಕ್ಕೆ ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ನಿಖರವಾದ ರಿಯಾಯಿತಿ ಅಂಕಿಅಂಶಗಳನ್ನು ತಿಳಿಯಲು ನಿಮ್ಮ ಹತ್ತಿರದ ಮಾರುತಿ ಸುಜುಕಿ ಶೋ ರೂಂಗೆ ಭೇಟಿ ನೀಡಿ.)