Maruti Swift CNG: ಹೊಸ ಮಾರುತಿ ಸ್ವಿಫ್ಟ್ ಸಿಎನ್‌ಜಿ ಬಿಡುಗಡೆ; ಇಲ್ಲಿದೆ ಮೈಲೇಜ್, ದರ ವಿವರ
Dec 16, 2024 03:13 PM IST
ಮಾರುತಿ ಸ್ವಿಫ್ಟ್ ಸಿಎನ್‌ಜಿ
ಮಾರುತಿ ಸ್ವಿಫ್ಟ್ ಸಿಎನ್‌ಜಿ ಮೈಲೇಜ್ ಕೆಜಿಗೆ 32.85 ಕಿಮೀ ಇರುವುದಾಗಿ ಕಂಪನಿ ಪ್ರತಿಪಾದಿಸಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಜನರು ಹೊಸ ಸಿಎನ್‌ಜಿ ಮಾದರಿಯ ಸ್ವಿಫ್ಟ್ ಕಾರಿನಲ್ಲಿ ಶೇಕಡಾ 6 ರಷ್ಟು ಹೆಚ್ಚು ಮೈಲೇಜ್ ಪಡೆಯುತ್ತಾರೆ. (ಬರಹ: ವಿನಯ್ ಭಟ್)
ಮಾರುಕಟ್ಟೆಯಲ್ಲಿ ಸಿಎನ್‌ಜಿ ಕಾರುಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ, ಅದಕ್ಕಾಗಿಯೇ ವಾಹನ ಕಂಪನಿಗಳು ಈಗ ತಮ್ಮ ಜನಪ್ರಿಯ ಮಾದರಿಗಳ ಸಿಎನ್‌ಜಿ ಆವೃತ್ತಿಗಳನ್ನು ಗ್ರಾಹಕರಿಗೆ ಬಿಡುಗಡೆ ಮಾಡಲು ಪ್ರಾರಂಭಿಸಿವೆ. ನಾಲ್ಕು ತಿಂಗಳ ಹಿಂದೆ ಅಂದರೆ ಮೇ ತಿಂಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಗ್ರಾಹಕರ ಬೇಡಿಕೆಯ ಮೇರೆಗೆ ನಾಲ್ಕು ತಿಂಗಳ ನಂತರ ಕಂಪನಿಯು ಹಬ್ಬದ ಸೀಸನ್‌ಗೂ ಮುನ್ನವೇ ಸ್ವಿಫ್ಟ್ ಸಿಎನ್‌ಜಿ (ಸ್ವಿಫ್ಟ್ ಎಸ್-ಸಿಎನ್‌ಜಿ) ಮಾದರಿಯನ್ನು ಬಿಡುಗಡೆ ಮಾಡಿದೆ.
ಸ್ವಿಫ್ಟ್‌ನ ಈ ಹೊಸ ಸಿಎನ್‌ಜಿ ಅವತಾರವನ್ನು ಮೂರು ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ವಿ, ವಿ(ಒ) ಮತ್ತು ಝಡ್ ಆಗಿದೆ. ನೀವು 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಈ ಹೊಸ ಮಾದರಿಯ ಸ್ವಿಫ್ಟ್‌ನ ಎಲ್ಲಾ ರೂಪಾಂತರಗಳನ್ನು ಪಡೆಯುತ್ತೀರಿ. ಇದರರ್ಥ ಅಟೊಮೆಟಿಕ್ ಆಯ್ಕೆಯಲ್ಲಿ ಸ್ವಿಫ್ಟ್ CNG ಖರೀದಿಸಲು ಸಾಧ್ಯವಾಗುವುದಿಲ್ಲ.
ಹೊಸ ಸ್ವಿಫ್ಟ್ ಸಿಎನ್‌ಜಿ ಎಲ್ಲಾ ರೂಪಾಂತರಗಳ ಬೆಲೆಗಳು
ಮಾರುತಿ ಸುಜುಕಿ ಸ್ವಿಫ್ಟ್‌ನ ವಿಎಕ್ಸ್‌ಐ ಸಿಎನ್‌ಜಿ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 8,19,500 ರೂ.
ಮಾರುತಿ ಸುಜುಕಿ ಸ್ವಿಫ್ಟ್‌ನ ವಿಎಕ್ಸ್‌ಐ (ಒ) ಸಿಎನ್‌ಜಿ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 8,46,500 ರೂ.
ಮಾರುತಿ ಸುಜುಕಿ ಸ್ವಿಫ್ಟ್ ರೂಪಾಂತರದ ಝಡ್‌ಎಕ್ಸ್‌ಐ ಸಿಎನ್‌ಜಿ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 9,19,500 ರೂ.
ಸ್ವಿಫ್ಟ್ ಸಿಎನ್‌ಜಿಯ ಶಕ್ತಿ ಮತ್ತು ಮೈಲೇಜ್
ಮಾರುತಿ ಸುಜುಕಿಯ ಎಪಿಕ್ ಹೊಸ ಸ್ವಿಫ್ಟ್ 1.2 ಲೀಟರ್ ಜಿ-ಸರಣಿ ಡ್ಯುಯಲ್ ವಿವಿಟಿ ಎಂಜಿನ್ ಅನ್ನು ಹೊಂದಿದೆ. ಇದು 69.75 ಪಿಎಸ್ ಗರಿಷ್ಠ ಶಕ್ತಿಯನ್ನು ಮತ್ತು 101.8 ನ್ಯೂಟನ್ ಮೀಟರ್‌ಗಳ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ವಿಫ್ಟ್ ಸಿಎನ್‌ಜಿಯ ಎಲ್ಲಾ ರೂಪಾಂತರಗಳು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಪಡೆಯುತ್ತವೆ ಮತ್ತು ಈ ಹ್ಯಾಚ್‌ಬ್ಯಾಕ್‌ನ ಮೈಲೇಜ್ ಬರೋಬ್ಬರಿ 32.85 ಕಿಮೀ/ಕೆಜಿ ವರೆಗೆ ಇರುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಜನರು ಹೊಸ ಸಿಎನ್‌ಜಿ ಮಾದರಿಯ ಸ್ವಿಫ್ಟ್‌ನೊಂದಿಗೆ ಶೇಕಡಾ 6 ರಷ್ಟು ಹೆಚ್ಚು ಮೈಲೇಜ್ ಪಡೆಯುತ್ತಾರೆ.
ಸ್ವಿಫ್ಟ್ ಸಿಎನ್‌ಜಿಯ ವೈಶಿಷ್ಟ್ಯಗಳು
ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಎಸ್-ಸಿಎನ್‌ಜಿ ನೋಡಲು ಸುಂದರವಾಗಿರುವುದು ಮಾತ್ರವಲ್ಲ, ಕಂಪನಿಯು ಹಲವಾರು ವೈಶಿಷ್ಟ್ಯಗಳನ್ನು ಸಹ ನೀಡಿದೆ. ಇದು 7-ಇಂಚಿನ ಸ್ಮಾರ್ಟ್ ಪ್ಲೇ ಪ್ರೊ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸುಜುಕಿ ಕನೆಕ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ಎಸಿ ವೆಂಟ್‌ಗಳು, ವೈರ್‌ಲೆಸ್ ಚಾರ್ಜರ್, 60: 40 ಸ್ಪ್ಲಿಟ್ ರಿಯರ್ ಸೀಟ್‌ಗಳು, 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸೇರಿದಂತೆ ಎಲ್ಲಾ ಗುಣಮಟ್ಟದ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಮೂರನೇ ತಲೆಮಾರಿನ ಸ್ವಿಫ್ಟ್‌ನ ಒಟ್ಟಾರೆ ಮಾರಾಟದಲ್ಲಿ ಸಿಎನ್‌ಜಿ ರೂಪಾಂತರಗಳು ಶೇ. 15ರಷ್ಟು ಪಾಲನ್ನು ಹೊಂದಿದ್ದರೂ, ಹೊಸ ಸ್ವಿಫ್ಟ್‌ನಲ್ಲಿ ಸಿಎನ್‌ಜಿ ರೂಪಾಂತರಗಳಿಂದ ಹೆಚ್ಚಿನ ಕೊಡುಗೆಯನ್ನು ಮಾರುತಿ ನಿರೀಕ್ಷಿಸುತ್ತದೆ. ಕಂಪನಿಯು 2025 ರ ಹಣಕಾಸು ವರ್ಷದಲ್ಲಿ 600,000 ಸಿಎನ್‌ಜಿ ವಾಹನಗಳ ಮಾರಾಟವನ್ನು ತಲುಪುವ ಗುರಿ ಹೊಂದಿದೆ.