logo
ಕನ್ನಡ ಸುದ್ದಿ  /  ಜೀವನಶೈಲಿ  /  Maruti Dzire: ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್‌ ಬಿಡುಗಡೆ ವಿವರ ಖಚಿತವಾಯ್ತು; ಹೇಗಿರಲಿದೆ ಹೊಸ ಡಿಜೈರ್‌ ಕಾರು?

Maruti Dzire: ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್‌ ಬಿಡುಗಡೆ ವಿವರ ಖಚಿತವಾಯ್ತು; ಹೇಗಿರಲಿದೆ ಹೊಸ ಡಿಜೈರ್‌ ಕಾರು?

Praveen Chandra B HT Kannada

Sep 28, 2024 11:39 AM IST

google News

ಮಾರುತಿ ಸುಜುಕಿ ಡಿಜೈರ್‌ ಹೊಸ ಕಾರಿನ ವಿವರ

    • ಮಾರುತಿ ಸುಜುಕಿ ಡಿಜೈರ್‌ನ ಹೊಸ ಆವೃತ್ತಿ ಇನ್ನು ಕೆಲವೇ ವಾರದಲ್ಲಿ ಭಾರತದ ರಸ್ತೆಗಿಳಿಯಲಿದೆ. ಹೊಸ ಡಿಸೈನ್‌, ಪರಿಷ್ಕೃತ ಇಂಟೀರಿಯರ್‌, ಹೊಸ ಎಂಜಿನ್‌ ಸೇರಿದಂತೆ ನೂತನ ಡಿಜೈರ್‌ನಲ್ಲಿ ಸಾಕಷ್ಟು ಹೊಸತನವಿರಲಿದೆ.
ಮಾರುತಿ ಸುಜುಕಿ ಡಿಜೈರ್‌ ಹೊಸ ಕಾರಿನ ವಿವರ
ಮಾರುತಿ ಸುಜುಕಿ ಡಿಜೈರ್‌ ಹೊಸ ಕಾರಿನ ವಿವರ

ಬೆಂಗಳೂರು: ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್‌ ಇನ್ನು ಕೆಲವೇ ವಾರಗಳಲ್ಲಿ ಭಾರತದ ರಸ್ತೆಗಿಳಿಯಲಿದೆ. ಈ ಸಬ್‌ ಕಾಂಪ್ಯಾಕ್ಟ್‌ ಸೆಡಾನ್‌ ಕಾರು ಡೀಲರ್‌ಶಿಪ್‌ಗೆ ಯಾವಾಗ ಆಗಮಿಸಲಿದೆ ಎಂಬ ವಿವರ ನಮಗೆ ದೊರಕಿದೆ. ಮಾರುತಿ ಸುಜುಕಿ ಕಂಪನಿಯು ನೆಕ್ಸ್ಟ್‌ ಜೆನ್‌ ಡಿಜೈರ್‌ ಅನ್ನು ನವೆಂಬರ್‌ ತಿಂಗಳಲ್ಲಿ ಪರಿಚಯಿಸಲಿದೆ. ಇದರ ವಿನ್ಯಾಸದಲ್ಲಿ ಸಾಕಷ್ಟು ಹೊಸ ಬದಲಾವಣೆಗಳು ಇರಲಿದೆ. ಇಂಟೀರಿಯರ್‌ ವಿನ್ಯಾಸದಲ್ಲೂ ಮಾರ್ಪಾಡಾಗಲಿದೆ. ಹೊಸ ಎಂಜಿನ್‌ ಇರಲಿದೆ. ಒಟ್ಟಾರೆ, ಸಂಪೂರ್ಣವಾಗಿ ಹೊಸತನದಿಂದ ಡಿಜೈರ್‌ ಆಗಮಿಸಲಿದೆ.

ಡಿಜೈರ್‌ಗೆ ಸಂಬಂಧಪಟ್ಟಂತೆ ಈ ಹಿಂದೆ ಬಹಿರಂಗಗೊಂಡ ಸ್ಪೈಶಾಟ್‌ ವಿಡಿಯೋಗಳಲ್ಲಿ ಸಾಕಷ್ಟು ವಿವರ ದೊರಕಿದ್ದವು. ದೊಡ್ಡ ಗ್ರಿಲ್‌ಗಳನ್ನು ನೂತನ ಕಾರಿಗೆ ಅಳವಡಿಸಲಾಗಿತ್ತು. ಡಿಆರ್‌ಎಲ್‌ ಜತೆ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಇದ್ದವು. ಫಾಗ್‌ ಲ್ಯಾಂಪ್‌ಗಳೂ ಇದ್ದವು. ಹೊಸ ಅಲಾಯ್‌ ವೀಲ್‌ಗಳು, ಎಲಿಡಿ ಟೇಲ್‌ಲೈಟ್‌ಗಳು, ಹೊಸ ವಿನ್ಯಾಸದ ಶಾರ್ಕ್‌ ಫಿನ್‌ ಅಂಟೆನಾ ಇತ್ಯಾದಿಗಳು ಕಾಣಿಸಿದ್ದವು. ಡ್ಯೂಯೆಲ್‌ ಟೋನ್‌ ಥೀಮ್‌, ಪರಿಷ್ಕೃತ ಡ್ಯಾಶ್‌ಬೋರ್ಡ್‌ ಕಾಣಿಸಿದೆ.

ಕ್ಯಾಬಿನ್‌ನಲ್ಲೂ ಸಾಕಷ್ಟು ಅಪ್‌ಗ್ರೇಡ್‌ ಆಗಲಿದೆ. 360 ಡಿಗ್ರಿ ಕ್ಯಾಮೆರಾ, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಕ್ರೂಸ್‌ ಕಂಟ್ರೋಲ್‌, ಫ್ಲೋಟಿಂಗ್‌ ಟಚ್‌ಸ್ಕ್ರೀನ್‌ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌, ಆಪಲ್‌ ಕಾರ್‌ಪ್ಲೇ, ಆಂಡ್ರಾಯ್ಡ್‌ ಆಟೋ, ಫ್ಲಾಟ್‌ ಬಾಟಮ್‌ ಸ್ಟಿಯರಿಂಗ್‌ ವೀಲ್‌ ಇತ್ಯಾದಿ ಫೀಚರ್‌ಗಳು ಇರಲಿವೆ. ಇದರೊಂದಿಗೆ ಪಡ್ಲ್‌ ಲ್ಯಾಂಪ್‌, ಹೆಡ್‌ ಅಪ್‌ ಡಿಸ್‌ಪ್ಲೇ, ಡ್ಯೂಯೆಲ್‌ ಟೋನ್‌ ಬಿಯೇಜ್‌ ಮತ್ತು ಬ್ಲ್ಯಾಕ್‌ ಇಂಟೀಯರಿಯರ್‌ ಥೀಮ್‌ ಇರುವ ನಿರೀಕ್ಷೆಯಿದೆ.

ಹೊಸ ಡಿಜೈರ್‌ನ ಬಾಡಿಯಲ್ಲಿ ಸ್ಟ್ರಾಂಗ್‌ ಕ್ಯಾರೆಕ್ಟರ್‌ ಲೈನ್‌, ಶಾರ್ಪ್‌ ಎಲ್‌ಇಡಿ ಹೆಡ್‌ಲೈಟ್‌, ಹೊಸ ಅಲಾಯ್‌ ವೀಲ್‌ ವಿನ್ಯಾಸ, ಮರುವಿನ್ಯಾಸ ಮಾಡಿದ ಟೇಲ್‌ಲೈಟ್‌ ಕಾಣಿಸುತ್ತದೆ. ಇದರೊಂದಿಗೆ ಎಲೆಕ್ಟ್ರಿಕ್‌ ಸನ್‌ರೂಫ್‌ ಕೂಡ ಇದೆ.

ಮಾರುತಿ ಸುಜುಕಿ ಡಿಜೈರ್‌ ಕಾರು

ಹೊಸ ಮಾರುತಿ ಡಿಜೈರ್‌: ಪವರ್‌ಟ್ರೇನ್‌

ಹೊಸ ಡಿಜೈರ್‌ನಲ್ಲಿ ಹೊಸ ಪವರ್‌ಟ್ರೇನ್‌ ಇರುವ ನಿರೀಕ್ಷೆಯಿದೆ. ಈಗಾಗಲೇ ಹೊಸ ತಲೆಮಾರಿನ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ನಲ್ಲಿರುವ ಎಂಜಿನ್‌ ಅನ್ನೇ ಹೊಂದಿರಲಿದೆ. ಇದು 1.2 ಲೀಟರ್‌ನ, 3 ಸಿಲಿಂಡರ್‌ನ ಝಡ್‌ ಸರಣಿಯ ಪೆಟ್ರೋಲ್‌ ಎಂಜಿನ್‌ ಹೊಂದಿರಲಿದೆ. ಈ ಎಂಜಿನ್‌ 80 ಬಿಎಚ್‌ಪಿ ಮತ್ತು 112 ಎನ್‌ಎಂ ಪೀಕ್‌ ಟಾರ್ಕ್‌ ಹೊಂದಿರಲಿದೆ. ಮೊದಲ ನೋಟದಲ್ಲಿಯೇ ಹೊಸ ಡಿಜೈರ್‌ ಕಾರಿನಲ್ಲಿ ಸಾಕಷ್ಟು ಬದಲಾವಣೆ ಕಾಣುವ ಸೂಚನೆಯಿದೆ. ಈ ಕಾರಿನಲ್ಲಿ ಐದು ಸ್ಪೀಡ್‌ನ ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗಿಯರ್‌ ಬಾಕ್ಸ್‌ ಇರುವ ಸೂಚನೆಯಿದೆ.

ಸಿಎನ್‌ಜಿ ಆಯ್ಕೆಗಳು

ಮಾರುತಿ ಸುಜುಕಿ ಹೊಸ ಡಿಜೈಸರ್‌ ಪೆಟ್ರೋಲ್-ಸಿಎನ್‌ಜಿ ಆಯ್ಕೆಗಳಲ್ಲಿ ದೊರಕಲಿದೆ. ಇದರಿಂದ ಮಾರುತಿ ಡಿಜೈರ್‌ ಮಾರಾಟ ಹೆಚ್ಚಿರಲಿದೆ. ಈಗಾಗಲೇ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ನಲ್ಲಿ ಸಿಎನ್‌ಜಿ ಆಯ್ಕೆ ಪರಿಚಯಿಸಲಾಯಿತು. ಹೊಸ ಡಿಜೈರ್‌ನ ಹೈಯರ್‌ ಎಂಡ್‌ ಆವೃತ್ತಿಯಲ್ಲಿ ಸಿಎನ್‌ಜಿ ಆಯ್ಕೆ ಇರುವ ಸೂಚನೆಯಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ