SUVs with sunroof: ಸನ್‌ರೂಫ್‌ ಇರುವ 10 ಲಕ್ಷ ರೂನೊಳಗಿನ 5 ಎಸ್‌ಯುವಿಗಳು ಇಲ್ಲಿವೆ ನೋಡಿ, ಬಂಡಿ ಮೇಲಿನ ಬೆಳಕಿಂಡಿ ತೆರೆಯೋ ಖುಷಿ
ಕನ್ನಡ ಸುದ್ದಿ  /  ಜೀವನಶೈಲಿ  /  Suvs With Sunroof: ಸನ್‌ರೂಫ್‌ ಇರುವ 10 ಲಕ್ಷ ರೂನೊಳಗಿನ 5 ಎಸ್‌ಯುವಿಗಳು ಇಲ್ಲಿವೆ ನೋಡಿ, ಬಂಡಿ ಮೇಲಿನ ಬೆಳಕಿಂಡಿ ತೆರೆಯೋ ಖುಷಿ

SUVs with sunroof: ಸನ್‌ರೂಫ್‌ ಇರುವ 10 ಲಕ್ಷ ರೂನೊಳಗಿನ 5 ಎಸ್‌ಯುವಿಗಳು ಇಲ್ಲಿವೆ ನೋಡಿ, ಬಂಡಿ ಮೇಲಿನ ಬೆಳಕಿಂಡಿ ತೆರೆಯೋ ಖುಷಿ

SUVs with sunroof: ಸನ್‌ರೂಫ್‌ ಇರುವ ಕಾರುಗಳ ಖರೀದಿಗೆ ಈಗ ಹೆಚ್ಚಿನವರು ಗಮನ ನೀಡುತ್ತಿದ್ದಾರೆ. ಹ್ಯುಂಡೈ ಇತ್ತೀಚೆಗೆ ವೆನ್ಯುವಿನ ಸನ್‌ರೂಫ್‌ ಆವೃತ್ತಿಯನ್ನು ಪರಿಚಯಿಸಿತ್ತು. 10 ಲಕ್ಷ ರೂಪಾಯಿಯೊಳಗೆ ಸನ್‌ರೂಫ್‌ ಇರುವ ಕಾರು ಹುಡುಕುವವರಿಗೆ ಇಲ್ಲಿದೆ 5 ಕಾರುಗಳ ಮಾಹಿತಿ.

 ಸನ್‌ರೂಫ್‌ ಇರುವ 10 ಲಕ್ಷ ರೂನೊಳಗಿನ 5 ಎಸ್‌ಯುವಿಗಳು
ಸನ್‌ರೂಫ್‌ ಇರುವ 10 ಲಕ್ಷ ರೂನೊಳಗಿನ 5 ಎಸ್‌ಯುವಿಗಳು

SUVs under 10 lakh with sunroof: ಕಾರಿನ ಮೇಲ್ಬಾವಣಿಯಲ್ಲೊಂದು ಬೆಳಕಿಂಡಿ ಇದ್ದರೆ ಕಾರು ಮಾಲೀಕರಿಗೆ ಖುಷಿಯೋ ಖುಷಿ. ಮಕ್ಕಳಂತೂ ಆ ಕಿಟಕಿ ತೆರೆದು ಹೊರಕ್ಕೆ ಮುಖ ಹಾಕಿ ಸಂಭ್ರಮಿಸುತ್ತಾರೆ. ಕಾರು ಪ್ರಯಾಣದಲ್ಲಿ ಈ ರೀತಿ ಹೊರಕ್ಕೆ ತಲೆ ಹಾಕುವುದು ಸುರಕ್ಷಿತವಲ್ಲ ಎಂಬ ಅಭಿಪ್ರಾಯವಿದೆ. ಸನ್‌ರೂಫ್‌ ಇರುವ ಕಾರನ್ನು ಖರೀದಿಸಲು ಎಲ್ಲರೂ ಬಯಸುತ್ತಾರೆ. ಮೊದಲೆಲ್ಲ ಅದು ದುಬಾರಿ ಕಾರುಗಳ ಫೀಚರ್ಸ್‌. ಆದರೆ ಈಗ ಮಧ್ಯಮ ಶ್ರೇಣಿಯ ಕಾರುಗಳಲ್ಲೂ ಸನ್‌ರೂಫ್‌ಗಳು ಬರುತ್ತವೆ. ಹತ್ತು ಲಕ್ಷ ರೂಪಾಯಿಗಿಂತ ಕಡಿಮೆ ದರದ ಕಾರುಗಳಲ್ಲೂ ಸನ್‌ರೂಫ್‌ಗಳು ಇವೆ. ಅಂತಹ ಐದು ಕಾರುಗಳ ವಿವರ ಇಲ್ಲಿದೆ.

ಮಹೀಂದ್ರ ಎಕ್ಸ್‌ಯುವಿ 3ಎಕ್ಸ್‌ಒ

ಮಹೀಂದ್ರ ಕಂಪನಿಯು ಇತ್ತೀಚೆಗೆ ಪರಿಚಯಿಸದ XUV 3XOನಲ್ಲಿ ಪನೋರಮಿಕ್‌ ಸನ್‌ರೂಫ್‌ ಇದೆ. ಸಬ್‌ ಕಾಂಪ್ಯಾಕ್ಟ್‌ ಎಸ್‌ಯುವಿ ವಿಭಾಗದಲ್ಲಿ ಮೊದಲ ಬಾರಿಗೆ ಈ ಕಂಪನಿಯು ಎಲೆಕ್ಟ್ರಿಕ್‌ ಸನ್‌ರೂಫ್‌ ಪರಿಚಯಿಸಿತು. ಮಹೀಂದ್ರ XUV 3XO ಆರಂಭಿಕ ಆವೃತ್ತಿ ದರ 7.49 ರೂ. ಇದೆ. ಆದರೆ, ಇದರಲ್ಲಿ ಸನ್‌ರೂಫ್‌ ಇಲ್ಲ. MX2 Pro ಆವೃತ್ತಿ ಖರೀದಿಸಿದರೆ ಮಾತ್ರ ಸನ್‌ರೂಫ್‌ ಫೀಚರ್‌ ದೊರಕುತ್ತದೆ. ಅಂದಹಾಗೆ ಇದು ಎಕ್ಸ್‌ ಶೋರೂಂ ದರ. ಆನ್‌ರೋಡ್‌ ದರ ತುಸು ಹೆಚ್ಚಾಗುತ್ತದೆ.

ಹ್ಯುಂಡೈ ವೆನ್ಯು

Hyundai Venue ಎಸ್‌ ಪ್ಲಸ್‌ ಟ್ರಿಮ್‌ನಲ್ಲಿ ಎಲೆಕ್ಟ್ರಿಕ್‌ ಸನ್‌ರೂಫ್‌ ಇದೆ. ಕಳೆದ ತಿಂಗಳು ಕೊರಿಯದ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್‌ ಸನ್‌ರೂಫ್‌ ಇರುವ ಕಾರನ್ನು ಪರಿಚಯಿಸಿದೆ. ವೆನ್ಯು ಎಸ್‌ ಟ್ರಿಮ್‌ನಲ್ಲಿ ಎಲೆಕ್ಡ್ರಿಕ್‌ ಸನ್‌ ರೂಫ್‌ ಇದೆ. ಇದರ ಎಕ್ಸ್‌ ಶೋರೂಂ ದರ 10 ಲಕ್ಷ ರೂ. ಇದೆ.

ಟಾಟಾ ಪಂಚ್‌

ಟಾಟಾ ಮೋಟಾರ್ಸ್‌ನ ಸಣ್ಣ ಎಸ್‌ಯುವಿ ಪಂಚ್‌ನಲ್ಲೂ ಸನ್‌ರೂಫ್‌ ಇದೆ. ಭಾರತದ ಕಡಿಮೆ ದರದ ಸನ್‌ರೂಫ್‌ ಇರುವ ಎಸ್‌ಯುವಿ ಇದಾಗಿದೆ. ಟಾಟಾ ಪಂಚ್‌ ದೇಶದಲ್ಲಿ ಜನಪ್ರಿಯವಾಗಿದ್ದು, ಇದರಲ್ಲಿ ಕೆಲವು ಆಕರ್ಷಕ ಫೀಚರ್‌ಗಳು ಗ್ರಾಹಕರಿಗೆ ಇಷ್ಟವಾಗಿದೆ. ಟಾಟಾ ಪಂಚ್‌ ಕಾರಿನ ಆರಂಭಿಕ ಎಕ್ಸ್‌ ಶೋರೂಂ ದರ 6.12 ಲಕ್ಷ ರೂ. ಇದೆ. ಸನ್‌ರೂಫ್‌ ಇರುವ ಕಾರಿನ ದರ 8.34 ಲಕ್ಷ ರೂಪಾಯಿ ಇದೆ.

ಕಿಯಾ ಸೊನೆಟ್‌

ಈ ವರ್ಷದ ಆರಂಭದಲ್ಲಿ ಕಿಯಾ ಕಂಪನಿಯು ಸೊನೆಟ್‌ ಎಂಬ ಸಬ್‌ ಕಾಂಪ್ಯಾಕ್ಟ್‌ ಎಸ್‌ಯುವಿ ಪರಿಚಯಿತು. ಇದರಲ್ಲೂ ಸನ್‌ರೂಫ್‌ ಇದೆ. ಎಚ್‌ಟಿಇ (ಒ) ಮತ್ತು ಎಚ್‌ಟಿಕೆ(ಒ) ಎಂಬ ಎರಡು ಆಯ್ಕೆಗಳಲ್ಲಿ ಈ ಕಾರು ದೊರಕುತ್ತದೆ. ಆರಂಭಿಕ ದರ 8.19 ಲಕ್ಷ ರೂಪಾಯಿ ಇದೆ. ಕಿಯಾ ಸೊನೆಟ್‌ನ ದರ 15.75 ಲಕ್ಷ ರೂ.ವರೆಗಿದೆ. ಹತ್ತು ಲಕ್ಷ ರೂ.ಗಿಂತ ಕಡಿಮೆ ದರದ ಸನ್‌ರೂಫ್‌ ಇರುವ ಕಿಯಾ ಕಾರು ಬೇಕಿದ್ದರೆ ಎಂಟ್ರಿ ಲೆವೆಲ್‌ ಖರೀದಿಸಬೇಕು.

ಹ್ಯುಂಡೈ ಎಕ್ಸ್‌ಟೆರ್‌

ಹ್ಯುಂಡೈನ ಪುಟಾಣಿ ಎಸ್‌ಯುವಿ ಎಕ್ಸ್‌ಟೆರ್‌ನಲ್ಲೂ ಎಲೆಕ್ಟ್ರಿಕ್‌ ಸನ್‌ರೂಪ್‌ ಇದೆ. ಇದು ಕೂಡ ಸನ್‌ರೂಫ್‌ ಇರುವ ಕಡಿಮೆ ದರದ ಎಸ್‌ಯುವಿ. ಈ ಕಾರಿನ ಎಕ್ಸ್‌ ಶೋರೂಂ ಆರಂಭಿಕ ದರ 6.12 ಲಕ್ಷ ರೂಪಾಯಿ ಇದೆ. ಸನ್‌ರೂಫ್‌ ಇರುವ ಆವೃತ್ತಿಯ ಆರಂಭಿಕ ದರ 8.23 ಲಕ್ಷ ರೂಪಾಯಿ ಇದೆ.

Whats_app_banner