logo
ಕನ್ನಡ ಸುದ್ದಿ  /  ಜೀವನಶೈಲಿ  /  ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆ, ದರ 84,990 ರೂ., ಓಲಾ ರೋಡ್‌ಸ್ಟರ್‌ ಎಕ್ಸ್‌ಗೆ ಪ್ರಬಲ ಪ್ರತಿಸ್ಪರ್ಧಿ

ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆ, ದರ 84,990 ರೂ., ಓಲಾ ರೋಡ್‌ಸ್ಟರ್‌ ಎಕ್ಸ್‌ಗೆ ಪ್ರಬಲ ಪ್ರತಿಸ್ಪರ್ಧಿ

Praveen Chandra B HT Kannada

Sep 18, 2024 12:18 PM IST

google News

ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆಯಾಗಿದೆ. ಇದರ, ದರ 84,990 ರೂ., ಇದೆ. ಇದು ಓಲಾ ರೋಡ್‌ಸ್ಟರ್‌ ಎಕ್ಸ್‌ಗೆ ಪ್ರಬಲ ಪ್ರತಿಸ್ಪರ್ಧಿ ಎನ್ನಲಾಗಿದೆ

    • ರಿವೋಲ್ಟ್ ಕಂಪನಿಯು ಆರ್‌ವಿ1 ಎಂಬ ಎಲೆಕ್ಟ್ರಿಕ್‌ ಬೈಕನ್ನು ಭಾರತದ ರಸ್ತೆಗೆ ಪರಿಚಯಿಸಿದೆ. ಓಲಾ ರೋಡ್‌ಸ್ಟರ್‌ ಎಕ್ಸ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿರುವ ಈ ಬೈಕ್‌ನ ಆರಂಭಿಕ ದರ 84,990 ರೂಪಾಯಿ ಇದೆ. ಮಿಡ್‌ ಮೋಟಾರ್‌ ಮತ್ತು ಚೈನ್‌ ಡ್ರೈವ್‌ ಸಿಸ್ಟಮ್‌ ಹೊಂದಿರುವ ಈ ಬಕ್‌ ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ.
ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆಯಾಗಿದೆ. ಇದರ, ದರ 84,990 ರೂ., ಇದೆ. ಇದು ಓಲಾ ರೋಡ್‌ಸ್ಟರ್‌ ಎಕ್ಸ್‌ಗೆ ಪ್ರಬಲ ಪ್ರತಿಸ್ಪರ್ಧಿ ಎನ್ನಲಾಗಿದೆ
ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆಯಾಗಿದೆ. ಇದರ, ದರ 84,990 ರೂ., ಇದೆ. ಇದು ಓಲಾ ರೋಡ್‌ಸ್ಟರ್‌ ಎಕ್ಸ್‌ಗೆ ಪ್ರಬಲ ಪ್ರತಿಸ್ಪರ್ಧಿ ಎನ್ನಲಾಗಿದೆ

ಬೆಂಗಳೂರು: ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ರಿವೋಲ್ಟ್ ಮೋಟಾರ್ಸ್ ತನ್ನ ಎರಡನೇ ಬೈಕ್‌ ಆರ್‌ವಿ1 ಅನ್ನು ಬಿಡುಗಡೆ ಮಾಡಿದೆ. ಇದನ್ನು ಕಂಪನಿಯು ಭಾರತದ ಮೊದಲ ಎಲೆಕ್ಟ್ರಿಕ್ ಕಮ್ಯೂಟರ್ ಮೋಟಾರ್‌ಸೈಕಲ್ ಎಂದು ಹೇಳಿಕೊಂಡಿದೆ. ರಿವೋಲ್ಟ್ ಆರ್‌ವಿ1 ಅನ್ನು ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಅಂದ್ರೆ ಇದು RV1 ಮತ್ತು RV1+ ಎಂಬ ಎರಡು ವರ್ಷನ್‌ಗಳಲ್ಲಿ ಲಭ್ಯ. ಇವುಗಳ ಬೆಲೆ ಕ್ರಮವಾಗಿ 84,990 ರೂಪಾಯಿ ಮತ್ತು 99,990 ರೂಪಾಯಿ ಇದೆ. ರಿವೋಲ್ಟ್ ಆರ್‌ವಿ1 ಓಲಾ ರೋಡ್ಟರ್ ಎಕ್ಸ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಈ ಹಿಂದೆ ಓಲಾ ಎಲೆಕ್ಟ್ರಿಕ್ ರೋಡ್‌ಸ್ಟರ್ ಎಕ್ಸ್ ಅನ್ನು 74,999 ಆರಂಭಿಕ ದರದಲ್ಲಿ ಬಿಡುಗಡೆ ಮಾಡಿತ್ತು.

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮೋಟಾರ್‌ಸೈಕಲ್‌ಗಳು ಪ್ರಾಬಲ್ಯ ಹೊಂದಿದ್ದು, ಮಾರಾಟದ ಶೇಕಡಾ 70 ರಷ್ಟನ್ನು ಹೊಂದಿದೆ ಎಂದು ರಿವೋಲ್ಟ್ ಹೇಳಿದೆ. ಈ ವಿಶಾಲವಾದ ಮಾರುಕಟ್ಟೆಯಲ್ಲಿ, ಪ್ರಯಾಣಿಕ ಬೈಕ್‌ಗಳ ವಿಭಾಗವು ಅತಿದೊಡ್ಡ ಪಾಲನ್ನು ಹೊಂದಿದೆ. ಒಟ್ಟು 1.25 ಕೋಟಿ ದ್ವಿಚಕ್ರವಾಹನಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಮೋಟಾರ್‌ಸೈಕಲ್‌ಗಳು ಮಾರಾಟವಾಗುತ್ತವೆ.

"ಸುಸ್ಥಿರತೆ ನಮ್ಮ ಬದ್ಧತೆ. ಕಡಿಮೆ ಬಜೆಟ್‌ನ ಬೈಕ್‌ ವಿನ್ಯಾಸಗೊಳಿಸುವ ಸಂದರ್ಭದಲ್ಲಿ ಗುಣಮಟ್ಟ, ಫೀಚರ್‌ಗಳು, ಸುರಕ್ಷತೆಯ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಆರ್‌ವಿ1 ಇದಕ್ಕೆ ಪೂರಕವಾಗಿ ಹೊರಬಂದಿದೆ. ಆಧುನಿಕ ಮತ್ತು ನವೀನ ನೋಟ ಹೊಂದಿರುವ ಈ ಪ್ರಯಾಣಿಕ ಮೋಟಾರ್‌ಸೈಕಲ್‌ ಎಲೆಕ್ಟ್ರಿಕ್‌ ವಿಭಾಗದಲ್ಲಿ ಹೊಸತನದಿಂದ ಕೂಡಿದೆ" ಎಂದು ಎಂದು ರಟ್ಟನ್‌ಇಂಡಿಯಾ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಧ್ಯಕ್ಷೆ ಅಂಜಲಿ ರತ್ತನ್ ಹೇಳಿದ್ದಾರೆ.

ರಿವೋಲ್ಟ್‌ ಆರ್‌1: ಏನಿದೆ ಸ್ಪೆಷಲ್‌?

ಮಿಡ್-ಮೋಟರ್ ಮತ್ತು ಚೈನ್ ಡ್ರೈವ್ ಸಿಸ್ಟಮ್‌ನಿಂದ ಚಾಲಿತವಾಗಿರುವ ಆರ್‌ವಿ1 ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ. ಅಂದರೆ, 2.2 kWh ಬ್ಯಾಟರಿಯು 100 ಕಿಮೀ ವ್ಯಾಪ್ತಿಯ ಬೈಕ್‌ ಮತ್ತು 3.24 kWh ಬ್ಯಾಟರಿಯು 160 ಕಿಮೀ ವ್ಯಾಪ್ತಿಯ ಬ್ಯಾಟರಿ ಹೊಂದಿದೆ. ನೀರಿನ ಪ್ರತಿರೋಧಕ ವಿಷಯದಲ್ಲಿ ಇವೆರಡು ಬ್ಯಾಟರಿಗಳು IP67-ರೇಟೆಡ್ ಎಂದು ಕಂಪನಿ ಹೇಳಿದೆ. ಈ ಮೋಟಾರ್‌ಸೈಕಲ್‌ 250 ಕೆಜಿ ತೂಕ ಹೊರುವ ಸಾಮರ್ಥ್ಯ ಹೊಂದಿದೆ.

ಹೊಸ ಆರ್‌ವಿ1ನಲ್ಲಿ ಎಲ್ಇಡಿ ಹೆಡ್‌ಲೈಟ್‌ಗಳು, ಆರು ಇಂಚಿನ ಡಿಜಿಟಲ್ ಎಲ್‌ಸಿಡಿ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್, ಡ್ಯುಯಲ್ ಡಿಸ್ಕ್ ಬ್ರೇಕ್‌ಗಳು, ಮಲ್ಟಿಪಲ್ ಸ್ಪೀಡ್ ಮೋಡ್‌ಗಳು, ರಿವರ್ಸ್‌ ಮೋಡ್‌ ಇತ್ಯಾದಿಗಳಿವೆ. ಬೈಕ್ ವಿಶಾಲವಾದ ಟೈರ್‌ಗಳನ್ನು ಹೊಂದಿದ್ದು, ರಸ್ತೆಯಲ್ಲಿ ಸ್ಥಿರತೆ, ದೃಢತೆ ದೊರಕುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಹಿಂದಿನ ಮೋಟಾರ್‌ಸೈಕಲ್‌ಗೆ ಹೋಲಿಸಿದರೆ ಹೊಸ ಆರ್‌ವಿ1 ಸಾಕಷ್ಟು ಹೊಸತನ ಹೊಂದಿದೆ. ಈ ಬೈಕ್‌ನಲ್ಲಿ ವೇಗದ ಚಾರ್ಜರ್‌ ಇದೆ. 90 ನಿಮಿಷದಲ್ಲಿ ಬೈಕ್‌ ಪೂರ್ಣವಾಗಿ ಚಾರ್ಜ್‌ ಆಗುತ್ತದೆ. ರಿವರ್ಸ್‌ ಮೋಡ್‌, ಹೊಸ ಡಿಜಿಟಲ್‌ ಡಿಸ್‌ಪ್ಲೇ ಇತ್ಯಾದಿಗಳು ಇವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ