logo
ಕನ್ನಡ ಸುದ್ದಿ  /  ಜೀವನಶೈಲಿ  /  Revolt Electric Bike: ಸೆಪ್ಟೆಂಬರ್‌ 17ರಂದು ನಿತಿನ್‌ ಗಡ್ಕರಿ ಸಮ್ಮುಖದಲ್ಲಿ ರಿವೋಲ್ಟ್‌ನಿಂದ ಹೊಸ ಎಲೆಕ್ಟ್ರಿಕ್‌ ದ್ವಿಚಕ್ರವಾಹನ ಬಿಡುಗಡೆ

Revolt Electric bike: ಸೆಪ್ಟೆಂಬರ್‌ 17ರಂದು ನಿತಿನ್‌ ಗಡ್ಕರಿ ಸಮ್ಮುಖದಲ್ಲಿ ರಿವೋಲ್ಟ್‌ನಿಂದ ಹೊಸ ಎಲೆಕ್ಟ್ರಿಕ್‌ ದ್ವಿಚಕ್ರವಾಹನ ಬಿಡುಗಡೆ

Praveen Chandra B HT Kannada

Sep 13, 2024 05:53 PM IST

google News

ಸೆಪ್ಟೆಂಬರ್‌ 17ರಂದು ನಿತಿನ್‌ ಗಡ್ಕರಿ ಸಮ್ಮುಖದಲ್ಲಿ ರಿವೋಲ್ಟ್‌ನಿಂದ ಹೊಸ ಎಲೆಕ್ಟ್ರಿಕ್‌ ದ್ವಿಚಕ್ರವಾಹನ ಬಿಡುಗಡೆಯಾಗಲಿದೆ.

    • Revolt Electric bike: ಸೆಪ್ಟೆಂಬರ್‌ 17ರಂದು ರೆನೊ ಕಂಪನಿಯು ನೂತನ ಎಲೆಕ್ಟ್ರಿಕ್‌ ಮೋಟಾರ್‌ಸೈಕಲ್‌ ಅನ್ನು ದೇಶದ ರಸ್ತೆಗೆ ಪರಿಚಯಿಸಲಿದೆ. ಈ ಬಿಡುಗಡೆ ಕಾರ್ಯಕ್ರಮದಲ್ಲಿ ನಿತಿನ್‌ ಗಡ್ಕರಿ ಉಪಸ್ಥಿತರಿರುತ್ತಾರೆ. ಆದರೆ, ಕಂಪನಿಯು ಹೊಸ ಬೈಕ್‌ನ ಕುರಿತು ಹೆಚ್ಚಿನ ವಿವರ ನೀಡಿಲ್ಲ.
ಸೆಪ್ಟೆಂಬರ್‌ 17ರಂದು ನಿತಿನ್‌ ಗಡ್ಕರಿ ಸಮ್ಮುಖದಲ್ಲಿ ರಿವೋಲ್ಟ್‌ನಿಂದ ಹೊಸ ಎಲೆಕ್ಟ್ರಿಕ್‌ ದ್ವಿಚಕ್ರವಾಹನ ಬಿಡುಗಡೆಯಾಗಲಿದೆ.
ಸೆಪ್ಟೆಂಬರ್‌ 17ರಂದು ನಿತಿನ್‌ ಗಡ್ಕರಿ ಸಮ್ಮುಖದಲ್ಲಿ ರಿವೋಲ್ಟ್‌ನಿಂದ ಹೊಸ ಎಲೆಕ್ಟ್ರಿಕ್‌ ದ್ವಿಚಕ್ರವಾಹನ ಬಿಡುಗಡೆಯಾಗಲಿದೆ.

Revolt Electric bike: ದೇಶದ ಎಲೆಕ್ಟ್ರಿಕ್‌ ವಾಹನ ತಯಾರಕ ಕಂಪನಿಯಾದ ರಿವೋಲ್ಟ್‌ ಇದೀಗ ಹೊಸ ಎಲೆಕ್ಟ್ರಿಕ್‌ ಮೋಟಾರ್‌ಸೈಕಲ್‌ ಅನ್ನು ಸೆಪ್ಟೆಂಬರ್‌ 17ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಸದ್ಯ ಭಾರತದಲ್ಲಿ ರಿವೋಲ್ಟ್‌ ಕಂಪನಿಯು RV400 ಮತ್ತು RV400 BRZ ಎಂಬೆರಡು ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸ ಬೈಕ್‌ನ ಹೆಸರು ಮತ್ತು ಇನ್ನಿತರ ವಿವರಗಳನ್ನು ಕಂಪನಿ ಇನ್ನೂ ನೀಡಿಲ್ಲ.

ರಿವೋಲ್ಟ್‌ ಆರ್‌ವಿ400 ಬಿಆರ್‌ಝಡ್‌

ಕಂಪನಿಯು ದೇಶದಲ್ಲಿ ಪ್ರಮುಖವಾಗಿ ಎರಡು ಎಲೆಕ್ಟ್ರಿಕ್‌ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಇವುಗಳಲ್ಲಿ Revolt RV400 BRZ ದರ ಕಡಿಮೆ. ಇವೆರಡೂ ಮಾಡೆಲ್‌ಗಳಲ್ಲಿ ಒಂದೇ ರೀತಿಯ ವಿನ್ಯಾಸ ಮತ್ತು ಬಿಡಿಭಾಗಗಳು ಇವೆ. ಇವೆರಡೂ ಬೈಕ್‌ಗಳಲ್ಲಿ 3.24 ಬ್ಯಾಟರಿ ಪ್ಯಾಕ್‌ಗಳಿವೆ. ಇದು ಇಕೋ ಮೋಡ್‌ನಲ್ಲಿ 150 ಕಿ.ಮೀ. ದೂರ ಸಾಗುತ್ತದೆ. ಸಾಮಾನ್ಯ ಚಾಲನೆಯಲ್ಲಿ 100 ಕಿ.ಮೀ. ಮತ್ತು ಸ್ಪೋರ್ಟ್ಸ್‌ ಮೋಡ್‌ನಲ್ಲಿ 80 ಕಿ.ಮೀ. ಸಾಗುತ್ತದೆ. 0-100 ಕಿ.ಮೀ. ವೇಗವನ್ನು ಕೇವಲ 4.5 ಸೆಕೆಂಡಿನಲ್ಲಿ ಪಡೆಯುತ್ತದೆ. ರಿಜನರೇಟಿವ್‌ ಬ್ರೇಕಿಂಗ್‌, ಕಂಬೈನ್ಡ್‌ ಬ್ರೇಕಿಂಗ್‌, ಸ್ಟೈಡ್‌ ಸ್ಟಾಡ್‌ ಕಟ್‌ ಆಫ್‌ ಮೆಕಾನಿಸಂ, ಡಿಜಿಟಲ್‌ ಇನ್‌ಸ್ಟ್ರುಮೆಂಟ್‌ ಕನ್ಸೋಲ್‌ ಮುಂತಾದ ಫೀಚರ್‌ಗಳನ್ನು ಇದು ಹೊಂದಿದೆ.

ರಿವೋಲ್ಟ್‌ ಆರ್‌ವಿ 400

ಇದು ಮೊದಲ ನೋಟಕ್ಕೆ ಆರ್‌ವಿ400 ಬಿಆರ್‌ಝಡ್‌ನಂತೆಯೇ ಇದೆ. Revolt RV400ನ ವಿನ್ಯಾಸ, ಛಾಸಿ, ಹಾರ್ಡ್‌ವೇರ್‌ ಬಿಡಿಭಾಗಗಳು ಮತ್ತೊಂದು ಸೈಕಲ್‌ನಂತೆಯೇ ಇದೆ. ಆದರೆ, ಹೆಚ್ಚುವರಿ ಕಲರ್‌ ಸ್ಕೀಮ್‌ಗಳಲ್ಲಿ ಇದು ಲಭ್ಯ.

ಇವೆರಡೂ ಮಾಡೆಲ್‌ಗಳಲ್ಲಿಯೂ ಯುಎಸ್‌ಡಿ ಫ್ರಂಟ್‌ ಫೋರ್ಕ್‌ಗಳು ಮತ್ತು ಹಿಂಬದಿಯಲ್ಲಿ ಮೊನೊಶಾಕ್‌ ಸಸ್ಪೆನ್ಷನ್‌ ವ್ಯವಸ್ಥೆಗಳಿವೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್‌ ಬ್ರೇಕ್‌ಗಳು ಇವೆ. ಎಲ್ಲಾ ಎಲ್‌ಇಟಿ ದೀಪಗಳನ್ನು ಹೊಂದಿವೆ. ಇದರ ಗ್ರೌಂಡ್‌ ಕ್ಲಿಯರೆನ್ಸ್‌ 215 ಎಂಎಂ ಇದೆ. ಸೀಟಿನ ಎತ್ತರ 814 ಎಂಎಂ ಇದೆ. ಐದು ವರ್ಷಗಳ ಅಥವಾ 75 ಸಾವಿರ ಕಿ.ಮೀ. ವಾರೆಂಟಿ ದೊರಕುತ್ತದೆ. ಚಾರ್ಜರ್‌ಗೆ 2 ವರ್ಷಗಳ ವ್ಯಾರೆಂಟಿ ಇದೆ. ಇದು 150 ಕೆಜಿ. ತೂಕ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಸದ್ಯ ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್‌ ಸೈಕಲ್‌ಗಳು, ಎಲೆಕ್ಟ್ರಿಕ್‌ ಸ್ಕೂಟರ್‌ಗಳು, ಎಲೆಕ್ಟ್ರಿಕ್‌ ಕಾರುಗಳು ಬಿಡುಗಡೆಯಾಗುತ್ತಿವೆ. ಮುಂಬರುವ ವರ್ಷಗಳಲ್ಲಿ ದೇಶ ರಸ್ತೆಯು ವಿದ್ಯುತ್‌ ವಾಹನಮಯವಾಗಿರುವ ಎಲ್ಲಾ ಸೂಚನೆಗಳು ದೊರಕಿವೆ. ವಿವಿಧ ಕಂಪನಿಗಳು ಸ್ಪರ್ಧಾತ್ಮಕ ದರದಲ್ಲಿ ಇವಿಗಳನ್ನು ಪರಿಚಯಿಸುತ್ತಿವೆ. ಕೆಲವು ಇವಿಗಳು ಪೆಟ್ರೋಲ್‌ ವಾಹನಗಳಿಗಿಂತ ಪ್ರಯಾಣಕ್ಕೆ ಅಗ್ಗವಾಗಿವೆ. ಬಹುತೇಕರು ಈಗ ಪರಿಸರ ಸ್ನೇಹಿ ವಿದ್ಯುತ್‌ ವಾಹನ ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ. 2025ರಲ್ಲಿ ದೇಶಕ್ಕೆ ಇನ್ನಷ್ಟು ಹೆಚ್ಚು ಪವರ್‌ ಮತ್ತು ರೇಂಜ್‌ನ ಎಲೆಕ್ಟ್ರಿಕ್‌ ವಾಹನಗಳು ಆಗಮಿಸಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ