Bangalore Ola Electric scooter: ಓಲಾ ತಗೋಂಡ್ರೆ ನಿಮ್ಮ ಜೀವನ ಗೋಳು, ಓಲಾ ಸ್ಕೂಟರ್‌ ಕುರಿತು ಕರ್ನಾಟಕದ ಗ್ರಾಹಕರ ಸಹನೆ ಸ್ಪೋಟ-automobile news bengaluru ola customer frustrated with s1 writes placard saying please dont buy pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Bangalore Ola Electric Scooter: ಓಲಾ ತಗೋಂಡ್ರೆ ನಿಮ್ಮ ಜೀವನ ಗೋಳು, ಓಲಾ ಸ್ಕೂಟರ್‌ ಕುರಿತು ಕರ್ನಾಟಕದ ಗ್ರಾಹಕರ ಸಹನೆ ಸ್ಪೋಟ

Bangalore Ola Electric scooter: ಓಲಾ ತಗೋಂಡ್ರೆ ನಿಮ್ಮ ಜೀವನ ಗೋಳು, ಓಲಾ ಸ್ಕೂಟರ್‌ ಕುರಿತು ಕರ್ನಾಟಕದ ಗ್ರಾಹಕರ ಸಹನೆ ಸ್ಪೋಟ

Bangalore Ola Electric scooter: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಕುರಿತು ಕರ್ನಾಟಕದ ಗ್ರಾಹಕರಲ್ಲಿ ಹತಾಶೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಓಲಾ ಶೋರೂಂಗೆ ಬೆಂಕಿಹಚ್ಚಿದ್ದರು. ಇದೀಗ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ತನ್ನ ಓಲಾ ಗಾಡಿಯಲ್ಲಿ "ಓಲಾ ತಗೋಂಡ್ರೆ ನಿಮ್ಮ ಜೀವನ ಗೋಳು" ಎಂಬ ಬೋರ್ಡ್‌ ಅಂಟಿಸಿದ್ದಾರೆ.

Ola Electric scooter ತಗೋಂಡ್ರೆ ನಿಮ್ಮ ಜೀವನ ಗೋಳು, ಓಲಾ ಸ್ಕೂಟರ್‌ ಕುರಿತು ಕರ್ನಾಟಕದ ಗ್ರಾಹಕರ ಸಹನೆ ಸ್ಪೋಟ
Ola Electric scooter ತಗೋಂಡ್ರೆ ನಿಮ್ಮ ಜೀವನ ಗೋಳು, ಓಲಾ ಸ್ಕೂಟರ್‌ ಕುರಿತು ಕರ್ನಾಟಕದ ಗ್ರಾಹಕರ ಸಹನೆ ಸ್ಪೋಟ

Ola Electric scooterಗೆ ಯಾಕೋ ಕರ್ನಾಟಕ ಸರಿಬರುತ್ತಿಲ್ಲ. ಇತ್ತೀಚೆಗೆ ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಓಲಾ ಶೋರೂಂಗೆ ಬೆಂಕಿ ಹಚ್ಚಿದ್ದರು. ಇದೀಗ ಬೆಂಗಳೂರಿನ ಮಹಿಳೆಯೊಬ್ಬರು ಓಲಾ ಸ್ಕೂಟರ್‌ ಕುರಿತು ತನ್ನ ಅಸಮಧಾನ ಹೊರಹಾಕಿದ್ದಾರೆ. ತನ್ನ ಓಲಾ ಸ್ಕೂಟರ್‌ನಲ್ಲಿ ಬೋರ್ಡ್‌ವೊಂದನ್ನು ಹಾಕಿರುವ ಆ ಮಹಿಳೆ ಟ್ವಿಟ್ಟರ್‌ನಲ್ಲಿ ಆ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. ಒಟ್ಟಾರೆ, ಓಲಾ ಕಂಪನಿಯು ದೇಶದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರಾಟ ಹೆಚ್ಚಿಸಲು ಯತ್ನಿಸುವ ಸಮಯದಲ್ಲಿ ಸಾಕಷ್ಟು ಗ್ರಾಹಕರು ಕಂಪನಿಯ ಸೇವೆಯ ಕುರಿತು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಓಲಾ ಕಂಪನಿಯು ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಲು ಮುಂದಾಗುತ್ತಿರುವ ಸಮಯದಲ್ಲಿಯೇ ಗ್ರಾಹಕರ ಸಹನೆ ಸ್ಪೋಟಗೊಳ್ಳುತ್ತಿದೆ.

ಓಲಾ ತಗೋಂಡ್ರೆ ನಿಮ್ಮ ಜೀವನ ಗೋಳು

ನಿಶಾ ಗೌರಿ ಎಂಬವರು ಎಕ್ಸ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ತನ್ನ ಓಲಾ ಸ್ಕೂಟರ್‌ಗೆ ಒಂದು ಬೋರ್ಡ್‌ ಅಂಟಿಸಿದ್ದಾರೆ. ಅದರಲ್ಲಿ ಹೀಗೆ ಬರೆದಿದೆ. "ಪ್ರಿಯ ಕನ್ನಡಿಗರೇ, ಓಲಾ ಒಂದು ಡಬ್ಬಾ ಗಾಡಿ, ದಯವಿಟ್ಟು ತಗೋಬೇಡಿ. ಓಲಾ ತಗೋಂಡ್ರೆ ನಿಮ್ಮ ಜೀವನ ಗೋಳು, ಪ್ಲೀಸ್‌ ಡೋಂಟ್‌ ಓಲಾ ಎಲೆಕ್ಟ್ರಿಕ್‌- ಹತಾಶೆಗೊಂಡ ಓಲಾ ಗ್ರಾಹಕಿ" ಎಂದು ಅವರು ಬಿಳಿಕಾಗದ ಮೇಲೆ ಬರೆದು ತನ್ನ ಸ್ಕೂಟರ್‌ ಮೇಲೆ ಅಂಟಿಸಿದ್ದಾರೆ.

ಗಂಡ ನೀಡಿದ ಉಡುಗೊರೆ

"ನಾನು ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ" ಎಂದು ಅವರು ತನ್ನ ಪೋಸ್ಟ್‌ಗೆ ಕ್ಯಾಪ್ಷನ್‌ ನೀಡಿದ್ದಾರೆ. ಈ ಹಿಂದಿನ ಇವರ ಎಕ್ಸ್‌ ಪೋಸ್ಟ್‌ ಆಧಾರದಲ್ಲಿ ಹೇಳುವುದಾದರೆ ಈ ಓಲಾ ಸ್ಕೂಟರ್‌ ಅನ್ನು ಅವರ ಗಂಡ ಉಡುಗೊರೆ ನೀಡಿದ್ದರು. ಗಂಡ ಉಡುಗೊರೆ ನೀಡಿದ ಖುಷಿಯ ಸಂದರ್ಭದ ಫೋಟೋವನ್ನು ಹಂಚಿಕೊಂಡಿದ್ದರು. "ಈ ಮಾಲ್‌ಫಂಕ್ಷನಿಂಗಗ ಡಬ್ಬಾ ಗಾಡಿಯ ಸಮಸ್ಯೆ ಬಗೆಹರಿಸಲು ನನ್ನ ಗಂಡ ಸಾಕಷ್ಟು ಕಷ್ಟಪಟ್ಟಿದ್ದಾರೆ. ಏಕೆಂದರೆ, ಅವರು ನನಗೆ ಈ ಸ್ಕೂಟರ್‌ ಗಿಫ್ಟ್‌ ನೀಡಿದ್ದರು. ಎರಡು ಗಂಟೆ ಸ್ಟಾರ್ಟ್‌ ಆಗಲಿಲ್ಲ. ಓಲಾದ ಇಂದಿರಾನಗರ ಶೋರೂಂಗೆ ತಲುಪುವುದೇ ದೊಡ್ಡ ಸಾಹಸವಾಯಿತು. ಶೋರೂಂನವರು ಇದರಲ್ಲಿ ಸಾಫ್ಟ್‌ವೇರ್‌ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆ" ಎಂದು ನಿಶಾ ಗೌರಿ ಪೋಸ್ಟ್‌ ಮಾಡಿದ್ದಾರೆ.

ದೂರು ದಾಖಲಿಸಿದ ಗ್ರಾಹಕಿ

ನಿಶಾ ಸಿ ಶೇಖರ್‌ ಹೆಸರಿನ ಓಲಾ ಗ್ರಾಹಕರೊಬ್ಬರು ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ವಿರುದ್ಧ ಸೆಕ್ಷನ್‌ 35ನಡಿ ಗ್ರಾಹಕ ರಕ್ಷಣೆ ಕಾಯಿದೆ 2019ರಡಿಯಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವಿಭಾಗದಲ್ಲಿ ಇವರು ದೂರು ದಾಖಲಿಸಿದ್ದಾರೆ. ಕಂಪನಿಗೆ ಈ ಕುರಿತು ನೋಟಿಸ್‌ ನೀಡಲಾಗಿದೆ ಎಂದು ನಿಶಾ ಹೇಳಿದ್ದಾರೆ.

ನಿಶಾ ಗೌರಿ ಅವರ ಪೋಸ್ಟ್‌ಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಶೋರೂಂನ ಟೆಕ್ನಿಷಿಯನ್‌ಗಳಿಗೂ ಸ್ಕೂಟರ್‌ ಸರಿ ರಿಪೇರಿ ಮಾಡಲಾಗುತ್ತಿಲ್ಲ. ಟೆಕ್ನಿಷಿಯನ್‌ ಸುಮಾರು ಒಂದೂವರೆ ಗಂಟೆ ತೆಗೆದುಕೊಂಡು ರಿಪೇರಿ ಮಾಡಿದ್ರೂ ಮತ್ತೆ ಸಮಸ್ಯೆ ಮುಂದುವರೆದಿದೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

mysore-dasara_Entry_Point