logo
ಕನ್ನಡ ಸುದ್ದಿ  /  ಜೀವನಶೈಲಿ  /  Lowest Seat Scooters: ಕುಳ್ಳ ಕುಳ್ಳಿ ಎಂದು ಚಿಂತಿಸಬೇಡಿ, ಸಾಧಾರಣ ಎತ್ತರ ಇರೋರಿಗೆ ಕಡಿಮೆ ಎತ್ತರದ 7 ಬೆಸ್ಟ್‌ ಸ್ಕೂಟರ್‌ಗಳಿವು

Lowest Seat Scooters: ಕುಳ್ಳ ಕುಳ್ಳಿ ಎಂದು ಚಿಂತಿಸಬೇಡಿ, ಸಾಧಾರಣ ಎತ್ತರ ಇರೋರಿಗೆ ಕಡಿಮೆ ಎತ್ತರದ 7 ಬೆಸ್ಟ್‌ ಸ್ಕೂಟರ್‌ಗಳಿವು

Praveen Chandra B HT Kannada

Oct 02, 2024 04:35 PM IST

google News

Lowest Seat Scooters: ಸಾಧಾರಣ ಎತ್ತರ ಇರೋರಿಗೆ ಕಡಿಮೆ ಎತ್ತರದ 7 ಸ್ಕೂಟರ್‌ಗಳ ವಿವರ ಇಲ್ಲಿದೆ

    • Lowest Height Seat Scooters: ಕಡಿಮೆ ಎತ್ತರವಿರುವವರು ನೆಲಕ್ಕೆ ಕಾಲು ತಾಗುವಂತೆ ಇರುವ ಕಡಿಮೆ ಎತ್ತರದ ಸೀಟುಗಳಿರುವ ಸ್ಕೂಟರ್‌ಗಳನ್ನು ಖರೀದಿಸಲು ಬಯಸುತ್ತಾರೆ. ಭಾರತದಲ್ಲಿ ಕೆಲವು ಸ್ಕೂಟರ್‌ಗಳನ್ನು ಹೊರತುಪಡಿಸಿ ಹೆಚ್ಚಿನ ಸ್ಕೂಟರ್‌ಗಳು ಕಡಿಮೆ ಎತ್ತರದ ಸೀಟುಗಳನ್ನು ಹೊಂದಿವೆ.
Lowest Seat Scooters: ಸಾಧಾರಣ ಎತ್ತರ ಇರೋರಿಗೆ ಕಡಿಮೆ ಎತ್ತರದ 7 ಸ್ಕೂಟರ್‌ಗಳ ವಿವರ ಇಲ್ಲಿದೆ
Lowest Seat Scooters: ಸಾಧಾರಣ ಎತ್ತರ ಇರೋರಿಗೆ ಕಡಿಮೆ ಎತ್ತರದ 7 ಸ್ಕೂಟರ್‌ಗಳ ವಿವರ ಇಲ್ಲಿದೆ

Lowest Height Seat Scooters: ಸ್ಕೂಟರ್‌ ಖರೀದಿಸುವಾಗ ನಮ್ಮ ಬಜೆಟ್‌, ಸ್ಕೂಟರ್‌ ಫೀಚರ್‌ಗಳ ಜತೆ ಸ್ಕೂಟರ್‌ಗಳ ಎತ್ತರವನ್ನು ಪರಿಗಣಿಸುವ ಅಗತ್ಯವಿರುತ್ತದೆ. ತುಂಬಾ ಎತ್ತರ ಇರುವವರಿಗೆ ಸಣ್ಣ ಸ್ಕೂಟರ್‌ಗಳು ಕಂಫರ್ಟ್‌ ಎಂದೆನಿಸದು. ಇದೇ ರೀತಿ ಕಡಿಮೆ ಎತ್ತರ ಇರುವವರಿಗೆ ದೊಡ್ಡ ಸ್ಕೂಟರ್‌ಗಳು ಪ್ರಯಾಣಕ್ಕೆ ಸೂಕ್ತವೆನಿಸದು. ಅತ್ಯುತ್ತಮ ಸ್ಕೂಟರ್‌ ಚಾಲನೆ ಅನುಭವ ಇರುವವರಿಗೆ, ರೈಡಿಂಗ್‌ ಕ್ರೇಜ್‌ ಇರುವವರಿಗೆ ಸ್ಕೂಟರ್‌ನ ಎತ್ತರ ಪ್ರಮುಖ ವಿಷಯ ಎಣಿಸದು. ಹೀಗಿದ್ದರೂ ಸ್ಕೂಟರ್‌ ನಿಲ್ಲಿಸುವ ಸಂದರ್ಭದಲ್ಲಿ ಸೀಟ್‌ನಲ್ಲಿ ಕುಳಿತುಕೊಂಡೇ ಕಾರು ನೆಲಕ್ಕೆ ತಾಗಿಸುವಂತಿದ್ದರೆ ಉತ್ತಮ. ಟ್ರಾಫಿಕ್‌ ರಸ್ತೆಗಳಲ್ಲಿ ಸ್ಕೂಟರ್‌ ನಿಲ್ಲಿಸುವ ಸಮಯದಲ್ಲಿ ಸ್ಕೂಟರ್‌ನ ಸೀಟ್‌ನಿಂದ ಇಳಿದು ನಿಂತುಕೊಳ್ಳುವ ಕಷ್ಟವನ್ನು ಇದು ತಪ್ಪಿಸುತ್ತದೆ. ಕಡಿಮೆ ಎತ್ತರದ ಸೀಟುಗಳಿರುವ ಹಲವು ಸ್ಕೂಟರ್‌ಗಳು ಈಗ ಮಾರುಕಟ್ಟೆಯಲ್ಲಿವೆ. ಬಹುತೇಕ ಕಂಪನಿಗಳು 5 ಅಡಿ ಆಸುಪಾಸಿನ ಯುವಕ ಯುವತಿಯರನ್ನು ಗಮನದಲ್ಲಿಟ್ಟುಕೊಂಡು ಸ್ಕೂಟರ್‌ಗಳನ್ನು ಬಿಡುಗಡೆ ಮಾಡುತ್ತವೆ. ಎತ್ತರ, ಕುಳ್ಳಗೆ ಎಂದು ಚಿಂತೆ ಮಾಡದೆ ಕಂಫರ್ಟ್‌ ಎಂದೆನಿಸುವ ಸ್ಕೂಟರ್‌ ಖರೀದಿಸಿದರೆ ಪ್ರತಿನಿತ್ಯದ ಪ್ರಯಾಣ ಸುಖಕರವಾಗಿರುತ್ತದೆ.

ಟಿವಿಎಸ್‌ ಸ್ಕೂಟಿ ಝೆಸ್ಟ್‌

 ನೋಡಲು ತುಂಬಾ ಮಾಡರ್ನ್‌ ಅನಿಸಿದು. 2014ರಲ್ಲಿ ಬಿಡುಗಡೆಯಾದ ಬಳಿಕ ಈ ಸ್ಕೂಟರ್‌ನಲ್ಲಿ ಏನೂ ಬದಲಾವಣೆಯಾಗಿಲ್ಲ. ಆದರೆ, ಈಗಲೂ ಕುಳ್ಳಗೆ ಇರುವವರು ಝೆಸ್ಟ್‌ ಇಷ್ಟಪಡುತ್ತಾರೆ. 110 ಸಿಸಿಯ ಈ ಸ್ಕೂಟರ್‌ 760 ಮಿ.ಮೀ. ಸೀಟು ಎತ್ತರ ಹೊಂದಿದೆ.

ಬಜಾಜ್‌ ಚೇತಕ್‌

 ಇದು ಕೂಡ 760 ಮಿ.ಮೀ. ಸೀಟ್‌ ಹೈಟ್‌ ಹೊಂದಿದೆ. ಇದು ಎಲೆಕ್ಟ್ರಿಕ್‌ ಸ್ಕೂಟರ್‌. ಇದರ ಬೆಂಗಳೂರು ಎಕ್ಸ್‌ ಶೋರೂಂ ದರ 1.15 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.

ಟಿವಿಎಸ್‌ ಜುಪಿಟರ್‌

ಇದು 765 ಮಿ.ಮೀ. ಎತ್ತರ ಇದೆ. ಇದು ಆಕ್ಟಿವಾದ ಕಾಂಪಿಟೀಟರ್‌. ಒಮ್ಮೆ ನಿಮ್ಮ ಹತ್ತಿರದ ಶೋರೂಂಗೆ ಭೇಟಿ ನೀಡಿ ಸೀಟಿನಲ್ಲಿ ಕುಳಿತು ನೋಡಿ. ಹೆವಿ ಅನಿಸಿದರೆ ಇನ್ನೂ ಚಿಕ್ಕ ಮತ್ತು ಹಗುರ ಸ್ಕೂಟರ್‌ ಪರಿಗಣಿಸಿ. ಇದು ಅತ್ಯುತ್ತಮ ಫೀಚರ್‌, ರೈಡಿಂಗ್‌ ಗುಣಮಟ್ಟವಿರುವ ಸ್ಕೂಟರ್‌.

ಹೋಂಡಾ ಡಿಯೋ 110

765 ಮಿ.ಮೀ. ಸೀಟು ಎತ್ತರವಿರುವ ಹೋಂಡಾ ಡಿಯೋ ದೇಶದ ತರುಣ ತರುಣಿಯರಿಗೆ ಅಚ್ಚುಮೆಚ್ಚು. ಇದರ ಬ್ಯೂಟಿಫುಲ್‌ ಡಿಸೈನ್‌ ಸಾಕಷ್ಟು ಜನರನ್ನು ಸೆಳೆದಿದೆ.

ಟಿವಿಎಸ್‌ ಸ್ಕೂಟಿ ಪೆಪ್‌ ಪ್ಲಸ್‌

 ಹೊಸದಾಗಿ ಸ್ಕೂಟರ್‌ ಕಲಿತು ಒಂದಿಷ್ಟು ಚಾಲನೆ ಭಯ ಇರುವವರು ಸ್ಕೂಟಿ ಪೆಪ್‌ ಮೂಲಕ ಸ್ಕೂಟಿ ಸವಾರಿ ಆರಂಭಿಸಬಹುದು. ಇದು ಹಗುರ, ಚಿಕ್ಕ ಸ್ಕೂಟರ್‌. ಇದರ ಸೀಟ್‌ ಹೈಟ್‌ ಕೂಡ 760 ಮಿ.ಮೀ. ಇದೆ. ಐದು ಅಡಿ ಆಸುಪಾಸಿನವರಿಗೆ ಇದು ಬೆಸ್ಟ್‌ ಸ್ಕೂಟರ್‌.

ಹೀರೋ ಪ್ಲೆಷರ್‌ ಪ್ಲಸ್‌

 765 ಮಿ.ಮೀ. ಸೀಟು ಎತ್ತರದ ಈ ಸ್ಕೂಟರ್‌ನೊಮ್ಮೆ ಟೆಸ್ಟ್‌ ರೈಡ್‌ ಮಾಡಿ ನೋಡಿ. ಇದು ಕೂಡ ನೋಡಲು ಅಂದವಾಗಿದೆ.

ಹೋಂಡಾ ಆಕ್ಟಿವಾ 6ಜಿ

ಮಾರುಕಟ್ಟೆಯಲ್ಲಿ ಬಹುತೇಕರು ಸಣ್ಣ ಸ್ಕೂಟರ್‌ ಬಯಸ್ತಾರೆ ಎಂದು ಹೋಂಡಾ ಕಂಪನಿಗೆ ಗೊತ್ತು. ಅದಕ್ಕೆ ಆಕ್ಟಿವಾದ 5ಜಿ, 6 ಜಿ ಸ್ಕೂಟರ್‌ಗಳನ್ನು ಕಂಪನಿ ಪರಿಚಯಿಸಿತ್ತು. ಹೋಂಡಾ ಆಕ್ಟಿವಾ 6ಜಿ 765 ಸೆಂ.ಮೀ. ಎತ್ತರವಿದೆ. ಆಕ್ಟಿವಾ ಪ್ರಿಯರಿಗೆ ಇದು ಸೂಕ್ತ ಆಯ್ಕೆಯಾಗಬಲ್ಲದು.

ಹೀಗೆ ಒಂದಿಷ್ಟು ಕಡಿಮೆ ಎತ್ತರದ ಸೀಟುಗಳನ್ನು ಹೊಂದಿರುವ ಸ್ಕೂಟರ್‌ಗಳನ್ನು ಉದಾಹರಣೆಯಾಗಿ ಇಲ್ಲಿ ನೀಡಲಾಗಿದೆ. ಯಾವುದೇ ಸ್ಕೂಟರ್‌ ಖರೀದಿಸುವ ಮೊದಲು ಶೋರೂಂಗೆ ಭೇಟಿ ನೀಡಿ. ಸ್ಕೂಟರ್‌ ಮೇಲೆ ಕುಳಿತು ಕಂಪರ್ಟ್‌ ಇದೆಯೇ ಪರಿಶೀಲಿಸಿ. ಟೆಸ್ಟ್‌ ರೈಡ್‌ ಮಾಡಿ. ಸೂಕ್ತವೆನಿಸಿದರೆ ಖರೀದಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ