Beauty Tips: ಕೇವಲ 60 ಸೆಕೆಂಡುಗಳಲ್ಲಿ ನಿಮ್ಮ ತ್ವಚೆಯ ಕಾಂತಿ ಅರಳಿ, ಅಂದ ಹೆಚ್ಚಲು ಇಲ್ಲಿದೆ ಸಿಂಪಲ್ ಟಿಪ್ಸ್
Jun 01, 2024 03:00 PM IST
ಕೇವಲ 60 ಸೆಕೆಂಡುಗಳಲ್ಲಿ ನಿಮ್ಮ ತ್ವಚೆಯ ಕಾಂತಿ ಅರಳಿ, ಅಂದ ಹೆಚ್ಚಲು ಇಲ್ಲಿದೆ ಸಿಂಪಲ್ ಟಿಪ್ಸ್
- ಹೊಳೆಯುವ ಅಂದದ ತ್ವಚೆ ತಮ್ಮದಾಗಬೇಕು ಎಂದು ಪ್ರತಿ ಮಹಿಳೆಯರು ಅಂದುಕೊಳ್ಳುವುದು ಸಹಜ. ಆದರೆ ಅದಕ್ಕಾಗಿ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು, ತ್ವಚೆಯ ಆರೈಕೆ ಮಾಡಲು ಯಾರಿಗೂ ಸಮಯವಿಲ್ಲ. ಹಾಗಂತ ಚಿಂತೆ ಬೇಡ. ದಿನದಲ್ಲಿ ಕೇವಲ 1 ನಿಮಿಷ ನೀವು ನಿಮ್ಮ ತ್ವಚೆಯ ಆರೈಕೆ ಮಾಡುವ ಮೂಲಕ ಸುಂದರ ವದನವನ್ನು ಹೊಂದಬಹುದು, ಹೇಗೆ ಅಂತ ನೋಡಿ.
ಈಗಿನ ವೇಗದ ಜಮಾನದಲ್ಲಿ ಕಾಂತಿಯುತ ತ್ವಚೆಯನ್ನು ಹೊಂದಲು ನಿತ್ಯ ತ್ವಚೆ ಆರೈಕೆ ದಿನಚರಿ ಪಾಲಿಸಲು ಯಾರ ಬಳಿಯೂ ಸಮಯವಿಲ್ಲ. ಹೀಗಾಗಿ ಕೇವಲ 60 ಸೆಕೆಂಡುಗಳಲ್ಲಿ ನಿಮ್ಮ ಚರ್ಮಕ್ಕೆ ನೀವು ಕಾಂತಿಯುತ ಸ್ಪರ್ಶ ನೀಡಬಹುದು ಎಂದರೆ ನಂಬುತ್ತೀರಾ? ನಿಮ್ಮ ದೈನಂದಿನ ಜೀವನದಲ್ಲಿ ಕೇವಲ 1 ನಿಮಿಷವನ್ನು ಮಾತ್ರ ತ್ವಚೆಯ ಆರೈಕೆಗಾಗಿ ಮೀಸಲಿಟ್ಟರೆ ಖಂಡಿತವಾಗಿಯೂ ನೀವು ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಸಾಧ್ಯವಿದೆ.
60 ಸೆಕೆಂಡ್‌ನಲ್ಲಿ ಮುಖ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?
1. ಮುಖವನ್ನು ಎರಡು ಬಾರಿ ಕ್ಲೆನ್ಸ್ ಮಾಡುವುದು: ಮುಖದಲ್ಲಿ ಇರುವ ಕೊಳಕು, ಜಿಡ್ಡಿನಂಶಗಳನ್ನು ತೊಡೆದು ಹಾಕಲು ನೀವು ಡಬಲ್ ಕ್ಲೆನ್ಸ್ ಮಾಡಬೇಕು. ಯಾವುದಾದರೂ ಸೌಮ್ಯವಾದ ಕ್ಲೆನ್ಸರ್‌ಗಳನ್ನು ಬಳಕೆ ಮಾಡಿ ಎರಡೆರಡು ಬಾರಿ ಮುಖವನ್ನು ನಿತ್ಯ ಸ್ವಚ್ಛಗೊಳಿಸಬೇಕು. ಕೇವಲ 60 ಸೆಕೆಂಡುಗಳು ಸೌಮ್ಯವಾದ ತ್ವಚೆಯನ್ನು ನೀವು ಪಡೆಯುತ್ತೀರಿ.
2.ಮಂಜುಗಡ್ಡೆ ಬಳಕೆ: ನಿಮ್ಮ ರೆಫ್ರಿಜರೇಟರ್‌ನಲ್ಲಿ ಇರುವ ಮಂಜುಗಡ್ಡೆಗಳನ್ನು ತೆಗೆದುಕೊಂಡು ಇದರಿಂದ ಮುಖವನ್ನು ನಿಧಾನವಾಗಿ ಉಜ್ಜಿಕೊಳ್ಳಿ. ಸುಮಾರು 15 ರಿಂದ 20 ಸೆಕೆಂಡುಗಳ ಕಾಲ ವೃತ್ತಾಕಾರದಲ್ಲಿ ಮುಖದ ಸುತ್ತಲೂ ನಿಧಾನವಾಗಿ ಮುಂಜಗಡ್ಡೆಯಿಂದ ಮಸಾಜ್ ಮಾಡಿಕೊಳ್ಳಿ. ಇದು ನಿಮ್ಮ ಮುಖದ ಚರ್ಮವನ್ನು ಬಿಗಿಗೊಳಿಸುವ ಮೂಲಕ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಇದರಿಂದ ನಿಮ್ಮ ತ್ವಚೆಯು ಚಿರಯವ್ವನವನ್ನು ಕಾಪಾಡಿಕೊಳ್ಳುತ್ತದೆ.
3. ಫೇಶಿಯಲ್ ಮಿಸ್ಟ್‌ಗಳ ಬಳಕೆ: ಮಾರುಕಟ್ಟೆಯಲ್ಲಿ ಲಭ್ಯವಿರುವ ಫೇಶಿಯಲ್ ಮಿಸ್ಟ್‌ಗಳನ್ನು ಆಗಾಗ ಮುಖಕ್ಕೆ ಸಿಂಪಡಿಸಿಕೊಳ್ಳುವ ಮೂಲಕ ನೀವು ನಿಮ್ಮ ತ್ವಚೆಯು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನೀವು ಹೈಲುರಾನಿಕ್ ಆಮ್ಲ ಅಥವಾ ರೋಸ್ ವಾಟರ್ ಪದಾರ್ಥಗಳನ್ನು ಹೊಂದಿರುವ ಮಿಸ್ಟ್‌ಗಳನ್ನು ಬಳಕೆ ಮಾಡಬಹುದಾಗಿದೆ. ಇವುಗಳು ತ್ವಚೆಯು ತನ್ನ ತೇವಾಂಶ ಕಾಯ್ದುಕೊಳ್ಳಲು ನೆರವಾಗುತ್ತದೆ.
4. ಶೀಟ್ ಮಾಸ್ಕ್‌ಗಳ ಬಳಕೆ: ಶೀಟ್ ಮಾಸ್ಕ್‌ಗಳು ಕೆಲವೇ ನಿಮಿಷಗಳಲ್ಲಿ ನಿಮ್ಮ ಚರ್ಮಕ್ಕೆ ಬೇಕಾದ ಪೋಷಕಾಂಶ ತಲುಪಿಸುವಲ್ಲಿ ನೆರವಾಗುತ್ತವೆ, ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಶೀಟ್ ಮಾಸ್ಕ್‌ಗಳನ್ನು ಮುಖಕ್ಕೆ ಹಾಕಿಕೊಂಡು 10 ನಿಮಿಷ ಹಾಗೆಯೇ ಬಿಡಿ. ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಕಾಂತಿ ಕಾಯ್ದುಕೊಳ್ಳಲು ಸಾಧ್ಯವಿದೆ.
5. ಫೇಶಿಯಲ್ ಆಯಿಲ್‌ಗಳ ಬಳಕೆ : ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಫೇಶಿಯಲ್ ಎಣ್ಣೆಯನ್ನು ಖರೀದಿ ಮಾಡಿ ಇದರಿಂದ ನಿಮ್ಮ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಮುಖಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ರಕ್ತದ ಪರಿಚಲನೆ ಸುಧಾರಿಸುತ್ತದೆ. ಹಾಗೂ ಇದು ಉತ್ತಮ ತ್ವಚೆಯನ್ನು ನೀಡುತ್ತದೆ. ಕೇವಲ 60 ಸೆಕೆಂಡುಗಳ ಮಸಾಜ್ನ ಮೂಲಕ ನೀವು ಹೊಳೆಯುವ ತ್ವಚೆಯನ್ನು ಹೊಂದಬಹುದಾಗಿದೆ.
6. ಸನ್‌ಸ್ಕ್ರೀನ್‌ಗಳ ಬಳಕೆ: ಎಷ್ಟೇ ಬಿಡುವಿಲ್ಲದ ಕೆಲಸವಿದ್ದರೂ ಸಹ ಮನೆಯಿಂದ ಹೊರಗೆ ಕಾಲಿಡುವ ಮುನ್ನ ಸನ್‌ಸ್ಕ್ರೀನ್ ಬಳಕೆ ಮಾಡುವುದನ್ನು ನೀವು ಮರೆಯುಂತಿಲ್ಲ. SPF 30 ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಸನ್‌ಸ್ಕ್ರೀನ್‌ಗಳನ್ನು ನಿಮ್ಮ ಕೈಯ ಮೂರು ಬೆರಳಿನ ಉದ್ದಕ್ಕೂ ತೆಗೆದುಕೊಂಡು ಬಳಿಕ ಅದನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಇದರ ಮೇಲೆ ಮಾಯಿಶ್ಚರೈಸರ್ ಹಾಕಿಕೊಂಡು ನೀವು ಹೊರಗಡೆ ಸೂರ್ಯನ ಕಿರಣದಿಂದ ಮುಖ ಹಾಳಾಗುವ ಭಯವಿಲ್ಲದಂತೆ ತಿರುಗಾಡಬಹುದಾಗಿದೆ.
ಈ ನೋಡಿ 60 ಸೆಕೆಂಡ್‌ನಲ್ಲಿ ಮಾಡಬಹುದಾದ ಸರಳ ವಿಧಾನಗಳನ್ನು ಪಾಲಿಸುವ ಮೂಲಕ ನೀವು ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ನೀವು ಟ್ರೈ ಮಾಡಿ.
ವಿಭಾಗ