logo
ಕನ್ನಡ ಸುದ್ದಿ  /  ಜೀವನಶೈಲಿ  /  Beauty Tips: ಬ್ಯೂಟಿ ಪಾರ್ಲರ್‌ಗೆ ಹೋಗದೆ ಮನೆಯಲ್ಲಿಯೇ ನಿಮ್ಮ ಹುಬ್ಬುಗಳಿಗೆ ಶೇಪ್ ಕೊಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

Beauty Tips: ಬ್ಯೂಟಿ ಪಾರ್ಲರ್‌ಗೆ ಹೋಗದೆ ಮನೆಯಲ್ಲಿಯೇ ನಿಮ್ಮ ಹುಬ್ಬುಗಳಿಗೆ ಶೇಪ್ ಕೊಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

HT Kannada Desk HT Kannada

Apr 19, 2024 05:18 PM IST

ನಿಮ್ಮ ಹುಬ್ಬುಗಳಿಗೆ ಮನೆಯಲ್ಲೇ ಶೇಪ್‌ ಕೊಡುವುದು ಹೇಗೆ

  • Beauty Tips: ಸುಂದರವಾಗಿ ಕಾಣಬೇಕೆಂದು ಎಲ್ಲಾ ಯುವತಿಯರಿಗೂ ಬಹಳ ಇಷ್ಟ. ಮುಖದ ಅಂದವನ್ನು ಹೆಚ್ಚಿಸುವ ಐಬ್ರೋ ಮಾಡಿಸಲು 15 ದಿನಗಳಿಗೆ ಒಮ್ಮೆಯಾದರೂ ಮಹಿಳೆಯರು ಬ್ಯೂಟಿ ಪಾರ್ಲರ್‌ ಹೋಗುತ್ತಾರೆ. ಆದರೆ ನೀವು ಪಾರ್ಲರ್‌ಗೆ ಹೋಗದೆ ಮನೆಯಲ್ಲೇ ನಿಮ್ಮ ಹುಬ್ಬುಗಳಿಗೆ ಶೇಪ್‌ ಕೊಡಬಹುದು. 

ನಿಮ್ಮ ಹುಬ್ಬುಗಳಿಗೆ ಮನೆಯಲ್ಲೇ ಶೇಪ್‌ ಕೊಡುವುದು ಹೇಗೆ
ನಿಮ್ಮ ಹುಬ್ಬುಗಳಿಗೆ ಮನೆಯಲ್ಲೇ ಶೇಪ್‌ ಕೊಡುವುದು ಹೇಗೆ (PC: Unsplash)

Beauty Tips: ಹೆಂಗಳೆಯರು ತಮ್ಮ ತ್ವಚೆ, ತಲೆಗೂದಲು ಆರೈಕೆಯಲ್ಲಿ ಯಾವಾಗಲೂ ಮುಂದು. ಅದರಲ್ಲೂ ಹುಬ್ಬುಗಳಿಗೆ ಸುಂದರವಾಗಿ ಶೇಪ್ ಕೊಡಲು ಬ್ಯೂಟಿ ಪಾರ್ಲರ್ ನತ್ತ ದೌಡಾಯಿಸುತ್ತಾರೆ. ಸುಂದರವಾದ ಹುಬ್ಬುಗಳು ಮುಖದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನೀವು ಬ್ಯೂಟಿ ಪಾರ್ಲರ್ ನತ್ತ ಹೋಗಿ ಬಂದ ಕೆಲವೇ ದಿನಗಳಲ್ಲಿ ಮತ್ತೆ ಹುಬ್ಬು ಕೂದಲುಗಳು ಚಿಗುರುತ್ತವೆ. ಅದನ್ನು ತೆಗೆಯಲು ಮತ್ತೆ ಬ್ಯೂಟಿ ಪಾರ್ಲರ್‌ಗೆ ಹೋಗಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಮಯವೂ ವ್ಯರ್ಥ, ಹಣವೂ ಪೋಲು.

ಟ್ರೆಂಡಿಂಗ್​ ಸುದ್ದಿ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

ನೀವು ಬ್ಯೂಟಿ ಪಾರ್ಲರ್‌ಗೇ ಹೋಗಿ ಹುಬ್ಬುಗಳಿಗೆ ಶೇಪ್ ಕೊಡಬೇಕೆಂದಿಲ್ಲ. ಮನೆಯಲ್ಲೇ ಕೆಲವು ಟಿಪ್ಸ್ ಪಾಲಿಸಿದ್ರೆ, ನೀವೇ ಸ್ವತಃ ಹುಬ್ಬುಗಳಿಗೆ ಶೇಪ್ ಕೊಡಬಹುದು. ಯಾವುದೇ ಟ್ರಿಮ್ಮರ್, ಶೇವಿಂಗ್ ಬ್ಲೇಡ್ ಬಳಸದೇ ಇದನ್ನು ಮಾಡಬಹುದು. ಕೆಲವರು ಶೇವಿಂಗ್ ಬ್ಲೇಡ್ ಬಳಸಿ ಹುಬ್ಬನ್ನೇ ಕತ್ತರಿಸಿಕೊಂಡು ಎಡವಟ್ಟು ಮಾಡಿಕೊಂಡಿರುವವರಿದ್ದಾರೆ. ನಾಜೂಕಾಗಿ ಮನೆಯಲ್ಲಿಯೇ ಸ್ವತಃ ನಿಮ್ಮ ಕೈಯಾರೆ ಹುಬ್ಬುಗಳಿಗೆ ಹೇಗೆ ಶೇಪ್ ಕೊಡಬಹುದು ಅನ್ನೋ ಟಿಪ್ಸ್ ಇಲ್ಲಿದೆ.

ಈ ಸಾಧನಗಳನ್ನು ಸಂಗ್ರಹಿಸಿ

ಮೊದಲನೆಯದಾಗಿ ಟ್ವೀಝರ್, ಹುಬ್ಬಿಗೆ ಬಳಸುವ ಸಣ್ಣ ಬ್ರಷ್ (ಸ್ಪೂಲಿ ಬ್ರಷ್), ಸಣ್ಣ ಕತ್ತರಿ, ಹುಬ್ಬು ಪೆನ್ಸಿಲ್ ಮತ್ತು ಭೂತಕನ್ನಡಿಯಂತಹ ಸಾಧನಗಳನ್ನು ಸಂಗ್ರಹಿಸಿ. ಹೆಣ್ಣುಮಕ್ಕಳು ತಮ್ಮ ಮುಖವನ್ನು ಆಗಾಗ್ಗೆ ಕನ್ನಡಿಯಲ್ಲಿ ನೋಡಿಕೊಳ್ಳುವುದು ಸಾಮಾನ್ಯ. ನಿಮ್ಮ ಹುಬ್ಬನ್ನು ಸರಿಯಾಗಿ ಗಮನಿಸಬೇಕೆಂದರೆ ಭೂತಕನ್ನಡಿ ಅಗತ್ಯ. ಇದರಲ್ಲಿ ಸಣ್ಣ ಕೂದಲು ಕೂಡ ಸರಿಯಾಗಿ ಗೋಚರವಾಗುತ್ತದೆ. ಹೀಗಾಗಿ ಭೂತಕನ್ನಡಿಯನ್ನು ಸಂಗ್ರಹಿಸಿಬೇಕು. ಅಲ್ಲದೆ, ಬೆಳಕಿನ ವ್ಯವಸ್ಥೆಯೂ ಚೆನ್ನಾಗಿರಬೇಕು.

ಐಬ್ರೋ ಪೆನ್ಸಿಲ್ ಅನ್ನು ಬಳಸಿ ಹುಬ್ಬಿಗೆ ಆಕಾರವನ್ನು ತರಬೇಕು. ನಂತರ ಬ್ರಷ್ ಸಹಾಯದಿಂದ ಸರಿಮಾಡಿಕೊಳ್ಳಬಹುದು. ಇದು ಹುಬ್ಬಿಗೆ ಒಳ್ಳೆಯ ಆಕಾರವನ್ನು ತರಲು ಸಹಾಯ ಮಾಡುತ್ತದೆ. ಬಳಿಕ ಟ್ವೀಝರ್ ಸಾಧನದ ಸಹಾಯದಿಂದ ಹುಬ್ಬನ್ನು ಟ್ರಿಮ್ ಮಾಡಿ. ಸ್ಪೂಲಿ ಬ್ರಷ್‌ ನೊಂದಿಗೆ ಹುಬ್ಬು ಕೂದಲನ್ನು ನಿಧಾನವಾಗಿ ಮೇಲಕ್ಕೆತ್ತಿ. ಹೆಚ್ಚುವರಿ ಕೂದಲನ್ನು ಟ್ವೀಝ್ ಮಾಡಿ. ಬಳಿಕ ಸಣ್ಣ ಕತ್ತರಿಯಿಂದ ಉದ್ದವಿರುವ ಹುಬ್ಬುಗೂದಲನ್ನು ನಿಧಾನವಾಗಿ ಕತ್ತರಿಸಿ. ಒಂದೊಂದೇ ಕೂದಲನ್ನು ನಿಧಾನವಾಗಿ ಕೀಳಬೇಕು. ಬಹಳ ಎಚ್ಚರಿಕೆಯಿಂದ ಭೂತಕನ್ನಡಿಯ ಸಹಾಯದಿಂದ ಈ ರೀತಿ ಮಾಡಿದರೆ ಹೆಚ್ಚುವರಿ ಕೂದಲು ಉಳಿಯುವುದಿಲ್ಲ.

ದುಂದು ವೆಚ್ಚ ತಪ್ಪಲಿದೆ

ಹುಬ್ಬಿನಲ್ಲಿರುವ ಹೆಚ್ಚುವರಿ ಕೂದಲನ್ನು ಕಿತ್ತ ನಂತರ ಟಿಶ್ಯೂ ಪೇಪರ್‌ನಿಂದ ಚೆನ್ನಾಗಿ ಒರೆಸಿಕೊಳ್ಳಿ. ಬಳಿಕ ಹುಬ್ಬಿಗೆ ಬಳಸುವ ಜೆಲ್ ಅನ್ನು ಚೆನ್ನಾಗಿ ಅಪ್ಲೈ ಮಾಡಿ. ಇದು ದಿನವಿಡೀ ನಿಮ್ಮ ಹುಬ್ಬನ್ನು ಹೊಳಪು ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ. ಸ್ವಯಂ ನೀವೇ ನಿಮ್ಮ ಹುಬ್ಬಿಗೆ ಒಳ್ಳೆಯ ಆಕಾರವನ್ನು ಕೊಡಬಹುದು. ಈ ಮೂಲಕ ಬ್ಯೂಟಿಪಾರ್ಲರ್‌ಗೆ ವ್ಯಯಿಸುವ ದುಂದು ವೆಚ್ಚ ತಪ್ಪುತ್ತದೆ.

ಒಂದು ಬಾರಿ ನಿಮ್ಮ ಹುಬ್ಬಿಗೆ ನೀವೇ ಸ್ವತಃ ಶೇಪ್ ಕೊಟ್ಟರೆ ಮತ್ತೆ ಎಂದೂ ನೀವು ಪಾರ್ಲರ್ ಮೆಟ್ಟಿಲು ತುಳಿಯುವುದಿಲ್ಲ. ನಿಮಗೆ ಬೇಕೆನಿಸಿದಾಗ, ನೀವು ಬಿಡುವಿದ್ದಾಗಲೆಲ್ಲಾ ಆರಾಮಾಗಿ ಮನೆಯಲ್ಲಿಯೇ ಕುಳಿತು ಟ್ರಿಮ್ ಮಾಡಿಕೊಳ್ಳಬಹುದು. ಅಲ್ಲದೆ, ಕೆಲವರಿಗೆ ಹುಬ್ಬುಗೂದಲು ತೆಳ್ಳಗಿದೆ ಎಂಬ ಬೇಸರ ಇರುತ್ತದೆ. ಅಂಥವರು ದಿನಂಪ್ರತಿ ಹರಳೆಣ್ಣೆ ಹಚ್ಚಬೇಕು. ಹಾಗೂ ಐಬ್ರೋ ಪೆನ್ಸಿಲ್ ಅನ್ನು ಬಳಸಬಹುದು. ಇದರಿಂದ ನಿಧಾನವಾಗಿ ಹುಬ್ಬಿನ ಕೂದಲು ಬೆಳೆಯಲು ಆರಂಭವಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು