logo
ಕನ್ನಡ ಸುದ್ದಿ  /  ಜೀವನಶೈಲಿ  /  ಪುರುಷರೇ, ಹ್ಯಾಂಡ್‌ಸಮ್ ಆಗಿ ಕಾಣೋಕೆ ಮನೆಯಲ್ಲೇ ಈ ಫೇಸ್‌ಪ್ಯಾಕ್ ತಯಾರಿಸಿ ಬಳಸಿ; ತ್ವಚೆಯ ಅಂದ ದುಪ್ಪಟ್ಟಾಗುತ್ತೆ

ಪುರುಷರೇ, ಹ್ಯಾಂಡ್‌ಸಮ್ ಆಗಿ ಕಾಣೋಕೆ ಮನೆಯಲ್ಲೇ ಈ ಫೇಸ್‌ಪ್ಯಾಕ್ ತಯಾರಿಸಿ ಬಳಸಿ; ತ್ವಚೆಯ ಅಂದ ದುಪ್ಪಟ್ಟಾಗುತ್ತೆ

Reshma HT Kannada

Oct 22, 2024 04:25 PM IST

google News

‍ಪುರುಷರ ತ್ವಚೆಯ ಅಂದ ಹೆಚ್ಚಿಸುವ ಫೇಸ್‌ಪ್ಯಾಕ್‌ಗಳು

    • ತ್ವಚೆಯ ಅಂದ, ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವ ಆಸೆ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಇರುತ್ತೆ. ನಿಮಗೂ ಸೌಂದರ್ಯ ಕಾಳಜಿ ಇದ್ದರೆ ಮನೆಯಲ್ಲೇ ಈ ಫೇಸ್‌ಪ್ಯಾಕ್ ತಯಾರಿಸಿ, ಬಳಸಿ. ಇದರಿಂದ ನಿಮ್ಮ ಮುಖ ಅಂದ ಡಬ್ಬಲ್ ಆಗುತ್ತೆ, ಚರ್ಮದ ಕಾಂತಿಯೂ ಹೆಚ್ಚಾಗುತ್ತೆ. ಏನಿದು ಫೇಸ್‌ಪ್ಯಾಕ್‌, ಇದನ್ನು ಮಾಡೋದು ಹೇಗೆ ನೋಡಿ.
‍ಪುರುಷರ ತ್ವಚೆಯ ಅಂದ ಹೆಚ್ಚಿಸುವ ಫೇಸ್‌ಪ್ಯಾಕ್‌ಗಳು
‍ಪುರುಷರ ತ್ವಚೆಯ ಅಂದ ಹೆಚ್ಚಿಸುವ ಫೇಸ್‌ಪ್ಯಾಕ್‌ಗಳು (PC: Canva)

ಹುಡುಗಿಯರಿಗೆ ಹೋಲಿಸಿದರೆ ಹುಡುಗರು ತ್ವಚೆಯ ಕಾಳಜಿ ಮಾಡುವುದು ಕಡಿಮೆ. ಚರ್ಮದಲ್ಲಿ ಯಾವುದಾದರೂ ಸಮಸ್ಯೆ ಕಾಣಿಸಿಕೊಳ್ಳುವವರೆಗೂ ಅವರು ಕೇರ್ ಮಾಡುವುದಿಲ್ಲ. ಆದರೆ ಕೆಲವರು ಹುಡುಗರು ಮಾತ್ರ ಹುಡುಗಿಯಂತೆ ತಮ್ಮ ಚರ್ಮದ ಬಗ್ಗೆ ಬಹಳ ಕಾಳಜಿ ಹೊಂದಿರುತ್ತಾರೆ. ನೀವು ಕೂಡ ಆ ಸಾಲಿಗೆ ಸೇರಿದವರಾಗಿದ್ರೆ ನಿಮ್ಮ ತ್ವಚೆಯ ಅಂದ, ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡಬೇಕು ಎಂದೇನಿಲ್ಲ.

ಗಂಡುಮಕ್ಕಳ ತ್ವಚೆಯ ಅಂದ, ಆರೋಗ್ಯ ಕಾಪಾಡಿ, ಅವರು ಹ್ಯಾಂಡ್‌ಸಮ್ ಆಗಿ ಕಾಣುವಂತೆ ಮಾಡಲು ಮನೆಯಲ್ಲೇ ಈ ಫೇಸ್‌ಪ್ಯಾಕ್ ತಯಾರಿಸಿ ಬಳಸಬಹುದು. ಇದರಿಂದ ಚರ್ಮದ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ, ಹೊಳಪು ಹೆಚ್ಚುತ್ತದೆ. ಈ ಫೇಸ್‌ಪ್ಯಾಕ್ ತಯಾರಿಸುವುದು ಹೇಗೆ, ಇದನ್ನ ಬಳಸುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ.

ಮುಲ್ತಾನಿಮಿಟ್ಟಿ, ಜೇನುತುಪ್ಪ

ಪುರುಷರು ಒರಟು ಚರ್ಮವನ್ನು ಹೊಂದಿರುತ್ತಾರೆ. ಇವರ ಚರ್ಮಕ್ಕೆ ಮುಲ್ತಾನಿಮಿಟ್ಟಿ ಹೇಳಿ ಮಾಡಿಸಿದ್ದು. ಮುಲ್ತಾನಿಮಿಟ್ಟಿಗೆ ಎರಡು ಚಮಚ ನೀರು ಸೇರಿಸಿ ಮಿಶ್ರಣ ಮಾಡಿ, ಅದಕ್ಕೆ ಜೇನುತುಪ್ಪ ಕೂಡ ಸೇರಿಸಿ. ನೀರಿನ ಬದಲು ರೋಸ್‌ವಾಟರ್ ಕೂಡ ಬಳಸಬಹುದು. ಇದನ್ನು ತ್ವಚೆಗೆ ಹಚ್ಚಿ. ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ನೀಟಾಗಿ ಹಚ್ಚಿ, ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಈ ಫೇಸ್‌ಪ್ಯಾಕ್ ನಿರಂತರವಾಗಿ ಬಳಸುವುದರಿಂದ ತ್ವಚೆಯ ಅಂದ ವೃದ್ಧಿಯಾಗುತ್ತದೆ.

ಕಡಲೆಹಿಟ್ಟು, ರೋಸ್‌ವಾಟರ್‌ ಫೇಸ್‌ಪ್ಯಾಕ್

ಈ ಎರಡರ ಫೇಸ್‌ಪ್ಯಾಕ್ ನಿಮ್ಮ ತ್ವಚೆಯ ಕಾಂತಿ ಹೆಚ್ಚಿಸಿ, ಮೊಡವೆಯಂತಹ ಸಮಸ್ಯೆ ಇದ್ದರೆ ನಿವಾರಿಸುತ್ತದೆ. ಫೇಸ್ ಪ್ಯಾಕ್ ಮಾಡಲು, ಒಂದು ಚಮಚ ಹಿಟ್ಟಿನಲ್ಲಿ ರೋಸ್ ವಾಟರ್ ಬೆರೆಸಿ ಪೇಸ್ಟ್ ಮಾಡಿ. ನಂತರ ಅದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಟ್ಟ ನಂತರ ತಣ್ಣೀರಿನಿಂದ ಸ್ವಚ್ಛಗೊಳಿಸಿ. ಈ ಫೇಸ್‌ಪ್ಯಾಕ್ ನಿರಂತರ ಬಳಸುವುದರಿಂದ ತ್ವಚೆಯು ಕಾಂತಿಯುತವಾಗಿರುತ್ತದೆ.

ಬಾಳೆಹಣ್ಣಿನ ಫೇಸ್‌ಪ್ಯಾಕ್

ಬಾಳೆಹಣ್ಣಿನ ಫೇಸ್‌ಪ್ಯಾಕ್ ಕೂಡ ಮುಖದ ಅಂದ ಹೆಚ್ಚಲು ಸಹಕಾರಿ. ರೋಸ್‌ವಾಟರ್ ಮತ್ತು ಬಾಳೆಹಣ್ಣು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಮ್ಮ ಚರ್ಮದ ಮೇಲೆ ಕಲೆ, ಮೊಡವೆಗಳಿದ್ದರೆ ಈ ಫೇಸ್‌ಪ್ಯಾಕ್ ಹಚ್ಚುವುದರಿಂದ ತ್ವಚೆಯ ಸ್ವಚ್ಛವಾಗಿ ಕಾಂತಿಯುತವಾಗಿರುತ್ತದೆ.

ಈ ಫೇಸ್‌ಪ್ಯಾಕ್‌ಗಳನ್ನು ಒಮ್ಮೆ ಬಳಸಿದ್ರೆ ಖಂಡಿತ ಫಲಿತಾಂಶ ಸಿಗೊಲ್ಲ, ಇದನ್ನ ನೀವು ನಿರಂತರವಾಗಿ ಬಳಸಿದ್ರೆ ಕೆಲವೇ ದಿನಗಳಲ್ಲಿ ನಿಮ್ಮ ತ್ವಚೆಯಲ್ಲಿ ಬದಲಾವಣೆ ಕಾಣಲು ಶುರುವಾಗುತ್ತದೆ. ಆದರೆ ಚರ್ಮದ ಅರ್ಲಜಿ ಇದ್ದರೆ ಇದನ್ನು ಬಳಸುವ ಮುನ್ನ ತಜ್ಞರ ಸಲಹೆ ಪಡೆಯಿರಿ.  

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ