ಪುರುಷರೇ, ಹಬ್ಬದ ಸಂಭ್ರಮದ ನಡುವೆ ಮುಖ ಕಾಂತಿ ಕಳೆದುಕೊಳ್ಳದಿರಲಿ; ಚೆನ್ನಾಗಿ ಕಾಣಿಸೋಕೆ ಇಷ್ಟೂ ಮಾಡದಿದ್ರೆ ಹೇಗೆ-fashion tips grooming tips for men not only beard care follow these idea for your skin care on festive season jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪುರುಷರೇ, ಹಬ್ಬದ ಸಂಭ್ರಮದ ನಡುವೆ ಮುಖ ಕಾಂತಿ ಕಳೆದುಕೊಳ್ಳದಿರಲಿ; ಚೆನ್ನಾಗಿ ಕಾಣಿಸೋಕೆ ಇಷ್ಟೂ ಮಾಡದಿದ್ರೆ ಹೇಗೆ

ಪುರುಷರೇ, ಹಬ್ಬದ ಸಂಭ್ರಮದ ನಡುವೆ ಮುಖ ಕಾಂತಿ ಕಳೆದುಕೊಳ್ಳದಿರಲಿ; ಚೆನ್ನಾಗಿ ಕಾಣಿಸೋಕೆ ಇಷ್ಟೂ ಮಾಡದಿದ್ರೆ ಹೇಗೆ

ಹಬ್ಬ ಬಂದಾಗ ಎಲ್ಲರೂ ಚೆನ್ನಾಗಿ ಕಾಣಿಸಬೇಕೆಂದು ಬಯಸುತ್ತಾರೆ. ಆದರೆ ಪುರುಷರು ಮಾತ್ರ ಸಮಯವಿಲ್ಲ ಎಂದು ತ್ವಚೆಯ ಕಾಳಜಿ ಕಡೆಗಣಿಸುತ್ತಾರೆ. ಹಬ್ಬದ ಸಂಭ್ರಮದಲ್ಲಿ ಹೆಚ್ಚು ಆಕರ್ಷಿತರಾಗಿ ಕಾಣಲು ನೀವು ಪ್ರಯತ್ನ ಮಾಡಬೇಕು. ಈ ಸರಳ ಟಿಪ್ಸ್‌ ನಿಮಗೆ ನೆರವಾಗಬಹುದು.

ಪುರುಷರೇ, ಹಬ್ಬದ ಸಂಭ್ರಮದ ನಡುವೆ ಮುಖ ಕಾಂತಿ ಕಳೆದುಕೊಳ್ಳದರಲಿ
ಪುರುಷರೇ, ಹಬ್ಬದ ಸಂಭ್ರಮದ ನಡುವೆ ಮುಖ ಕಾಂತಿ ಕಳೆದುಕೊಳ್ಳದರಲಿ

ಸಾಲು ಸಾಲು ಹಬ್ಬದ ದಿನಗಳು ಸಮೀಪಿಸುತ್ತಿವೆ. ದಸರಾ, ನವರಾತ್ರಿ ಸಮಯದಲ್ಲಿ ವಾರಗಟ್ಟಲೆ ಹಬ್ಬದ ಸಂಭ್ರಮದಲ್ಲಿ ಮನೆಯಿಂದ ಹೊರಗೆ ಇರಬೇಕಾಗುತ್ತದೆ. ಹಾಗಂತಾ ಆರೋಗ್ಯ ಹಾಗೂ ಸೌಂದರ್ಯ ಕಾಳಜಿಯನ್ನು ಮರೆಯುವಂತಿಲ್ಲ. ಮಹಿಳೆಯರು ಬ್ಯೂಟಿ ಕೇರ್‌ ಅನ್ನು ದಿನಚರಿಯಾಗಿ ಪಾಲಿಸುತ್ತಾರೆ. ಆದರೆ, ಪುರುಷರು ಹಾಗಲ್ಲ. ಅದು ಇದು ಕೆಲಸ ಅಂತಾ ಸೌಂದರ್ಯ ಹಾಗೂ ವೈಯಕ್ತಿಕ ಕಾಳಜಿ ವಿಷಯದಲ್ಲಿ ನಿರ್ಲಕ್ಷ್ಯ ಹೆಚ್ಚು. ಆದರೆ, ಹಬ್ಬ ಬರುತ್ತಿದೆ ಎಂದಾಗ ಈ ನಿರ್ಲಕ್ಷ್ಯ ಸಲ್ಲದು. ನೂರಾರು ಜನರ ನಡುವೆ ಆಕರ್ಷಕವಾಗಿ ಕಾಣುವುದು ಮುಖ್ಯ. ಹೀಗಾಗಿ ಕೂದಲು, ಮುಖ ಸೇರಿದಂತೆ ಸೌಂದರ್ಯ ಕಾಳಜಿ ವಹಿಸುವುದು ಮರೆಯಬೇಡಿ.

ಬಹುತೇಕ ಪುರುಷರ ಕೂದಲು ಮತ್ತು ಗಡ್ಡದ ಆರೈಕೆ ಮಾಡುತ್ತಾರೆ. ಆದರೆ, ತ್ವಚೆಯ ಕಾಳಜಿ ಬಗ್ಗೆ ನಿರ್ಲಕ್ಷಿಸುತ್ತಾರೆ. ಗಡ್ಡದ ಗ್ರೂಮಿಂಗ್ ಉತ್ಪನ್ನಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುವ ಪುರುಷರು, ಅದರೊಂದಿಗೆ ಚರ್ಮದ ಆರೈಕೆಗೂ ಸಮಯ ಹೊಂದಿಸಿಕೊಳ್ಳಬೇಕು. ಪುರುಷರ ಗ್ರೂಮಿಂಗ್ ವಿಷಯದಲ್ಲಿ ಇವೆಲ್ಲವೂ ಬರುತ್ತವೆ. ಹಬ್ಬದ ಸಮಯದಲ್ಲಿ‌ ತ್ವಚೆ, ಕೂದಲು, ಗಡ್ಡ ಮಾತ್ರವಲ್ಲದೆ ಎಲ್ಲದರ ಬಗ್ಗಯೂ ಉತ್ತಮ ಕಾಳಜಿ ವಹಿಸಿಕೊಳ್ಳಿ.

ವ್ಯಕ್ತಿಯಿಂದ ವ್ಯಕ್ತಿಗೆ ಚರ್ಮದ ಪ್ರಕಾರ ವಿಭಿನ್ನವಾಗಿರುತ್ತದೆ. ಆಯಾ ತ್ವಚೆಯ ಅಗತ್ಯಕ್ಕನುಸಾರವಾಗಿ ಚರ್ಮದ ಆರೈಕೆಯ ಬಗ್ಗೆ ಗಮನ ಹರಿಸಬೇಕು. ಹಬ್ಬದ ಸಂದರ್ಭದಲ್ಲಿ ಮಾತ್ರ ಸ್ಮಾರ್ಟ್‌ ಆಗಿ ಕಾಣ್ಬೇಕು ಅಂದ್ರೆ ಆಗಲ್ಲ. ಅದಕ್ಕೆ ಪ್ರತಿನಿತ್ಯವೂ ದಿನಚರಿಯಲ್ಲಿ ದೇಹದ ಕಾಳಜಿಗೆ ಸಮಯ ಕೊಡುವುದು ಮುಖ್ಯ. ಈ ಕುರಿತು ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡರ್ಮಾ ಪ್ಯೂರಿಟೀಸ್‌ನ ಉಪಾಧ್ಯಕ್ಷೆ ಲಲಿತಾ ಆರ್ಯ ಅವರು, ಪುರುಷರಿಗೆ ಒಂದಷ್ಟು ಸಲಹೆ ನೀಡಿದ್ದಾರೆ. “ನಿಮ್ಮ ಮುಖವನ್ನು ಆರೋಗ್ಯಕರವಾಗಿ ಮತ್ತು ಶಕ್ತಿಯುತವಾಗಿಡಲು, ಪುರುಷರು ಕೂಡಾ ಚರ್ಮದ ಆರೈಕೆಯ ದಿನಚರಿಯನ್ನು ಅಳವಡಿಸಿಕೊಳ್ಳಬೇಕು. ಪುರುಷರು ಮತ್ತು ಮಹಿಳೆಯರ ಚರ್ಮದ ನಡುವೆ ಹಲವಾರು ವ್ಯತ್ಯಾಸಗಳಿವೆ. ಪುರುಷರ ಚರ್ಮವು ಮಹಿಳೆಯರಿಗಿಂತ ತುಸು ದಪ್ಪ ಅಥವಾ ಗಡಸಾಗಿರುತ್ತದೆ. ಆದರೆ, ತ್ವಚೆಯ ಆರೈಕೆ ವಿಧಾನ ಬಹುತೇಕ ಒಂದೇ ಆಗಿರುತ್ತವೆ”.

ಈ ಅಭ್ಯಾಸಗಳು ನಿರಂತರವಾಗಿರಲಿ

ಕಾಂತಿಯುತ ಹಾಗೂ ಆರೋಗ್ಯಕರ ಚರ್ಮಕ್ಕಾಗಿ ನಿರಂತರವಾಗಿ ಕೆಲವೊಂದು ಅಭ್ಯಾಸಗಳನ್ನು ಅನುಸರಿಸಬೇಕು. ಈ ಸರಳ ಸಲಹೆಗಳೊಂದಿಗೆ ತ್ವಚೆ ಹಾಗೂ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

• ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ. ಹೆಚ್ಚು ನೀರು ಕುಡಿಯಿರಿ.

• ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿ. ಮನೆಯಿಂದ ಬಿಸಿಲಿಗೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ.

• ಧೂಮಪಾನ‌, ಮದ್ಯಪಾನ ನಿಲ್ಲಿಸಿ.

• ಪ್ರತಿದಿನ ಮತ್ತು ವ್ಯಾಯಾಮದ ನಂತರ ಮುಖ ತೊಳೆಯಿರಿ. ಫೇಸ್‌ವಾಶ್‌ ಬಳಸಿ.

• ಪ್ರತಿದಿನ ತ್ವಚೆಯ ಆರೋಗ್ಯಕ್ಕಾಗಿ ಮಾಯಿಶ್ಚರೈಸರ್‌ ಬಳಸಿ.

ಮಾಲಿನ್ಯ ಮತ್ತು ಬಿಸಿಲಿನ ವಾತಾವರಣಕ್ಕೆ ನಿರಂತರವಾಗಿ ದೇಹವನ್ನು ಒಡ್ಡಿಕೊಳ್ಳುವುದರಿಂದ ಚರ್ಮ ಟ್ಯಾನ್ ಆಗಬಹುದು. ಇದರಿಂದ ಮೊಡವೆ ಅಥವಾ ತ್ವಚೆಯಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಹೀಗಾಗಿ ದೀರ್ಘಕಾಲದವರೆಗೆ ಬಿಸಿಲಿನಲ್ಲಿದ್ದರೆ ಸೂಕ್ತ ಫೇಸ್ ವಾಶ್ ಬಳಸಿ. ಡಿ ಟ್ಯಾನ್ ಕ್ರೀಮ್‌ಗಳು ಮತ್ತು ಸನ್ ಸ್ಕ್ರೀನ್‌ಗಳನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು.

ಕೂದಲ ಆರೋಗ್ಯ

ಕೂದಲಿನ ಬಗ್ಗೆ ಕಾಳಜಿ ಇರಲಿ. ಕೂದಲಿಗೆ ವಾರಕ್ಕೆ ಎರಡು ಬಾರಿಯಾದರೂ ಗುಣಮಟ್ಟದ ಎಣ್ಣೆ ಹಚ್ಚಿ ಕೆಲವು ಗಂಟೆಗಳ ಬಳಿಕ ಸ್ನಾನ ಮಾಡಿ. ಒಂದು ವೇಳೆ ಕುಟುಂಬದಲ್ಲಿ ಬೋಳುತಲೆಯಾಗುವ ಸಮಸ್ಯೆ ಇದ್ದರೆ ಹೆಚ್ಚು ಜಾಗರೂಕರಾಗಿರಿ. ಕೂದಲನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ. ತಲೆಹೊಟ್ಟಿನಿಂದ ಮುಕ್ತವಾಗಿರಿಸಿಕೊಳ್ಳಿ. ಕೂದಲು ಚೆನ್ನಾಗಿ ಕಾಣಿಸಿಕೊಳ್ಳುವ ಹೆಚ್ಚು ಹೇರ್‌ಜೆಲ್‌ ಅಥವಾ ವಿವಿಧ ಉತ್ಪನ್ನಗಳನ್ನು ಬಳಸುವ ಅಭ್ಯಾಸ ನಿಮಗಿದ್ದರೆ ಮನೆಗೆ ಬಂದ ನಂತರ ನಂತರ ಅವುಗಳನ್ನು ಚೆನ್ನಾಗಿ ತೊಳೆಯುವುದನ್ನು ಮರೆಯದಿರಿ.

ನಿಮಗೆ ಇಷ್ಟವಾಗುವ ಅದರಲ್ಲೂ, ದೇಹಕ್ಕೆ ಒಪ್ಪಿಗೆಯಾಗುವ ಹಾಗೂ ಸುಲಭವಾಗಿ ಕ್ಯಾರಿ ಮಾಡಬಹುದಾದ ಉಡುಗೆ ಧರಿಸಿ. ದೇಹ ಹಾಗೂ ನಿಮ್ಮ ಮನಸಿಗೆ ಹಿತ ಎನಿಸುವ ಪರ್ಫ್ಯೂಮ್‌ ಅಥವಾ ಬಾಡಿ ಸ್ಪ್ರೇ ಬಳಸಿ. ಇದು ನಿಮ್ಮನ್ನು ದಿನಪೂರ್ತಿ ತಾಜಾತನದಿಂದ ಇರುವಂತೆ ಸಿದ್ಧಪಡಿಸುತ್ತದೆ.

ಇನ್ನಷ್ಟು ಫ್ಯಾಶನ್‌ ಟಿಪ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

mysore-dasara_Entry_Point