ಭಾರತೀಯ ಪುರುಷರ ಡೊಳ್ಳುಹೊಟ್ಟೆಯ ಹಿಂದಿನ ರಹಸ್ಯ ಹೀಗಿದೆ, ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗಲು ಇವೇ ಕಾರಣ-health news whats the secret behind indian mens potbellies reason belly fat in men lifestyle and food rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತೀಯ ಪುರುಷರ ಡೊಳ್ಳುಹೊಟ್ಟೆಯ ಹಿಂದಿನ ರಹಸ್ಯ ಹೀಗಿದೆ, ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗಲು ಇವೇ ಕಾರಣ

ಭಾರತೀಯ ಪುರುಷರ ಡೊಳ್ಳುಹೊಟ್ಟೆಯ ಹಿಂದಿನ ರಹಸ್ಯ ಹೀಗಿದೆ, ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗಲು ಇವೇ ಕಾರಣ

ಭಾರತದಲ್ಲಿ ಪುರುಷರಿಗೆ ವಯಸ್ಸಾಗುತ್ತಿದಂತೆ ಹೊಟ್ಟೆ ಮುಂದೆ ಬರಲು ಆರಂಭವಾಗುತ್ತದೆ. ಬಹುತೇಕರು ಡೊಳ್ಳುಹೊಟ್ಟೆ ಹೊಂದಿರುತ್ತಾರೆ. ಅಜ್ಜ, ಅಪ್ಪನ ಕಾಲದಿಂದಲೂ ನಾವು ಡೊಳ್ಳುಹೊಟ್ಟೆ ನೋಡಿರುತ್ತೇವೆ. ಹಾಗಾದರೆ ಭಾರತೀಯ ಪುರುಷರು ಮಧ್ಯವಯಸ್ಸಿಗೆ ಬಂದಾಕ್ಷಣ ಹೊಟ್ಟೆ ಮುಂದೆ ಬರಲು ಅಥವಾ ಡೊಳ್ಳುಹೊಟ್ಟೆ ಬರಲು ಕಾರಣವೇನು ನೋಡಿ.

ಭಾರತೀಯ ಪುರುಷರ ಡೊಳ್ಳುಹೊಟ್ಟೆಯ ಹಿಂದಿನ ರಹಸ್ಯ ಹೀಗಿದೆ
ಭಾರತೀಯ ಪುರುಷರ ಡೊಳ್ಳುಹೊಟ್ಟೆಯ ಹಿಂದಿನ ರಹಸ್ಯ ಹೀಗಿದೆ

ಬೇರೆ ದೇಶಗಳಗೆ ಹೋಲಿಸಿದರೆ ಭಾರತೀಯರು ಫಿಟ್ನೆಸ್‌ ಕಡೆಗೆ ಗಮನ ಕೊಡುವುದು ಕಡಿಮೆ ಎಂದು ಹೇಳಲಾಗುತ್ತದೆ. ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಹಿಂದಿನಿಂದಲೂ ಭಾರತದಲ್ಲಿ ಪುರುಷರು ವಯಸ್ಸಾಗುತ್ತಿದಂತೆ ಡೊಳ್ಳುಹೊಟ್ಟೆ ಹೊಂದಿರುವುದನ್ನು ನಾವು ನೋಡಿರುತ್ತೇವೆ. ಸೆಲೆಬ್ರಿಟಿಗಳು ಹಾಗೂ ಸ್ಟಾರ್‌ಗಳು ಸಾಕಷ್ಟು ವರ್ಕೌಟ್ ಮಾಡಿ ಬ್ಯಾಲೆನ್ಸ್ ಮಾಡುತ್ತಾರೆ. ಸಿಕ್ಸ್ ಪ್ಯಾಕ್ ಬರಿಸಿಕೊಂಡಿರುತ್ತಾರೆ. ಆದರೆ ಸಾಮಾನ್ಯ ಮನುಷ್ಯರಲ್ಲಿ ಬಹುತೇಕರು ಡೊಳ್ಳುಹೊಟ್ಟೆ ಹೊಂದಿರುತ್ತಾರೆ. ಹಾಗಾದರೆ ವಯಸ್ಸಾಗುತ್ತಿದಂತೆ ಪುರುಷರಲ್ಲಿ ಹೊಟ್ಟೆ ದೊಡ್ಡದಾಗಲು ಕಾರಣವೇನು?

ವೈರೋಟ್ಸ್ ಬಯೋಹ್ಯಾಕ್ ಸೆಂಟರ್‌ನ ಕ್ರಿಯಾತ್ಮಕ ಔಷಧ ತಜ್ಞ ಮತ್ತು ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಸುಜಿತ್ ಎಸ್.ಆರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರ ಪ್ರಕಾರ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಬೆಳೆದು ಬಂದ ವಾತಾವರಣ ಈ ಎಲ್ಲಾ ಅಂಶಗಳಿಂದ ಪುರುಷರು ತಮ್ಮ ಮಧ್ಯ ವಯಸ್ಸಿಗೆ ಬಂದಾಕ್ಷಣ ಡೊಳ್ಳುಹೊಟ್ಟೆ ಬರುವುದನ್ನು ಗಮನಿಸುತ್ತಾರೆ.

ಡೊಳ್ಳುಹೊಟ್ಟೆಗೆ ಕಾರಣ 

ಡೊಳ್ಳುಹೊಟ್ಟೆ ಅಥವಾ ಹೊಟ್ಟೆ ಮುಂದೆ ಬರಲು ಪ್ರಾಥಮಿಕ ಕಾರಣ ಹೊಟ್ಟೆಯ ಪ್ರದೇಶದಲ್ಲಿ ಕೊಬ್ಬು ಸಂಗ್ರಹಣೆಯಾಗುವುದು. ಇದಕ್ಕೆ ಹಲವು ಅಂಶಗಳು ಕಾರಣವಾಗುತ್ತವೆ. ನಾವು ಸೇವಿಸುವ ಕೆಲವು ಆಹಾರವು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾರ್ಮೋನುಗಳ ಅಸಮತೋಲನ ಅಥವಾ ಪೌಷ್ಟಿಕಾಂಶದ ಕೊರತೆಯಿಂದಾಗಿ ಈ ಗ್ಲೂಕೋಸ್ ಅನ್ನು ಬಳಸದಿದ್ದರೆ ಅದು ಕೊಬ್ಬಾಗಿ ಬದಲಾಗುತ್ತದೆ‘ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಡಾ. ಸುಜಿತ್ ಹೇಳುತ್ತಾರೆ.

ಭಾರತೀಯ ಆಹಾರಗಳಲ್ಲಿ ಪ್ರೊಟೀನ್ ಪ್ರಮಾಣ ಕಡಿಮೆ ಇರುತ್ತದೆ. ಅದರಲ್ಲೂ ಮಾಂಸಾಹಾರ ಸೇವನೆ ಮಾಡುವ ಜನರಲ್ಲಿ ಹೊಟ್ಟೆ ಬರುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳುತ್ತಾರೆ. ಹಲವರು ಇನ್ಸುಲಿನ್ ಪ್ರತಿರೋಧವನ್ನು ಅನುಭವಿಸುತ್ತಾರೆ, ಅಲ್ಲಿ ಹೆಚ್ಚಿನ ಪ್ರಮಾಣದ ಇನ್ಸುಲಿನ್, ಶೇಖರಣಾ ಹಾರ್ಮೋನ್ ಅನ್ನು ಪರಿಣಾಮಕಾರಿಯಾಗಿ ಬಳಸಲಾಗುವುದಿಲ್ಲ, ಇನ್ಸುಲಿನ್ ಬಳಕೆಯಾಗದ ಗ್ಲೂಕೋಸ್ ಕೊಬ್ಬಿನ ರೂಪಕ್ಕೆ ಪರಿವರ್ತನೆಯಾಗುವುದರಿಂದ ಇದು ಸ್ಥೂಲಕಾಯಕ್ಕೆ ಕಾರಣವಾಗುತ್ತದೆ.

ವೈದ್ಯರ ಪ್ರಕಾರ, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಕೊರತೆಗಳನ್ನು ಒಳಗೊಂಡಂತೆ ಹಾರ್ಮೋನ್ ಅಸಮತೋಲನವು ಗ್ಲೂಕೋಸ್ ಅನ್ನು ಶಕ್ತಿಯಾಗಿ ಪರಿವರ್ತಿಸುವುದನ್ನು ತಡೆಯುತ್ತದೆ, ಪರಿಣಾಮವಾಗಿ ಕೊಬ್ಬು ಸಂಗ್ರಹವಾಗುತ್ತದೆ.

ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಕೊರತೆಯು ಕಳಪೆ ಕರುಳಿನ ಆರೋಗ್ಯಕ್ಕೆ ಕಾರಣವಾಗುತ್ತದೆ. ಗ್ಲೂಕೋಸ್ ಚಯಾಪಚಯಕ್ಕೆ ಅಡ್ಡಿಪಡಿಸುತ್ತದೆ, ಇದು ಹೊಟ್ಟೆಯ ಕೊಬ್ಬಿನ ಶೇಖರಣೆಗೆ ಕೊಡುಗೆ ನೀಡುತ್ತದೆ. ಪ್ರೊಬಯೋಟಿಕ್ ಅಂಶ ಸಮೃದ್ಧವಾಗಿರುವ ಆಹಾರಗಳು ಕರುಳಿನ ಆರೋಗ್ಯ ಸುಧಾರಣೆಗೆ ಸಹಾಯವಾಗುತ್ತವೆ. ಇದರಿಂದಾಗಿ ಕರುಳಿನ ಆರೋಗ್ಯ ಸುಧಾರಿಸುತ್ತದೆ ಎಂದು ಅವರು ಮಾಹಿತಿ ನೀಡುತ್ತಾರೆ.

ನಿರಂತರ ಆಲ್ಕೋಹಾಲ್ ಸೇವನೆ ಹಾಗೂ ಫ್ಯಾಟಿ ಲಿವರ್ ಸಮಸ್ಯೆ ಕೂಡ ಡೊಳ್ಳುಹೊಟ್ಟೆ ಬರಲು ಪ್ರಮುಖ ಕಾರಣವಾಗುತ್ತದೆ. ಮೂತ್ರಜನಕಾಂಗದ ಗ್ರಂಥಿಗಳಿಂದ ಈಸ್ಟ್ರೊಜೆನ್ ಉತ್ಪಾದನೆಯನ್ನು ಪ್ರಚೋದಿಸುವ ಮೂಲಕ ಒತ್ತಡವು ಈ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ, ಹೊಟ್ಟೆಯ ಪ್ರದೇಶದಲ್ಲಿ ಕೊಬ್ಬಿನ ಶೇಖರಣೆಯನ್ನು ಉತ್ತೇಜಿಸುತ್ತದೆ. ಇದು ಕೂಡ ಹೊಟ್ಟೆ ಮುಂದೆ ಬರಲು ಕಾರಣ ಎಂದು ಡಾ. ಸುಜಿತ್ ಹೇಳುತ್ತಾರೆ.

ಡೊಳ್ಳುಹೊಟ್ಟೆ ಬರದಂತೆ ತಡೆಯುವುದು ಹೇಗೆ?

ಡೊಳ್ಳುಹೊಟ್ಟೆ ಕಡಿಮೆಯಾಗಬೇಕು ಎಂದರೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗುವುದನ್ನು ತಡೆಯಬೇಕು. ಪಿಷ್ಟ ಹಾಗೂ ಸಕ್ಕರೆ ಅಂಶ ಅಧಿಕವಿರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು, ಜೊತೆಗೆ ಪ್ರೊಟೀನ್‌ ಸಮೃದ್ಧ ಸಮತೋಲಿತ ಆಹಾರಗಳ ಸೇವನೆಗೆ ಹೆಚ್ಚು ಗಮನ ಕೊಡಬೇಕು. ಏರೋಬಿಕ್ ವ್ಯಾಯಾಮಗಳು ಹಾಗೂ ಸ್ಟ್ರೆಂಥ್ ಟ್ರೈನಿಂಗ್ ಒಳಗೊಂಡಂತೆ ನಿರಂತರ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಬಹಳ ಮುಖ್ಯವಾಗುತ್ತದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ.

ಮೆಗ್ನೀಸಿಯಮ್ ಅಂಶವುಳ್ಳ ಆಹಾರಗಳ ಸೇವನೆಯು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ ಮತ್ತು ನೈಸರ್ಗಿಕ ಸಂಕೀರ್ಣ ವಿಟಮಿನ್ ಇ ಅನ್ನು ಸೇರಿಸುತ್ತದೆ. ಇದು ಫ್ಯಾಟಿ ಲಿವರ್ ಹಾಗೂ ಕರುಳಿನ ಆರೋಗ್ಯ ಸುಧಾರಿಸಲು ನೆರವಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯ.

ಧ್ಯಾನ, ಯೋಗ ಮತ್ತು ಸಾವಧಾನತೆಯಂತಹ ಅಭ್ಯಾಸಗಳ ಮೂಲಕ ಒತ್ತಡವನ್ನು ನಿರ್ವಹಿಸುವುದು ಕೊಬ್ಬಿನ ಶೇಖರಣೆಗೆ ಕಾರಣವಾಗುವ ಹಾರ್ಮೋನ್ ಅಸಮತೋಲನವನ್ನು ತಡೆಯಲು ಸಹಾಯ ಮಾಡುತ್ತದೆ.

ಭಾರತೀಯರಲ್ಲಿ ಮಧ್ಯವಯಸ್ಸಿಗೆ ಬಂದಂತೆ ಡೊಳ್ಳು ಹೊಟ್ಟೆ ಬರಲು ಕಾರಣವಾಗುವ ಅಂಶಗಳು ಹಾಗೂ ಬರದಂತೆ ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಆದರೆ ನಾವು ಈ ಕ್ರಮವನ್ನು ನಿರಂತರವಾಗಿ ಪಾಲಿಸಿದರೆ ಮಾತ್ರ ಫಲಿತಾಂಶ ಸಿಗುತ್ತದೆ ಎನ್ನುವುದು ನೆನಪಿರಲಿ.