logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಪಿಲ್‌ ಶರ್ಮಾ ಶೋನಲ್ಲಿ ನಿರ್ದೇಶಕ ಅಟ್ಲಿಗೆ ಬಾಡಿ ಶೇಮಿಂಗ್‌, ಕಪ್ಪು ಬಣ್ಣಕ್ಕೇಕೆ ಎಂದಿಗೂ ನೆಗೆಟಿವ್ ನಂಟು; ರಶ್ಮಿ ಕಾಸರಗೋಡು ಬರಹ

ಕಪಿಲ್‌ ಶರ್ಮಾ ಶೋನಲ್ಲಿ ನಿರ್ದೇಶಕ ಅಟ್ಲಿಗೆ ಬಾಡಿ ಶೇಮಿಂಗ್‌, ಕಪ್ಪು ಬಣ್ಣಕ್ಕೇಕೆ ಎಂದಿಗೂ ನೆಗೆಟಿವ್ ನಂಟು; ರಶ್ಮಿ ಕಾಸರಗೋಡು ಬರಹ

Reshma HT Kannada

Dec 19, 2024 01:40 PM IST

google News

ನಿರ್ದೇಶಕ ಅಟ್ಲೀ

    • ರಶ್ಮಿ ಕಾಸರಗೋಡು ಬರಹ: ಕಪ್ಪು ಅಂದ್ರೆ ಸುಂದರವಲ್ಲದ್ದು, ಬಿಳಿ ಅಥವಾ ಗೋಧಿ ಬಣ್ಣ ಅಂದ್ರೆ ಮಾತ್ರ ಸುಂದರವಾಗಿರುವುದು ಎಂಬ ನಂಬಿಕೆ ಇನ್ನೂ ನಮ್ಮ ಸಮಾಜದಿಂದ ದೂರ ಹೋಗಿಲ್ಲ. ಮಾಧ್ಯಮಗಳು, ಸಿನಿಮಾ, ಜಾಹೀರಾತು ಎಲ್ಲವೂ ಪ್ರೋತ್ಸಾಹಿಸುವುದೂ ಅದನ್ನೇ ಅಲ್ಲವೇ. ಕಪ್ಪು ಬಣ್ಣದವರಲ್ಲಿ ಕೀಳರಿಮೆ ಉಂಟು ಮಾಡಲು ಇಡೀ ಸಮಾಜವೇ ಮುಂದೆ ನಿಲ್ಲುತ್ತದೆ.
ನಿರ್ದೇಶಕ ಅಟ್ಲೀ
ನಿರ್ದೇಶಕ ಅಟ್ಲೀ (PC: Rashmi Tendulkar/ Facebook)

ಬಾಡಿ ಶೇಮಿಂಗ್ ಎನ್ನುವುದು ಬಣ್ಣಕ್ಕೂ ಹೊರತಾಗಿಲ್ಲ. ನಮ್ಮ ಸಮಾಜವೂ ಇಂದಿಗೂ ಕಪ್ಪಗಿರುವವರನ್ನು ನೋಡುವ ಮನೋಭಾವವೇ ಬೇರೆ. ಕಪ್ಪಗಿರುವವರು ಎಂದರೆ ಕಳ್ಳರು, ವಿಲನ್‌ಗಳು ಎಂಬರ್ಥದಲ್ಲಿ ಮಾಧ್ಯಮಗಳು ಕೂಡ ಬಿಂಬಿಸುತ್ತವೆ. ಕಪ್ಪಗಿರುವವರು ಪದೇ ಪದೇ ಅವಮಾನ ಎದುರಿಸುತ್ತಾರೆ. ಕಪ್ಪು ಕಸ್ತೂರಿ ಎಂಬುದು ಕೇವಲ ಬಾಯಿ ಮಾತಿಗೆ ಬಂದರೂ ಕಪ್ಪಗಿರುವವರನ್ನು ಕಾಣುವ ನಮ್ಮ ಹೊಲಸು ಮನಃಸ್ಥಿತಿ ಮಾತ್ರ ಎಂದಿಗೂ ಬದಲಾಗಿಲ್ಲ. ಹಾಗಾದರೆ ಕಪ್ಪಗಿರುವವರು ಮನುಷ್ಯರಲ್ಲವೇ, ಅದರಲ್ಲೂ ಟ್ಯಾಲೆಂಟ್ ಇಲ್ಲವೇ, ಟ್ಯಾಲೆಂಟ್‌ಗೂ ಬಣ್ಣಕ್ಕೂ ಎಲ್ಲಿಂದೆಲ್ಲಿಯ ನಂಟು ಎಂಬ ಪ್ರಶ್ನೆಗೆ ಖಂಡಿತ ಹಲವರ ಬಳಿ ಉತ್ತರವಿರುವುದಿಲ್ಲ. ಸಿನಿಮಾ ನಿರ್ದೇಶಕ ಅಟ್ಲೀಯ ಉದಾಹರಣೆಯೊಂದಿಗೆ ಕಪ್ಪು ಬಣ್ಣದವರು ಎದುರಿಸುವ ಬಾಡಿ ಶೇಮಿಂಗ್ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ರಶ್ಮಿ ಕಾಸರಗೋಡು. ಅವರ ಬರಹವನ್ನು ನೀವು ಓದಿ.

ರಶ್ಮಿ ಕಾಸರಗೋಡು ಬರಹ

ನೀವು ತುಂಬಾ ಯಂಗ್ ಇದ್ದೀರಿ, ನೀವೊಬ್ಬ ಖ್ಯಾತ ಸಿನಿಮಾ ನಿರ್ಮಾಪಕ, ನಿರ್ದೇಶಕರೂ ಆಗಿದ್ದೀರಿ. ನೀವು ಯಾವುದಾದರೂ ಸ್ಟಾರ್ ಬಳಿ ಹೋದಾಗ ಅವರು Where is Atlee ಅಂತ ಕೇಳಿದ್ದುಂಟಾ? ಕಪಿಲ್ ಶರ್ಮಾ ಶೋನಲ್ಲಿ Baby John ಸಿನೆಮಾ ಪ್ರೊಮೋಷನ್‌ಗಾಗಿ ಬಂದ ಅಟ್ಲೀಯಲ್ಲಿ ಕಪಿಲ್ ಶರ್ಮಾ ಕೇಳಿದ ಪ್ರಶ್ನೆ ಇದು. ಇದಕ್ಕೆ ಉತ್ತರವಾಗಿ ಅಟ್ಲೀ, ನನಗೆ ನಿಮ್ಮ ಪ್ರಶ್ನೆ ಏನೆಂದು ತಿಳಿಯಿತು. ನಾನು ಉತ್ತರಿಸಲು ಪ್ರಯತ್ನಿಸುವೆ ಎಂದು ಹೇಳಿ, ಮುರುಗದಾಸ್ ತನ್ನ ಮೊದಲ ಸಿನಿಮಾ ನಿರ್ಮಾಣ ಮಾಡಿದ್ದರು. ಅವರು ನನ್ನ ಸ್ಕ್ರಿಪ್ಟ್ ನೋಡಿದ್ರು, ನಾನು ಹೇಗೆ ಕಾಣ್ತೀನಿ ಎಂಬುದನ್ನು ನೋಡಿಲ್ಲ, ಅವರು ನನ್ನ ನಿರೂಪಣೆಯನ್ನು ಇಷ್ಟಪಟ್ಟರು . ನಾವು ಹೇಗೆ ಇದ್ದೀವಿ ಎಂಬುದನ್ನು ನೋಡಿ ಜಡ್ಜ್ ಮಾಡಬಾರದು, ಹೃದಯದಿಂದ ಜಡ್ಜ್ ಮಾಡಬೇಕು ಅಂತಾರೆ.

ಕಪಿಲ್ ಶರ್ಮಾ ಮೊದಲ ವಾಕ್ಯದಲ್ಲಿ ನೀವು ಯಂಗ್ ಇದ್ದೀರಿ ಎಂದು ಹೇಳಿದ್ದರಿಂದ, ನೀವು ನೋಡೋಕೆ ಚಿಕ್ಕ ಹುಡುಗನ ತರ ಕಾಣ್ತಿದ್ದೀರಿ, ನೀವು ಇಷ್ಟು ದೊಡ್ಡ ಡೈರೆಕ್ಟರ್ ಎಂದು ಹೇಳಿದ್ದೂ ಇರಬಹುದು. ಇನ್ನೊಂದು ಅರ್ಥದಲ್ಲಿ Atlee ಮೈ ಬಣ್ಣದ ಬಗ್ಗೆ ಕಾಮೆಂಟ್ ಮಾಡಿದ್ದೂ ಆಗಿರಬಹುದು. ಕಪಿಲ್ ಶರ್ಮಾ ಶೋನಲ್ಲಿ body ಶೇಮಿಂಗ್ ಇರಲ್ಲ ಅಂತ ಹೇಳುವುದು ತಪ್ಪಾಗುತ್ತೆ.

ಅಂದಹಾಗೆ, ಕಪ್ಪಗಿರುವವರು ಸಾಮಾನ್ಯರ ಕಣ್ಣಿಗೆ 'ಕಾಣುವುದೇ' ಇಲ್ಲ ಎಂಬ ಜೋಕ್‌ಗಳಿಗೇನೂ ಕಮ್ಮಿ ಇಲ್ಲ. ಇತ್ತೀಚಿಗೆ ನೋಡಿದ ಒಂದು ರೀಲ್‌ನಲ್ಲಿ, ಇಬ್ಬರು ಹುಡುಗೀರು ರೆಸ್ಟೋರೆಂಟ್‌ನಲ್ಲಿ ಮೂರು ಕಾಫಿ ಅಂತ ಆರ್ಡರ್ ಮಾಡ್ತಾರೆ. Waiter ಬಂದು ನೀವಿಬ್ಬರೇ ಇರೋದು... ಎರಡು ಕಾಫಿ ಅಲ್ವಾ, ಮೂರು ಯಾಕೆ ಎಂದು ಕೇಳಿದಾಗ ಅವರು ಅವರ ಜತೆ ಬಂದಿದ್ದ ಕಪ್ಪಗಿನ ಹುಡುಗನ ಮೇಲೆ ಮೊಬೈಲ್ ಟಾರ್ಚ್ ಹಾಕಿ ತೋರಿಸುತ್ತಾರೆ. ಬ್ಯಾಕ್ ಗ್ರೌಂಡ್‌ನಲ್ಲಿ ಹ್ಹ ಹ್ಹ ಹ್ಹ ಎಂಬ ನಗು!

ವಿಲನ್‌ಗಳು ಕಪ್ಪಗಿನವರು, ಕಳ್ಳರೂ ಕಪ್ಪಗಿನವರು ಹೀಗೆ ಕಪ್ಪು ಮೈಬಣ್ಣದವರನ್ನು ನೆಗೆಟಿವ್ ಆಗಿ ತೋರಿಸುವ ಪರಿಪಾಠ ನಮ್ಮಲ್ಲುಂಟು. ಕಪ್ಪು ಅಂದ್ರೆ ಸುಂದರವಲ್ಲದ್ದು, ಬಿಳಿ ಅಥವಾ ಗೋದಿ ಬಣ್ಣ ಅಂದ್ರೆ ಮಾತ್ರ ಸುಂದರವಾಗಿರುವುದು ಎಂಬ ನಂಬಿಕೆ ಇನ್ನೂ ನಮ್ಮ ಸಮಾಜದಿಂದ ದೂರ ಹೋಗಿಲ್ಲ. ಮಾಧ್ಯಮಗಳು, ಸಿನಿಮಾ, ಜಾಹೀರಾತು ಎಲ್ಲವೂ ಪ್ರೋತ್ಸಾಹಿಸುವುದೂ ಅದನ್ನೇ ಅಲ್ಲವೇ. ಕಪ್ಪು ಬಣ್ಣದವರಲ್ಲಿ ಕೀಳರಿಮೆ ಉಂಟು ಮಾಡಲು ಇಡೀ ಸಮಾಜವೇ ಮುಂದೆ ನಿಲ್ಲುತ್ತದೆ. ‘ಮಗು ಬೆಳ್ಳಗಿದೆ’, ‘ಹುಡುಗಿ ಕಪ್ಪು’, ಎಂದು ಹೇಳುವ ಜನರೇ ಮತ್ತೊಂದೆಡೆ ಕಪ್ಪಾದರೂ ಲಕ್ಷಣ ಅಂತ ಹೊಗಳುತ್ತಾರೆ. ಸಮಸ್ಯೆ ಇರುವುದು ಈ 'ಆದರೂ' ಅಂತ ಸೇರಿಸುವಲ್ಲಿ!

ಬ್ಲಾಕ್ ಈಸ್ ಬ್ಯೂಟಿಫುಲ್ ಎಂದು ಹ್ಯಾಶ್ ಟ್ಯಾಗ್ ಟ್ರೆಂಡ್ ಆದರೂ, ಕಪ್ಪು ಅಂದ್ರೆ ಇಂಥಾ ಜಾತಿ, ಇಂಥಾ ಭಾಷೆ, ಇಂಥಾ ವರ್ಗ ಎಂದು ಗುರುತಿಸುವುದು ಮಾತ್ರ ಮುಂದುವರಿಯುತ್ತಲೇ ಇರುತ್ತದೆ. ಪಾಪ ಮೆಲಾನಿನ್ !

ಡಿಸೆಂಬರ್ 17 ರಂದು ರಶ್ಮಿ ಈ ಪೋಸ್ಟ್ ಹಾಕಿದ್ದಾರೆ. ಈಗಾಗಲೇ ಹಲವರು ಇದನ್ನು ನೋಡಿದ್ದು 44 ಮಂದಿ ಶೇರ್ ಮಾಡಿದ್ದಾರೆ. 720ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. 85ಕ್ಕೂ ಹೆಚ್ಚು ಮಂದಿ ಇವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. 

ರಶ್ಮಿ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು 

‘ಈ ಎಪಿಸೋಡ್ ನೋಡಿದ್ದೀನಿ. ಕಪಿಲ್ ಶರ್ಮಾನ ಕೆಣಕುವ ಪ್ರಶ್ನೆಗೆ ಸ್ವಲ್ಪವೂ ಅಳುಕದೆ, ಅಟ್ಲಿ, "ವ್ಯಕ್ತಿಯ ಮುಖದಿಂದಲ್ಲ; ಹೃದಯ ನೋಡಿ ಜಡ್ಜ್ ಮಾಡ್ಬೇಕು" ಅಂದಿದ್ದು ಮೆಚ್ಚುಗೆ ಆಯ್ತು‘ ಎಂದು ಚರಿತಾ ಮೈಸೂರು ಕಾಮೆಂಟ್ ಮಾಡಿದ್ದಾರೆ. 

"ಈ ಕಾರ್ಯಕ್ರಮ ನಡೆಸುವವರಿಗೆಕೊಬ್ಬು, ಒಮ್ಮೆ pradhani ನಿಯನ್ನು ಕೆಣಕಿದ ಅನ್ನಿಸುತ್ತೆ, ಆಮೇಲೆ ಬೇರೆ ರೀತಿ ಅನುಭವಿಸಿದ್ದ. ನಾನಾಗಿದಿದ್ದರೆ, ಕಪಾಳಕ್ಕೆ ಹೊಡೆದು ಬರುತ್ತಿದ್ದೆ‘ ಎಂದು ಸರಸ್ವತಿ ಸಿಎಂ ಎನ್ನುವವರು ಕಾಮೆಂಟ್ ಮಾಡಿದ್ದಾರೆ. 

‘ನಾ ಕರಿಯಲೆಂದು ನೀ ಜರಿಯಬೇಡ ಬಿಳಿ ಗೆಳತಿ ಗರ್ವದಿಂದ, ಕಪ್ಪಿಗಿಂತ ಬಿಳಿ ಬಣ್ಣ ಹೆಚ್ಚು ಹೇಳಾವ ಹಿರಿಮೆಯಿಂದ..... ಸಿದ್ದಯ್ಯ ಪುರಾಣಿಕ ಅವರ 'ಪೂರ್ವಾಂಗನೆ ಪಶ್ಚಿಮಾಂಗನೆಗೆ' ಕಪ್ಪು ಬಣ್ಣದ ಮಹತ್ವ ಸಾರುವ ಸುಂದರ ಕವನ‘ ಎಂದು ಸಿದ್ದಯ್ಯ ಪುರಾಣಿಕ ಅವರ ಕವನದ ಸಾಲು ಬರೆದು ಬಣ್ಣ ಮುಖ್ಯವಲ್ಲ ಎಂಬುದನ್ನು ತಿಳಿಸಿದ್ದಾರೆ ಶ್ರೀಲತಾ ರೆಡ್ಡಿ. 

‘ನಾನೂ‌ ಕಪ್ಪಗೆ ಇರುವುದು, ನನಗೂ ಬಹಳ ಸಲ‌ ಅನ್ನಿಸುತ್ತಿತ್ತು ದೇವರ ಪ್ರತ್ಯಕ್ಷವಾಗಿ ಏನು ವರ ಬೇಕೆಂದರೆ‌‌ ನನ್ನನ್ನು ಬೆಳ್ಳಗೆ ಮಾಡು ಅಂತ ಕೇಳಬೇಕೆಂದು. ನನ್ನ ಅಮ್ಮನಿಗಿಂತನೂ‌‌ ನನ್ನ ಬಣ್ಣದ್ದೇ ಚಿಂತೆ ಅವರಿಗೆ ಯಾವಾಗಲೂ‘ ಸುಮತಿ ದೇವರಗಿ ಮಠ ಎನ್ನುವವರು ಕಾಮೆಂಟ್ ಮಾಡಿದ್ದಾರೆ. 

‘ದಕ್ಷಿಣ ಭಾರತದಲ್ಲಿ ಪೆರಿಯಾರ್ ಚಳವಳಿ ನಡೆಸದಿದ್ದರೇ, ಇಂದು ಕಪ್ಪು ಮೈಬಣ್ಣ ಹೊಂದಿರುವವರು ತಮ್ಮ ಬಣ್ಣದ ಬಗ್ಗೆ ಇಷ್ಟೊಂದು ಅಭಿಮಾನ ಹೊಂದುತ್ತಿರಲಿಲ್ಲ. ನಮ್ಮ ಭಾಷೆ, ಬಣ್ಣ, ಬಟ್ಟೆ, ಸಂಸ್ಕೃತಿಯ ಬಗ್ಗೆ ಸ್ವಾಭಿಮಾನ ತುಂಬಿದ ಅವರ ಕಾಳಜಿ ಇಂದಿಗೂ ಆದರ್ಶನೀಯವಾದುದು.‌‘ ಮಹೇಶ ಈರಸವದಿ ಅವರ ಕಾಮೆಂಟ್ ಹೀಗಿದೆ. 

ವೀಣಾ ಶಿವಣ್ಣ ಕಾಮೆಂಟ್ 

ಓಹ್. ಉತ್ತರ ಭಾರತದವರಿಗೆ ಈ ಬಿಳಿ ಚರ್ಮದ ಪ್ರಜ್ಞೆ ಹೆಚ್ಚು ಅಂತ ಈ ಶೋ ಗಳಲ್ಲಿ ನೋಡಿದ್ರೆ ಅನಿಸುತ್ತೆ. ದಕ್ಷಿಣದಲ್ಲಿ ಹೆಚ್ಚಾಗಿ ಕಪ್ಪು ವರ್ಣದ ಜನರಿದ್ದು ಅದು across caste and tribe ಇದೆ. And given the genetic aspects, kids tend to inherit the color from the previous generations. ಈಗ ಜಾಗೃತಿ ಕಾರ್ಯಕ್ರಮ ಇವೆ. ನಂದಿತಾ ದಾಸ್ ಹಾಗೂ ಇನ್ನಿತರರು ಇದನ್ನು ಬಹಳ ಟೀಕಿಸಿದ್ದರು ಹಾಗೆ ಫೇರ್ ಅಂಡ್ ಲವ್ಲಿ ಇಂಥದ ಬಿಳಿ ವರ್ಣದ ಬಗೆಗಿನ ಜಾಹಿರಾತು ಬೇಡವೆಂದಿದ್ದರು. ಇಂದಿಗೂ ಇಂತಹವು ನಡೆದಿದೆ ಅಂದ್ರೆ , ಕಾಮಿಡಿ ಹೆಸರಿನಲ್ಲಿ ಸೂಕ್ಷ್ಮ ಅಂಶಗಳು ಕಾಣೆ ಆಗಿವೆ ಅಂತ. ನನಗೆ ಮೊದಲಿಂದಲೂ ಈ ಬ್ಯಾಕ್ ಗ್ರೌಂಡ್ ನ ಹ್ಹ ಹ್ಹ ಗಳು ಸಿಟ್ಟು ಬರಿಸುತ್ತದೆ..roasting ಎನ್ನುವ ಹೆಸರಿನಲ್ಲಿ ಹಿಯಾಳಿಕೆ ಹೆಚ್ಚು, reels ಗಳು ಸಹ ಹಾಗೆ ಇವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ