logo
ಕನ್ನಡ ಸುದ್ದಿ  /  ಜೀವನಶೈಲಿ  /  Business News: ನಿಮ್ಮ ಗೂಗಲ್‌ ಪೇನಲ್ಲಿ Upi ಐಡಿಯನ್ನು ಬದಲಿಸುವುದು ಹೇಗೆ; ಇಲ್ಲಿದೆ ಹಂತ ಹಂತವಾದ ಮಾಹಿತಿ

Business News: ನಿಮ್ಮ ಗೂಗಲ್‌ ಪೇನಲ್ಲಿ UPI ಐಡಿಯನ್ನು ಬದಲಿಸುವುದು ಹೇಗೆ; ಇಲ್ಲಿದೆ ಹಂತ ಹಂತವಾದ ಮಾಹಿತಿ

Rakshitha Sowmya HT Kannada

Mar 03, 2024 07:00 AM IST

ಗೂಗಲ್‌ ಪೇನಲ್ಲಿ ಯುಪಿಐ ಬದಲಿಸುವ ವಿಧಾನ

  • UPI ID: ಇತ್ತೀಚಿನ ದಿನಗಳಲ್ಲಿ ಯುಪಿಐ ಮೂಲಕ ಮಾಡಲಾಗುವ ಹಣ ವರ್ಗಾವಣೆಗೆ ಹೆಚ್ಚಿನ ಬೇಡಿಕೆ ಇದೆ. ಒಂದು ವೇಳೆ ನೀವು ಯುಪಿಐ ಐಡಿ ಬದಲಾವಣೆ ಮಾಡಬೇಕೆಂದರೆ ಅದು ಬಹಳ ಸುಲಭ. ಐಡಿ ಬದಲಿಸುವ ವಿಧಾನವನ್ನು ಇಲ್ಲಿ ವಿವರವಾಗಿ ತಿಳಿಸಿಕೊಡಲಾಗಿದೆ. 

ಗೂಗಲ್‌ ಪೇನಲ್ಲಿ ಯುಪಿಐ ಬದಲಿಸುವ ವಿಧಾನ
ಗೂಗಲ್‌ ಪೇನಲ್ಲಿ ಯುಪಿಐ ಬದಲಿಸುವ ವಿಧಾನ (PC: Unsplash)

ಯುಪಿಐ ಐಡಿ ಬದಲಾವಣೆ: ಮೊದಲೆಲ್ಲಾ ಹೋದಲ್ಲಿ ಬಂದಲ್ಲಿ ಜೇಬಿನಲ್ಲಿ ಹಣ ಇರಿಸಿಕೊಳ್ಳಬೇಕಿತ್ತು. ಏನೇ ಸಾಮಗ್ರಿ ಬೇಕಿದ್ದರೂ ನೋಟು, ಚಿಲ್ಲರೆ ಎಣಿಸಿ ಕೊಡಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ಎಲ್ಲವೂ ಮೊಬೈಲ್‌ಮಯವಾಗಿದೆ. ಪೇಟಿಎಂ, ಗೂಗಲ್‌ ಪೇ, ಫೋನ್‌ ಪೇಗಳಲ್ಲಿ ಹಣವನ್ನು ಕ್ಷಣಮಾತ್ರದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆ ಮಾಡಬಹುದಾಗಿದೆ.

ಟ್ರೆಂಡಿಂಗ್​ ಸುದ್ದಿ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಆದರೆ ಗೂಗಲ್‌ ಪೇ ಆಗಲೀ, ಫೋನ್‌ ಪೇ ಆಗಲಿ ಹಣ ವರ್ಗಾವಣೆ ಮಾಡಲು ಯುಪಿಐ ಬಹಳ ಮುಖ್ಯ. ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್‌ ಮೂಲಕ ಮಾಡುವ ಹಣ ವರ್ಗಾವಣೆಗೆ ಈಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇತ್ತೀಚಿನ ಕೆಲವು ವರ್ಷಗಳಿಂದ, ಯುಪಿಐ ಬಳಕೆದಾರರ ಸಂಖ್ಯೆ ಮತ್ತು ಹಣದ ವಹಿವಾಟುಗಳು ಬಹಳ ವೇಗದಲ್ಲಿ ಸಾಗಿದೆ. ಯುಪಿಐ ಪೇಮೆಂಟ್‌ ಆಪ್‌ಗಳಲ್ಲಿ ಬಳಕೆದಾರರು ಯುಪಿಐ ಐಡಿ ಹೊಂದಿರುತ್ತಾರೆ. ಒಂದು ವೇಳೆ ನೀವು ಬ್ಯಾಂಕ್‌ ಖಾತೆ ಬದಲಿಸಿದಾಗ, ದೂರವಾಣಿ ಸಂಖ್ಯೆ ಬದಲಿಸಿದಾಗ ಯುಪಿಐ ಕೂಡಾ ಬದಲಿಸಬೇಕಾಗಬಹುದು. 

ಗೂಗಲ್‌ ಪೇನಲ್ಲಿ ನಿಮ್ಮ ಯುಪಿಐ ಬದಲಿಸುವ ವಿಧಾನವನ್ನು ಇಲ್ಲಿ ಹಂತಹಂತವಾಗಿ ವಿವರಿಸಲಾಗಿದೆ.

  • ನಿಮ್ಮ ಫೋನಿನಲ್ಲಿ ಗೂಗಲ್‌ ಪೇ ಅಪ್ಲಿಕೇಶನ್‌ ತೆರೆಯಿರಿ
  • ನಿಮ್ಮ ಪ್ರೊಫೈಲ್‌ ತೆರೆಯಿರಿ
  • ನಿಮ್ಮ ಬ್ಯಾಂಕ್‌ ಹೆಸರು ಸೆಲೆಕ್ಟ್‌ ಮಾಡಿ
  • ಮತ್ತೊಮ್ಮೆ ನಿಮ್ಮ ಬ್ಯಾಂಕ್‌ ಹೆಸರನ್ನು ಆಯ್ಕೆ ಮಾಡಿ
  • ಪೆನ್ಸಿಲ್‌ ಐಕಾನ್‌ ಒತ್ತಿ ಎಡಿಟ್‌ ಮಾಡಿ
  • ನಿಮ್ಮ ಹೊಸ ಯುಪಿಐ ಬದಲಿಸಿ
  • ಬೇಡವೆಂದರೆ ಅಲ್ಲಿ ನಿಮ್ಮ ಹಳೆಯ ಯುಪಿಐ ಡಿಲೀಟ್‌ ಮಾಡಿ

ಇದನ್ನೂ ಓದಿ: ಕ್ಯಾನ್ವಾದಿಂದ ಫಿಲ್ಮೋರಾವರೆಗೆ; ರೀಲ್ಸ್‌, ವೀಡಿಯೊ ಎಡಿಟ್‌ ಮಾಡೋರಿಗೆ ಬೆಸ್ಟ್‌ ಆಪ್‌ಗಳು, ಸಹಾಯವಾಗಬಹುದು ನೋಡಿ

ಯುಪಿಐಗೆ ಸಂಬಂಧಿಸಿದಂತೆ ನೀವು ತಿಳಿದುಕೊಳ್ಳಬೇಕಿರುವ ವಿಚಾರಗಳು

  • ಗೂಗಲ್‌ ಪೇನಲ್ಲಿ ನೀವು 4 ವಿವಿಧ ಬ್ಯಾಂಕ್‌ಗಳ ಯುಪಿಐ ಖಾತೆಯನ್ನು ಕ್ರಿಯೇಟ್‌ ಮಾಡಬಹುದು.
  • ಇತರ UPI ಅಪ್ಲಿಕೇಶನ್‌ಗಳು ಅಥವಾ ನೆಟ್ ಬ್ಯಾಂಕಿಂಗ್ ಪೋರ್ಟಲ್‌ಗಳ ಮೂಲಕ ರಚಿಸಲಾದ UPI ಐಡಿಗಳನ್ನು ಗೂಗಲ್‌ ಪೇನಲ್ಲಿ ಬಳಸಲಾಗುವುದಿಲ್ಲ.
  • ಗೂಗಲ್‌ ಪೇಗೆ ಸೈನ್ ಅಪ್ ಮಾಡಿದ ನಂತರ, ನಿಮಗಾಗಿ ಹೊಸ VPA ಅಥವಾ UPI ಐಡಿ ಸ್ವಯಂಚಾಲಿತವಾಗಿ ಜನರೇಟ್‌ ಆಗುತ್ತದೆ.
  • ಗೂಗಲ್‌ ಪೇ ಮೂಲಕ ರಚಿಸಲಾದ VPA ಅಥವಾ UPI ಐಡಿ ನಿಮ್ಮ ಖಾತೆಯಲ್ಲಿ ಡೀಫಾಲ್ಟ್ ಐಡಿಯಾಗಿ ಕಾರ್ಯ ನಿರ್ವಹಿಸುತ್ತದೆ.
  • ನೀವು ಬಯಸಿದ ಐಡಿಯನ್ನು ಉಳಿಸಿಕೊಳ್ಳಲು ಮತ್ತು ಯಾವುದೇ ಇತರ ಐಡಿಗಳನ್ನು ತೆಗೆದು ಹಾಕಲು ನಿಮಗೆ ಅವಕಾಶವಿದೆ.
  • ಯುಪಿಐ ಹಲವಾರು ಬ್ಯಾಂಕ್ ಖಾತೆಗಳನ್ನು ಒಂದು ಮೊಬೈಲ್ ಅಪ್ಲಿಕೇಶನ್‌ಗೆ ಸಂಯೋಜಿಸುತ್ತದೆ.
  • ನಿಮ್ಮ ಬ್ಯಾಂಕ್‌ನಿಂದ ಎರಡು ಹೆಚ್ಚುವರಿ ಐಡಿಗಳನ್ನು ಪಡೆಯುವ ಮೂಲಕ ನಿಮ್ಮ ಯುಪಿಐ ಐಡಿಯನ್ನು ನವೀಕರಿಸಬಹುದು.
  • ಗೂಗಲ್‌ಪೇನಲ್ಲಿ ಬ್ಯಾಂಕ್ ಖಾತೆಯನ್ನು ನವೀಕರಿಸಲು ಅದನ್ನು ತೆಗೆದುಹಾಕುವ ಮತ್ತು ಮರು ಸೇರಿಸುವ ಅಗತ್ಯವಿದೆ.
  • ಒಳ ಬರುವ ಹಣವನ್ನು ನಿಮ್ಮ ಪ್ರಾಥಮಿಕ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ:  ಗೂಗಲ್ ಪ್ಲೇ ಸ್ಟೋರ್‌ಗೆ ಸೆಡ್ಡು ಹೊಡೆದ ಫೋನ್‌ಪೇ; ಇಂಡಸ್ ಆ್ಯಪ್ ಸ್ಟೋರ್ ಆರಂಭ

 

 

    ಹಂಚಿಕೊಳ್ಳಲು ಲೇಖನಗಳು