logo
ಕನ್ನಡ ಸುದ್ದಿ  /  ಜೀವನಶೈಲಿ  /  ಎಲ್‌ಐಸಿಯಿಂದ ಹೊಸ ವಿಮಾ ಪಾಲಿಸಿ; ಒಂದೇ ಪ್ಲಾನ್‌ನಲ್ಲಿರುವ ವಿಮೆ, ಉಳಿತಾಯದ ಬಗ್ಗೆ ತಿಳಿಯಿರಿ -Lic Index Plus Policy

ಎಲ್‌ಐಸಿಯಿಂದ ಹೊಸ ವಿಮಾ ಪಾಲಿಸಿ; ಒಂದೇ ಪ್ಲಾನ್‌ನಲ್ಲಿರುವ ವಿಮೆ, ಉಳಿತಾಯದ ಬಗ್ಗೆ ತಿಳಿಯಿರಿ -LIC Index Plus Policy

Raghavendra M Y HT Kannada

Feb 10, 2024 02:00 PM IST

google News

ಒಂದೇ ಪಾಲಿಸಿಯಲ್ಲಿ ಜೀವ ವಿಮೆ ಮತ್ತು ಉಳಿತಾಯ ಮಾಡುವ ಹೊಸ ಯೋಜನೆಯನ್ನು ಎಲ್‌ಐಸಿ ಪರಿಚಯಿಸಿದೆ. ಇದರ ಮಾಹಿತಿ ಇಲ್ಲಿದೆ.

  • LIC Index Plus Policy: ಒಂದೇ ಪಾಲಿಸಿಯಲ್ಲಿ ಜೀವ ವಿಮೆ ಮತ್ತು ಉಳಿತಾಯ ಮಾಡುವಂತ ಹೊಸ ಯೋಜನೆಯನ್ನು ಎಲ್‌ಐಸಿ ತಂದಿದೆ. ಈ ಪಾಲಿಸಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದೇ ಪಾಲಿಸಿಯಲ್ಲಿ ಜೀವ ವಿಮೆ ಮತ್ತು ಉಳಿತಾಯ ಮಾಡುವ ಹೊಸ ಯೋಜನೆಯನ್ನು ಎಲ್‌ಐಸಿ ಪರಿಚಯಿಸಿದೆ. ಇದರ ಮಾಹಿತಿ ಇಲ್ಲಿದೆ.
ಒಂದೇ ಪಾಲಿಸಿಯಲ್ಲಿ ಜೀವ ವಿಮೆ ಮತ್ತು ಉಳಿತಾಯ ಮಾಡುವ ಹೊಸ ಯೋಜನೆಯನ್ನು ಎಲ್‌ಐಸಿ ಪರಿಚಯಿಸಿದೆ. ಇದರ ಮಾಹಿತಿ ಇಲ್ಲಿದೆ.

LIC Index Plus Policy Details in Kannada: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ವೈಯಕ್ತಿಕ ಜೀವ ವಿಮಾ ಯೋಜನೆಯ ಹೊಸ ಪಾಲಿಸಿಯೊಂದನ್ನು ಬಿಡುಗಡೆ ಮಾಡಿದೆ. ಇದರ ಹೆಸರು ಇಂಡೆಕ್ಸ್ ಪ್ಲಸ್. ಈ ಯೋಜನೆಯಲ್ಲಿ ಪಾಲಿಸಿಯ ಅವಧಿಯುದ್ದಕ್ಕೂ ಜೀವ ವಿಮಾ ರಕ್ಷಣೆ ಮತ್ತು ಉಲಿತಾಯದ ಸೌಲಭ್ಯವನ್ನು ನೀಡುತ್ತದೆ ಎಂದು ಎಲ್‌ಐಸಿ ಮಾಹಿತಿ ನೀಡಿದೆ.

ಈ ಹೊಸ ಪಾಲಿಸಿಯಲ್ಲಿ ಷರತ್ತುಗಳಿಗೆ ಒಳಪಟ್ಟು 5 ವರ್ಷಗಳ ಲಾಕ್-ಇನ್ ಅವಧಿಯ ನಂತರ ಯಾವುದೇ ಸಮಯದಲ್ಲಿ ಬೇಕಾದರೆ ಭಾಗಶಃ ಹಣವನ್ನು ವಾಪಸ್ ಪಡೆಯುವ ಆಯ್ಕೆಗಳು ಇದರಲ್ಲಿ ಅಂತಲೂ ನಿಗಮ ತಿಳಿಸಿದೆ.

ಎಲ್‌ಐಸಿ ಇಂಡೆಕ್ಸ್ ಪ್ಲಸ್ ಪಾಲಿಸಿಯ ವೈಶಿಷ್ಟ್ಯಗಳು ಹೀಗಿವೆ

  1. ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು: ಹುಟ್ಟಿನಿಂದ 90 ದಿನಗಳು ಪೂರ್ಣಗೊಂಡಿರಬೇಕು (3 ತಿಂಗಳ ಮಗುವಿನಿಂದ ಪಾಲಿಸಿ ಬಡೆಯಬಹುದು)
  2. ಪಾಲಿಸಿ ಪಡೆಯಲು ಗರಿಷ್ಠ ವಯಸ್ಸು: 50 ರಿಂದ 50 ವರ್ಷ (ಮೂಲ ವಿಮಾ ಮೊತ್ತವನ್ನು ಅವಲಂಬಿಸಿರುತ್ತೆ)
  3. ಮೂಲ ವಿಮಾ ಮೊತ್ತ: 90 ದಿನಗಳು ತುಂಬಿ ಮಗುವಿಗೆ ವಾರ್ಷಿಕ ಪ್ರೀಮಿಯಂ 7 ರಿಂದ 10 ಪಟ್ಟು ಹಾಗೂ 51 ವರ್ಷದಿಂದ 60 ವರ್ಷದವರಿಗೆ ವಾರ್ಷಿಕ ಪ್ರೀಮಿಯಂ 7 ಪಟ್ಟು ಇರಲಿದೆ
  4. ಪಾಲಿಸಿ ಮುಕ್ತಾಯದ ಸಮಯದಲ್ಲಿ ಕನಿಷ್ಠ ವಯಸ್ಸು: 18 ವರ್ಷ ಪೂರ್ಣಗೊಂಡಿರಬೇಕು

ಇದನ್ನೂ ಓದಿ: ಅದಾನಿ ಸಾಮ್ರಾಜ್ಯದಲ್ಲಿ ತಲ್ಲಣ, ಭಾರತೀಯ ಜೀವ ವಿಮಾ ನಿಗಮಕ್ಕೆ 16,580 ಕೋಟಿ ರೂ. ನಷ್ಟ, ಇಲ್ಲಿದೆ ಸಂಪೂರ್ಣ ಲೆಕ್ಕ

5. ಪಾಲಿಸಿ ಮುಕ್ತಾಯದ ವೇಳೆ ಗರಿಷ್ಠ ವಯಸ್ಸು: 75 ಅಥವಾ 85 ವರ್ಷ (ಮೂಲ ವಿಮಾ ಮೊತ್ತವನ್ನ ಅವಲಂಬಿಸಿರುತ್ತೆ)

6. ಕನಿಷ್ಠ ಪಾಲಿಸಿ ಅವಧಿ: ವಾರ್ಷಿಕ ಪ್ರೀಮಿಯಂ ಅವಲಂಭಿಸಿ 10 ಅಥವಾ 15 ವರ್ಷಗಳು. ಗರಿಷ್ಠ ಅವಧಿ 25 ವರ್ಷ. ಪ್ರೀಮಿಯಂ ಪಾವತಿಸುವ ಅವಧಿಯು ಪಾಲಿಸಿ ಅವಧಿಯಂತೆಯೇ ಇರುತ್ತೆ.

7. ಕನಿಷ್ಠ ಪ್ರೀಮಿಯಂ: ವಾರ್ಷಿಕ 30,000 ರೂಪಾಯಿ, 6 ತಿಂಗಳಿಗೆ 15,000 ರೂಪಾಯಿ, 3 ತಿಂಗಳಿಗೆ 7,500 ರೂಪಾಯಿ ಹಾಗೂ ತಿಂಗಳಿಗೆ 2,500 ರೂಪಾಯಿ ಇರಲಿದೆ.

8. ಗರಿಷ್ಠ ಪ್ರೀಮಿಯಂ: ಗರಿಷ್ಠ ಪ್ರೀಮಿಯಂಗೆ ಯಾವುದೇ ಮಿತಿಯಿಲ್ಲ. ಫ್ಲೆಕ್ಸಿ ಗ್ರೋತ್ ಫಂಡ್ ಮತ್ತು ಫ್ಲೆಕ್ಸಿ ಸ್ಮಾರ್ಟ್ ಗ್ರೋತ್ ಫಂಡ್ ಇರದಲ್ಲಿ ಯಾವುದಾದರು ಒಂದರಲ್ಲಿ ಹೂಡಿಕೆ ಮಾಡುವ ಅವಕಾಶಗನ್ನು ನೀಡಲಾಗಿದೆ.

9. ಭಾಗಶಃ ಹಿಂಪಡೆಯುವಿಕೆ: ಷರತ್ತುಗಳಿಗೆ ಒಳಪಟ್ಟು ಹಿಂಪಡೆಯುವಿಕೆ ಲಭ್ಯವಿರುತ್ತದೆ

10. ಎಲ್‌ಐಸಿ ಇಂಡೆಕ್ಸ್ ಪ್ಲಸ್ ಪಾಲಿಸಿ ಖರೀದಿಸುವುದು ಹೇಗೆ: ಈ ಪಾಲಿಸಿಯನ್ನು ಪಡೆಯುವ ಆಸಕ್ತಿ ನಿಮಗಿದ್ದರೆ ಮೊದಲು ಪಾಲಿಸಿಯ ಕುರಿತು ಅನುಮಾನಗಳನ್ನು ಪರಿಹರಿಸಿಕೊಳ್ಳಿ. ಆ ನಂತರ ಸಮೀಪದ ಎಲ್‌ಐಸಿ ಏಜೆಂಟರ್‌ಗಳು ಅಥವಾ ಇತರೆ ಮಧ್ಯವರ್ತಿಗಳ ಮೂಲಕ ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ನೇರವಾಗಿ www.licindia.in ವೆಬ್‌ಸೈಟ್ ಮೂಲಕ ಖರೀದಿಸಬಹುದು. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ