PPF-NPS-ELSS: ಮೂರರ ನಡುವೆ ಏನು ವ್ಯತ್ಯಾಸ? ತೆರಿಗೆ ಉಳಿತಾಯ, ಹೂಡಿಕೆಗೆ ಯಾವುದು ಒಳ್ಳೆಯದು-savings tips ppf nps elss which is best to invest for tax saving public provident fund pension scheme mgb ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Ppf-nps-elss: ಮೂರರ ನಡುವೆ ಏನು ವ್ಯತ್ಯಾಸ? ತೆರಿಗೆ ಉಳಿತಾಯ, ಹೂಡಿಕೆಗೆ ಯಾವುದು ಒಳ್ಳೆಯದು

PPF-NPS-ELSS: ಮೂರರ ನಡುವೆ ಏನು ವ್ಯತ್ಯಾಸ? ತೆರಿಗೆ ಉಳಿತಾಯ, ಹೂಡಿಕೆಗೆ ಯಾವುದು ಒಳ್ಳೆಯದು

Tax Saving Investments: ಯಾವುದಾದರೂ ಯೋಜನೆಗಳ ಅಡಿ ಉಳಿತಾಯ-ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಈ ಕೆಳಗಿನ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ.

ಹೂಡಿಕೆ (ಪ್ರಾತಿನಿಧಿಕ ಚಿತ್ರ)
ಹೂಡಿಕೆ (ಪ್ರಾತಿನಿಧಿಕ ಚಿತ್ರ)

ಭವಿಷ್ಯದಲ್ಲಿ ಹಣಕಾಸಿನ ವಿಚಾರದಲ್ಲಿ ನೀವು ಚಿಂತೆಯಿಂದ ಮುಕ್ತರಾಗಲು, ಸೇಫ್​ ಆಗಿ ಇರಲು ಯಾವುದಾದರೂ ಯೋಜನೆಗಳ ಅಡಿ ಉಳಿತಾಯ-ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಈ ಕೆಳಗಿನ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ. ತೆರಿಗೆ ಉಳಿತಾಯಕ್ಕೆ ಯಾವುದು ಒಳ್ಳೆಯದು ಎಂಬುದನ್ನು ಪರಿಶೀಲಿಸಿ.

PPF:​​ ( Public Provident Fund- ಸಾರ್ವಜನಿಕ ಭವಿಷ್ಯ ನಿಧಿ)

ಪಿಪಿಎಫ್ ಅನ್ನು 1968 ರಲ್ಲಿ ಪ್ರಾರಂಭಿಸಲಾಗಿದ್ದು, ಇದು ಭಾರತ ಸರ್ಕಾರದ ಯೋಜನೆಯಾಗಿದೆ. ಪಿಪಿಎಫ್ ದೀರ್ಘಾವಧಿಯ ಉಳಿತಾಯ ಮತ್ತು ಹೂಡಿಕೆಗೆ ಇರುವ ಯೋಜನೆಯಾಗಿದೆ. ಪಿಪಿಎಫ್ ನಲ್ಲಿ ಉಳಿತಾಯವನ್ನು ಪ್ರಾರಂಭಿಸಲು, ನೀವು ಪೋಸ್ಟ್ ಆಫೀಸ್ ಅಥವಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ಗೊತ್ತುಪಡಿಸಿದ ಶಾಖೆಗಳಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬೇಕು.

ಹೂಡಿಕೆಗೆ ಕನಿಷ್ಠ ಅವಧಿ: 15 ವರ್ಷಗಳು

ಕನಿಷ್ಠ ಹೂಡಿಕೆ: ವರ್ಷಕ್ಕೆ 500 ರೂ.

ಗರಿಷ್ಠ ಹೂಡಿಕೆ: ಒಬ್ಬ ವ್ಯಕ್ತಿ ವರ್ಷಕ್ಕೆ 1.5 ಲಕ್ಷ ರೂ. ವರೆಗೆ ಮಾತ್ರ ಹೂಡಿಕೆ ಮಾಡಬಹುದು

ಬಡ್ಡಿ ದರ: ಪ್ರಸ್ತುತ ಶೇ 7.1

ಹಿಂಪಡೆಯುವಿಕೆ: 15 ವರ್ಷಗಳ ಬಳಿಕವೇ ಪೂರ್ಣ ಪ್ರಮಾಣದ ಹಣ ವಿಡ್ರಾ ಮಾಡಬಹುದು. 7 ವರ್ಷಗಳ ನಂತರ ಬೇಕಾದರೆ ಷರತ್ತುಗಳನ್ವಯ ಒಂದಿಷ್ಟು ಪ್ರಮಾಣದ ಹಣ ಹಿಂಪಡೆಯಬಹುದು.

ಸುರಕ್ಷತೆ/ಅಪಾಯ: ಹೆಚ್ಚಿನ ಪ್ರಮಾಣದ ಸುರಕ್ಷತೆ

NPS: (National Pension Scheme - ರಾಷ್ಟ್ರೀಯ ಪಿಂಚಣಿ ಯೋಜನೆ)

ಎನ್​​ಪಿಎಸ್​ ಇದು ಸ್ವಯಂಪ್ರೇರಿತ ನಿವೃತ್ತಿ ಯೋಜನೆಯಾಗಿದ್ದು, ಅದರ ಮೂಲಕ ನೀವು ರಿಟೈರ್​ಮೆಂಟ್​​ ಕಾರ್ಪಸ್ ಅಥವಾ ನಿಮ್ಮ ವೃದ್ಧಾಪ್ಯ ಪಿಂಚಣಿಯನ್ನು ರಚಿಸಬಹುದು. ಇದನ್ನು PFRDA (ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ನಿಯಂತ್ರಿಸುತ್ತದೆ. 18 ರಿಂದ 70 ವರ್ಷ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರಿಗೆ (ನಿವಾಸಿ ಅಥವಾ ಅನಿವಾಸಿ) ಈ ಯೋಜನೆ ಲಭ್ಯವಿದೆ. ಎನ್​ಪಿಎಸ್​​ ಅಡಿಯಲ್ಲಿ ಶ್ರೇಣಿ 1 ಮತ್ತು ಶ್ರೇಣಿ 2 ಎಂಬ ಎರಡು ಬಗೆಯ ಖಾತೆಗಳಿವೆ.

ಹೂಡಿಕೆಗೆ ಕನಿಷ್ಠ ಅವಧಿ: ನಿಮಗೆ 70 ವರ್ಷ ವಯಸ್ಸಾಗುವವರೆಗೆ

ಕನಿಷ್ಠ ಹೂಡಿಕೆ: 1,000 ರೂ.

ಗರಿಷ್ಠ ಹೂಡಿಕೆ: 1.5 ಲಕ್ಷ ರೂ.

ಹಿಂಪಡೆಯುವಿಕೆ: 60 ವರ್ಷ ಆದ ಬಳಿಕವೇ ನಿಮ್ಮ ಹಣ ಹಿಂಪಡೆಯಬಹುದು.

ಸುರಕ್ಷತೆ/ಅಪಾಯ: ಕಡಿಮೆ ರಿಸ್ಕ್​​

ELSS: (Equity Linked Savings Scheme- ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್-)

ಇಎಲ್ಎಸ್​ಎಸ್​​​​​, ಇದು ಒಂದು ಇಕ್ವಿಟಿ ಮ್ಯೂಚುಯಲ್ ಫಂಡ್ ಆಗಿದ್ದು, ಇದರಲ್ಲಿ ಹೂಡಿಕೆಗಳು ಆದಾಯ ತೆರಿಗೆಯ ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ಹಣಕಾಸು ವರ್ಷದಲ್ಲಿ 1.5 ಲಕ್ಷ ಮಿತಿಯವರೆಗಿನ ತೆರಿಗೆ ಕಡಿತಕ್ಕೆ ಅರ್ಹತೆ ಹೊಂದಿದೆ. ಇಎಲ್ಎಸ್​ಎಸ್ ನಲ್ಲಿನ ಹೂಡಿಕೆಗಳು ಇಕ್ವಿಟಿ ಫಂಡ್ ಆಗಿ ಅರ್ಹತೆ ಪಡೆಯಲು ಕನಿಷ್ಠ 80% ನಷ್ಟು ಮಾನ್ಯತೆಯನ್ನು ಹೊಂದಿವೆ, ಇದು ತಾಂತ್ರಿಕವಾಗಿ 100% ವರೆಗೆ ಹೆಚ್ಚಾಗಬಹುದು. ಇದು ಮಾರುಕಟ್ಟೆಗೆ ಅನುಗುಣವಾಗಿದ್ದು, ದೀರ್ಘಾವಧಿಯಲ್ಲಿ ಪಿಪಿಎಫ್​​ ರಿಟರ್ನ್‌ಗಳಿಗಿಂತ ಉತ್ತಮವಾಗಿದೆ ಎಂದು ಹೇಳಲಾಗಿದೆ.

ಹೂಡಿಕೆಗೆ ಕನಿಷ್ಠ ಅವಧಿ: 3 ವರ್ಷಗಳು

ಕನಿಷ್ಠ ಹೂಡಿಕೆ: 500 ರೂ.

ಗರಿಷ್ಠ ಹೂಡಿಕೆ: 1.5 ಲಕ್ಷ ರೂ.

ಹಿಂಪಡೆಯುವಿಕೆ: ಲಾಕ್​​-ಇನ್​ ಪ್ರಕ್ರಿಯೆ ಪೂರ್ಣವಾದ ಬಳಿಕ

ಸುರಕ್ಷತೆ/ಅಪಾಯ: ಹೆಚ್ಚಿನ ಅಪಾಯ

ತೆರಿಗೆ ಉಳಿತಾಯಕ್ಕೆ ಯಾವುದು ಉತ್ತಮ?

ಪಿಪಿಎಫ್​​- ತೆರಿಗೆ ಮುಕ್ತವಾಗಿದೆ. ನೀವು ಹೂಡಿಕೆ ಮಾಡಿದ ಹಣ, ಗಳಿಸಿದ ಬಡ್ಡಿ, ಮತ್ತು ಯೋಜನೆ ಮುಗಿದ ನಂತರ ನಿಮ್ಮ ಕೈ ಸೇರುವ ಹಣಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.

ಎನ್​​ಪಿಎಸ್- ಸೆಕ್ಷನ್ 80CCD (1) ಅಡಿಯಲ್ಲಿ ರೂ 50,000 ಮತ್ತು ಸೆಕ್ಷನ್ 80C ಅಡಿಯಲ್ಲಿ ರೂ 1.5 ಲಕ್ಷದವರೆಗೆ ತೆರಿಗೆ ಉಳಿತಾಯ ಮಾಡಬಹುದು.

ಇಎಲ್ಎಸ್​ಎಸ್- ಸೆಕ್ಷನ್ 80C ಅಡಿಯಲ್ಲಿ ರೂ 1.5 ಲಕ್ಷದವರೆಗೆ ತೆರಿಗೆ ಉಳಿತಾಯ ಮಾಡಬಹುದು. ಆದರೆ 1 ಲಕ್ಷಕ್ಕಿಂತ ಹೆಚ್ಚಿನ ದೀರ್ಘಾವಧಿಯ ಬಂಡವಾಳ ಲಾಭವು ಗಳಿಸಿದ ಲಾಭದ 10% ದರದಲ್ಲಿ ತೆರಿಗೆಗೆ ಒಳಪಡುತ್ತದೆ.

(ಗಮನಿಸಿ: ನಿಮ್ಮ ಹಣಕಾಸು ಸಮಾಲೋಚಕರ ಮಾರ್ಗದರ್ಶನ ಪಡೆದ ನಂತರವೇ ಹೂಡಿಕೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಿ)

mysore-dasara_Entry_Point