logo
ಕನ್ನಡ ಸುದ್ದಿ  /  ಜೀವನಶೈಲಿ  /  ಎಲ್‌ಪಿಜಿ ಸಿಲಿಂಡರ್ ದರ ಏರಿಕೆ; ದಸರಾ ದೀಪಾವಳಿ ಹಬ್ಬಗಳಿಗೂ ಮೊದಲೆ ಬೆಲೆ ಹೆಚ್ಚಳದ ಹೊಡೆತ, ಯಾವ ಊರಲ್ಲಿ ಎಷ್ಟು ದರ ಇಲ್ಲಿದೆ ವಿವರ

ಎಲ್‌ಪಿಜಿ ಸಿಲಿಂಡರ್ ದರ ಏರಿಕೆ; ದಸರಾ ದೀಪಾವಳಿ ಹಬ್ಬಗಳಿಗೂ ಮೊದಲೆ ಬೆಲೆ ಹೆಚ್ಚಳದ ಹೊಡೆತ, ಯಾವ ಊರಲ್ಲಿ ಎಷ್ಟು ದರ ಇಲ್ಲಿದೆ ವಿವರ

Umesh Kumar S HT Kannada

Oct 07, 2024 10:26 AM IST

google News

ದಸರಾ ದೀಪಾವಳಿ ಹಬ್ಬಗಳಿಗೂ ಮೊದಲೆ ಬೆಲೆ ಹೆಚ್ಚಳದ ಹೊಡೆತ, ಯಾವ ಊರಲ್ಲಿ ಎಷ್ಟು ದರ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

  • ಹಣದುಬ್ಬರ, ಬೆಲೆ ಏರಿಕೆಯ ಬಿಸಿಯೊಂದಿಗೆ ಊರೆಲ್ಲ ದಸರಾ ದೀಪಾವಳಿ ಹಬ್ಬದ ಸಂಭ್ರಮದ ಕಡೆಗೆ ಮುಖ ಮಾಡಿರುವಾಗಲೆ ಮತ್ತೊಂದು ಹೊಡೆತ ಬಿದ್ದಿದೆ. ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ಯಾವ ಊರಲ್ಲಿ ಎಷ್ಟು ದರ ಇದೆ ಎಂಬುದರ ವಿವರ ಇಲ್ಲಿದೆ.

ದಸರಾ ದೀಪಾವಳಿ ಹಬ್ಬಗಳಿಗೂ ಮೊದಲೆ ಬೆಲೆ ಹೆಚ್ಚಳದ ಹೊಡೆತ, ಯಾವ ಊರಲ್ಲಿ ಎಷ್ಟು ದರ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ದಸರಾ ದೀಪಾವಳಿ ಹಬ್ಬಗಳಿಗೂ ಮೊದಲೆ ಬೆಲೆ ಹೆಚ್ಚಳದ ಹೊಡೆತ, ಯಾವ ಊರಲ್ಲಿ ಎಷ್ಟು ದರ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ) (LM)

ನವದೆಹಲಿ: ವಾಡಿಕೆಯಂತೆ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರಗಳನ್ನು ಇಂದು (ಅಕ್ಟೋಬರ್ 1) ತೈಲೋತ್ಪನ್ನ ಮಾರುಕಟ್ಟೆ ಕಂಪನಿಗಳು ಪ್ರಕಟಿಸಿವೆ. ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ದಸರಾ, ದೀಪಾವಳಿ ಹಬ್ಬಗಳಿಗೂ ಮೊದಲೇ ಹಣದುಬ್ಬರದಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 50 ರೂಪಾಯಿಯಷ್ಟು ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ದರ ಇಂದಿನಿಂದ 1740 ರೂಪಾಯಿಗೆ ಮಾರಾಟವಾಗಲಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ (14 ಕಿಲೋ) ದರ 803 ರೂಪಾಯಿ ಇದೆ.

ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಎಲ್‌ಪಿಜಿ ದರ ವಿವರ

ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಇತ್ತೀಚಿನ ದರಗಳ ಪ್ರಕಾರ, ಅಕ್ಟೋಬರ್ 1 ರಿಂದ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಮುಂಬೈನಲ್ಲಿ 1692.50 ರೂಪಾಯಿ ಆಗಿರುತ್ತದೆ, ಕೋಲ್ಕತ್ತಾದಲ್ಲಿ ಇದು 1850.50 ರೂಪಾಯಿ ಮತ್ತು ಚೆನ್ನೈನಲ್ಲಿ ಇದು 1903 ರೂಪಾಯಿ ಆಗಿರುತ್ತದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಸಹ ಎಲ್‌ಪಿಜಿ ಸಿಲಿಂಡರ್ ದರ ಸುಮಾರು 39 ರೂಪಾಯಿ ಏರಿಕೆಯಾಗಿ 1691.50 ರೂಪಾಯಿಗೆ ತಲುಪಿತ್ತು. ಮೊದಲು 1652.50 ರೂ. ಕೋಲ್ಕತ್ತಾದಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಈಗ 48 ರೂಪಾಯಿಗಳಷ್ಟು ದುಬಾರಿಯಾಗಿದೆ.

ಇಂದು ಚೆನ್ನೈನಲ್ಲಿಯೂ ಸಹ ಗೃಹಬಳಕೆಯ ಸಿಲಿಂಡರ್ ಸೆಪ್ಟೆಂಬರ್ ದರದಲ್ಲಿ ಅಂದರೆ 818.50 ರೂಪಾಯಿಗೆ ಲಭ್ಯವಿದೆ. ದೆಹಲಿಯಲ್ಲಿ, 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಅದರ ಹಳೆಯ ದರ 803 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ 829 ರೂ.ಗೆ ಮತ್ತು ಮುಂಬೈನಲ್ಲಿ 802.50 ರೂ.ಗೆ ಲಭ್ಯವಿದೆ.

ಬೆಂಗಳೂರಿನಲ್ಲಿ ಎಲ್‌ಪಿಜಿ ದರ

ಬೆಂಗಳೂರಿನಲ್ಲಿ ಇಂದು (ಅಕ್ಟೋಬರ್ 1) ಎಲ್‌ಪಿಜಿ ಪರಿಷ್ಕೃತ ದರದ ಪ್ರಕಾರ ಮನೆ ಬಳಕೆಯ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ (14.2 ಕಿಲೋ) 805.50 ರೂಪಾಯಿ ಮತ್ತು ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ (5 ಕಿಲೋ) 300.50 ರೂಪಾಯಿಗೆ ಲಭ್ಯವಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ (19 ಕಿಲೋ) 1,818 ರೂಪಾಯಿ ( 48.50 ರೂಪಾಯಿ ಏರಿಕೆ) ಮತ್ತು 47.5 ಕಿಲೋ ತೂಕದ ಸಿಲಿಂಡರ್ ದರ 4,541 ರೂಪಾಯಿ ( 121 ರೂಪಾಯಿ ಏರಿಕೆ) ಗೆ ಲಭ್ಯವಿದೆ ಎಂದು ಗುಡ್‌ ರಿಟರ್ನ್ಸ್ ಉಲ್ಲೇಖಿಸಿದೆ.

ಮೈಸೂರಿನಲ್ಲಿ ಎಲ್‌ಪಿಜಿ ದರ: ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ (14.2 ಕಿಲೋ) ದರ 807.50 ರೂಪಾಯಿ, 5 ಕಿಲೋ ತೂಕದ ಸಿಲಿಂಡರ್ ದರ 301.50 ರೂಪಾಯಿ ಇದ್ದರೆ, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (19 ಕಿಲೋ ) ದರ 1,795 ರೂಪಾಯಿ (48 ರೂ ಹೆಚ್ಚಳ) ಮತ್ತು 47.5 ಕಿಲೋ ತೂಕದ ಸಿಲಿಂಡರ್ ದರ 4,485 ರೂಪಾಯಿ (121 ರೂ ಏರಿಕೆ) ಇದೆ.

ಹುಬ್ಬಳ್ಳಿ ಧಾರವಾಡದಲ್ಲಿ ಎಲ್‌ಪಿಜಿ ದರ: ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ (14.2 ಕಿಲೋ) ದರ 822 ರೂಪಾಯಿ ಮತ್ತು 5 ಕಿಲೋ ತೂಕದ ಸಿಲಿಂಡರ್ ದರ 306.50 ರೂಪಾಯಿ ಇದೆ. ವಾಣಿಜ್ಯ ಬಳಕೆಯ ಸಿಲಿಂಡರ್ (19 ಕಿಲೋ) ದರ 1813 ರೂಪಾಯಿ (48.50 ರೂಪಾಯ ಏರಿಕೆ) ಮತ್ತು 47.5 ಕಿಲೋ ತೂಕದ ಸಿಲಿಂಡರ್‌ ದರ 4,528 ರೂಪಾಯಿ ( 121 ರೂಪಾಯಿ ಹೆಚ್ಚಳ) ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ