ಸೆಪ್ಟೆಂಬರ್‌ನಲ್ಲಿ ನಿಶ್ಚಿತ ಠೇವಣಿ ಮೇಲೆ ಹೆಚ್ಚು ಬಡ್ಡಿದರ ಘೋಷಿಸಿರುವ ಟಾಪ್ ಬ್ಯಾಂಕ್‌ಗಳು ಯಾವುವು? ತಿಳಿಯಬೇಕಾದ ಪ್ರಮುಖ ಅಂಶಗಳಿವು
Sep 18, 2024 11:27 AM IST
ನಿಶ್ಚಿತ ಠೇವಣಿ ಮೇಲೆ ಯಾವೆಲ್ಲಾ ಬ್ಯಾಂಕ್‌ಗಳು ಸೆೆಪ್ಟೆಂಬರ್‌ನಲ್ಲಿ ಹೆಚ್ಚು ಬಡ್ಡಿಯನ್ನು ಘೋಷಿಸಿವೆ ಅನ್ನೋದರ ಪಟ್ಟಿ ಇಲ್ಲಿದೆ.
- ಮಾರುಕಟ್ಟೆಯ ಚಂಚಲತೆಯ ನಡುವೆ ಎಲ್ಲಿ ಹೂಡಿಕೆ ಮಾಡಬೇಕು, ಹೇಗೆ ಹೂಡಿಕೆ ಮಾಡಬೇಕು ಅನ್ನೋದು ಸಾಕಷ್ಟು ಮಂದಿಗೆ ಗೊಂದಲ ಇರುತ್ತೆ. ಇದರ ನಡುವೆ ನಿಶ್ಚಿತ ಠೇವಣಿಗಳು ಯಾವಾಗಲೂ ಆದಾಯವನ್ನು ಹೆಚ್ಚಿಸುವ ಖಚಿತ ಮಾರ್ಗವಾಗಿದೆ. ನಿಶ್ಚಿತ ಠೇವಣಿಗಳ ಮೇಲೆ ಅತಿ ಹೆಚ್ಚು ಬಡ್ಡಿದರಗಳನ್ನು ಬ್ಯಾಂಕ್‌ಗಳ ಬಗ್ಗೆ ತಿಳಿಯೋಣ. ಪ್ರಮುಖ ಅಂಶಗಳು ಇಲ್ಲಿವೆ.
ಹಣಕಾಸಿನ ಅಪಾಯಗಳನ್ನು ಕಡಿಮೆ ಮಾಡುವ ಪ್ರಮುಖ ಮಾರ್ಗಗಳಲ್ಲಿ ನಿಶ್ಚಿತ ಠೇವಣಿ ಕೂಡ ಒಂದು. ಸಾಕಷ್ಟು ಮಂದಿ ಭದ್ರತೆಯ ದೃಷ್ಟಿಯಿಂದ ಎಫ್‌ಡಿ ತುಂಬಾ ಸುರಕ್ಷಿತ ಎಂದು ಪರಿಗಣಿಸುತ್ತಾರೆ. ಹೀಗಾಗಿ ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆಗೆ ಮುಂದಾಗುತ್ತಾರೆ. ನಿಶ್ಚಿತ ಠೇವಣಿಯಲ್ಲಿ ಆದಾಯ ಖಚಿತವಾಗಿರುತ್ತೆ. ಆದರೆ ಗ್ರಾಹಕರ ಮುಂದೆ ಎದುರಾಗುವ ದೊಡ್ಡ ಸವಾಲುಗಳೆಂದರೆ ಬ್ಯಾಂಕ್‌ಗಳ ಆಯ್ಕೆ ಮತ್ತು ಬಡ್ಡಿದರಗಳು. ಬ್ಯಾಂಕ್‌ನಲ್ಲಿ ಎಫ್‌ಡಿಗೆ ಅಧಿಕ ಬಡ್ಡಿ ದರಗಳು ಸಿಗುತ್ತವೆಯೋ ಅಲ್ಲಿ ಹೂಡಿಕೆಗೆ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಾರೆ. ಹೂಡಿಕೆಗೂ ಮುನ್ನ ಬ್ಯಾಂಕ್‌ಗಳಲ್ಲಿನ ಬಡ್ಡಿದರಗಳನ್ನು ಹೋಲಿಕೆ ಮಾಡಿ ನೋಡುತ್ತಾರೆ.
ಸಾಮಾನ್ಯವಾಗಿ 1 ರಿಂದ 5 ವರ್ಷಗಳ ಚಿಕ್ಕ ಎಫ್‌ಡಿಗಳಿಗೆ ಜನರು ಆಸಕ್ತಿ ತೋರಿಸುತ್ತಾರೆ. ದೀರ್ಘಾವಧಿಯ ಎಫ್‌ಡಿಗಳಿಗೆ ಆಸಕ್ತಿ ಕಡಿಮೆ. ಎಫ್‌ಡಿಗಳು ನಿಮ್ಮ ಉಳಿತಾಯವನ್ನು ಹೆಚ್ಚಿಸಲು ವಿಶ್ವಾಸಾರ್ಹ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಬ್ಯಾಂಕ್ ಆಯ್ಕೆ ಹೇಗಿರಬೇಕು ಎಂಬುದರ ಬಗ್ಗೆ ಇಲ್ಲಿಮಾಹಿತಿಯನ್ನು ನೀಡಲಾಗಿದೆ.
ಮೊದಲು ಸೂಕ್ತವಾದ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ
ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಮಾಡಿರುವ ಗ್ರಾಹಕ ಸ್ನೇಹಿ ಬ್ಯಾಂಕ್ ಹಾಗೂ ವಿಶ್ವಾಸಾರ್ಹ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ. ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಸಾಮಾನ್ಯವಾಗಿ ಹೂಡಿಕೆಗೆ ತುಂಬಾ ಸುರಕ್ಷಿತ ಅಂತ ಪರಿಗಣಿಸಲಾಗಿದ್ದು, ಇವು ಸ್ಪರ್ಧೆಯನ್ನು ಎದುರಿಸುವ ಸಲುವಾಗಿ ತಮ್ಮದೇ ಆದ ಬಡ್ಡಿ ದರಗಳನ್ನು ಘೋಷಿಸುತ್ತವೆ.
ಎಫ್‌ಡಿ ಮೇಲಿನ ಬಡ್ಡಿದರಗಳನ್ನು ಮೌಲ್ಯಮಾಪನ ಮಾಡಿ
ಬ್ಯಾಂಕ್ ಆಯ್ಕೆ ನಂತರ ಎಫ್‌ಡಿ ಮೇಲೆ ಯಾವ ಬ್ಯಾಂಕ್ ಎಷ್ಟು ಬಡ್ಡಿಯನ್ನು ನೀಡುತ್ತಿದೆ ಎಂಬುದನ್ನು ಮೌಲ್ಯಮಾಪನ ಮಾಡಿ. ಇದು ನಿಮ್ಮ ಆದಾಯವನ್ನು ಹೆಚ್ಚಿಸಲು ನೆರವಾಗುತ್ತದೆ. ಮಾರುಕಟ್ಟೆಯಲ್ಲಿ ಬ್ಯಾಂಕ್‌ಗಳ ನಡುವೆ ತೀವ್ರ ಸ್ಪರ್ಧೆಯಿದೆ. ಹೀಗಾಗಿ ಒಂದೊಂದು ಬ್ಯಾಂಕ್ ಒಂದೊಂದು ರೀತಿಯ ಬಡ್ಡಿದರಗಳನ್ನು ಘೋಷಿಸುತ್ತವೆ.
ಅವಧಿಯ ಬಗ್ಗೆ ನಿರ್ಧಾರ ಕೈಗೊಳ್ಳಿ
ನಿಶ್ಚಿತ ಠೇವಣಿ ಸಂಬಂಧ ಅವಧಿಯ ನಿರ್ಧಾರವೂ ತುಂಬಾ ಮುಖ್ಯವಾಗಿರುತ್ತದೆ. ನೀವು ಎಷ್ಟು ವರ್ಷಗಳಿಗೆ ಎಫ್‌ಡಿ ಮಾಡುತ್ತೀರಿ ಎಂಬುದರ ಮೇಲೆ ನೀವು ಆದಾಯವನ್ನು ಗಳಿಸಲು ಅವಕಾಶ ಇರುತ್ತದೆ. ಸಾಮಾನ್ಯವಾಗಿ ಅಲ್ಪ ಅವಧಿಯ ಎಫ್‌ಡಿಗಳಿಗೆ ಬಡ್ಡಿ ಕಡಿಮೆ. ದೀರ್ಘಾವಧಿಯ ಎಫ್‌ಡಿಗಳಿಗೆ ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳು ಹೆಚ್ಚಿನ ಬಡ್ಡಿದರಗಳನ್ನು ಘೋಷಣೆ ಮಾಡುತ್ತವೆ.
ಬ್ಯಾಂಕ್‌ಗಳು ನೀಡುವ ಆಫರ್‌ಗಳನ್ನು ಗಮನಿಸುತ್ತಿರಿ
ಬ್ಯಾಂಕ್‌ಗಳು ವಿಶೇಷ ದಿನಗಳಂದು ಹಾಗೂ ತಮ್ಮ ಗುರಿಗಳನ್ನು ಸಾಧಿಸುವ ಸಲುವಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಿರುವೆ. ಇಂಥ ಸಮಯವನ್ನು ಸದುಪಯೋಗ ಮಾಡಿಕೊಂಡು ನಿಮ್ಮಗೆ ಯಾವ ರೀತಿಯ ಎಫ್‌ಡಿ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
ಅವಧಿಗೂ ಮೊದಲೇ ವಾಪಸ್ ಪಡೆಯುವ ವಿಧಿಸುವ ದಂಡದ ಬಗ್ಗೆ ತಿಳಿದುಕೊಳ್ಳಿ
ಸಾಮಾನ್ಯವಾಗಿ ಗ್ರಾಹಕರು ಕಷ್ಟ ಬಂದಾಗ ಎಫ್‌ಡಿ ಹಣವನ್ನು ವಾಪಸ್ ಪಡೆಯಲು ಯೋಚಿಸುತ್ತಾರೆ. ಆಗ ಅವರು ಬಡ್ಡಿ, ಆದಾಯವನ್ನು ಲೆಕ್ಕ ಹಾಕುವುದಿಲ್ಲ. ಆದರೆ ನಿಮ್ಮ ನಿಶ್ಚಿತ ಠೇವಣಿಗೆ ಸೂಕ್ತ ನ್ಯಾಯ ಕಲ್ಪಿಸಬೇಕಾರೆ ಅವಧಿಗೂ ಮೊದಲೇ ಎಫ್‌ಡಿ ಹಣ ಹಿಂಪಡೆಯಲು ಏನೆಲ್ಲಾ ನಿಯಮಗಳಿವೆ. ಎಷ್ಟು ದಂಡ, ಬಡ್ಡಿ ಕಡಿತ ಸೇರಿದಂತೆ ಪ್ರಮುಖ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ.