SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ
SBI FD rate hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅದನ್ನು ಇಂದಿನಿಂದ ಅನ್ವಯವಾಗುವಂತೆ ಜಾರಿಗೊಳಿಸಿದೆ. 2 ಕೋಟಿ ರೂಪಾಯಿ ತನಕದ ಸ್ಥಿರ ಠೇವಣಿಗಳಿಗೆ ಇದು ಅನ್ವಯವಾಗಿದ್ದು, ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ.
ಮುಂಬಯಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲವು ಸ್ಥಿರ ಠೇವಣಿಗಳ ಬಡ್ಡಿದರವನ್ನು ಪರಿಷ್ಕರಿಸಿದ್ದು, ಇಂದಿನಿಂದ (ಮೇ 15) ಅನ್ವಯವಾಗುವಂತೆ ಜಾರಿಗೊಳಿಸಿದೆ. ವಿಶೇಷವಾಗಿ 2 ಕೋಟಿ ರೂಪಾಯಿ ತನಕದ ಠೇವಣಿಗಳ ಬಡ್ಡಿದರ ಪರಿಷ್ಕರಣೆಯಾಗಿದೆ. ಎಸ್‌ಬಿಐ 46 ರಿಂದ 179 ದಿನಗಳು, 180 ರಿಂದ 210 ದಿನಗಳು ಮತ್ತು 211 ರಿಂದ ಒಂದು ವರ್ಷದ ಅವಧಿಗಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳ ಬಡ್ಡಿದರಗಳನ್ನು 25-75 ಮೂಲ ಅಂಶಗಳಷ್ಟು ಹೆಚ್ಚಿಸಿದೆ. ಬ್ಯಾಂಕ್ ಈ ಹಿಂದೆ 2023ರ ಡಿಸೆಂಬರ್ 27ರಂದು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿತ್ತು.
ಎಸ್‌ಬಿಐ ಸ್ಥಿರ ಠೇವಣಿಗಳ ಹೊಸ ಬಡ್ಡಿದರ:
ಅಲ್ವಾವಧಿ ಠೇವಣಿಗಳು
1) 7 ದಿನಗಳಿಂದ 45 ದಿನಗಳ ತನಕ - ಶೇ 3.50
2) 46 ದಿನಗಳಿಂದ 179 ದಿನಗಳ ತನಕ - ಶೇ 5.50
3) 180 ದಿನಗಳಿಂದ 210 ದಿನಗಳ ತನಕ ಶೇ 6
4) 211 ದಿನಗಳಿಂದ ಒಂದು ವರ್ಷ ತನಕ ಶೇ6.25
ಒಂದು ವರ್ಷ ಮೇಲ್ಪಟ್ಟ ಸ್ಥಿರ ಠೇವಣಿಗಳು
1) 1 ವರ್ಷದಿಂದ 2 ವರ್ಷ ತನಕ - ಶೇ 6.8
2) 2 ವರ್ಷದಿಂದ 3 ವರ್ಷದೊಳಗಿನ ಠೇವಣಿ- ಶೇ 7
3) 3 ವರ್ಷದಿಂದ 5 ವರ್ಷದೊಳಗಿನ ಠೇವಣಿ - ಶೇ 6.75
4) 5 ವರ್ಷ ಮೇಲ್ಪಟ್ಟು 10 ವರ್ಷ ತನಕ - ಶೇ 6.5
ಎಸ್‌ಬಿಐ ಹಿರಿಯ ನಾಗರಿಕರ ಸ್ಥಿರ ಠೇವಣಿಗಳ ಹೊಸ ಬಡ್ಡಿದರ
ಎಸ್‌ಬಿಐನಲ್ಲಿ ಹಿರಿಯ ನಾಗರಿಕರು ತಮ್ಮ ಸ್ಥಿರ ಠೇವಣಿಗಳ ಮೇಲೆ 50 ಮೂಲ ಅಂಶಗಳಷ್ಟು ಹೆಚ್ಚುವರಿ ಬಡ್ಡಿ ಪಡೆಯುತ್ತಾರೆ.
1) 7 ದಿನಗಳಿಂದ 10 ವರ್ಷ ತನಕದ ಸ್ಥಿರ ಠೇವಣಿಗಳ ಬಡ್ಡಿದರ - ಶೇ 4 ರಿಂದ ಶೇಕಡ 7.5ರ ನಡುವೆ ಇದೆ
ಅಲ್ಪಾವಧಿ ಸ್ಥಿರ ಠೇವಣಿಗಳು
2) 7 ದಿನಗಳಿಂದ 45 ದಿನಗಳ ತನಕ - ಶೇ 4
3) 46 ದಿನಗಳಿಂದ 179 ದಿನಗಳ ತನಕ - ಶೇ 6
4) 180 ದಿನಗಳಿಂದ 210 ದಿನಗಳ ತನಕ ಶೇ 6.5
5) 211 ದಿನಗಳಿಂದ ಒಂದು ವರ್ಷ ತನಕ ಶೇ6.75
ಒಂದು ವರ್ಷ ಮೇಲ್ಪಟ್ಟ ಸ್ಥಿರ ಠೇವಣಿಗಳು
1) 1 ವರ್ಷದಿಂದ 2 ವರ್ಷ ತನಕ - ಶೇ 7.3
2) 2 ವರ್ಷದಿಂದ 3 ವರ್ಷದೊಳಗಿನ ಠೇವಣಿ- ಶೇ 7.5
3) 3 ವರ್ಷದಿಂದ 5 ವರ್ಷದೊಳಗಿನ ಠೇವಣಿ - ಶೇ 7.25
4) 5 ವರ್ಷ ಮೇಲ್ಪಟ್ಟು 10 ವರ್ಷ ತನಕ - ಶೇ 7.50
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.