Chanakya Niti: ಚಾಣಕ್ಯರ ಪ್ರಕಾರ ನಮ್ಮ ನೋವು, ದುಃಖವನ್ನು ಈ 5 ಜನರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು, ಇದರಿಂದ ಅಪಾಯ ಖಚಿತ
Dec 12, 2024 12:09 PM IST
ಚಾಣಕ್ಯ ನೀತಿ
- ಚಾಣಕ್ಯರು ಮಹಾನ್ ವಿದ್ವಾಂಸ, ಆ ಕಾಲದಲ್ಲೇ ಅವರು ಬದುಕಿನ ಎಲ್ಲಾ ವಿಚಾರಗಳನ್ನು ಅರಿತಿದ್ದರು. ಅವರ ಪ್ರಕಾರ ಅವರ ನೋವು ಹಾಗೂ ದುಃಖವನ್ನು ಈ 5 ಜನರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು. ಯಾಕೆಂದರೆ ಅವರೊಂದಿಗೆ ನೋವು, ದುಃಖ ಹಂಚಿಕೊಂಡರೆ ಕಡಿಮೆಯಾಗುವ ಬದಲು ಇನ್ನಷ್ಟು ಹೆಚ್ಚುತ್ತದೆ.
ದುಃಖ ಹಂಚಿಕೊಂಡರೆ ಕಡಿಮೆಯಾಗುತ್ತದೆ, ಸಂತೋಷ ಹಂಚಿಕೊಂಡರೆ ಹೆಚ್ಚಾಗುತ್ತದೆ ಎಂಬ ಮಾತನ್ನು ನೀವು ಕೇಳಿ ಇರಬಹುದು. ನಮ್ಮ ಮನದ ಭಾವನೆಗಳಾದ ದುಃಖ, ಸಂತೋಷವನ್ನು ಇನ್ನೊಬ್ಬರಿಗೆ ಹಂಚಿಕೊಂಡಾಗ ಮಾತ್ರ ಮನಸ್ಸಿಗೆ ತೃಪ್ತಿ ಸಿಗುವುದು ಎನ್ನುವ ಭಾವ ಹಲವರಲ್ಲಿದೆ. ಆದರೆ ಚಾಣಕ್ಯರು ಈ ವಿಚಾರದ ಬಗ್ಗೆ ವ್ಯತಿರಿಕ್ತ ಮಾತುಗಳನ್ನು ಹೇಳಿದ್ದಾರೆ.
ಚಾಣಕ್ಯರ ಪ್ರಕಾರ ನಮ್ಮ ಜೀವನದಲ್ಲಿನ ನೋವು, ದುಃಖಗಳನ್ನು ಈ ಕೆಲವು ಜನರೊಂದಿಗೆ ಹಂಚಿಕೊಳ್ಳಬಾರದು. ಅಂತಹ ಕೆಲವು ಜನರಿಂದ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಅವರೊಂದಿಗೆ ನಮ್ಮ ಸಮಸ್ಯೆ, ದುಃಖವನ್ನು ಹಂಚಿಕೊಳ್ಳುವುದರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಹಾಗಾದರೆ ನಮ್ಮ ದುಃಖ, ನೋವುಗಳನ್ನು ಯಾರೊಂದಿಗೆ ಹಂಚಿಕೊಳ್ಳಬಾರದು ಎಂದು ಚಾಣಕ್ಯ ಹೇಳಿದ್ದಾರೆ ನೋಡೋಣ.
ಎಲ್ಲರೊಂದಿಗೆ ಸ್ನೇಹದಿಂದಿರುವ ವ್ಯಕ್ತಿಗಳು
ಎಲ್ಲರೊಂದಿಗೂ ಸ್ನೇಹದಿಂದ ವರ್ತಿಸುವ ವ್ಯಕ್ತಿ ಒಳ್ಳೆಯವರು ನಿಜ, ಆದರೆ ಅವರಿಂದಲೇ ಅಪಾಯವಾಗಬಹುದು. ಅವರ ಎಲ್ಲರ ಸರಿ, ತಪ್ಪುಗಳನ್ನು ಬೆಂಬಲಿಸುತ್ತಾರೆ. ಅಂತಹ ವ್ಯಕ್ತಿಗಳ ಜೊತೆ ನೀವು ಎಂದಿಗೂ ನಿಮ್ಮ ದುಃಖ ಮತ್ತು ನೋವನ್ನು ಹಂಚಿಕೊಳ್ಳಬಾರದು. ಅಂತಹ ವ್ಯಕ್ತಿಯು ಯಾವಾಗ ಬೇಕಾದರೂ ನಿಮ್ಮ ನಂಬಿಕೆಯನ್ನು ಮುರಿಯಬಹುದು. ಯಾಕೆಂದರೆ ಅವರು ಯಾರಿಗೆ ಯಾವಾಗ ಬೇಕಾದರೂ ನಿಮ್ಮ ನೋವು, ದುಃಖದ ಬಗ್ಗೆ ಹೇಳಬಹುದು. ಎಲ್ಲರಿಗೂ ಸೇರಿದ್ದು ಯಾರದ್ದೂ ಅಲ್ಲ ಎಂಬ ಮಾತಿದೆ.
ಸ್ವಾರ್ಥಿಗಳು
ಆಗಾಗ ನಾವು ತಮ್ಮ ಸ್ವಂತ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವ ಅನೇಕ ಜನರನ್ನು ಕಾಣುತ್ತೇವೆ. ಇತರರು ಒಳ್ಳೆಯವರು ಅಥವಾ ಕೆಟ್ಟವರು ಎಂದು ಅವರು ಚಿಂತಿಸುವುದಿಲ್ಲ. ಆಚಾರ್ಯ ಚಾಣಕ್ಯ ಅವರು ತಮ್ಮ ಸ್ವಾರ್ಥಕ್ಕಾಗಿ ಯಾವಾಗಲೂ ನಿಮ್ಮನ್ನು ಮೋಸಗೊಳಿಸಬಹುದು. ಅಂತಹವರು ಯಾವಾಗ ಬೇಕಾದರೂ ನಿಮ್ಮ ದುಃಖ, ನೋವನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಹಾಗಾಗಿ ಅಂತಹವರಿಂದ ದೂರ ಇರುವುದು ಉತ್ತಮ.
ಇತರರನ್ನು ನೋಡಿ ಅಸೂಯೆ ಪಡುವವರು
ಇತರರ ಯಶಸ್ಸು, ಸಾಧನೆ ನೋಡಿ ಅಸೂಯೆ ಪಡುವ ಜನರಿರುತ್ತಾರೆ. ಅಂತಹ ಬಳಿ ಎಂದಿಗೂ ನೋವು, ದುಃಖವನ್ನು ಹೇಳಿಕೊಳ್ಳಬಾರದು. ಅವರು ನಮ್ಮ ನೋವು, ದುಃಖವನ್ನು ಆಡಿಕೊಂಡು ನಗುತ್ತಾರೆ. ನಮ್ಮ ನೋವು, ದುಃಖ ಅವರಿಗೆ ಸಮಾಧಾನ ತರುತ್ತದೆ. ಇದರಿಂದ ಅವರು ಸಾಕಷ್ಟು ಖುಷಿ ಪಡುತ್ತಾರೆ.
ಎಲ್ಲವನ್ನೂ ಗೇಲಿ ಮಾಡುವ ವ್ಯಕ್ತಿ
ಎಲ್ಲವನ್ನು ಗೇಲಿ ಮಾಡುವ ಮತ್ತು ಇತರರನ್ನು ಗಂಭೀರವಾಗಿ ಪರಿಗಣಿಸದ ಜನರೊಂದಿಗೆ ನಿಮ್ಮ ಸಮಸ್ಯೆಗಳು ಮತ್ತು ದುಃಖಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ಅಂತಹ ಜನರು ನಿಮ್ಮ ಸಮಸ್ಯೆಗಳನ್ನು ತಮಾಷೆಯಾಗಿ ಇತರರೊಂದಿಗೆ ಹಂಚಿಕೊಳ್ಳಬಹುದು ಅಥವಾ ಯಾವಾಗಲೂ ನಿಮ್ಮನ್ನು ಹಂಗಿಸಬಹುದು. ಅವರು ನಿಮ್ಮ ನೋವನ್ನು ಕೂಡ ಹಂಗಿಸಬಹುದು.
ಯೋಚಿಸದೇ ಮಾತನಾಡುವವರು
ಕೆಲವರು ಏನು, ಎತ್ತ ಎಂದು ಯೋಚನೆ ಮಾಡದೇ ಮಾತನಾಡುತ್ತಾರೆ, ಅಂತಹವರ ಮುಂದೆಯೂ ನಾವು ನಮ್ಮ ದುಃಖ, ನೋವುಗಳನ್ನು ಹಂಚಿಕೊಳ್ಳಬಾರದು. ಯಾಕೆಂದರೆ ಅವರು ನಿಮ್ಮ ಬಗ್ಗೆ ಎಲ್ಲಿ, ಯಾವಾಗ, ಹೇಗೆ ಬೇಕಾದರೂ ಹೇಳಬಹುದು. ಅಂಥವರ ಬಗ್ಗೆ ಕೂಡ ಯಾರ ಮುಂದೆಯೂ ಹೇಳಬಾರದು ಎಂದು ಚಾಣಕ್ಯ ಹೇಳುತ್ತಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ