logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಈ ಗುಣಗಳನ್ನ ಹೊಂದಿರುವವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ, ಯಶಸ್ಸು ಅವರನ್ನು ಹುಡುಕಿ ಬರುತ್ತದೆ

Chanakya Niti: ಚಾಣಕ್ಯರ ಪ್ರಕಾರ ಈ ಗುಣಗಳನ್ನ ಹೊಂದಿರುವವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ, ಯಶಸ್ಸು ಅವರನ್ನು ಹುಡುಕಿ ಬರುತ್ತದೆ

Reshma HT Kannada

Nov 28, 2024 07:37 AM IST

google News

ಚಾಣಕ್ಯ ನೀತಿ

    • ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಅವನಲ್ಲಿ ಕೆಲವೊಂದು ಗುಣಗಳಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಅವರ ನೀತಿಯ ಪ್ರಕಾರ ಈ ಗುಣಗಳನ್ನು ಹೊಂದಿರುವ ಮನುಷ್ಯ ಬದುಕಿನಲ್ಲಿ ಎಂದಿಗೂ ಸೋಲಲು ಸಾಧ್ಯವಿಲ್ಲ, ಮಾತ್ರವಲ್ಲ ಯಶಸ್ಸು ಅವನನ್ನು ಹುಡುಕಿ ಬರುತ್ತದೆ. ಅಂತಹ ಗುಣಗಳು ಯಾವುವು ನೋಡಿ. 
ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ಮತ್ತು ಹೆಚ್ಚು ಕಲಿತ ವ್ಯಕ್ತಿ ಎಂದು ಪರಿಗಣಿಸಲಾಗಿದೆ.  ಅವರು ಅಂದು ರೂಪಿಸಿದ ಸೂತ್ರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತದಂತಿವೆ. ಚಾಣಕ್ಯರು ಬದುಕು ಹಾಗೂ ಸಮಾಜವನ್ನು ಅರಿತು ಕುಡಿದವರಾಗಿದ್ದಾರೆ. ಅವರು ಮನುಷ್ಯ ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ತಮ್ಮ ನೀತಿಶಾಸ್ತ್ರ ಪುಸ್ತಕದಲ್ಲಿ ಬರೆದಿದ್ದರು. ಇವರು ಮನುಷ್ಯರ ಬದುಕಿಗೆ ಸಂಬಂಧಿಸಿ ಹಲವು ನೀತಿಗಳನ್ನು ರಚಿಸಿದ್ದರು. ತಮ್ಮ ನೀತಿಶಾಸ್ತ್ರ ಪುಸ್ತಕದಲ್ಲಿ ನೂರಾರು ವಿಚಾರಗಳನ್ನು ತಿಳಿಸಿದ್ದರು. ಯಶಸ್ಸು, ಸೋಲು, ಸಾಂಸಾರಿಕ ಜೀವನ ಹೀಗೆ ಹಲವು ವಿಚಾರಗಳ ಬಗ್ಗೆ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಬರೆದಿದ್ದಾರೆ. 

ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸು ಕಾಣಲು ಬಯಸಿದರೆ, ಸಮೃದ್ಧ ಜೀವನ ನಡೆಸಬೇಕು ಎಂದುಕೊಂಡರೆ ಚಾಣಕ್ಯ ನೀತಿಯಲ್ಲಿನ ಈ ಅಂಶಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ. ಚಾಣಕ್ಯರ ಪ್ರಕಾರ ವ್ಯಕ್ತಿಯಲ್ಲಿ ಈ ಗುಣಗಳಿದ್ದರೆ ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೇ ಅವನು ಜೀವನದಲ್ಲಿ ಯಶಸ್ಸು ಸಾಧಿಸುವುದನ್ನು ಕೂಡ ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಈ ಗುಣಗಳನ್ನು ಹೊಂದಿರುವ ವ್ಯಕ್ತಿಯು ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸನ್ನು ಸಾಧಿಸುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ.

ಕಠಿಣ ಪರಿಶ್ರಮ 

ಆಚಾರ್ಯ ಚಾಣಕ್ಯರ ಪ್ರಕಾರ , ಯಾವುದೇ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗಬೇಕಾದರೆ, ಅವನು ಕಠಿಣ ಪರಿಶ್ರಮದ ಗುಣವನ್ನು ಹೊಂದಿರಬೇಕು. ಯಾವುದೇ ಗುರಿಯನ್ನು ಸಾಧಿಸಲು ನೀವು ಕಠಿಣ ಪರಿಶ್ರಮವನ್ನು ಹೊಂದಿರಬೇಕು ನೀವು ಕಷ್ಟಪಟ್ಟು ಕೆಲಸ ಮಾಡುವಾಗ ಅದೃಷ್ಟ ಕೂಡ ನಿಮ್ಮನ್ನು ಬೆಂಬಲಿಸುವುದನ್ನು ತಡೆಯುವುದಿಲ್ಲ. ಹಾಗಾಗಿ ಕಠಿಣ ಪರಿಶ್ರಮ ತೋರಿದ ವ್ಯಕ್ತಿಗೆ ಎಂದಿಗೂ ಸೋಲಿಲ್ಲ. 

ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ

ಚಾಣಕ್ಯ ನೀತಿಯ ಪ್ರಕಾರ, ನೀವು ಜೀವನದಲ್ಲಿ ಯಶಸ್ವಿಯಾಗಲು ಮತ್ತು ಶ್ರೀಮಂತರಾಗಲು ಬಯಸಿದರೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು. ಈ ಗುಣ ನಿಮ್ಮಲ್ಲಿದ್ದರೆ ಜೀವನದಲ್ಲಿ ಯಶಸ್ಸು ಖಂಡಿತ. ಅಂತಹವರು ಪರಿಸ್ಥಿತಿಗೆ ಅನುಗುಣವಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಸೋಲುವುದು ಕೂಡ ಮನುಷ್ಯನ ಸೋಲಿಗೆ ಪ್ರಮುಖ ಕಾರಣವಾಗುತ್ತದೆ. 

ಸ್ವಯಂ ನಿಯಂತ್ರಣ

ಚಾಣಕ್ಯ ನೀತಿಯ ಪ್ರಕಾರ, ತನ್ನ ಭಾವನೆಗಳು, ಆಸೆಗಳು ಮತ್ತು ಅಭ್ಯಾಸಗಳ ಮೇಲೆ ನಿಯಂತ್ರಣ ಹೊಂದಿರುವ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗುವುದು ಖಚಿತ. ಈ ರೀತಿಯ ಜನರು ಜೀವನದಲ್ಲಿ ದೊಡ್ಡ ಗುರಿಗಳನ್ನು ಸುಲಭವಾಗಿ ಸಾಧಿಸಬಹುದು. ಮನುಷ್ಯನಿಗೆ ಮೊದಲು ತನ್ನ ಮೇಲೆ ತನಗೆ ನಿಯಂತ್ರಣವಿರಬೇಕು. 

ತಾಳ್ಮೆ ಹಾಗೂ ಧೈರ್ಯ

ಆಚಾರ್ಯ ಚಾಣಕ್ಯರ ಪ್ರಕಾರ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ತಾಳ್ಮೆಯಿಂದಿರಬೇಕು. ಕಷ್ಟದ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳದೆ ಮತ್ತು ಪ್ರಯತ್ನವನ್ನು ಮುಂದುವರೆಸುವವರು ಜೀವನದಲ್ಲಿ ಖಂಡಿತವಾಗಿ ಯಶಸ್ವಿಯಾಗುತ್ತಾರೆ. ಜೊತೆಗೆ ಧೈರ್ಯ ಹೊಂದಿರುವುದು ಕೂಡ ಯಶಸ್ಸಿಗೆ ದಾರಿಯಾಗುತ್ತದೆ. 

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ