Chanakya Niti: ದಾಂಪತ್ಯದಲ್ಲಿ ಎಂದಿಗೂ ಮನಸ್ತಾಪ, ವಾದ–ವಿವಾದಗಳು ಬರಬಾರದು ಅಂದ್ರೆ ಮದುವೆಗೂ ಮುನ್ನ ಸಂಗಾತಿಗೆ ಈ 3 ಪ್ರಶ್ನೆ ಕೇಳಿ
ಆಚಾರ್ಯ ಚಾಣಕ್ಯರು ಬದುಕಿಗೆ ಮಾತ್ರವಲ್ಲ ಸುಖ ಸಂಸಾರಕ್ಕೂ ಸೂತ್ರಗಳನ್ನು ಹೇಳಿದ್ದಾರೆ. ಅವರ ಪ್ರಕಾರ ದಾಂಪತ್ಯ ಜೀವನ ಸುಖಮಯ ಮತ್ತು ಸಮೃದ್ಧಿಯಿಂದ ಕೂಡಿರಬೇಕು ಎಂದರೆ ಮದುವೆಯಾಗುವ ಮುನ್ನವೇ ಸಂಗಾತಿಯಾಗುವವರಿಗೆ ಈ ಕೆಲವು ಪ್ರಶ್ನೆಗಳನ್ನ ಕೇಳಬೇಕು. ಇದರಿಂದ ವೈವಾಹಿಕ ಜೀವನದಲ್ಲಿ ಸದಾ ಸಂತೋಷ, ನೆಮ್ಮದಿ ತುಂಬಿರುತ್ತದೆ.
ಆಚಾರ್ಯ ಚಾಣಕ್ಯರು ಮನುಷ್ಯರ ಕಲ್ಯಾಣಕ್ಕಾಗಿ ಹಲವು ನೀತಿಗಳನ್ನು ರೂಪಿಸಿದ್ದಾರೆ. ಈ ನೀತಿಗಳಲ್ಲಿ ಅವರು ಅನೇಕ ವಿಷಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಯಾವುದೇ ವ್ಯಕ್ತಿಯು ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಲು ಬಯಸಿದರೆ, ಅವನು ಚಾಣಕ್ಯ ನೀತಿಯ ಬೋಧನೆಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ. ಆಚಾರ್ಯ ಚಾಣಕ್ಯ ವೈವಾಹಿಕ ಜೀವನವನ್ನು ಸಂತೋಷದಿಂದ ಮತ್ತು ಸಮೃದ್ಧವಾಗಿಸಲು ಅನೇಕ ನೀತಿಗಳನ್ನು ರೂಪಿಸಿದರು. ಈ ನೀತಿಗಳಲ್ಲಿ, ವೈವಾಹಿಕ ಜೀವನವನ್ನು ಸುಧಾರಿಸಲು ಅಗತ್ಯ ಇರುವ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಮುಂದೆ ಮದುವೆಯಾಗಲಿರುವವರು ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದರೆ ಖಂಡಿತ ಅವರ ಸಾಂಸಾರಿಕ ಜೀವನ ಸಂತೋಷದಿಂದ ಕೂಡಿರುತ್ತದೆ.
ಅವರ ಪ್ರಕಾರ ಮದುವೆಗೂ ಮುನ್ನ ನಿಮ್ಮ ಸಂಗಾತಿಯ ಮುಂದೆ ನೀವು ಕೆಲವು ಪ್ರಶ್ನೆಗಳನ್ನು ಕೇಳಬೇಕು ಹಾಗೂ ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ನಿಮ್ಮ ಭವಿಷ್ಯದ ಜೀವನದಲ್ಲಿ ಯಾವುದೇ ಮನಸ್ತಾಪ, ಕೋಪ–ತಾಪಗಳು ಬರುವುದಿಲ್ಲ ಎಂದು ಹೇಳುತ್ತಾರೆ. ಇದರಿಂದ ಸಂಬಂಧದಲ್ಲಿ ಬಿರುಕು ಮೂಡದೇ ಸುಮಧುರ ದಾಂಪತ್ಯ ನಿಮ್ಮದಾಗುತ್ತದೆ. ಹಾಗಾದರೆ ಸಂಗಾತಿಯ ಮುಂದೆ ಯಾವ ಪ್ರಶ್ನೆಗಳನ್ನು ಕೇಳಬೇಕು ನೋಡಿ.
ವಯಸ್ಸಿನ ಅಂತರ
ಆಚಾರ್ಯ ಚಾಣಕ್ಯರ ಪ್ರಕಾರ , ಮದುವೆಯಾಗಲು ಹೊರಟಿದ್ದರೆ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಸಂಗಾತಿಯವವರ ನಿಖರವಾದ ವಯಸ್ಸನ್ನು ಕೇಳಿ ತಿಳಿದುಕೊಳ್ಳುವುದು. ದಂಪತಿಗಳು ಮದುವೆಗೆ ಸರಿಯಾದ ವಯಸ್ಸಿನ ಅಂತರವನ್ನು ಹೊಂದಿದ್ದರೆ ಪರಸ್ಪರ ತಿಳುವಳಿಕೆ ಸುಧಾರಿಸುತ್ತದೆ ಮತ್ತು ಸಂಬಂಧವು ಸುರಕ್ಷಿತವಾಗಿ ಉಳಿಯುತ್ತದೆ. ಹಲವು ಬಾರಿ ವಯಸ್ಸಿನ ಅಂತರದಿಂದ ಪರಸ್ಪರ ಸಮನ್ವಯ ಸಾಧ್ಯವಾಗದೆ ವಾದ–ವಿವಾದಗಳಿಗೆ ಕಾರಣವಾಗುತ್ತದೆ. ನೀವು ಮದುವೆಯಾಗಲು ಹೊರಟಿದ್ದರೆ, ಸೂಕ್ತವಾದ ವಯಸ್ಸಿನ ಅಂತರವಿದೆ ಎಂದು ಖಚಿತಪಡಿಸಿಕೊಳ್ಳಿ.
ಆರೋಗ್ಯದ ಬಗ್ಗೆ
ಚಾಣಕ್ಯರ ಪ್ರಕಾರ ನೀವು ಮದುವೆಯಾಗಲಿರುವ ಹುಡುಗ ಅಥವಾ ಹುಡುಗಿಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅನೇಕ ಬಾರಿ ಮದುವೆಯ ನಂತರ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಹಿಂದೆ ಇದ್ದ ಆರೋಗ್ಯ ಸಮಸ್ಯೆಗಳನ್ನು ಮುಚ್ಚಿಡುವುದು ಸಂಬಂಧ ಮುರಿಯಲು ಕಾರಣವಾಗುತ್ತದೆ. ಒಂದು ವೇಳೆ ಸಂಬಂಧದಲ್ಲಿ ಬಿರುಕು ಮೂಡಿಲ್ಲ ಎಂದರೂ ಗಂಡ–ಹೆಂಡತಿ ಇಬ್ಬರೂ ಜೀವನಪೂರ್ತಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಿಂದಿನ ಸಂಬಂಧಗಳ ಬಗ್ಗೆ
ಚಾಣಕ್ಯ ನೀತಿಯ ಪ್ರಕಾರ, ನೀವು ಮದುವೆಯಾಗಲಿರುವಾಗ, ನಿಮ್ಮ ಸಂಗಾತಿಯ ಹಿಂದಿನ ಸಂಬಂಧಗಳ ಬಗ್ಗೆ ಕೇಳಬೇಕು. ಪತಿ-ಪತ್ನಿಯರಿಬ್ಬರೂ ಪರಸ್ಪರ ಯಾವುದೇ ಹಿಂಜರಿಕೆಯನ್ನು ಹೊಂದಿರಬಾರದು. ಮದುವೆಗೆ ಮುನ್ನ ನಿಮ್ಮ ಸಂಗಾತಿಯೊಂದಿಗೆ ಈ ಸಮಸ್ಯೆಗಳನ್ನು ಚರ್ಚಿಸಿದರೆ, ನಿಮ್ಮ ಜೀವನವು ಉತ್ತಮ ಮತ್ತು ಸಂತೋಷದಾಯಕವಾಗಿರುತ್ತದೆ. ಇದರಿಂದ ಅನುಮಾನಗಳು ಬಾರದಂತೆ ಸಂಬಂಧವನ್ನು ಕಾಪಾಡಿಕೊಳ್ಳಬಹುದು ಎಂದು ಚಾಣಕ್ಯ ಹೇಳುತ್ತಾರೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ