logo
ಕನ್ನಡ ಸುದ್ದಿ  /  ಜೀವನಶೈಲಿ  /  Christmas 2024: ಸಾಂತಾಕ್ಲಾಸ್ ವಿಲೇಜ್‌ಗೆ ಭೇಟಿ ನೀಡಿದರೆ ಪ್ರತಿದಿನವೂ ಕ್ರಿಸ್‌ಮಸ್‌; ಎಲ್ಲಿದೆ ಈ ಜಾಗ, ಇಲ್ಲಿನ ವೈಶಿಷ್ಟ್ಯವೇನು?

Christmas 2024: ಸಾಂತಾಕ್ಲಾಸ್ ವಿಲೇಜ್‌ಗೆ ಭೇಟಿ ನೀಡಿದರೆ ಪ್ರತಿದಿನವೂ ಕ್ರಿಸ್‌ಮಸ್‌; ಎಲ್ಲಿದೆ ಈ ಜಾಗ, ಇಲ್ಲಿನ ವೈಶಿಷ್ಟ್ಯವೇನು?

Reshma HT Kannada

Dec 23, 2024 06:11 PM IST

google News

ಸಾಂತಾಕ್ಲಾಸ್ ವಿಲೇಜ್‌

    • ಕ್ರಿಸ್‌ಮಸ್‌ ಸಂದರ್ಭ ಎಲ್ಲೆಲ್ಲೂ ಸಾಂತಾಕ್ಲಾಸ್‌ಗಳು ಕಾಣಿಸುತ್ತಾರೆ, ಬಹುತೇಕ ನಾವೆಲ್ಲರೂ ಸಾಂತಾಕ್ಲಾಸ್‌ರನ್ನು ನೋಡಿರುತ್ತೇವೆ. ಆದರೆ ಸಾಂತಾಕ್ಲಾಸ್ ವಿಲೇಜ್ ಅನ್ನು ಜೀವನದಲ್ಲಿ ಒಮ್ಮೆಯಾದ್ರೂ ನೋಡಲೇಬೇಕು. ಈ ಜಾಗದಲ್ಲಿ ವರ್ಷಪೂರ್ತಿ ಕ್ರಿಸ್‌ಮಸ್‌ನಂತೆ ಸಂಭ್ರಮವಿರುತ್ತದೆ. ಏನಿದು ಸಾಂತಾಕ್ಲಾಸ್ ವಿಲೇಜ್, ಇದರ ವೈಶಿಷ್ಟ್ಯವೇನು, ಇದು ಇರುವುದೆಲ್ಲಿ? ವಿವರ ಇಲ್ಲಿದೆ
ಸಾಂತಾಕ್ಲಾಸ್ ವಿಲೇಜ್‌
ಸಾಂತಾಕ್ಲಾಸ್ ವಿಲೇಜ್‌ (PC: Canva)

ಡಿಸೆಂಬರ್ 25 ಅನ್ನು ಕ್ರಿಸ್‌ಮಸ್ ಎಂದು ಪ್ರಪಂಚದಾದ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಕ್ರಿಸ್‌ಮಸ್‌ ಕ್ರಿಶ್ಚಿಯನ್ನರ ಹಬ್ಬವಾದರೂ ಸರ್ವಧರ್ಮದವರೂ ಇದನ್ನು ಆಚರಿಸಿ ಸಂಭ್ರಮಿಸುತ್ತಾರೆ. ಚಿಕ್ಕಮಕ್ಕಳು ವರ್ಷಪೂರ್ತಿ ಕ್ರಿಸ್‌ಮಸ್‌ ಹಾಗೂ ಸಾಂತಕ್ಲಾಸ್‌ಗಾಗಿ ಎದುರು ನೋಡುತ್ತಾರೆ. ಯಾಕೆಂದರೆ ಕ್ರಿಸ್‌ಮಸ್ ಸಮಯದಲ್ಲಿ ಸಾಂತಾಕ್ಲಾಸ್ ತಮಗೆ ವಿಶೇಷ ಉಡುಗೊರೆಗಳನ್ನು ನೀಡುತ್ತಾರೆ ಎಂದು ಮಕ್ಕಳು ನಂಬುತ್ತಾರೆ.

ಕ್ರಿಸ್‌ಮಸ್‌ ಸಮಯದಲ್ಲಿ ಎಲ್ಲೆಡೆ ಸಾಂತಾಕ್ಲಾಸ್‌ಗಳು ಕಾಣ ಸಿಗುತ್ತಾರೆ. ಆದರೆ ಇಲ್ಲೊಂದು ತಾಣವಿದೆ. ಇಲ್ಲಿ ವರ್ಷಪೂರ್ತಿ ಸಾಂತಾಕ್ಲಾಸ್ ಕಾಣ ಸಿಗುತ್ತಾರೆ. ಇಲ್ಲಿ ಈ ಜಾಗದಲ್ಲಿ ವರ್ಷವಿಡೀ ಕ್ರಿಸ್‌ಮಸ್ ಸಂಭ್ರಮವಿರುತ್ತದೆ. ಈ ತಾಣದ ಹೆಸರೇ ಸಾಂತಾಕ್ಲಾಸ್ ವಿಲೇಜ್‌. ಈ ತಾಣವನ್ನು ಸಾಂತಾಕ್ಲಾಸ್‌ನ ತವರು ಎಂದು ಹೇಳಲಾಗುತ್ತದೆ. ಸುಂದರ ಹಿಮಚ್ಛಾದಿತ ಪ್ರದೇಶದಲ್ಲಿ ಸಾಂತಾಕ್ಲಾಸ್ ಹಳ್ಳಿ ಇದೆ.  ಹಾಗಾದರೆ ಈ ಸಾಂತಾಕ್ಲಾಸ್ ವಿಲೇಜ್ ಇರುವುದು ಎಲ್ಲಿ, ಇದರ ವೈಶಿಷ್ಟ್ಯವೇನು ಎಂಬುದನ್ನು ತಿಳಿಯೋಣ. 

ಸಾಂತಾಕ್ಲಾಸ್ ವಿಲೇಜ್ ಎಲ್ಲಿದೆ?

ಸಾಂತಾಕ್ಲಾಸ್ ವಿಲೇಜ್ ಇರುವುದು ಫಿನ್‌ಲ್ಯಾಂಡ್‌ ರೊವಾನಿಮಿಯಲ್ಲಿ. ಇದು ವರ್ಷವಿಡೀ ಹಿಮದಿಂದ ಆವೃತವಾಗಿರುವ ಪ್ರದೇಶವಾಗಿದೆ. ಸಾಂತಾಕ್ಲಾಸ್ ವಿಲೇಜ್ ಎನ್ನುವುದು ಒಂದು ಅಮ್ಯೂಸ್‌ಮೆಂಟ್ ಪಾರ್ಕ್‌. ಫಿನ್‌ಲ್ಯಾಂಡ್‌ನ ಲಾಪ್‌ಲ್ಯಾಂಡ್ ಪ್ರಾಂತ್ಯದಲ್ಲಿ 1985ರಲ್ಲಿ ಸಾಂತಾಕ್ಲಾಸ್ ವಿಲೇಜ್ ಅನ್ನು ಸ್ಥಾಪಿಸಲಾಯಿತು. ಸಾಂಟಾ ಕ್ಲಾಸ್ ಗ್ರಾಮವು ರೊವಾನಿಮಿಯ ಈಶಾನ್ಯಕ್ಕೆ ಸುಮಾರು 8 ಕಿಲೋಮೀಟರ್ (5 ಮೈಲಿ) ಮತ್ತು ರೊವಾನಿಮಿ ವಿಮಾನ ನಿಲ್ದಾಣದಿಂದ ಸುಮಾರು 2 ಕಿಲೋಮೀಟರ್ (1.2 ಮೈಲಿ) ದೂರದಲ್ಲಿದೆ. 

ಈ ತಾಣದಲ್ಲಿ ವರ್ಷವಿಡೀ ಸಾಂತಾಕ್ಲಾಸ್‌ನನ್ನು ನೋಡಬಹುದು. ಮಾತ್ರವಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮಕ್ಕಳು ಸಾಂತಾಕ್ಲಾಸ್‌ನಿಂದ ಉಡುಗೊರೆಯನ್ನೂ ಪಡೆಯಬಹುದು. ಪ್ರತಿ ವರ್ಷ ಪ್ರಪಂಚದಾದ್ಯಂತದ ಜನರು ಸಾಂತಾನನ್ನು ಭೇಟಿ ಮಾಡಲು ಇಲ್ಲಿಗೆ ಬರುತ್ತಾರೆ. ಸಾಂತಾಕ್ಲಾಸ್ ಗ್ರಾಮದಲ್ಲಿ ಕ್ರಿಸ್ಮಸ್ ಆಚರಣೆಗಳು ಡಿಸೆಂಬರ್ 23 ರಂದು ಪ್ರಾರಂಭವಾಗುತ್ತವೆ. ಈ ದಿನದಿಂದ ಸಾಂಟಾ ಕ್ಲಾಸ್ ಜನರನ್ನು ಭೇಟಿಯಾಗಲು ಹೊರಡುತ್ತಾನೆ.

ರೊವಾನಿಮಿ ಗ್ರಾಮದ ವೈಶಿಷ್ಟ್ಯ

ರೊವಾನಿಮಿ ಗ್ರಾಮವು ಮರದ ಗುಡಿಸಲುಗಳನ್ನು ಒಳಗೊಂಡಿದೆ. ಇಲ್ಲಿಗೆ ಭೇಟಿ ನೀಡಿದರೆ ಎಲ್ಲಿ ನೋಡಿದರೂ ಅಕ್ಷರಗಳು ಮತ್ತು ಅಂಕಿಗಳನ್ನು ನೋಡಬಹುದು. ವಿಶೇಷವೆಂದರೆ ಇಲ್ಲಿ ಬರುವ ಪತ್ರಗಳನ್ನು ಸಾಂತಾಕ್ಲಾಸ್ ಕೂಡ ಓದಿ ಮಕ್ಕಳಿಗೆ, ದೊಡ್ಡವರಿಗೆ ಸ್ಪಂದಿಸುತ್ತಾರೆ. ಅದಕ್ಕಾಗಿಯೇ ಪ್ರಪಂಚದಾದ್ಯಂತದ ಹಲವರು ಇಲ್ಲಿನ ಸಾಂತಾನಿಗೆ ಪತ್ರಗಳನ್ನು ಕಳುಹಿಸುತ್ತಾರೆ. ಈ ಪತ್ರಗಳನ್ನು ಸಂಗ್ರಹಿಸಲು ತಂಡವೊಂದು ಕೆಲಸ ಮಾಡುತ್ತದೆ, ನಂತರ ಅವರು ಅವುಗಳನ್ನು ಸಾಂಟಾಗೆ ತಲುಪಿಸುವ ಕೆಲಸ ಮಾಡುತ್ತಾರೆ. ಸಾಂಟಾ ಬಿಳಿ ಗಡ್ಡ ಮತ್ತು ಕೆಂಪು ಬಟ್ಟೆಯೊಂದಿಗೆ ಇಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಸಾಂಟಾ ಜೊತೆ ಫೋಟೋ ತೆಗೆಯಲು ಪ್ರಯತ್ನಿಸುತ್ತಾರೆ. ಪ್ರವಾಸಿಗರು ಸಂತಾ ಅವರ ಮನೆಗೆ ಭೇಟಿ ನೀಡಲು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ, ಆದರೆ ಅವರು ಫೋಟೋಗಳನ್ನು ತೆಗೆದುಕೊಳ್ಳಲು ಶುಲ್ಕ ವಿಧಿಸುತ್ತಾರೆ.

ನೀವು ಫಿನ್‌ಲ್ಯಾಂಡ್‌ಗೆ ಹೋದರೆ, ಖಂಡಿತವಾಗಿಯೂ ಕೆಲವು ಸ್ಥಳಗಳಿಗೆ ಭೇಟಿ ನೀಡಬೇಕು. ನಾರ್ದರ್ನ್ ಲೈಟ್ಸ್, ಸಾಂಟಾ ಕ್ಲಾಸ್ ವಿಲೇಜ್, ಹೆಲ್ಸಿಂಕಿ, ಲೆವಿ, ಟರ್ಕು, ಪೂರ್ವು, ಸೈಮಾ ಸರೋವರ, ಫಿನ್‌ಲ್ಯಾಂಡ್ ರಾಷ್ಟ್ರೀಯ ಉದ್ಯಾನವನ, ಸೈವೊಲಿನಾ, ಸುವೊನ್ಲಿನ್ನಾ ಕ್ಯಾಸಲ್‌ನಂತಹ ಅನೇಕ ಸುಂದರ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಬಹುದು. ಬೇಸಿಗೆ ರಜೆ ಸಾಂತಾಕ್ಲಾಸ್ ವಿಲೇಜ್‌ಗೆ ಭೇಟಿ ಮಾಡಲು ಹೇಳಿ ಮಾಡಿಸಿದ ಸಮಯ. ನೀವು ಮಕ್ಕಳೊಂದಿಗೆ ಫಾರಿನ್ ಟ್ರಿಪ್ ಹೋಗಬೇಕು ಅಂದುಕೊಳ್ಳುತ್ತಿದ್ದರೆ ಫಿನ್‌ಲ್ಯಾಂಡ್ ಟ್ರಿಪ್ ಆಯೋಜಿಸಿ, ಸಾಂತಾಕ್ಲಾಸ್ ವಿಲೇಜ್‌ಗೆ ಭೇಟಿ ನೀಡಿ. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ