logo
ಕನ್ನಡ ಸುದ್ದಿ  /  ಜೀವನಶೈಲಿ  /  11 ತಿಂಗಳ ಅಗ್ರಿಮೆಂಟ್‌ಗೂ ಮುನ್ನವೇ ಮನೆ ಮಾಲೀಕ ಬಾಡಿಗೆದಾರರನ್ನು ಖಾಲಿ ಮಾಡಿಸಬಹುದೇ; ಕಾನೂನು ಏನು ಹೇಳುತ್ತೆ

11 ತಿಂಗಳ ಅಗ್ರಿಮೆಂಟ್‌ಗೂ ಮುನ್ನವೇ ಮನೆ ಮಾಲೀಕ ಬಾಡಿಗೆದಾರರನ್ನು ಖಾಲಿ ಮಾಡಿಸಬಹುದೇ; ಕಾನೂನು ಏನು ಹೇಳುತ್ತೆ

Raghavendra M Y HT Kannada

Feb 24, 2024 09:43 AM IST

google News

ಅವಧಿಗೂ ಮುನ್ನವೇ ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸಬಹುದೇ ಇದಕ್ಕೆ ಕಾನೂನು ಏನು ಹೇಳುತ್ತದೆ ಅನ್ನೋದನ್ನು ತಿಳಿಯಿರಿ.

    • Rental Agreement: ಅವಧಿಗೂ ಮುನ್ನವೇ ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸಬಹುದೇ ಇದಕ್ಕೆ ಕಾನೂನು ಏನು ಹೇಳುತ್ತದೆ ಅನ್ನೋದನ್ನು ತಿಳಿಯಿರಿ.
ಅವಧಿಗೂ ಮುನ್ನವೇ ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸಬಹುದೇ ಇದಕ್ಕೆ ಕಾನೂನು ಏನು ಹೇಳುತ್ತದೆ ಅನ್ನೋದನ್ನು ತಿಳಿಯಿರಿ.
ಅವಧಿಗೂ ಮುನ್ನವೇ ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸಬಹುದೇ ಇದಕ್ಕೆ ಕಾನೂನು ಏನು ಹೇಳುತ್ತದೆ ಅನ್ನೋದನ್ನು ತಿಳಿಯಿರಿ.

Rental Agreement: ಭಾರತದಲ್ಲಿ ಸಾಮಾನ್ಯವಾಗಿ ಮನೆ ಮಾಲೀಕ ಮತ್ತು ಬಾಡಿಗೆದಾರರ ನಡುವಿನ ಪರಸ್ಪರ ತಿಳುವಳಿಕೆಯ ಆಧಾರ ಮೇಲೆ ಮನೆಯನ್ನು ಬಾಡಿಗೆ ನೀಡಲಾಗುತ್ತಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ಮನೆ ಬಾಡಿಗೆ ಅಥವಾ ಲೀಸ್‌ಗೆ ಪಡೆಯಬೇಕಾದರೆ ಮಾಲೀಕ ಮತ್ತು ಬಾಡಿಗೆದಾರನ ನಡುವೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಆ ಮೂಲಕ ಇದಕ್ಕೊಂದು ಕಾನೂನಿನ ದಾಖಲೆಯನ್ನಾಗಿ ಮಾಡಿಕೊಳ್ಳುತ್ತಾರೆ.

ಈ ಒಪ್ಪಂದದ ಪತ್ರದಲ್ಲಿ ಎರಡೂ ಕಡೆಯವರು ಅನುಸರಿಸಬೇಕಾದ ಒಂದಷ್ಟು ನಿಯಮಗಳು, ಷರತ್ತುಗಳನ್ನು ತಿಳಿಸಲಾಗಿರುತ್ತದೆ. ಸಿಲಿಕಾನ್ ಸಿಟಿ ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಬಹುತೇಕ ಎಲ್ಲಾ ನಗರಗಳಲ್ಲಿ ಈ ಒಪ್ಪಂದದ ವಿಧಾನ ಚಾಲ್ತಿಯಲ್ಲಿದೆ.

11 ತಿಂಗಳಿಗೆ ಅಗ್ರಿಮೆಂಟ್ ಹಾಕಿಕೊಳ್ಳಲಾಗಿರುತ್ತದೆ. ಇಲ್ಲಿ ಪ್ರಶ್ನೆ ಎದುರಾಗುವುದು ಈ ಅವಧಿಗೂ ಮೊದಲೇ ಬಾಡಿಗೆದಾರ ಮನೆಯನ್ನು ಖಾಲಿ ಮಾಡಬಹುದೇ ಇದಕ್ಕೆ ಮನೆ ಮಾಲೀಕ ಒಪ್ಪುತ್ತಾನಾ, ಒಂದು ವೇಳೆ ಒಪ್ಪದಿದ್ದರೆ ಏನೆಲ್ಲಾ ಸವಾಲುಗಳು ಬಾಡಿಗೆದಾರನ ಮುಂದಿರುತ್ತವೆ, ಬಾಡಿಗೆದಾರ ಮನೆಗೆ ಬರುವ ಮುನ್ನ ಇದ್ದ ವಸ್ತುಗಳು, ಅವುಗಳ ಸ್ಥಿತಿ, ಮಾಲೀಕ ಅವುಗಳಿಗೆ ವಿಧಿಸುವ ದುರಸ್ತಿ ವೆಚ್ಚ, ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಅನ್ನೋದನ್ನ ಇಲ್ಲಿ ನೋಡೋಣ.

ಉದ್ಯೋಗಸ್ಥ ಮಹಿಳೆ ಸ್ನೇಹಾ ಎಂಬುವರು ನೋಯ್ಡಾ ಸೆಕ್ಟರ್ 34 ಸೊಸೈಟಿಯಲ್ಲಿ ಬಾಡಿಗೆಗೆ ಇದ್ದ ಈಕೆ ಅಪಾರ್ಟ್ಮೆಂಟ್‌ಗೆ ಸ್ಥಳಾಂತರಗೊಳ್ಳುತ್ತಾರೆ. ಅಪಾರ್ಟ್‌ಮೆಂಟ್‌ಗೆ ಬರುವ ಮುನ್ನ ಇನ್ವರ್ಟರ್, ಗೀಸರ್ ಮತ್ತು ಆರ್‌ಒ ಸೇರಿದಂತೆ ಎಲ್ಲಾ ಸೌಲಭ್ಯಗಳು ಹೊಸದಾಗಿವೆ. ಒಂದು ವೇಳೆ ಇವು ಏನಾದರೂ ಕೆಟ್ಟುಹೋದರೆ ಅವುಗಳ ದುರಸ್ತಿಯನ್ನು ನೀವೇ ಮಾಡಿಕೊಳ್ಳಬೇಕೆಂದು ಅಪಾರ್ಟ್‌ಮೆಂಟ್ ಮಾಲೀಕರು ಬಾಡಿಗೆದಾರರಿಗೆ ಹೇಳುತ್ತಾರೆ.

ಸ್ನೇಹ ಅವರು ಫ್ಲಾಟ್‌ಗೆ ಬಂದ 3 ದಿನಗಳ ಬಳಿಕ ಆರ್‌ಒ ಮತ್ತು ಇನ್ವರ್ಟರ್ ಎರಡೂ ದೋಷಪೂರಿತ ಹಾಗೂ ಹಳೆಯದು ಎಂದು ತಿಳಿದುಬರುತ್ತದೆ. ಈ ವಿಚಾರ ಮಾಲೀಕ ಮತ್ತು ಬಾಡಿಗೆದಾರರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು. ಬಾಡಿಗೆ ಒಪ್ಪಂದದಲ್ಲಿ 11 ತಿಂಗಳ ಅವಧಿ ಎಂದು ನಮೂದಿಸಿದ್ದರೂ 6 ತಿಂಗಳ ನಂತರ ಸ್ನೇಹಾ ಅವರನ್ನು ಮನೆ ಖಾಲಿ ಮಾಡುವಂತೆ ಕೇಳಲಾಗುತ್ತದೆ. 11 ತಿಂಗಳ ಮೊದಲೇ ಮನೆಯನ್ನು ಖಾಲಿ ಮಾಡುವಂತೆ ಬಾಡಿಗೆದಾರರಿಗೆ ಕೇಳಬಹುದೇ ಎಂಬುದು.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಹೈಕೋರ್ಟ್‌ನ ಸಿವಿಲ್ ಪ್ರಕರಣಗಳ ವಕೀಲ ನಿಶಾಂತ್ ರೈ, ದೇಶದ ಟೈರ್-1, ಟೈರ್-2 ನಗರಗಳಲ್ಲಿ ಮನೆಗಳನ್ನು ಬಾಡಿಗೆಗೆ ನೀಡುವುದು ಆದಾಯದ ಮೂಲವಾಗಿದೆ. ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಆದರೆ ಬಾಡಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಾಕಷ್ಟು ನಿಮಯಗಳು ಮತ್ತು ನಿಬಂದನೆಗಳು ಇಲ್ಲ. ಏಕೆಂದರೆ ಅದು ಮೂಲಭೂತ ಅವಶ್ಯಕತೆಗಳನ್ನು ಮಾತ್ರ ಉಲ್ಲೇಖಿಸುತ್ತದೆ ಎಂದು ಹೇಳಿದ್ದಾರೆ.

ಮನೆ ಮಾಲೀಕ ಮತ್ತು ಬಾಡಿಗೆದಾರರ ನಡುವಿನ ಪರಸ್ಪರ ತಿಳುವಳಿಕೆಗಳನ್ನು ಒಳಗೊಂಡಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಎರಡೂ ಕಡೆಯವರು ಅನುಸರಿಸಬೇಕಿರುವ ಒಂದಷ್ಟು ಷರತ್ತುಗಳನ್ನು ಒಳಗೊಂಡ ಒಪ್ಪಂದದ ಮೂಲಕ ಇದಕ್ಕೆ ಕಾನೂನು ದಾಖಲೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದು 11 ತಿಂಗಳ ಒಪ್ಪಂದವಾಗಿದ್ದು, ಎರಡೂ ಕಡೆಯವರು ಇದಕ್ಕೆ ಬದ್ಧರಾಗಿರುತ್ತಾರೆ. ಈ ಅವಧಿಯಲ್ಲಿ ಬಾಡಿಗೆ ಹೆಚ್ಚಿಸಲಾಗುವುದಿಲ್ಲ. ಮನೆ ಮಾಲೀಕ ಬಾಡಿಗೆದಾರರನ್ನು ಮನೆ ಖಾಲಿ ಮಾಡುವಂತೆ ಕೇಳಬಹುದು, ಆದರೆ ಬಲವಂತವಾಗಿ ಮನೆಯಿಂದ ಹೊರಹಾಕುವಂತಿಲ್ಲ. ಒತ್ತಾಯ ಮಾಡುವಂತಿಲ್ಲ ಎಂದು ವಕೀಲ ನಿಶಾಂತ್ ರೈ ಹೇಳಿರುವುದಾಗಿ ನ್ಯೂಸ್ 18 ಸುದ್ದಿ ಸಂಸ್ಥೆ ವರದಿ ಮಾಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ