logo
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ತುಂಬಾ ಖಾರ ತಿಂತೀರಾ? ಹಾಗಾದ್ರೆ ಅದರಿಂದಾಗುವ ಈ 5 ಸೈಡ್‌ ಎಫೆಕ್ಟ್‌ಗಳ ಬಗ್ಗೆ ಎಚ್ಚರವಿರಲಿ

ನೀವು ತುಂಬಾ ಖಾರ ತಿಂತೀರಾ? ಹಾಗಾದ್ರೆ ಅದರಿಂದಾಗುವ ಈ 5 ಸೈಡ್‌ ಎಫೆಕ್ಟ್‌ಗಳ ಬಗ್ಗೆ ಎಚ್ಚರವಿರಲಿ

Suma Gaonkar HT Kannada

Sep 27, 2024 06:30 PM IST

google News

ನೀವು ತುಂಬಾ ಖಾರ ತಿಂತೀರಾ ಎಂದ್ರೆ ಅದರ ಸೈಡ್‌ ಎಫೆಕ್ಟ್‌ ಬಗ್ಗೂ ತಿಳಿದುಕೊಳ್ಳಿ

    • ನೀವು ಖಾರವನ್ನು ತುಂಬಾ ಇಷ್ಟಪಟ್ಟು ತಿನ್ನುತ್ತೀರಾ? ಹಾಗಾದ್ರೆ ಅದರಿಂದ ಏನೆಲ್ಲ ತೊಂದರೆ ಆಗುತ್ತದೆ ಎನ್ನುವುದನ್ನೂ ಒಮ್ಮೆ ತಿಳಿದಿಟ್ಟುಕೊಳ್ಳಿ. ಇಲ್ಲವಾದರೆ ನಿಮ್ಮ ಆರೋಗ್ಯ ಸಮಸ್ಯೆ ಇನ್ನಷ್ಟು ಉಲ್ಬಣವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. 
ನೀವು ತುಂಬಾ ಖಾರ ತಿಂತೀರಾ ಎಂದ್ರೆ ಅದರ ಸೈಡ್‌ ಎಫೆಕ್ಟ್‌ ಬಗ್ಗೂ ತಿಳಿದುಕೊಳ್ಳಿ
ನೀವು ತುಂಬಾ ಖಾರ ತಿಂತೀರಾ ಎಂದ್ರೆ ಅದರ ಸೈಡ್‌ ಎಫೆಕ್ಟ್‌ ಬಗ್ಗೂ ತಿಳಿದುಕೊಳ್ಳಿ

ತುಂಬಾ ಜನ ಖಾರವನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದ್ರೆ ಅದರಿಂದ ಮುಂದೇನಾಗುತ್ತದೆ ಎನ್ನುವುದನ್ನು ತಿನ್ನುವ ಕ್ಷಣಕ್ಕೆ ಯೋಚಿಸುವುದಿಲ್ಲ. ಹೀಗೆ ಯೋಚನೆ ಮಾಡದೆ ತಮಗಿಷ್ಟ ಎಂದು ತಿನ್ನುತ್ತಾ ಹೋದರೆ ನಂತರ ಸಮಸ್ಯೆ ಎದುರಿಸಬೇಕಾಗುತ್ತದೆ. ಕೆಲವು ಸೈಡ್‌ ಎಫೆಕ್ಟ್‌ಗಳು ತಕ್ಷಣಕ್ಕೆ ತಿಳಿಯುತ್ತದೆ. ಅದೇನೆಂದರೆ ಕೈ ಹಾಗೂ ನಾಲಿಗೆ ಮತ್ತು ಮೇಲ್ತುಟಿ ಉರಿಯುತ್ತದೆ. ಇದೇ ರೀತಿ ನಿಮ್ಮ ಹೊಟ್ಟೆಯೊಳಗೂ ಆಗುತ್ತದೆ ಎಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.

ಇನ್ನು ನೀವು ಯಾವಾಗಲೂ ಹೆಚ್ಚಿನ ಖಾರವನ್ನೇ ತಿನ್ನುತ್ತಾ ಹೋದರೆ ನಿಮಗೆ ಇದರಿಂದ ಅಲ್ಸರ್‌ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕರುಳಿನ ಭಾಗದಲ್ಲಿ ಹುಣ್ಣಾಗುತ್ತದೆ. ಇದು ಕೆಲವು ಪ್ರದೇಶಗಳು ಹಾಗೂ ವ್ಯಕ್ತಿಗಳ ಸಾಮರ್ಥ್ಯವನ್ನೂ ಸಹ ಅವಲಂಬಿಸಿರುತ್ತದೆ. ಕೆಲ ಪ್ರದೇಶದ ಜನರು ಹೆಚ್ಚು ಖಾರ ತಿಂದರೆ ಇನ್ನು ಕೆಲವೆಡೆ ಅಷ್ಟಾಗಿ ಖಾರದ ಪದಾರ್ಥಗಳನ್ನು ಸೇವನೆ ಮಾಡುವುದಿಲ್ಲ.

ಎದೆ ಉರಿ

ಹೆಚ್ಚಿನ ಪ್ರಮಾಣದಲ್ಲಿ ಖಾರವನ್ನು ಸೇವನೆ ಮಾಡಿದಾಗ ಎದೆ ಉರಿ ಕಾಣಿಸಿಕೊಳ್ಳುತ್ತದೆ. ಇದರಿಂದ ತೊಂದರೆ ಉಂಟಾಗುತ್ತದೆ. ಇದು ನಿಮಗೆ ಕೆಲವೊಮ್ಮೆ ತೀವೃವಾಗಿ ಅನುಭವ ಆಗಬಹುದು ಇನ್ನು ಕೆಲವು ಬಾರಿ ನೀವು ಅದನ್ನು ನಿರ್ಲಕ್ಷಿಸಬಹುದು

ತೂಕ ಏರಿಕೆ

ಇನ್ನು ಕೆಲವರು ಖಾರದ ಪದಾರ್ಥಗಳನ್ನು ತಿಂದರೆ ತೂಕ ಇಳಿಕೆ ಆಗುತ್ತದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಇನ್ನು ಕೆಲವು ಸಂದರ್ಭದಲ್ಲಿ ಇದು ಸಾಧ್ಯವಿಲ್ಲ. ನೀವು ಮಾಂಸಾಹಾರದ ಜೊತೆ ಒಂದಷ್ಟು ಖಾರ ತಿಂದರೆ ಇದು ನಿಮ್ಮ ತೂಕ ಹೆಚ್ಚಿಸುತ್ತದೆ. ಆ ಮಾಂಸದಲ್ಲಿರುವ ಕೊಬ್ಬಿನ ಪ್ರಮಾಣ ನಿಮ್ಮ ದೇಹವನ್ನು ಸೇರುತ್ತದೆ. ನೀವು ಖಾರ ತಿನ್ನುವುದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿದರೆ ಅದು ಆರೋಗ್ಯದಾಯಕ ತೂಕ ಇಳಿಕೆ ಅಲ್ಲ.

ಜಿರ್ಣಾಂಗವ್ಯೂಹದ ತೊಂದರೆ
ಜಠರ ಮತ್ತು ಕರುಳಿಗೆ ಇದರಿಂದ ತುಂಬಾ ಸಮಸ್ಯೆ ಆಗುತ್ತದೆ. ಮಸಾಲೆಯುಕ್ತ ಆಹಾರವನ್ನು ದೀರ್ಘಕಾಲದವರೆಗೆ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಆರೋಗ್ಯ ಕೆಡುತ್ತದೆ. ಕ್ಯಾಪ್ಸೈಸಿನ್ ಸೇವನೆಯು ವಾಕರಿಕೆ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಯನ್ನು ತಂದೊಡ್ಡುತ್ತದೆ. (ಕ್ಯಾಪ್ಸೈಸಿನ್ ಎಂಬುದು ಮೆಣಸಿನಲ್ಲಿ ಖಾರವನ್ನು ಉಂಟು ಮಾಡುವ ಅಂಶವಾಗಿದೆ)

ಅಲ್ಸರ್‌ಗೆ ಕಾರಣವಾಗಬಹುದು
ಕೆಲವರಿಗೆ ಈಗಾಗಲೇ ಹೊಟ್ಟೆ ಉರಿ ಮತ್ತು ಅಲ್ಸರ್ ಇರುತ್ತದೆ. ಅವರು ತಮ್ಮ ಬಾಯಿ ರುಚಿಗೆಂದು ಇನ್ನಷ್ಟು ಖಾರ ತಿಂದರೆ ಖಂಡಿತ ತೊಂದರೆಗೊಳಗಾಗುತ್ತಾರೆ. ಹೆಚ್ಚಿನ ಖಾರ ತಿನ್ನುವವರಿಗೆ ಹೊಟ್ಟೆಯೊಳಗಡೆ ಹುಣ್ಣಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇವು ಹೆಚ್ಚಾದರೆ ಕೆಲವೊಮ್ಮೆ ಮಾರಣಾಂತಿಕವೂ ಆಗುತ್ತದೆ.

ಮಲಬದ್ಧತೆ
ತುಂಬಾ ಮಸಾಲೆಯುಕ್ತ ಆಹಾರವನ್ನು ಸೇವಿಸಿದ ನಂತರ ನೀವು ಮಲ ವಿಸರ್ಜನೆ ಮಾಡಿದಾಗಲೂ ಉರಿ ಅನುಭವ ಹೊಂದುತ್ತೀರಿ. ಇನ್ನು ಸಾಕಷ್ಟು ನೀರು ಕುಡಿಯದೇ ಇದ್ದಲ್ಲಿ ನಿಮಗೆ ಮಲಬದ್ಧತೆ ಕೂಡ ಆರಂಭವಾಗಬಹುದು. ಅಥವಾ ಈಗಾಗಲೇ ಈ ಸಮಸ್ಯೆ ಇದ್ದರೆ ಹೆಚ್ಚಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ