logo
ಕನ್ನಡ ಸುದ್ದಿ  /  ಜೀವನಶೈಲಿ  /  Friendship: ದೂರದ ಊರಿನಲ್ಲಿರುವ ಫ್ರೆಂಡ್‌ನ ತುಂಬಾ ಮಿಸ್‌ ಮಾಡ್ಕೊತಾ ಇದೀರಾ? ಹಾಗಾದ್ರೆ ಚಿಂತೆ ಬೇಡ ಆಗಾಗ ಇಷ್ಟು ಮಾಡಿ ಸಾಕು

Friendship: ದೂರದ ಊರಿನಲ್ಲಿರುವ ಫ್ರೆಂಡ್‌ನ ತುಂಬಾ ಮಿಸ್‌ ಮಾಡ್ಕೊತಾ ಇದೀರಾ? ಹಾಗಾದ್ರೆ ಚಿಂತೆ ಬೇಡ ಆಗಾಗ ಇಷ್ಟು ಮಾಡಿ ಸಾಕು

Suma Gaonkar HT Kannada

Sep 16, 2024 08:36 AM IST

google News

ಗೆಳೆತನ

  • Friendship: ಒಂದಷ್ಟು ದಿನ ಕ್ಲೋಸಾಗಿದ್ದು ಆ ನಂತರದಲ್ಲಿ ಅನಿವಾರ್ಯವಾಗಿ ನೀವು ಬೇರೆ ಬೇರೆ ಸ್ಥಳದಲ್ಲಿ ಉಳಿದುಕೊಳ್ಳುವ ಸಂದರ್ಭ ಬಂದಿದ್ದರೆ ನೀವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀರಾ. ಆದರೆ ಹಾಗಾಗಬಾರದು ಎಂದಾದರೆ ನೀವು ನಾವು ಇಲ್ಲಿ ನೀಡಿದ ಟಿಪ್ಸ್‌ ಫಾಲೋ ಮಾಡಿ. ಇಡೀ ದಿನ ಖುಷಿಯಾಗಿರ್ತೀರಾ.

ಗೆಳೆತನ
ಗೆಳೆತನ

ಪ್ರತಿಯೊಬ್ಬರು ತಮ್ಮ ಸ್ನೇಹಿತರನ್ನು ತುಂಬಾ ಇಷ್ಟಪಡುತ್ತಾರೆ. ಏನೇ ಆದರೂ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ನೋವು, ನಲಿವು ಏನೇ ಇದ್ದರೂ ಅದನ್ನು ಯಾವುದೇ ಆತಂಕವಿಲ್ಲದೇ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಸ್ನೇಹವು ಪ್ರತಿಯೊಬ್ಬರೂ ತಮ್ಮ ಮನಸ್ಸಿನಿಂದ ನಿರ್ಮಿಸುವ ಮತ್ತು ನಿರ್ವಹಿಸುವ ಸಂಬಂಧವಾಗಿದೆ. ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಸ್ನೇಹಿತರು ನಿಮ್ಮ ಜೊತೆಗೆ ಇರುತ್ತಾರೆ. ಇನ್ನು ದಿನ ಕಳೆದಂತೆ ನೀವು ಅವರನ್ನು ಮಿಸ್‌ ಮಾಡಿಕೊಳ್ಳಬೇಕಾಗುತ್ತದೆ.

ಕೆಲವೊಮ್ಮೆ ಕೆಲವು ಸ್ನೇಹಿತರು ಕೆಲಸ ಅಥವಾ ಅಧ್ಯಯನಕ್ಕೆ ಸಂಬಂಧಿಸಿದಂತೆ ನಗರದಿಂದ ದೂರ ಹೋಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ದೂರದಲ್ಲಿರುವ ಸ್ನೇಹಿತನೊಂದಿಗೆ ಯಾವಾಗಲೂ ಸ್ನೇಹವನ್ನು ಕಾಪಾಡಿಕೊಳ್ಳಲು ಈ ವಿಷಯಗಳನ್ನು ಯಾವಾಗಲೂ ನೆನಪಿನಲ್ಲಿಡಿ.

ವಿಡಿಯೋ ಕಾಲ್ ಮಾಡಿ

ವಿಡಿಯೋ ಕರೆಗಳ ಮೂಲಕ ಸಂಭಾಷಣೆಯನ್ನು ಮಾಡಬಹುದು. ಈ ರೀತಿ ಮಾಡುವುದರಿಂದ ಅವರು ನಿಮ್ಮ ಹತ್ತಿರವೇ ಇದ್ದಾರೆ ಎಂದು ನಿಮಗೆ ಅನಿಸುತ್ತದೆ. ಅವರ ಮುಖಭಾವವನ್ನು ನೋಡಿ ನೀವು ಮಾತಾಡಬಹುದು. ಫೋನ್ ಅಥವಾ ವೀಡಿಯೊ ಕರೆ ಮೂಲಕ ಪರಸ್ಪರ ಸಂಪರ್ಕದಲ್ಲಿರಿ. ಹೀಗೆ ಮಾಡುವುದರಿಂದ, ನಿಮ್ಮ ಸ್ನೇಹವು ಬಲವಾಗಿ ಉಳಿಯುತ್ತದೆ. ನೀವಿಬ್ಬರೂ ಮುಕ್ತವಾಗಿ ಎಲ್ಲವನ್ನೂ ಹಂಚಿಕೊಳ್ಳಲು ಇದು ಸಹಾಯವಾಗುತ್ತದೆ. ವಾರಕ್ಕೊಂದು ದಿನವಾದರೂ ನೀವು ಇದಕ್ಕೆಂದೇ ಸ್ವಲ್ಪ ಸಮಯವನ್ನು ಮೀಸಲಿಡಬಹುದು.

ಗೆಳೆತನದ ಪ್ರಾಮುಖ್ಯತೆ

ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆ ನಿಮಗೆ ಎಷ್ಟು ಮುಖ್ಯ ಎಂಬುದನ್ನು ಅವರಿಗೆ ತಿಳಿಸಿ ಹೇಳಿ. ಇಲ್ಲವಾದರೆ ಅವರಿಗೆ ನಿಮ್ಮ ಪ್ರಾಮುಖ್ಯತೆಯ ಬಗ್ಗೆ ಅಷ್ಟಾಗಿ ತಿಳಿಯುವುದಿಲ್ಲ. ಕೆಲವೊಮ್ಮೆ ನಿಮ್ಮ ಕರೆಯನ್ನು ಅವರು ಸ್ವೀಕರಿಸದೇ ಇರಬಹುದು. ಇದರಿಂದ ನಿಮಗೂ ಬೇಸರ ಎನಿಸಬಹುದು. ನಿಮ್ಮ ಕಷ್ಟ ಹಾಗೂ ಇಷ್ಟ ಇವುಗಳನ್ನೆಲ್ಲ ಹಂಚಿಕೊಳ್ಳಲು ಒಂದೊಳ್ಳೆ ಸ್ನೆಹಿತನಂತೂ ಬೇಕೇ ಬೇಕು. ನೀವು ಪ್ರತಿದಿನ ಭೇಟಿಯಾಗದಿದ್ದಾಗ, ತಪ್ಪು ತಿಳುವಳಿಕೆಗಳು ನಿಮ್ಮ ನಡುವೆ ಬರಬಹುದು. ಈ ತಪ್ಪು ಕಲ್ಪನೆಗಳನ್ನು ನಿವಾರಿಸಲು ಸಮಯ ತೆಗೆದುಕೊಳ್ಳಿ. ನಿಮ್ಮಿಬ್ಬರ ಮಧ್ಯದಲ್ಲಿ ಯಾವುದೇ ಕೆಟ್ಟ ಭಾವನೆಗಳು ಬಂದಿದ್ದರೆ ಅದನ್ನು ನಿವಾರಣೆ ಮಾಡಿಕೊಳ್ಳಿ.

ಪ್ರವಾಸಕ್ಕೆ ಹೋಗಿ ಬನ್ನಿ

ತಿಂಗಳಿಗೊಮ್ಮೆ ಭೇಟಿಯಾಗಲು ಯೋಜಿಸಿ ಅಥವಾ ವರ್ಷಕ್ಕೊಮ್ಮೆ ಉತ್ತಮ ಸ್ಥಳಕ್ಕೆ ಭೇಟಿ ನೀಡಲು ಯೋಜಿಸಿ. ಇದನ್ನು ಮಾಡುವುದರಿಂದ, ನಿಮ್ಮ ಸಂಬಂಧ ಹೆಚ್ಚು ಬಲಗೊಳ್ಳುತ್ತದೆ. ಅವರು ಆಗಾಗ ನಿಮ್ಮನ್ನು ಭೇಟಿಯಾಗುತ್ತಲೇ ಇರುತ್ತಾರೆ. ನಿಮ್ಮನ್ನು ಸದಾ ಅರ್ಥ ಮಾಡಿಕೊಳ್ಳುತ್ತಾರೆ.ನಿಮಗೂ ಅವರೊಂದಿಗೆ ಕಳೆದ ಸಮಯ ತುಂಬಾ ಇಷ್ಟವಾಗಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ