ಕನ್ನಡ ಸುದ್ದಿ  /  ಜೀವನಶೈಲಿ  /  Puc Result: ಪಿಯುಸಿ ಸೈನ್ಸ್‌ನಲ್ಲಿ ಪಿಸಿಎಂ ವಿಷಯ ಆಯ್ಕೆ ಮಾಡಿದ್ದೀರಾ? ನಿಮಗಿರುವ ಕರಿಯರ್‌ ಅವಕಾಶಗಳ ವಿವರ ಇಲ್ಲಿದೆ

PUC Result: ಪಿಯುಸಿ ಸೈನ್ಸ್‌ನಲ್ಲಿ ಪಿಸಿಎಂ ವಿಷಯ ಆಯ್ಕೆ ಮಾಡಿದ್ದೀರಾ? ನಿಮಗಿರುವ ಕರಿಯರ್‌ ಅವಕಾಶಗಳ ವಿವರ ಇಲ್ಲಿದೆ

Reshma HT Kannada

Apr 10, 2024 02:21 PM IST

ಪಿಯುಸಿ ಸೈನ್ಸ್‌ನಲ್ಲಿ ಪಿಸಿಎಂ ವಿಷಯ ಆಯ್ಕೆ ಮಾಡಿದ್ದೀರಾ? ನಿಮಗಿರುವ ಕರಿಯರ್‌ ಆಯ್ಕೆಗಳ ವಿವರ ಇಲ್ಲಿದೆ

    • ಪಿಯುಸಿ ಮುಗಿಯುತ್ತಿದ್ದಂತೆ ಮುಂದೇನು ಮಾಡುವುದು ಎಂಬ ಚಿಂತೆ ವಿದ್ಯಾರ್ಥಿಗಳು ಮಾತ್ರವಲ್ಲದೇ ಪೋಷಕರನ್ನೂ ಕಾಡುವುದು ಸಹಜ. ಸೈನ್ಸ್‌ನಲ್ಲಿ ನೀವು ಪಿಸಿಎಂ ತೆಗೆದುಕೊಂಡಿದ್ದರೆ ನಿಮ್ಮ ಮುಂದೆ ಅವಕಾಶಗಳ ಆಗರವೇ ಇದೆ. ಪಿಸಿಎಂ ನಂತರ ಮುಂದೇನು ಮಾಡುವುದು ಎಂಬ ಗೊಂದಲ ಇದ್ದರೆ ಇಲ್ಲಿದೆ ಪರಿಹಾರ ಮಾರ್ಗ.
ಪಿಯುಸಿ ಸೈನ್ಸ್‌ನಲ್ಲಿ ಪಿಸಿಎಂ ವಿಷಯ ಆಯ್ಕೆ ಮಾಡಿದ್ದೀರಾ? ನಿಮಗಿರುವ ಕರಿಯರ್‌ ಆಯ್ಕೆಗಳ ವಿವರ ಇಲ್ಲಿದೆ
ಪಿಯುಸಿ ಸೈನ್ಸ್‌ನಲ್ಲಿ ಪಿಸಿಎಂ ವಿಷಯ ಆಯ್ಕೆ ಮಾಡಿದ್ದೀರಾ? ನಿಮಗಿರುವ ಕರಿಯರ್‌ ಆಯ್ಕೆಗಳ ವಿವರ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಪೋಷಕರು ಹಾಗೂ ಮಕ್ಕಳು ಇದೀಗ ನಿರಾಳರಾಗಿದ್ದಾರೆ. ಇಂದು (ಏಪ್ರಿಲ್‌ 10) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಇದೀಗ ಮುಂದೇನು? ಎಂಬ ಪ್ರಶ್ನೆ ಪೋಷಕರು ಹಾಗೂ ಮಕ್ಕಳನ್ನು ಕಾಡುತ್ತಿದೆ. ಆರ್ಟ್‌, ಸೈನ್ಸ್‌, ಕಾಮರ್ಸ್‌ ಯಾವುದೇ ವಿಭಾಗ ತೆಗೆದುಕೊಂಡರೂ ಮುಂದೆ ಏನು ಮಾಡಬಹುದು ಎಂಬ ಗೊಂದಲ ಇರುವುದು ಸಹಜ. ನೀವು ಸೈನ್ಸ್‌ನಲ್ಲಿ ಪಿಸಿಎಂ ಆಯ್ಕೆ ಮಾಡಿಕೊಂಡಿದ್ದರೆ ಮುಂದೇನು ಎಂಬ ಚಿಂತೆ ಖಂಡಿತ ಬೇಡ. ಯಾಕೆಂದರೆ ನಿಮ್ಮ ಮುಂದೆ ಅವಕಾಶಗಳ ಆಗರವೇ ಇದೆ. ನೀವು ಈ ಕೆಳಗಿನ ಆಯ್ಕೆಗಳಲ್ಲಿ ನಿಮ್ಮ ವೃತ್ತಿ ಬದುಕು ಹಾಗೂ ಕೌಶಲಕ್ಕೆ ಹೊಂದುವಂತಹ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

ಪ್ರತಿದಿನ ಎಳನೀರು ಕುಡಿದು ಬೇಸರವಾಗಿದ್ಯಾ? ಆರೋಗ್ಯ ವೃದ್ಧಿಸಿಕೊಳ್ಳಲು ಎಳನೀರನ್ನು ಹೀಗೂ ಬಳಸಬಹುದು

Left Handed: ಎಡಗೈ ಬಳಕೆ ಮಾಡುವವರು ಬುದ್ಧಿವಂತರಾ? ಇವರ ಬಗ್ಗೆ ನಿಮಗೆ ತಿಳಿದಿರದ 10 ಆಸಕ್ತಿಕರ ವಿಚಾರಗಳು ಇಲ್ಲಿವೆ

Summer Tips: ಬೇಸಿಗೆಯಲ್ಲಿ ದಿನಕ್ಕೊಂದು ಮೊಟ್ಟೆ ತಿನ್ಬೇಕು ಅಂತಾರೆ ತಜ್ಞರು, ಇದಕ್ಕೆ ಕಾರಣಗಳು ಹೀಗಿವೆ

ಹೃದಯದ ಆರೋಗ್ಯಕ್ಕಾಗಿ ಮಾಡಿ ಸರಳ ಯೋಗ; ಪರಿಣಾಮಕಾರಿ 6 ಯೋಗಾಸನಗಳ ಮಾಹಿತಿ ಇಲ್ಲಿದೆ

ಸೈನ್ಸ್‌ ಪಿಸಿಎಂ ತೆಗೆದುಕೊಂಡವರಿಗೆ ಇರುವ ಅವಕಾಶಗಳು

ಸಾಫ್ಟ್‌ವೇರ್‌ ಎಂಜಿನಿಯರಿಂಗ್‌: ಡಿಜಿಟಲ್‌ ಸಲ್ಯೂಷನ್ಸ್‌ ಅಭಿವೃದ್ಧಿ, ಆಪ್‌ಗಳ ಅಭಿವೃದ್ಧಿ ಸೇರಿದಂತೆ ಸದ್ಯ ಬೇಡಿಕೆ ಇರುವ ಕ್ಷೇತ್ರ ಇದಾಗಿದೆ. ಕೋಡಿಂಗ್‌, ಬಗ್‌ ಫಿಕ್ಸಿಂಗ್‌ ಸೇರಿದಂತೆ ಡಿಸೈನ್‌, ವರ್ಚುವಲ್‌ ಸಲ್ಯೂಷನ್‌ ಕೂಡ ಇವರು ಮಾಡುತ್ತಾರೆ. ಸಾಫ್ಟ್‌ವೇರ್‌ ಉದ್ಯೋಗ ಮಾಡಿಕೊಂಡೆ ನಿಮ್ಮ ಮೆಚ್ಚಿನ ಹವ್ಯಾಸವನ್ನೂ ಮುಂದುವರಿಸಬಹುದು. ಇದು 4 ವರ್ಷಗಳ ಡಿಗ್ರಿ ಕೋರ್ಸ್‌ ಆಗಿದ್ದು, ಇದಾ ಬಳಿಕ ಎಂಟೆಕ್‌ ಕೂಡ ಮಾಡಬಹುದು.

ಕೆಮಿಕಲ್‌ ಎಂಜಿನಿಯರಿಂಗ್‌: ಕೈಗಾರಿಕಾ ಕ್ಷೇತ್ರದಲ್ಲಿ ಬಹು ಬೇಡಿಕೆ ಇರುವ ಕೆಮಿಕಲ್‌ ಎಂಜಿನಿಯರಿಂಗ್‌ ಅನ್ನು ಕೂಡ ಆಯ್ಕೆ ಮಾಡಬಹುದು. ಇವರು ಮ್ಯಾನ್ಯಫ್ಯಾಕ್ಚರಿಂಗ್‌, ಎನರ್ಜಿ ಹಾಗೂ ರೀಸರ್ಚ್‌ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಇಂಧನ, ಔಷಧಿಗಳು, ಆಹಾರ, ಕೃಷಿ ಉತ್ಪನ್ನಗಳಿಗೆ ಬಳಸುವ ರಾಸಾಯನಿಕ ಉತ್ಪನ್ನಗಳ ತಯಾರಿ ಇವರ ಕೆಲಸವಾಗಿರುತ್ತದೆ. ಇದು ಕೂಡ 4 ವರ್ಷಗಳ ಸ್ನಾತಕೋತ್ತರ ಪದವಿಯಾಗಿದೆ. ಈ ವಿಷಯದಲ್ಲಿ ಐಐಟಿ ಎನ್‌ಐಟಿಗಳಂತಹ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆದರೆ ನಿಮಗೆ ಬಂಪರ್‌ ಆಫರ್‌ ಸಿಗೋದು ಪಕ್ಕಾ.

ಡೇಟಾ ಸೈನ್ಸ್‌: ಡೇಟಾ ಡೆವಲಪ್‌, ಕ್ಯಾಟಗರೈಸ್‌, ಕ್ಲಸ್ಟರ್‌ ಡೇಟಾ, ಆಲ್ಗರಿದಂಮ್‌ ಮುಂತಾದ ವಿಷಯಗಳನ್ನು ಅವರು ಸ್ಟಡಿ ಮಾಡುತ್ತಾರೆ. ಇದು ಕೂಡ 4 ವರ್ಷದ ಕೋರ್ಸ್‌ ಆಗಿದೆ.

ಮಷಿನ್‌ ಲರ್ನಿಂಗ್‌: ಡೇಟಾ ಸೈಟಿಂಸ್ಟ್‌, ಅನಾಲಿಸ್ಟ್‌, ಅಡ್ಮಿಸ್ಟೇಷನ್‌, ಡೇಟಾ ಎಂಜಿನಿಯರ್ಸ್‌ ಈ ಎಲ್ಲವೂ ಮಷಿನ್‌ ಲರ್ನಿಂಗ್‌ ಅಡಿಯಲ್ಲಿ ಬರುತ್ತದೆ. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಕೂಡ ಅದರ ಅಡಿಯಲ್ಲೇ ಬರುತ್ತದೆ. ಸದ್ಯ ಬೇಡಿಕೆ ಇರುವ ಕೋರ್ಸ್‌ ಇದಾಗಿದೆ. ಇದು ಕೂಡ 4 ವರ್ಷದ ಡಿಗ್ರಿ ಕೋರ್ಸ್‌ ಆಗಿದ್ರು, ಇದರಲ್ಲಿ ಎಂಟೆಕ್‌ ಮಾಡಿದರೆ ಅವಕಾಶ ಹೆಚ್ಚು.

ಏರೋನಾಟಿಕಲ್‌ ಎಂಜಿನಿಯರಿಂಗ್‌: ಬಾಹಾಕ್ಯಾಶ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದ್ದರೆ ಈ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಬಾಹ್ಯಾಕಾಶ ನೌಕೆ, ಕ್ಷಿಪಣಿ, ಏರೋಪ್ಲೇನ್‌ಗಳ ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದನೆ ಮುಂತಾದ ಕೆಲಸಗಳು ಇದರಲ್ಲಿ ಬರುತ್ತದೆ. ಇದು ಕೂಡ 4 ವರ್ಷ ಪದವಿ ಕೋರ್ಸ್‌ ಆಗಿದೆ.

ಪ್ರಾಡಕ್ಟ್‌ ಡಿಸೈನ್‌: ಮಾರ್ಕೆಟ್‌ ಟ್ರೆಂಡ್‌ ಹಾಗೂ ಗ್ರಾಹಕರ ಬಯಕೆಗೆ ತಕ್ಕಂತೆ ಅವರ ಉತ್ಪನ್ನಗಳನ್ನ ರಚಿಸುವುದು, ಉತ್ಪನ್ನಗಳ ಗುಣಮಟ್ಟ ನಿರ್ವಹಣೆ ಮುಂತಾದ ಕಾರ್ಯವನ್ನು ಇವರು ಮಾಡುತ್ತಾರೆ. 

 

    ಹಂಚಿಕೊಳ್ಳಲು ಲೇಖನಗಳು