logo
ಕನ್ನಡ ಸುದ್ದಿ  /  ಜೀವನಶೈಲಿ  /  Black Pepper Side Effects: ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ 5 ಸೈಡ್‌ ಎಫೆಕ್ಟ್‌ಗಳು

Black Pepper Side Effects: ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ 5 ಸೈಡ್‌ ಎಫೆಕ್ಟ್‌ಗಳು

Raghavendra M Y HT Kannada

Jul 12, 2023 03:47 PM IST

google News

ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ ಸೈಡ್ ಎಫೆಕ್ಟ್‌ಗಳು ತಿಳಿಯಿರಿ

  • ಆಹಾರ ರುಚಿಯಾಗಿರಬೇಕಾದರೆ ಅದಕ್ಕೆ ಕರಿಮೆಣಸು ಹಾಕಿರಬೇಕು. ಆದರೆ ಇದನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಾಗುವ ಪ್ರಮುಖ 5 ಸೈಡ್ ಎಫೆಕ್ಟ್‌ಗಳನ್ನು ತಿಳಿಯಿರಿ.

ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ ಸೈಡ್ ಎಫೆಕ್ಟ್‌ಗಳು ತಿಳಿಯಿರಿ
ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ ಸೈಡ್ ಎಫೆಕ್ಟ್‌ಗಳು ತಿಳಿಯಿರಿ

ಬೆಂಗಳೂರು: ಕರಿಮೆಣಸನ್ನು (Black Pepper) ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಬಳಸುವಂತ ಮಸಾಲೆ ಪದಾರ್ಥ. ಇದರಲ್ಲಿ ಔಷಧೀಯ ಗುಣಗಳಿವೆ ಇವೆ ಎನ್ನುವ ಕಾರಣಕ್ಕೆ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಆಯುರ್ವೇದದ ಔಷಧವಾಗಿಯೂ ಕಾಳುಮೆಣಸು ಅಥವಾ ಕರಿಮೆಣಸನ್ನು ಬಳಸುತ್ತಾರೆ. ಇದರ ಪುಡಿಯನ್ನು ಅಡುಗೆಯಲ್ಲಿ ಬಳಸುವುದರಿಂದ ರುಚಿ ಹೆಚ್ಚಾಗುತ್ತದೆ. ಆಮ್ಲೆಟ್, ಬಜ್ಜಿ ಬೊಂಡಾ ಸೇರಿದಂತೆ ಕೆಲವು ತಿಂಡಿಗಳಿಗೆ ಈರುಳ್ಳಿಯ ಜೊತೆಗೆ ಪೆಪ್ಪರ್ ಪೌಡರ್ ಬಳಸುತ್ತಾರೆ.

ಕಾಳು ಮೆಣಸಿನ ಕಷಾಯ ಕುಡಿದರೆ ರೋಗ ನಿರೋಧ ಶಕ್ತಿ ಹೆಚ್ಚಾಗುತ್ತದೆ. ಇದು ಶೀತ, ಕೆಮ್ಮು ಸೇರಿದಂತೆ ಎಲ್ಲಾ ರೀತಿಯ ವೈರಲ್ ರೋಗಗಳನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ ಹೀಗಾಗಿಯೇ ಕೆಲವರು ಕರಿಮೆಣಸನ್ನು ಆಯುರ್ವೇದ ಔಷಧಿಯನ್ನಾಗಿ ಬಳಿಸಿಕೊಳ್ಳುತ್ತಾರೆ.

ಯಾವುದೇ ಒಂದು ಪದಾರ್ಥದಿಂದ ಅನುನೂಲಗಳಿದ್ದರೇ ಅನಾನುಕೂಲಗಳು ಇರುತ್ತವೆ. ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸಿಸಲು ಕೆಲವರು ಕಾಳುಮೆಣಸನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಅತಿಯಾದ ಕರಿಮೆಣಸು ಸೇವೆನೆಯಿಂದಾಗುವ ಪರಿಣಾಮಗಳು (Black Pepper Side Effects)

  • ಗರ್ಭಿಣಿಯರು, ಬಾಣಂತಿಯರು ಕರಿಮೆಣಸನ್ನು ಅತಿಯಾಗಿ ತಿನ್ನಬಾರದು. ಇದರಿಂದ ಮಕ್ಕಳಿಗೆ ಹಾಲುಣಿಸಲು ತೊಂದರೆಯಾಗುತ್ತದೆ. ತಾಯಿ ಎದೆ ಹಾಲು ಕುಡಿಯುವ ಮಕ್ಕಳಿಗೂ ಇದರಿಂದ ತೊಂದರೆಯಾಗುತ್ತದೆ.
  • ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದು ಅಧ್ಯಯನ ಪ್ರಕಾರ ಮೆಣಸು ವೀರ್ಯವನ್ನು ಹಾನಿಗೊಳಿಸುತ್ತದೆ ಎಂದು ತಿಳಿದು ಬಂದಿದೆ. ಎಪಿಡಿಡೈಮಿಸ್‌ನಲ್ಲಿ ಹಾನಿಕಾರ ರಾಡಿಕಲ್‌ಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ವೀರ್ಯ ಸಂಗ್ರಹವಾಗಿರುವ ನಾಳಕ್ಕೆ ತೊಂದರೆಯಾಗುತ್ತದೆ.
  • ಕಾಳುಮೆಣಸಿನ ಪುಡಿಯನ್ನು ಹೆಚ್ಚು ತಿನ್ನುವವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೊಟ್ಟೆಯಲ್ಲಿನ ಹುಣ್ಣುಗಳಿಗೆ ಕಾರಣವಾಗುತ್ತದೆ. ಹೀಗಾಗಿ ಕಾಳು ಮೆಣಸನ್ನು ಮಿತವಾಗಿ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
  • ಮನುಷ್ಯದ ದೇಹದ ಶರ್ಮವು ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಚರ್ಮವು ಕೆಂಪು ಬಣ್ಣಕ್ಕೆ ಬರಲು ಇದು ಕಾರಣವಾಗಬಹುದು ಎಂದು ಅಧ್ಯಯನ ಹೇಳುತ್ತದೆ.
  • ಆಹಾರದಲ್ಲಿ ಕಾಳುಮೆಣಸನ್ನು ಹೆಚ್ಚಾಗಿ ಸೇವಿಸುವುದರಿಂದ ತುರಿಕೆ, ದುದ್ದುಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ದೇಹದಲ್ಲಿನ ತೇವಾಂಶವನ್ನು ಹೀರಿಕೊಳ್ಳುವುದರಿಂದ ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಖರೀದಿಸಿದರೆ ಟೊಮೆಟೊ ಫ್ರೀ; ಶಾಪ್ ಮಾಲೀಕನ ಭರ್ಜರಿ ಆಫರ್‌ಗೆ ಜನ ಫುಲ್ ಫಿದಾ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ