ಮಕ್ಕಳ ಲಂಚ್ ಬಾಕ್ಸ್‌ಗೆ ತಯಾರಿಸಿ ಈ ಟೇಸ್ಟಿ ರೆಸಿಪಿ: ಐದು ರೀತಿಯ ಪರೋಟ ಪಾಕವಿಧಾನಗಳು ಇಲ್ಲಿವೆ
Oct 07, 2024 12:26 PM IST
ಈ ಐದು ಬಗೆಯ ಜನಪ್ರಿಯ, ಟೇಸ್ಟಿ ಪರೋಟ ಪಾಕವಿಧಾನಗಳನ್ನು ಟ್ರೈ ಮಾಡಿ.
ಮಕ್ಕಳ ಅಥವಾ ಆಫೀಸ್ ಲಂಚ್ ಬಾಕ್ಸ್‌ಗೆ ಏನಪ್ಪಾ ಹಾಕುವುದು ಅಂತಾ ಯೋಚಿಸುತ್ತಿರುವವರಿಗೆ ಈ ಐದು ಬಗೆಯ ಪರೋಟ ರೆಸಿಪಿಗಳು ಉತ್ತಮ ಆಯ್ಕೆಯಾಗಿದೆ. ನೀವು ಕೂಡ ಈ ಐದು ಬಗೆಯ ಜನಪ್ರಿಯ ಪರೋಟ ಪಾಕವಿಧಾನಗಳನ್ನು ಪ್ರಯತ್ನಿಸಬಹುದು. ಇಲ್ಲಿದೆ ಇನ್ನಷ್ಟು ಮಾಹಿತಿ.
ಭಾರತೀಯ ಪಾಕಪದ್ಧತಿ ಬಹಳ ವಿಭಿನ್ನವಾಗಿದೆ. ರುಚಿಕರವಾದ ಖಾರ ಭಕ್ಷ್ಯಗಳಿಂದ ಸಿಹಿ ಭಕ್ಷ್ಯಗಳವರೆಗೆ ಬಹಳ ವೆರೈಟಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇವುಗಳಲ್ಲಿ ಪರೋಟವು ಒಂದು. ಕೇವಲ ಒಂದು ರೀತಿಯ ಪರೋಟವಲ್ಲ, ಹಲವು ಬಗೆಯ ಪರೋಟಗಳನ್ನು ತಯಾರಿಸಲಾಗುತ್ತದೆ. ಇವು ಕೇವಲ ರುಚಿಕರವಾಗಿರುವುದಷ್ಟೇ ಅಲ್ಲ, ಆರೋಗ್ಯಕರ ಉಪಹಾರವೂ ಹೌದು. ಪರೋಟಗೆ ತರಕಾರಿಗಳು ಅಥವಾ ಮಾಂಸವನ್ನು ಸ್ಟಫ್ಟ್ ಮಾಡಿ ತಯಾರಿಸಬಹುದು. ಸಿದ್ಧಗೊಂಡ ರುಚಿಕರವಾದ ಪರೋಟವನ್ನು ಮೊಸರು, ಉಪ್ಪಿನಕಾಯಿ ಅಥವಾ ಚಟ್ನಿಗಳೊಂದಿಗೆ ಬಡಿಸಲಾಗುತ್ತದೆ. ಸೊಪ್ಪು ತರಕಾರಿ ಇಷ್ಟಪಡುವವರು ಇದರ ಪರೋಟವನ್ನು ಕೂಡ ಆನಂದಿಸಬಹುದು. ವಿವಿಧ ರುಚಿಕರವಾದ ಸ್ಟಫಿಂಗ್‌ಗಳೊಂದಿಗೆ ತಯಾರಿಸಲಾಗುವ ಪರೋಟವನ್ನು ಮಕ್ಕಳು ಕೂಡ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳ ಅಥವಾ ಆಫೀಸ್ ಲಂಚ್ ಬಾಕ್ಸ್‌ಗೆ ಏನಪ್ಪಾ ಹಾಕುವುದು ಅಂತಾ ಯೋಚಿಸುತ್ತಿರುವವರಿಗೆ ಈ ಐದು ಬಗೆಯ ಪರೋಟ ರೆಸಿಪಿಗಳು ಉತ್ತಮ ಆಯ್ಕೆಯಾಗಿದೆ. ನೀವು ಕೂಡ ಈ ಐದು ಬಗೆಯ ಜನಪ್ರಿಯ ಪರೋಟ ಪಾಕವಿಧಾನಗಳನ್ನು ಪ್ರಯತ್ನಿಸಬಹುದು.
ಜನಪ್ರಿಯ ಐದು ರೀತಿಯ ಪರೋಟ ಪಾಕವಿಧಾನಗಳು
ಈರುಳ್ಳಿ ಪರೋಟ: ಗೋಧಿ ಹಿಟ್ಟನ್ನು ಕಲಸಿ. ಅದನ್ನು ಹಿಟ್ಟು ಮಾಡಿ. 10 ನಿಮಿಷ ಕಾಲ ಹಾಗೆಯೇ ಬಿಟ್ಟು, ಚಪಾತಿಯ ಉಂಡೆ ಮಾಡಿ, ಅದರ ಮಧ್ಯ ಭಾಗರದಲ್ಲಿ ಕತ್ತರಿಸಿದ ಈರುಳ್ಳಿ, ಮಸಾಲೆಗಳನ್ನು ಹಾಕಿ ಸ್ಟಫ್ಟ್ ಮಾಡಿ, ಚಪಾತಿ ಲಟ್ಟಿಸಿ ಬೇಯಿಸಬೇಕು. ಇದೊಂದು ಬಹಳ ಸರಳವಾದ ಭಕ್ಷ್ಯವಾಗಿದ್ದು, ಶಾಲೆಯ ಮಧ್ಯಾಹ್ನದ ಊಟಕ್ಕೂ ಪ್ಯಾಕ್ ಮಾಡಬಹುದು. ಮೊಸರು, ಉಪ್ಪಿನಕಾಯಿ ಅಥವಾ ಚಟ್ನಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.
ಮೂಲಂಗಿ ಪರೋಟ: ಚಳಿಗಾಲದ ಋತುವಿನಲ್ಲಿ ಪಂಜಾಬಿ ಮನೆಗಳಲ್ಲಿ ಮೂಲಂಗಿ ಪರೋಟವು ಬಹಳ ಪ್ರಧಾನವಾಗಿದೆ. ಈ ರುಚಿಕರವಾದ ಖಾದ್ಯವನ್ನು ಮೊಸರು, ಉಪ್ಪಿನಕಾಯಿ ಅಥವಾ ತುಪ್ಪದೊಂದಿಗೆ ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಊಟಕ್ಕೂ ಆನಂದಿಸಬಹುದು. ಅಥವಾ ಯಾವುದೇ ಪಾರ್ಟಿ, ಕಾರ್ಯಕ್ರಮಗಳಲ್ಲೂ ಈ ಪಾಕವಿಧಾನವನ್ನು ಪ್ರಯತ್ನಿಸಬಹುದು.
ಮೆಂತ್ಯ ಆಲೂ ಪರೋಟ: ನಿಮ್ಮ ದಿನವನ್ನು ಪ್ರಾರಂಭಿಸಲು ಮೆಂತ್ಯ ಆಲೂ ಪರೋಟವು ಪರಿಪೂರ್ಣ ಉಪಹಾರ ಆಯ್ಕೆಯಾಗಿದೆ. ಇದರಲ್ಲಿ ಪೌಷ್ಠಿಕಾಶ ಅಡಗಿದ್ದು, ತಿಂದ ಕೂಡಲೇ ಹೊಟ್ಟೆ ತುಂಬುತ್ತದೆ. ದಿನಕ್ಕೆ ಬೇಕಾದ ಶಕ್ತಿಯನ್ನು ಕೂಡ ಇದು ಒದಗಿಸುತ್ತದೆ. ಮೆಂತ್ಯ ಎಲೆಗಳು, ಆಲೂಗಡ್ಡೆ ಮತ್ತು ಮೊಸರಿನಿಂದ ಮಾಡಲಾಗುವ ಈ ಪರೋಟವನ್ನು ನೀವು ಪ್ರಯತ್ನಿಸಬಹುದು. ಒಂದು ಬಾರಿ ತಿಂದು ಇದರ ರುಚಿಯನ್ನು ಸವಿದರೆ, ನಿಮಗೆ ಮತ್ತೆ ಮತ್ತೆ ತಿನ್ನಬೇಕು ಎಂಬ ಬಯಕೆ ಉಂಟಾಗಬಹುದು.
ಗೋಭಿ ಪರೋಟ: ಬಹುತೇಕ ಮಂದಿ ಸ್ಟಫ್ಡ್ ಪರೋಟಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಕೆಲವರಿಗೆ ವೆರೈಟಿ ಪರೋಟಗಳೆಂದರೆ ಅಚ್ಚುಮೆಚ್ಚು. ಅಂತಹವರು ಈ ಗೋಭಿ ಪರೋಟವನ್ನು ಟ್ರೈ ಮಾಡಬಹುದು. ಉಪಹಾರಕ್ಕೆ ಇದೊಂದು ಅತ್ಯುತ್ತಮ ಪರೋಟವಾಗಿದ್ದು, ಬಹಳ ರುಚಿಕರವಾಗಿರುತ್ತದೆ. ಮಕ್ಕಳಂತೂ ಖಂಡಿತಾ ಇಷ್ಟಪಟ್ಟು ಸವಿಯೋದ್ರಲ್ಲಿ ಸಂಶಯವಿಲ್ಲ.
ಹುರಿಗಡಲೆ ಹಿಟ್ಟಿನ ಪರೋಟ: ನೀವು ಆರೋಗ್ಯ ಪ್ರಜ್ಞೆಯುಳ್ಳವರಾಗಿದ್ದು, ಪೌಷ್ಠಿಕಾಂಶವುಳ್ಳ ಪಾಕವಿಧಾನದ ಬಗ್ಗೆ ಯೋಚಿಸುತ್ತಿದ್ದಾರೆ ಈ ಹುರಿಗಡಲೆ ಹಿಟ್ಟಿನ ಪರೋಟವನ್ನು ಪ್ರಯತ್ನಿಸಬಹುದು. ತಿನ್ನಲು ಕೂಡ ಬಹಳ ರುಚಿಕರವಾಗಿರುವುದಲ್ಲದೆ, ಆರೋಗ್ಯಕ್ಕೂ ಉತ್ತಮವಾಗಿದೆ. ಈ ಖಾದ್ಯವನ್ನು ಹುರಿದ ಹುರಿಗಡಲೆ ಪುಡಿ, ಗೋಧಿ ಹಿಟ್ಟು, ಓಂಕಾಳಿನ ಪುಡಿ, ಒಣ ಮಾವಿನ ಪುಡಿಯಿಂದ ತಯಾರಿಸಲಾಗುತ್ತದೆ. ಇದು ಕಟುವಾದ ಸುವಾಸನೆಯೊಂದಿಗೆ ಟೇಸ್ಟಿ ಮತ್ತು ಆರೋಗ್ಯಕರ ಪಾಕವಿಧಾನವಾಗಿದ್ದು, ಬಹಳ ರುಚಿಕರವಾಗಿರುತ್ತದೆ.
ವಿಭಾಗ